PSI Question Paper Civil 05-01-2020

SUB-INSPECTOR OF POLICE (CIVIL) Exam Held on 05-01-2020 Questions with answers

ದಿನಾಂಕ -05-01-2020 ರಂದು ನಡೆದ ಪೂಲೀಸ್‌ ಸಬ್‌ ಇನ್ಸ್‌ಪೆಕ್ಟರ್‌(ಸಿವಿಲ್‌) ಪ್ರಶ್ನೆಪತ್ರಿಕೆ IIರ ಪ್ರಶ್ನೆಗಳನ್ನು ಉತ್ತರದೊಂದಿಗೆ ನೀಡಲಾಗಿದೆ.

1.ವಾತಾವರಣದ ಓಝೋನ್ ಪದರದಲ್ಲಿ ಓಝೋನ್ ಇರುವಿಕೆಯು ಏಕೆ ಅಗತ್ಯವಾಗಿದೆ?
 (ಎ) ಇದು ಆಮ್ಲಜನಕವನ್ನು ಒದಗಿಸುತ್ತದೆ.
 (ಬಿ)ಇದು ಇತರೇ ಅನಿಲಗಳನ್ನು ರಕ್ಷಿಸುತ್ತದೆ.
 (ಸಿ)ಇದು ಸೂರ್ಯನಿಂದ ಬರುವ ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುತ್ತದೆ.
 (ಡಿ)ಹಸಿರು ಮನೆ ಪರಿಣಾಮದ ಅನಿಲಗಳನ್ನು ಹೀರಿಕೊಂಡು ನಿರ್ನಾಮ ಮಾಡುತ್ತದೆ.

ಸರಿ ಉತ್ತರ

(ಸಿ) ಇದು ಸೂರ್ಯನಿಂದ ಬರುವ ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುತ್ತದೆ.


2.‘ಬ್ರಿಟೀಷ್ ವಸ್ತುಗಳನ್ನು ಬಹಿಷ್ಕರಿಸಿ’ ಎಂಬುದು ಕೆಳಕಂಡ ಯಾವ ಚಳುವಳಿಯ ಘೋಷ ವಾಕ್ಯವಾಗಿತ್ತು ?
 (ಎ) ಸ್ವದೇಶಿ ಚಳುವಳಿ
 (ಬಿ)ಭಾರತ ಬಿಟ್ಟು ತೊಲಗಿ ಚಳುವಳಿ
 (ಸಿ)ಅಸಹಕಾರ ಚಳುವಳಿ
 (ಡಿ)ಹೋಮ್ ರೂಲ್ ಚಳುವಳಿ

ಸರಿ ಉತ್ತರ

(ಎ) ಸ್ವದೇಶಿ ಚಳುವಳಿ


3.ಭಾರತೀಯ ರಿಸರ್ವ್ ಬ್ಯಾಂಕ್ ಮಾಡುವ ತೆರೆದ ಮಾರುಕಟ್ಟೆ ಕಾರ್ಯಾಚರಣೆಗಳಿಂದ ಈ ಕೆಳಕಂಡ ಯಾವುದರ ಮೇಲೆ ಪರಿಣಾಮ ಬೀರುತ್ತದೆ ?
 (1)ಹಣದುಬ್ಬರ
 (2)ಬಡ್ಡಿದರ
 (ಎ) (1) ಮಾತ್ರ
 (ಬಿ)(2) ಮಾತ್ರ
 (ಸಿ)ಎರಡರ ಮೇಲೂ
 (ಡಿ)ಯಾವುದರ ಮೇಲೂ ಅಲ್ಲ

ಸರಿ ಉತ್ತರ

(ಸಿ) ಎರಡರ ಮೇಲೂ


4.‘ರಾಜೀವ್ ಗಾಂಧಿ ಖೇಲ್ ರತ್ನ’ ಪ್ರಶಸ್ತಿಯನ್ನು ಪ್ರಥಮವಾಗಿ ಪಡೆದವರು ಯಾರು ?
 (ಎ) ವಿಶ್ವನಾಥನ್ ಆನಂದ್
 (ಬಿ)ಲಿಯಾಂಡರ್ ಪೇಸ್
 (ಸಿ)ಕಪಿಲ್ ದೇವ್
 (ಡಿ)ಲಿಂಬಾ ರಾಮ್

