GPSTR Previous Question Paper Biological Science 21-05-2022

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ (GPTR)ಪತ್ರಿಕೆ-2 ಜೀವ ವಿಜ್ಞಾನ ಪ್ರಶ್ನೆಪತ್ರಿಕೆ

 

ಸೂಚನೆ : ಪೇಪರ್-2ರಲ್ಲಿ 150 ಅಂಕಗಳಿರುತ್ತವೆ. ಇಲ್ಲಿ 50 ಅಂಕಗಳ ಬಹು ಆಯ್ಕೆಯ ಪ್ರಶ್ನೆಗಳನ್ನು ಉತ್ತರದೊಂದಿಗೆ ನೀಡಲಾಗಿದೆ. ಉಳಿದ 100 ಅಂಕಗಳಿಗೆ ವಿವರಣಾತ್ಮಕ ಉತ್ತರ ಬರೆಯಬೇಕಾದ ಪ್ರಶ್ನೆಗಳನ್ನು ಇಲ್ಲಿ ನೀಡಿಲಾಗಿಲ್ಲ.

1.ಏಕಮಾನ ಕಾಲದಲ್ಲಿ ಕಾಯವೊಂದರ ವೇಗದಲ್ಲಾಗುವ ಬದಲಾವಣೆ
 (1)ಶಕ್ತಿ
 (2)ಸ್ಥಾನಪಲ್ಲಟ
 (3)ವೇಗೋತ್ಕರ್ಷ
 (4)ಜವ

CORRECT ANSWER

(3) ವೇಗೋತ್ಕರ್ಷ


2.ಈ ಕೆಳಗಿನವುಗಳಲ್ಲಿ ನೈಸರ್ಗಿಕ ಕಾಂತ
 (1)ಕುದುರೆಲಾಳಾಕಾರದ ಕಾಂತ
 (2)ಮ್ಯಾಗ್ನೆಟೈಟ್
 (3)ಬಾಕ್ಸೈಟ್
 (4)ದಂಡಕಾಂತ

CORRECT ANSWER

(2) ಮ್ಯಾಗ್ನೆಟೈಟ್


3.ಓಮ್-ಮೀಟರ್ (Ωm) SI ಏಕಮಾನವನ್ನು ಹೊಂದಿರುವ ಪರಿಮಾಣ
 (1)ರೋಧ
 (2)ಸಾಮರ್ಥ್ಯ
 (3)ವಿಭವಾಂತರ
 (4)ರೋಧಶೀಲತೆ

CORRECT ANSWER

(4) ರೋಧಶೀಲತೆ


4.ಸೌರ ಮಂಡಲದಲ್ಲಿ ಒಳಗ್ರಹವಾಗಿರದ ಗ್ರಹ
 (1)ಶುಕ್ರ
 (2)ಮಂಗಳ
 (3)ಬುಧ
 (4)ಯುರೇನಸ್

CORRECT ANSWER

(4) ಯುರೇನಸ್


5.ವಿಶ್ರಾಂತ ಸ್ಥಿತಿಯಲ್ಲಿರುವ ವಸ್ತುವೊಂದನ್ನು ನಾವು ಚಲಿಸುವಂತೆ ಮಾಡಲು ಪ್ರಯತ್ನಿಸಿದಾಗ ಉಂಟಾಗುವ ಘರ್ಷಣೆಯ ವಿಧ
 (1)ಉರುಳು ಘರ್ಷಣೆ
 (2)ಸ್ಥಾಯಿ ಘರ್ಷಣೆ
 (3)ಜಾರು ಘರ್ಷಣೆ
 (4)ದ್ರವ ಘರ್ಷಣೆ

CORRECT ANSWER

(2) ಸ್ಥಾಯಿ ಘರ್ಷಣೆ


6.ದ್ರವ್ಯರಾಶಿ ಮತ್ತು ಗುರುತ್ವ ವೇಗೋತ್ಕರ್ಷದ ಗುಣಲಬ್ಧ
 (1)ಕೆಲಸ
 (2)ಶಕ್ತಿ
 (3)ಸಂವೇಗ
 (4)ತೂಕ