ಸರಿ ಉತ್ತರ

(ಎ) ವಿಶ್ವನಾಥನ್ ಆನಂದ್


5.ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ನಲ್ಲಿ ನೊಜೊಮಿ ಓಕುಹರಾ ರವರನ್ನು ಸೋಲಿಸಿ ಚಿನ್ನ ಗೆದ್ದ ಮೊದಲ ಭಾರತೀಯರು ಯಾರು?
 (ಎ) ಪಿ.ವಿ. ಸಿಂಧು
 (ಬಿ)ಸೈನಾ ನೆಹ್ವಾಲ್
 (ಸಿ)ಕಿದಂಬಿ ಶ್ರೀಕಾಂತ್
 (ಡಿ)ಸಾಯಿ ಪ್ರಣೀತ್

ಸರಿ ಉತ್ತರ

(ಎ) ಪಿ.ವಿ. ಸಿಂಧು


6.ಮದರ್ ಥೆರೆಸಾರವರಿಗೆ ಯಾವ ವರ್ಷದಲ್ಲಿ ನೋಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು?
 (ಎ) 1975
 (ಬಿ)1979
 (ಸಿ)1981
 (ಡಿ)1982

ಸರಿ ಉತ್ತರ

(ಬಿ) 1979


7.‘ಜಾಗತಿಕ ಬಡತನ ನಿರ್ಮೂಲನೆ’ಗಾಗಿ ಪ್ರಯೋಗಾತ್ಮಕವಾಗಿ ಯತ್ನಿಸಿದ ಯಾವ ವ್ಯಕ್ತಿಗೆ ಅರ್ಥಶಾಸ್ತ್ರ ಕ್ಷೇತ್ರದಲ್ಲಿ 2019 ರ ನೋಬೆಲ್ ಪ್ರಶಸ್ತಿ ದೊರೆತಿದೆ ?
 (ಎ) ಅಭಿಜಿತ್ ಬ್ಯಾನರ್ಜಿ
 (ಬಿ)ಪೌಲ್ ಕ್ರುಗ್ ಮನ್
 (ಸಿ)ಅಮರ್ಥ್ಯ ಸೇನ್
 (ಡಿ)ರಿಚರ್ಡ್ ಥಾಲೇರ್

ಸರಿ ಉತ್ತರ

(ಎ) ಅಭಿಜಿತ್ ಬ್ಯಾನರ್ಜಿ


8.‘ICERT’ ಇದರ ವಿಸೃತ ರೂಪವೇನು?
 (ಎ) ಇಂಡಿಯನ್ ಸೈಬರ್ ಎಮರ್ಜೆನ್ಸಿ ರಿವ್ಯೂ ಟೀಮ್
 (ಬಿ)ಇಂಡಿಯನ್ ಸೈಬರ್ ಕ್ರೈಂ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್
 (ಸಿ)ಇಂಡಿಯನ್ ಕಂಪ್ಯೂಟರ್ ಎಂಟರ್ ಪ್ರಿನರ್ಸ್ ರೆಸ್ಪಾನ್ಸ್ ಟೀಮ್
 (ಡಿ)ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್

ಸರಿ ಉತ್ತರ

(ಡಿ) ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್


9.‘ಬಿಹು’ ಎಂಬುದು ಭಾರತದ ಯಾವ ರಾಜ್ಯದ ಜಾನಪದ ನೃತ್ಯ ಪ್ರಕಾರವಾಗಿದೆ ?
 (ಎ) ಪಶ್ಚಿಮ ಬಂಗಾಳ
 (ಬಿ)ಮಣಿಪುರ
 (ಸಿ)ನಾಗಾಲ್ಯಾಂಡ್
 (ಡಿ)ಅಸ್ಸಾಮ್

ಸರಿ ಉತ್ತರ

(ಡಿ) ಅಸ್ಸಾಮ್


10.ಭಾರತದ ಸಂವಿಧಾನದಲ್ಲಿ ಯಾವ ಅನುಚ್ಛೇದವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಿತಿಗೆ ಸಂಬಂಧಪಟ್ಟಿದೆ ?
 (ಎ) ಅನುಚ್ಛೇದ 370
 (ಬಿ)ಅನುಚ್ಛೇದ 372
 (ಸಿ)ಅನುಚ್ಛೇದ 375
 (ಡಿ)ಅನುಚ್ಛೇದ 377