CORRECT ANSWER

(4) ತೂಕ


7.ವಿದ್ಯುತ್ ಪ್ರವಾಹದ SIಏಕಮಾನ
 (1)ಕೂಲಮ್
 (2)ವೋಲ್ಟ್
 (3)ಓಮ್
 (4)ಆಂಪಿಯರ್

CORRECT ANSWER

(4) ಆಂಪಿಯರ್


8.ವಿದ್ಯುತ್ ಮಂಡಲವನ್ನು ಪೂರ್ಣಗೊಳಿಸಲು ಅಥವಾ ಕಡಿತಗೊಳಿಸಲು ಬಳಸುವ ಸರಳ ಸಾಧನ
 (1)ರೋಧಕ
 (2)ರಿಯೋಸ್ಟಾಟ್
 (3)ಬ್ಯಾಟರಿ
 (4)ಸ್ವಿಚ್

CORRECT ANSWER

(4) ಸ್ವಿಚ್


9.ರುದರ್‌ಫೋರ್ಡ್‌ರವರ ಆಲ್ಫಾ ಕಣಗಳ ಚದುರುವಿಕೆಯ ಪ್ರಯೋಗವು ಇದರ ಆವಿಷ್ಕಾರಕ್ಕೆ ಕಾರಣವಾಗಿದೆ
 (1)ನ್ಯೂಟ್ರಾನ್
 (2)ಪರಮಾಣು ಬೀಜಕೇಂದ್ರ
 (3)ಇಲೆಕ್ಟ್ರಾನ್
 (4)ಪ್ರೋಟಾನ್

CORRECT ANSWER

(2) ಪರಮಾಣು ಬೀಜಕೇಂದ್ರ


10.ಅಕ್ಸಿಜನ್ ಅಣುವಿನ ಮೋಲಾರ್ ರಾಶಿ
 (1)16 g
 (2)2 g
 (3)32 g
 (4)48 g

CORRECT ANSWER

(1) 16 g
ಅಥವಾ
(3) 32 g


11.ಧಾತುಗಳ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಸರಿಯಲ್ಲದ ಹೇಳಿಕೆ
 (1)ಮೆಂಡಲೀವ್‌ರ ಆವರ್ತ ಕೋಷ್ಟಕವು ಧಾತುಗಳ ಪರಮಾಣು ರಾಶಿಯನ್ನು ಆಧರಿಸಿದೆ
 (2)ಆಧುನಿಕ ಆವರ್ತ ಕೋಷ್ಟಕವು ಧಾತುಗಳ ಪರಮಾಣು ಸಂಖ್ಯೆಯನ್ನು ಆಧರಿಸಿದೆ
 (3)ತ್ರಿವಳಿಗಳು - ಮೂರು ಸಾದೃಶ ಧಾತುಗಳ ಗುಂಪಾಗಿದೆ
 (4)ನ್ಯೂಲ್ಯಾಂಡರ ಅಷ್ಟಕಗಳ ಜೋಡಣೆ ಧಾತುಗಳ ಇಲೆಕ್ಟ್ರಾನ್ ವಿನ್ಯಾಸವನ್ನು ಆಧರಿಸಿದೆ

CORRECT ANSWER

(4) ನ್ಯೂಲ್ಯಾಂಡರ ಅಷ್ಟಕಗಳ ಜೋಡಣೆ ಧಾತುಗಳ ಇಲೆಕ್ಟ್ರಾನ್ ವಿನ್ಯಾಸವನ್ನು ಆಧರಿಸಿದೆ


12.2, 8, 7- ಈ ಇಲೆಕ್ಟ್ರಾನ್ ವಿನ್ಯಾಸ ಹೊಂದಿರುವ ಪರಮಾಣು ರಾಸಾಯನಿಕವಾಗಿ ಹೋಲುವುದು
 (1)ನೈಟ್ರೋಜನ್ (Z = 7)
 (2)ಫಾಸ್ಫರಸ್ (Z = 15)
 (3)ಪ್ಲೋರಿನ್ (Z = 9)
 (4)ಆರ್ಗಾನ್ (Z = 18)

CORRECT ANSWER

(3) ಪ್ಲೋರಿನ್ (Z = 9)