ಸರಿ ಉತ್ತರ

(ಎ) ಅನುಚ್ಛೇದ 370


11.‘ಐಸೋಪಿಕ್ನಿಕ್’ ಎಂಬುದು ಈ ಕೆಳಕಂಡವುಗಳಲ್ಲಿ ಯಾವುದಕ್ಕೆ ಅತೀ ಹತ್ತಿರದ ಸಂಬಂಧಪಟ್ಟಿದೆ?
 (ಎ) ಒಂದೇ ರೀತಿಯ ವಾತಾವರಣದ ಒತ್ತಡವನ್ನು ಹೊಂದಿರುವ ಎರಡು ಸ್ಥಳಗಳು.
 (ಬಿ)ಒಂದೇ ರೀತಿಯ ಜಿಗುಟುತನ ಹೊಂದಿರುವ ಎರಡು ದ್ರವಗಳು.
 (ಸಿ)ಒಂದೇ ರೀತಿಯ ಸಾಂದ್ರತೆ ಹೊಂದಿರುವ ಎರಡು ದ್ರವಗಳು.
 (ಡಿ)ಒಂದೇ ರೀತಿಯ ಉಷ್ಣತೆಯನ್ನು ಹೊಂದಿರುವ ಎರಡು ಸ್ಥಳಗಳು.

ಸರಿ ಉತ್ತರ

(ಸಿ) ಒಂದೇ ರೀತಿಯ ಸಾಂದ್ರತೆ ಹೊಂದಿರುವ ಎರಡು ದ್ರವಗಳು.


12.ಈ ಕೆಳಕಂಡ ಹೇಳಿಕೆಗಳನ್ನು ವಿಚಾರ ಮಾಡಿ.
 (1)ಜಾಗತಿಕವಾಗಿ ತೈಲಗಳ ಬೆಲೆ ಹೆಚ್ಚಳವು ಭಾರತದ ‘ಚಾಲ್ತಿ ಖಾತೆ ಕೊರತೆ’ ಯನ್ನು ಹಿಗ್ಗಿಸುತ್ತದೆ.
 (2)ಹೆಚ್ಚಿನ ‘ಚಾಲ್ತಿ ಖಾತೆ ಕೊರತೆ’ ಯು ಕರೆನ್ಸಿಯ ಮೌಲ್ಯವನ್ನು ಕುಗ್ಗಿಸುತ್ತದೆ. ಮೇಲ್ಕಂಡ ಯಾವ ಹೇಳಿಕೆ/ಗಳು ಸರಿಯಿದೆ ?
 (ಎ) (1) ಮಾತ್ರ
 (ಬಿ)(2) ಮಾತ್ರ
 (ಸಿ)(1) ಮತ್ತು (2) ಎರಡೂ
 (ಡಿ)(1) ಅಲ್ಲ (2) ಅಲ್ಲ

ಸರಿ ಉತ್ತರ

(ಸಿ) (1) ಮತ್ತು (2) ಎರಡೂ


13.ಭಾರತದಲ್ಲಿ ವ್ಯಾಪಾರ ಮಾಡಲು ಪ್ರಥಮವಾಗಿ ಜಂಟಿಯಾಗಿ ವ್ಯಾಪಾರ ಕಂಪನಿಯನ್ನು ಪ್ರಾರಂಭಿಸಿದವರು
 (ಎ) ಡಚ್ಚರು
 (ಬಿ)ಪೋರ್ಚುಗೀಸರು
 (ಸಿ)ಡ್ಯಾನಿಷ್ (ಡೆನ್ಮಾರ್ಕ್ ನವರು)
 (ಡಿ)ಫ್ರೆಂಚ್ (ಫ್ರೆಂಚರು)

ಸರಿ ಉತ್ತರ

(ಎ) ಡಚ್ಚರು


14.ಮಹಾತ್ಮ ಗಾಂಧಿಯವರು ಬ್ರಿಟೀಷರು ತಮಗೆ ನೀಡಿದ್ದ ಯಾವ ಪದವಿಯನ್ನು ಅಸಹಕಾರ ಚಳುವಳಿಯ ವೇಳೆಯಲ್ಲಿ ಹಿಂತಿರುಗಿಸಿದರು ?
 (ಎ) ಹಿಂದ್ ಕೇಸರಿ
 (ಬಿ)ಕೈಸರ್- ಇ- ಹಿಂದ್
 (ಸಿ)ರಾಯ್ ಬಹದ್ದೂರ್
 (ಡಿ)ರೈಟ್ ಆನರೇಬಲ್