13.`CaO + H_2O → Ca(OH)_2`
ಕೊಟ್ಟಿರುವ ರಾಸಾಯನಿಕ ಕ್ರಿಯೆಯು ಇದಕ್ಕೆ ಉದಾಹರಣೆಯಾಗಿದೆ
 (1)ರಾಸಾಯನಿಕ ಸ್ಥಾನಪಲ್ಲಟ
 (2)ರಾಸಾಯನಿಕ ಸಂಯೋಗ
 (3)ರಾಸಾಯನಿಕ ವಿಭಜನೆ
 (4)ರಾಸಾಯನಿಕ ದ್ವಿಸ್ಥಾನಪಲ್ಲಟ

CORRECT ANSWER

(2) ರಾಸಾಯನಿಕ ಸಂಯೋಗ


14.ಮುರಿದ ಮೂಳೆಗಳಿಗೆ ಆಧಾರ ನೀಡಲು ಬಳಸುವ ರಾಸಾಯನಿಕ ಸಂಯುಕ್ತ
 (1)ಸೋಡಿಯಂ ಹೈಡೋಜನ್ ಕಾರ್ಬೊನೇಟ್
 (2)ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್
 (3)ಸೋಡಿಯಂ ಕಾರ್ಬೋನೇಟ್
 (4)ಕ್ಯಾಲ್ಸಿಯಂ ಸಲ್ಫೇಟ್ ಹೆಮಿಹೈಡ್ರೇಟ್

CORRECT ANSWER

(4) ಕ್ಯಾಲ್ಸಿಯಂ ಸಲ್ಫೇಟ್ ಹೆಮಿಹೈಡ್ರೇಟ್


15.ಸಹವೇಲೆನ್ಸಿಯ ಬಂಧ ಹೊಂದಿರುವ ಸಂಯುಕ್ತ
 (1)NaCl
 (2)`CaCl_2`
 (3)HCl
 (4)KCl

CORRECT ANSWER

(3) HCl


16.ಮೊಸರಿನಲ್ಲಿರುವ ಆಮ್ಲ
 (1)ಲಾಕ್ಟಿಕ್ ಆಮ್ಲ
 (2)ಸಿಟ್ರಿಕ್ ಆಮ್ಲ
 (3)ಅಸಿಟಿಕ್ ಆಮ್ಲ
 (4)ಟಾರ್ಟಾರಿಕ್ ಆಮ್ಲ

CORRECT ANSWER

(1) ಲಾಕ್ಟಿಕ್ ಆಮ್ಲ


17.ಅದಿರುಗಳ ಅಪಕರ್ಷಣೆಯಲ್ಲ ಬಳಸುವ ಕಾರ್ಬನ್ನಿನ ಬಹುರೂಪ
 (1)ಗ್ರಾಫೈಟ್
 (2)ಕಲ್ಲಿದ್ದಿಲು
 (3)ಕೋಕ್
 (4)ವಜ್ರ

CORRECT ANSWER

(3) ಕೋಕ್


18.ಇವುಗಳಲ್ಲಿ ದ್ರವ ಅಲೋಹ
 (1)ಕ್ಲೋರಿನ್
 (2)ಬ್ರೋಮಿನ್
 (3)ಪಾದರಸ
 (4)ಸಲ್ಫರ್

CORRECT ANSWER

(2) ಬ್ರೋಮಿನ್


19.‘ಆಲ್ಡಿಹೈಡ್’ ಕ್ರಿಯಾ ಗುಂಪನ್ನು ಹೊಂದಿರುವ ಕಾರ್ಬನ್ ಸಂಯುಕ್ತ
 (1)ಬ್ಯೂಟನೋನ್
 (2)ಎಥನಾಲ್
 (3)ಎಥನೋಯಿಕ್ ಆಮ್ಲ
 (4)ಪ್ರೋಪನ್ಯಾಲ್