ಸರಿ ಉತ್ತರ

(ಬಿ) ಕೈಸರ್- ಇ- ಹಿಂದ್


15.ಇಸ್ರೋದ ಉಪಗ್ರಹಗಳ ಉಡಾವಣಾ ಸ್ಥಳವು ಎಲ್ಲಿದೆ ?
 (ಎ) ಶ್ರೀಹರಿಕೋಟ (ಆಂಧ್ರಪ್ರದೇಶ)
 (ಬಿ)ಸೋಲಾಪುರ (ಮಹಾರಾಷ್ಟ್ರ)
 (ಸಿ)ಸೇಲಂ (ತಮಿಳುನಾಡು)
 (ಡಿ)ವಾರಂಗಲ್ (ಆಂಧ್ರಪ್ರದೇಶ)

ಸರಿ ಉತ್ತರ

(ಎ) ಶ್ರೀಹರಿಕೋಟ (ಆಂಧ್ರಪ್ರದೇಶ)


16.ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕಛೇರಿ ಎಲ್ಲಿದೆ ?
 (ಎ) ವಿಯೆನ್ನಾ
 (ಬಿ)ನ್ಯೂಯಾರ್ಕ್
 (ಸಿ)ಪ್ಯಾರಿಸ್
 (ಡಿ)ಜ್ಯೂರಿಕ್

ಸರಿ ಉತ್ತರ

(ಬಿ) ನ್ಯೂಯಾರ್ಕ್


17.ಅಳಿದಿರುವ ಪ್ರಾಣಿಗಳ ಅಧ್ಯಯನ ಮಾಡುವ ಶಾಸ್ತ್ರ?
 (ಎ) ಹರ್ಪೆಟೊಲಜಿ
 (ಬಿ)ಆರ್ನಿಥೋಲಜಿ
 (ಸಿ)ಜಿಯೋಲಜಿ
 (ಡಿ)ಪಾಲೆಂಟೋಲಜಿ

ಸರಿ ಉತ್ತರ

(ಡಿ) ಪಾಲೆಂಟೋಲಜಿ


18.ರಿಕ್ಟರ್ ಮಾಪಕವನ್ನು ಏನನ್ನು ಅಳೆಯಲು ಬಳಸುತ್ತಾರೆ ?
 (ಎ) ದ್ರವದ ಸಾಂದ್ರತೆಯನ್ನು ಅಳೆಯಲು
 (ಬಿ)ಭೂಕಂಪಗಳ ತೀವ್ರತೆಯನ್ನು ಅಳೆಯಲು
 (ಸಿ)ಗಾಳಿಯ ವೇಗವನ್ನು ಅಳೆಯಲು
 (ಡಿ)ವಾತಾವರಣದ ಆದರ್ರ್ತೆಯನ್ನು ಅಳೆಯಲು

ಸರಿ ಉತ್ತರ

(ಬಿ) ಭೂಕಂಪಗಳ ತೀವ್ರತೆಯನ್ನು ಅಳೆಯಲು


19.ವಿಜಯನಗರದ ಯಾವ ರಾಜನು ತನ್ನ ಸೈನಿಕರ ಯುದ್ಧ ಕೌಶಲ್ಯವನ್ನು ಹೆಚ್ಚಿಸಲು ಟರ್ಕಿಯ ಬಿಲ್ವಿದ್ಯೆ ನಿಪುಣರನ್ನು ನೇಮಕ ಮಾಡಿದ್ದನು ?
 (ಎ) ಒಂದನೇ ಬುಕ್ಕ
 (ಬಿ)ಒಂದನೇ ದೇವರಾಯ
 (ಸಿ)ಕೃಷ್ಣದೇವರಾಯ
 (ಡಿ)ರಾಮರಾಯ

ಸರಿ ಉತ್ತರ

(ಬಿ) ಒಂದನೇ ದೇವರಾಯ


20.‘ರಾಷ್ಟ್ರೀಯ ಪೊಲೀಸ್ ಅಕಾಡೆಮಿ’ಯು ಎಲ್ಲಿದೆ ?
 (ಎ) ಬೆಂಗಳೂರು
 (ಬಿ)ಹೈದರಾಬಾದ್
 (ಸಿ)ಮೌಂಟ್ ಅಬು
 (ಡಿ)ಡೆಹ್ರಾಡೂನ್