CORRECT ANSWER

(4) ಪ್ರೋಪನ್ಯಾಲ್


20.ಗಾಳಿಗೆ ತೆರೆದಿಟ್ಟಾಗ ತಾಮ್ರದ ವಸ್ತುಗಳ ಮೇಲೆ ಹಸಿರು ಪದರ ಉಂಟಾಗಲು ಕಾರಣವಾದ ಸಂಯುಕ್ತ
 (1)ತಾಮ್ರದ ಆಕ್ಸೈಡ್
 (2)ತಾಮ್ರದ ಸಲ್ಪೈಡ್
 (3)ಪ್ರತ್ಯಾಮ್ಲೀಯ ತಾಮ್ರದ ಕಾರ್ಬೊನೇಟ್
 (4)ತಾಮ್ರದ ಕ್ಲೋರೈಡ್

CORRECT ANSWER

(3) ಪ್ರತ್ಯಾಮ್ಲೀಯ ತಾಮ್ರದ ಕಾರ್ಬೊನೇಟ್


21.ಪ್ಯಾರಾಚೂಟ್ ತಯಾರಿಕೆಯಲ್ಲಿ ಬಳಸುವ ಪ್ರಬಲ ಸಂಶ್ಲೇಷಿತ ಎಳೆ
 (1)ನೈಲಾನ್
 (2)ಅಕ್ರಿಲಿಕ್
 (3)ರೇಯಾನ್
 (4)ಪಾಲಿಸ್ಟರ್

CORRECT ANSWER

(1) ನೈಲಾನ್


22.ಶುಷ್ಕ ಒಗೆತಕ್ಕೆ ದ್ರಾವಕವಾಗಿ ಬಳಸುವ ಪೆಟ್ರೋಲಿಯಂ ಉತ್ಪನ್ನ
 (1)ಪ್ಯಾರಾಫಿನ್ ಮೇಣ
 (2)ಪೆಟ್ರೋಲ್
 (3)ಡೀಸೆಲ್
 (4)ಸೀಮೆಎಣ್ಣೆ

CORRECT ANSWER

(2) ಪೆಟ್ರೋಲ್


23.ಜೀವಕೋಶದ ಆತ್ಮಹತ್ಯಾ ಸಂಚಿಗಳು
 (1)ಮೈಟೋಕಾಂಡ್ರಿಯ
 (2)ಲೈಸೋಸೋಮ್‌ಗಳು
 (3)ಪ್ಲಾಸ್ಟಿಡ್‌ಗಳು
 (4)ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್

CORRECT ANSWER

(2) ಲೈಸೋಸೋಮ್‌ಗಳು


24.ಕೊಬ್ಬು ಸಂಗ್ರಹಿಸುವ ಅಂಗಾಂಶ
 (1)ಮೃದ್ವಸ್ಥಿ
 (2)ಸ್ನಾಯುರಜ್ಜು
 (3)ಅಸ್ಥಿರಜ್ಜು
 (4)ಅಡಿಪೋಸ್

CORRECT ANSWER

(4) ಅಡಿಪೋಸ್


25.ಸಂಪೂರ್ಣವಾಗಿ ಜೀರ್ಣಿಸಲ್ಪಟ್ಟ ಆಹಾರವು ಹೀರಲ್ಪಡುವ ಮಾನವ ಜೀರ್ಣಾಂಗವ್ಯೂಹದ ಭಾಗ
 (1)ಸಣ್ಣ ಕರುಳು
 (2)ದೊಡ್ಡ ಕರುಳು
 (3)ಯಕೃತ್
 (4)ಅನ್ನನಾಳ

CORRECT ANSWER

(1) ಸಣ್ಣ ಕರುಳು


26.ಸಂಕೀರ್ಣ ಶಾಶ್ವತ ಅಂಗಾಂಶ
 (1)ಪೇರಂಕೈಮಾ
 (2)ಕೋಲಂಕೈಮಾ
 (3)ಕೈಲಂ
 (4)ಸ್ಕ್ಲೀರಂಕೈಮಾ

CORRECT ANSWER

(3) ಕೈಲಂ


27.ನಾಲ್ಕು ಕೋಣೆಗಳ ಹೃದಯವನ್ನು ಹೊಂದಿರುವವು
 (1)ಸ್ತನಿಗಳು ಮತ್ತು ಮೀನುಗಳು
 (2)ಪಕ್ಷಿಗಳು ಮತ್ತು ಉಭಯವಾಸಿಗಳು
 (3)ಸ್ತನಿಗಳು ಮತ್ತು ಪಕ್ಷಿಗಳು
 (4)ಪಕ್ಷಿಗಳು ಮತ್ತು ಮೀನುಗಳು

CORRECT ANSWER

(3) ಸ್ತನಿಗಳು ಮತ್ತು ಪಕ್ಷಿಗಳು


28.ಸಸ್ಯಗಳ ಬೆಳವಣಿಗೆಯನ್ನು ಪ್ರತಿಬಂಧಿಸುವ ಹಾರ್ಮೋನ್
 (1)ಆಕ್ಸಿನ್
 (2)ಸೈಟೋಕೈನಿನ್
 (3)ಜಬ್ಬರ್‌ಲಿನ್‌
 (4)ಆಬ್ಸಿಸಿಕ್ ಆಮ್ಲ

CORRECT ANSWER

(4) ಆಬ್ಸಿಸಿಕ್ ಆಮ್ಲ


29.ಪರಾವರ್ತಿತ ಚಾಪದ ಸರಿಯಾದ ಅನುಕ್ರಮಣಿಕೆ
 (1)ಗ್ರಾಹಕ, ಜ್ಞಾನವಾಹಿ ನರಕೋಶ, ಸಂಬಂಧ ಕಲ್ಪಿಸುವ ನರಕೋಶ, ಕ್ರಿಯಾವಾಹಿ ನರಕೋಶ, ಕಾರ್ಯನಿರ್ವಾಹಕ
 (2)ಗ್ರಾಹಕ, ಸಂಬಂಧ ಕಲ್ಪಿಸುವ ನರಕೋಶ, ಕ್ರಿಯಾವಾಹಿ ನರಕೋಶ, ಜ್ಞಾನವಾಹಿ ನರಕೋಶ, ಕಾರ್ಯನಿರ್ವಾಹಕ
 (3)ಗ್ರಾಹಕ, ಕಾರ್ಯನಿರ್ವಾಹಕ, ಜ್ಞಾನವಾಹಿ ನರಕೋಶ, ಸಂಬಂಧ ಕಲ್ಪಿಸುವ ನರಕೋಶ, ಕ್ರಿಯಾವಾಹಿ ನರಕೋಶ
 (4)ಗ್ರಾಹಕ, ಕ್ರಿಯಾವಾಹಿ ನರಕೋಶ, ಜ್ಞಾನವಾಹಿ ನರಕೋಶ, ಸಂಬಂಧ ಕಲ್ಪಿಸುವ ನರಕೋಶ, ಕಾರ್ಯನಿರ್ವಾಹಕ

CORRECT ANSWER

(1) ಗ್ರಾಹಕ, ಜ್ಞಾನವಾಹಿ ನರಕೋಶ, ಸಂಬಂಧ ಕಲ್ಪಿಸುವ ನರಕೋಶ, ಕ್ರಿಯಾವಾಹಿ ನರಕೋಶ, ಕಾರ್ಯನಿರ್ವಾಹಕ


30.ಪ್ಲನೇರಿಯಾದಲ್ಲಿ ಸಂತಾನೋತ್ಪತ್ತಿಯ ವಿಧ
 (1)ಮೊಗ್ಗುವಿಕೆ
 (2)ಪುನರುತ್ಪಾದನೆ
 (3)ದ್ವಿವಿದಳನ
 (4)ಬಹುವಿದಳನ

CORRECT ANSWER

(2) ಪುನರುತ್ಪಾದನೆ


31.ಅಸ್ಪಷ್ಟವಾದ ಸಂತಾನೋತ್ಪತ್ತಿ ಅಂಗಗಳು ಕಂಡುಬರುವ ಸಸ್ಯವರ್ಗಗಳು
 (1)ಥ್ಯಾಲೋಫೈಟಾ, ಅನಾವೃತ ಬೀಜ ಸಸ್ಯಗಳು, ಪುಚ್ಛಸಸ್ಯಗಳು
 (2)ಥ್ಯಾಲೋಫೈಟಾ, ಹಾವಸೆ ಸಸ್ಯಗಳು, ಪುಚ್ಛಸಸ್ಯಗಳು
 (3)ಥ್ಯಾಲೋಫೈಟಾ, ಹಾವಸೆ ಸಸ್ಯಗಳು, ಆವೃತ ಬೀಜ ಸಸ್ಯಗಳು
 (4)ಥ್ಯಾಲೋಫೈಟಾ, ಅನಾವೃತ ಬೀಜ ಸಸ್ಯಗಳು, ಹಾವಸೆ ಸಸ್ಯಗಳು