ಸರಿ ಉತ್ತರ

(ಬಿ) ಹೈದರಾಬಾದ್


21.ಅಶೋಕನು ಯಾವ ರಾಜಮನೆತನಕ್ಕೆ ಸೇರಿದವನು ?
 (ಎ) ವರ್ಧನರು
 (ಬಿ)ಮೌರ್ಯರು
 (ಸಿ)ಕುಶಾನರು
 (ಡಿ)ಗುಪ್ತರು

ಸರಿ ಉತ್ತರ

(ಬಿ) ಮೌರ್ಯರು


22.ಶಿಮ್ಲಾ ಒಪ್ಪಂದವು ಈ ಕೆಳಕಂಡ ಯಾವ ವಿಷಯಕ್ಕೆ ಸಂಬಂಧಿಸಿದೆ?
 (ಎ) ಪ್ರವಾಸಿ ತಾಣವಾಗಿ ಶಿಮ್ಲಾ
 (ಬಿ)ಹಿಮಾಚಲ ಪ್ರದೇಶ ರಾಜ್ಯದ ರಾಜಧಾನಿಯಾಗಿ ಶಿಮ್ಲಾ
 (ಸಿ)ಭಾರತ ಮತ್ತು ಟಿಬೆಟ್ ನಡುವಿನ ಗಡಿ
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಸಿ) ಭಾರತ ಮತ್ತು ಟಿಬೆಟ್ ನಡುವಿನ ಗಡಿ


23.ಭಾರತ ರತ್ನವನ್ನು ಸ್ವೀಕರಿಸಿದ ಪ್ರಥಮ ವಿದೇಶಿಯರು ಯಾರು?
 (ಎ) ಮಾರ್ಟಿನ್ ಲೂಥರ್ ಕಿಂಗ್
 (ಬಿ)ಮದರ್ ತೆರೆಸಾ
 (ಸಿ)ಖಾನ್ ಅಬ್ದುಲ್ ಗಾಫಾರ್ ಖಾನ್
 (ಡಿ)ಜುಬಿನ್ ಮೆಹ್ತಾ

ಸರಿ ಉತ್ತರ

(ಸಿ) ಖಾನ್ ಅಬ್ದುಲ್ ಗಾಫಾರ್ ಖಾನ್


24.ಭಾರತ ಮತ್ತು ಬಾಂಗ್ಲಾದೇಶದ ನಡುವೆ ಗಂಗಾನದಿಯ ನೀರಿನ ಹಂಚಿಕೆಗೆ ಸಂಬಂಧಪಟ್ಟಂತೆ ಯಾವಾಗ ಒಪ್ಪಂದ ಏರ್ಪಟ್ಟಿತು?
 (ಎ) 1997
 (ಬಿ)1996
 (ಸಿ)1995
 (ಡಿ)1998

ಸರಿ ಉತ್ತರ

(ಬಿ) 1996


25.ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ಯಾರಾಗಿದ್ದರು ?
 (ಎ) ಡಾ. ಕೆ.ಎಂ. ಮುನ್ಷಿ
 (ಬಿ)ಜವಹರಲಾಲ್ ನೆಹರು
 (ಸಿ)ಡಾ. ಬಿ.ಆರ್. ಅಂಬೇಡ್ಕರ್
 (ಡಿ)ಡಾ. ರಾಜೇಂದ್ರ ಪ್ರಸಾದ್

ಸರಿ ಉತ್ತರ

(ಡಿ) ಡಾ. ರಾಜೇಂದ್ರ ಪ್ರಸಾದ್


26.ಅಂಕಲೇಶ್ವರವು ಯಾವುದಕ್ಕೆ ಪ್ರಸಿದ್ಧಿಯಾಗಿದೆ ?
 (ಎ) ಕಲ್ಲಿದ್ದಲು ಗಣಿಗಾರಿಕೆ
 (ಬಿ)ತೈಲ ಮತ್ತು ನೈಸರ್ಗಿಕ ಅನಿಲವನ್ನು ಹೊರತೆಗೆಯುವಿಕೆ
 (ಸಿ)ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು
 (ಡಿ)ಹತ್ತಿ ಜವಳಿ ಕೈಗಾರಿಕೆಗಳು