CORRECT ANSWER

(2) ಥ್ಯಾಲೋಫೈಟಾ, ಹಾವಸೆ ಸಸ್ಯಗಳು, ಪುಚ್ಛಸಸ್ಯಗಳು


32.ಓಜೋನ್ ಪದರದ ಶಿಥಿಲೀಕರಣಕ್ಕೆ ಕಾರಣವಾದುದು
 (1)`CO_2`
 (2)`NO_2`
 (3)`CH_4`
 (4)CFC

CORRECT ANSWER

(4) CFC


33.ಕಾಡು ಎಲೆಕೋಸಿನಿಂದ ಕೇಲ್‌ನ ವಿಕಾಸವು ಇದರಿಂದಾಗಿದೆ
 (1)ನೈಸರ್ಗಿಕ ಆಯ್ಕೆ
 (2)ಕೃತಕ ಆಯ್ಕೆ
 (3)ಭೌಗೋಳಿಕ ಪ್ರತ್ಯೇಕನ
 (4)ಅನುವಂಶೀಯ ದಿಕ್ಚ್ಯುತಿ

CORRECT ANSWER

(2) ಕೃತಕ ಆಯ್ಕೆ


34.ಜೈವಿಕ ವಿಘಟನೆಗೆ ಒಳಗಾಗುವ ವಸ್ತುಗಳನ್ನು ಮಾತ್ರ ಒಳಗೊಂಡಿರುವ ಗುಂಪು
 (1)ಹುಲ್ಲು, ಹೂವುಗಳು ಮತ್ತು ಚರ್ಮ
 (2)ಹುಲ್ಲು, ಮರದ ತುಂಡು ಮತ್ತು ಪ್ಲಾಸ್ಟಿಕ್ ಚೀಲ
 (3)ಹಣ್ಣಿನ ಸಿಪ್ಪೆ, ಕೇಕ್ ಮತ್ತು ಪ್ಲಾಸ್ಟಿಕ್
 (4)ಕೇಕ್, ಗಾಜಿನ ಕಡ್ಡಿ ಮತ್ತು ಹುಲ್ಲು

CORRECT ANSWER

(1) ಹುಲ್ಲು, ಹೂವುಗಳು ಮತ್ತು ಚರ್ಮ


35.ಲಿವರ್ ಫ್ಲೋಕ್‌ಗಳು ಈ ವಂಶಕ್ಕೆ ಸೇರುತ್ತವೆ
 (1)ಚಪ್ಪಟೆ ಹುಳುಗಳು (ಪ್ಲಾಟಿಹೆಲ್ಮಿಂಥಿಸ್)
 (2)ಸಂಧಿಪದಿಗಳು (ಆರ್ಥ್ರೋಪೊಡ)
 (3)ಸ್ಪಂಜು ಪ್ರಾಣಿಗಳು (ಪೊರಿಫೆರಾ)
 (4)ವಲಯವಂತಗಳು (ಅನೆಲಿಡಾ)

CORRECT ANSWER

(1) ಚಪ್ಪಟೆ ಹುಳುಗಳು (ಪ್ಲಾಟಿಹೆಲ್ಮಿಂಥಿಸ್)


36.ವೀರ್ಯಾಣುಗಳು ಉತ್ಪತ್ತಿಯಾಗುವ ಗಂಡು ಸಂತಾನೋತ್ಪತ್ತಿಯ ಭಾಗ
 (1)ಪ್ರೋಸ್ಟೇಟ್ ಗ್ರಂಥಿ
 (2)ಶಿಶ್ನ
 (3)ವೃಷಣ
 (4)ವೀರ್ಯನಾಳ

CORRECT ANSWER

(3) ವೃಷಣ


37.ವನ್ಯಜೀವಿಗಳ ಸಂರಕ್ಷಣೆಗಾಗಿ ಗುರುತಿಸಲಾದ ಬೃಹತ್ ಸಂರಕ್ಷಿತ ಭೂಪ್ರದೇಶ
 (1)ವನ್ಯಜೀವಿಧಾಮ
 (2)ರಾಷ್ಟ್ರೀಯ ಉದ್ಯಾನ
 (3)ಪ್ರಾಣಿ ಸಂಗ್ರಹಾಲಯ
 (4)ರಕ್ಷಿತ ಜೀವಗೋಳ

CORRECT ANSWER

(4) ರಕ್ಷಿತ ಜೀವಗೋಳ


38.18 ಮತ್ತು 48 ಸಂಖ್ಯೆಗಳ ಮ.ಸಾ.ಅ.
 (1)9
 (2)6
 (3)3
 (4)4

CORRECT ANSWER

(2) 6


39.1.5 kg ಮತ್ತು 600 gmಗಳ ನಡುವಿನ ಅನುಪಾತ
 (1)2:3
 (2)2:5
 (3)5:3
 (4)5:2

CORRECT ANSWER

(4) 5:2


40.ಕೆಳಗಿನ ಸಂಖ್ಯೆಗಳಲ್ಲಿ ಪೂರ್ಣ ವರ್ಗ ಸಂಖ್ಯೆ
 (1)324
 (2)440
 (3)600
 (4)125

CORRECT ANSWER

(1) 324


41.`((2^2)^3×2^4)/ (2^6)` ಇದರ ಬೆಲೆ
 (1)32
 (2)64
 (3)16
 (4)2

CORRECT ANSWER

(3) 16


42.7 cm ತ್ರಿಜ್ಯವಿರುವ ವೃತ್ತದ ಪರಿಧಿ
 (1)14 π cm
 (2)7 π cm
 (3)22 cm
 (4)22 π cm

CORRECT ANSWER

(1) 14 π cm


43.ವಕ್ರ ಮೇಲ್ಮೈಯನ್ನು ಮಾತ್ರ ಹೊಂದಿರುವ ಘನಾಕೃತಿ
 (1)ಅರ್ಧಗೋಳ
 (2)ಸಿಲಿಂಡರ್
 (3)ಶಂಕು
 (4)ಗೋಳ

CORRECT ANSWER

(4) ಗೋಳ


44.ಒಂದು ಚತುರ್ಭುಜದ ನಾಲ್ಕು ಒಳಕೋನಗಳ ಮೊತ್ತ
 (1)180°
 (2)360°
 (3)90°
 (4)270°

CORRECT ANSWER

(2) 360°


45.ಪಾದ 12 cm ಮತ್ತು ಎತ್ತರ 4.5 cm ಇರುವ ಸಮಾಂತರ ಚತುರ್ಭುಜದ ವಿಸ್ತೀರ್ಣ
 (1)`16.5 cm^2`
 (2)`27 cm^2`
 (3)`54 cm^2`
 (4)`52 cm^2`

CORRECT ANSWER

(3) `54 cm^2`


46.ಗೋಡೆಯಿಂದ 8 ಅಡಿ ದೂರದಿಂದ ಒಂದು ಏಣಿಯನು ಆ ಗೋಡೆಗೆ 15 ಅಡಿ ಎತ್ತರಕ್ಕೆ ಒರಗಿಸಿದೆ. ಆ ಏಣಿಯ ಉದ್ದ
 (1)17 ಅಡಿ
 (2)23 ಅಡಿ
 (3)25 ಅಡಿ
 (4)20 ಅಡಿ