ಸರಿ ಉತ್ತರ

(ಬಿ) ತೈಲ ಮತ್ತು ನೈಸರ್ಗಿಕ ಅನಿಲವನ್ನು ಹೊರತೆಗೆಯುವಿಕೆ


27.ಭಾರತದ ಯಾವ ಪ್ರಮುಖ ನದಿಯು ಪಶ್ಚಿಮ ಘಟ್ಟದಲ್ಲಿ ಉಗಮವಾಗುವುದಿಲ್ಲ ?
 (ಎ) ಕಾವೇರಿ
 (ಬಿ)ಗೋದಾವರಿ
 (ಸಿ)ಕೃಷ್ಣ
 (ಡಿ)ಮಹಾನದಿ

ಸರಿ ಉತ್ತರ

(ಡಿ) ಮಹಾನದಿ


28.ಭಾರತದಲ್ಲಿ ಅತೀ ಹೆಚ್ಚು ಕೇಸರಿಯನ್ನು ಉತ್ಪಾದಿಸುವ ರಾಜ್ಯ ಯಾವುದು ?
 (ಎ) ಅಸ್ಸಾಂ
 (ಬಿ)ಹಿಮಾಚಲ ಪ್ರದೇಶ
 (ಸಿ)ಜಮ್ಮು ಮತ್ತು ಕಾಶ್ಮೀರ
 (ಡಿ)ಮೇಘಾಲಯ

ಸರಿ ಉತ್ತರ

(ಸಿ) ಜಮ್ಮು ಮತ್ತು ಕಾಶ್ಮೀರ


29.ಸಂಚಿ ಸ್ತೂಪವು ಯಾವ ಸ್ಥಳದ ಬಳಿಯಿದೆ ?
 (ಎ) ಗಯಾ
 (ಬಿ)ಬೋಪಾಲ್
 (ಸಿ)ವಾರಣಾಸಿ
 (ಡಿ)ವಿಜಯಪುರ

ಸರಿ ಉತ್ತರ

(ಬಿ) ಬೋಪಾಲ್


30.ಭಾರತದ ಅತೀ ಪುರಾತನ ಬಂಡೆಗಳು ಯಾವ ಸ್ಥಳದಲ್ಲಿ ಕಂಡು ಬಂದಿವೆ ?
 (ಎ) ಧಾರವಾಡ ಪ್ರದೇಶ, ಕರ್ನಾಟಕ
 (ಬಿ)ಅರಾವಳಿ ವಲಯ, ರಾಜಸ್ಥಾನ
 (ಸಿ)ವಿಂದ್ಯಾ ವಲಯ, ಮಧ್ಯಪ್ರದೇಶ
 (ಡಿ)ಶಿವಾಲಿಕ್ ವಲಯ, ಪಂಜಾಬ್

ಸರಿ ಉತ್ತರ

(ಎ) ಧಾರವಾಡ ಪ್ರದೇಶ, ಕರ್ನಾಟಕ


31.ಸಹರಾ ಮರುಭೂಮಿಯು ಯಾವ ಖಂಡದಲ್ಲಿದೆ ?
 (ಎ) ಏಷ್ಯಾ
 (ಬಿ)ಆಫ್ರಿಕಾ
 (ಸಿ)ಆಸ್ಟ್ರೇಲಿಯಾ
 (ಡಿ)ಯೂರೋಪ್

ಸರಿ ಉತ್ತರ

(ಬಿ) ಆಫ್ರಿಕಾ


32.ಭಾರತದಲ್ಲಿ ಧಾನ್ಯ ಬೆಳೆಯುವ ಹೆಚ್ಚಿನ ಪ್ರದೇಶವನ್ನು ಈ ಬೆಳೆಗೆ ಉಪಯೋಗಿಸಲಾಗುತ್ತದೆ
 (ಎ) ಬಾರ್ಲಿ ಮತ್ತು ಜೋಳ
 (ಬಿ)ಸಿರಿಧಾನ್ಯಗಳು
 (ಸಿ)ಭತ್ತ
 (ಡಿ)ಗೋಧಿ