CORRECT ANSWER

(1) 17 ಅಡಿ


47.ವಿಜ್ಞಾನ ಕಲಿಕೆಯಲ್ಲಿ ‘ಕ್ಷೇತ್ರ ಪ್ರವಾಸ’ವನ್ನು ಆಯೋಜಿಸುವುದರ ಮುಖ್ಯ ಉದ್ದೇಶ
 (1)ಪೋಷಕರಿಗೆ ಶಿಕ್ಷಣ ಗುಣಮಟ್ಟದ ಬಗ್ಗೆ ತೃಪ್ತಿಪಡಿಸುವುದು
 (2)ವಿದ್ಯಾರ್ಥಿಗಳಿಗೆ ಮೋಜು ಮತ್ತು ಸಂತೋಷ ಒದಗಿಸುವುದು
 (3)ಕಲಿಕೆಯ ಏಕತಾನತೆಯನ್ನು ಬದಲಿಸುವುದು
 (4)ವಿದ್ಯಾರ್ಥಿಗಳಿಗೆ ಸಕ್ರಿಯ ಕಲಿಕಾ ಅನುಭವವನ್ನು ಒದಗಿಸುವುದು

CORRECT ANSWER

(4) ವಿದ್ಯಾರ್ಥಿಗಳಿಗೆ ಸಕ್ರಿಯ ಕಲಿಕಾ ಅನುಭವವನ್ನು ಒದಗಿಸುವುದು


48.ಕಾಂತತ್ವ ಪಾಠಕ್ಕೆ ಸಂಬಂಧಿಸಿದಂತೆ ತಿಳುವಳಿಕೆ ಹಂತಕ್ಕೆ ಪೂರಕವಾದ ಬೋಧನಾ ಉದ್ದೇಶ, ವಿದ್ಯಾರ್ಥಿಯು
 (1)ಕಾಂತದ ಅರ್ಥವನ್ನು ಸ್ಮರಿಸುತ್ತಾನೆ
 (2)ಕಾಂತದ ವಿಧಗಳನ್ನು ವಿವರಿಸುತ್ತಾನೆ
 (3)ನೀಡಿರುವ ಅಯಸ್ಕಾಂತ ಚಿತ್ರದಲ್ಲಿ ಕಾಂತೀಯ ಬಲರೇಖೆಗಳನ್ನು ರಚಿಸುತ್ತಾನೆ
 (4)ನಿತ್ಯ ಜೀವನದಲ್ಲಿ ಕಾಂತದ ಅನ್ವಯಗಳನ್ನು ಗುರ್ತಿಸುತ್ತಾನೆ

CORRECT ANSWER

(2) ಕಾಂತದ ವಿಧಗಳನ್ನು ವಿವರಿಸುತ್ತಾನೆ


49.ಚಟುವಟಿಕೆ ಆಧಾರಿತ ವಿಜ್ಞಾನ ಕಲಿಕೆಯಲ್ಲಿನ ಹಂತಗಳು
 (1)ಯೋಜನೆ, ನಿರ್ವಹಣೆ, ಅನುಚಿಂತನೆ, ಪುನರ್‌ರಚನೆ
 (2)ಯೋಜನೆ, ವಿಶ್ಲೇಷಣೆ, ನಿರ್ಣಯ, ಪರಿಷ್ಕರಣೆ
 (3)ಯೋಜನೆ, ಪ್ರಕ್ರಿಯೆ, ನಿರ್ಣಯಿಸುವಿಕೆ, ಸ್ವೀಕೃತಿ
 (4)ಯೋಜನೆ, ನಿರ್ವಹಣೆ, ಪ್ರಕ್ರಿಯೆ, ಭಾಗವಹಿಸುವಿಕೆ

CORRECT ANSWER

(1) ಯೋಜನೆ, ನಿರ್ವಹಣೆ, ಅನುಚಿಂತನೆ, ಪುನರ್ರಚನೆ


50.ಸಾಮಾಜಿಕ ಪರಿಸರದಲ್ಲಿ ಚಟುವಟಿಕೆಯನ್ನು ಮನಃಪೂರ್ವಕವಾಗಿ ಮತ್ತು ಉದ್ದೇಶಪೂರ್ವಕವಾಗಿ ನಡೆಸುವ ತಂಡಕಾರ್ಯವನ್ನು ಒಳಗೊಂಡ ವಿಧಾನ
 (1)ಅನುಗಮನ
 (2)ಸಮಸ್ಯಾ ಪರಿಹಾರ
 (3)ಯೋಜನೆ
 (4)ನಿಗಮನ

CORRECT ANSWER

(3) ಯೋಜನೆ


Post a Comment

1 Comments

BOTTOM ADS