ಸರಿ ಉತ್ತರ

(ಸಿ) ಭತ್ತ


33.ಭಾರತದಲ್ಲಿನ ಅತೀ ಪುರಾತನ ಬೆಟ್ಟ ಸಾಲುಗಳು
 (ಎ) ಅರಾವಳಿ ಬೆಟ್ಟ ಸಾಲುಗಳು
 (ಬಿ)ವಿಂದ್ಯ ಬೆಟ್ಟ ಸಾಲುಗಳು
 (ಸಿ)ಸಾತ್ಪುರ ಬೆಟ್ಟ ಸಾಲುಗಳು
 (ಡಿ)ನೀಲಗಿರಿ ಬೆಟ್ಟ ಸಾಲುಗಳು

ಸರಿ ಉತ್ತರ

(ಎ) ಅರಾವಳಿ ಬೆಟ್ಟ ಸಾಲುಗಳು


34.ನೈಋತ್ಯ ಮಳೆ ಮಾರುತಗಳು ಭಾರತದಲ್ಲಿ ಶೇ. ___________ ಪ್ರಮಾಣದ ಮಳೆಯನ್ನು ಸುರಿಸುತ್ತವೆ.
 (ಎ) 86%
 (ಬಿ)50%
 (ಸಿ)22%
 (ಡಿ)100%

ಸರಿ ಉತ್ತರ

(ಎ) 86%


35.ಪ್ರಸಿದ್ದವಾದ ‘ರಾಕ್ ಗಾರ್ಡನ್’ ಯಾವ ನಗರದಲ್ಲಿದೆ ?
 (ಎ) ಜೈಪುರ
 (ಬಿ)ಲಕ್ನೋ
 (ಸಿ)ಶಿಮ್ಲಾ
 (ಡಿ)ಚಂಡೀಘಡ

ಸರಿ ಉತ್ತರ

(ಡಿ) ಚಂಡೀಘಡ


36.ಈ ಅಂಶವನ್ನು ಒಂದು ಜೀವಿಗೆ ನೀಡಿದಾಗ ಅದರಲ್ಲಿ ಪ್ರತಿ ನಿರೋಧಕ ಜೀವಿಗಳು ಉತ್ಪತ್ತಿಯಾಗುತ್ತವೆ.
 (ಎ) ಕೀವುಗಳೆಕ
 (ಬಿ)ಪ್ರತಿವಿಷ
 (ಸಿ)ಪ್ರತಿಜನಕ
 (ಡಿ)ಪ್ರತಿ ಜೀವಕ

ಸರಿ ಉತ್ತರ

(ಸಿ) ಪ್ರತಿಜನಕ


37.ಭಾರತದಲ್ಲಿ ವಿದ್ಯುತ್ ಉತ್ಪಾದನೆಗಾಗಿ ಯಾವ ಕಚ್ಚಾ ವಸ್ತುವನ್ನು ಪ್ರಮುಖವಾಗಿ ಬಳಸಲಾಗುತ್ತದೆ ?
 (ಎ) ಕಲ್ಲಿದ್ದಲು
 (ಬಿ)ಖನಿಜ ತೈಲ
 (ಸಿ)ನೈಸರ್ಗಿಕ ಅನಿಲ
 (ಡಿ)ಯುರೇನಿಯಮ್

ಸರಿ ಉತ್ತರ

(ಎ) ಕಲ್ಲಿದ್ದಲು


38.ಈರುಳ್ಳಿಯು ಯಾವುದರ ಪರಿಷ್ಕೃತ ರೂಪವಾಗಿದೆ ?
 (ಎ) ಎಲೆ
 (ಬಿ)ಕಾಂಡ
 (ಸಿ)ಬೇರು
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಬಿ) ಕಾಂಡ


39.ಈ ಕೆಳಕಂಡವುಗಳಲ್ಲಿ ಮನುಷ್ಯನಿಗೆ ವೈರಸ್ ನಿಂದ ಬರುವ ರೋಗ ಯಾವುದು ?
 (ಎ) ಮಂಗನಬಾವು
 (ಬಿ)ಪ್ಲೇಗ್
 (ಸಿ)ಕಾಲರ
 (ಡಿ)ಪರಂಗಿ ರೋಗ(ಸೈಫಿಲಿಸ್)

ಸರಿ ಉತ್ತರ

(ಎ) ಮಂಗನಬಾವು


40.ತಲೆಯು ಕತ್ತಿನ ಭಾಗಕ್ಕೆ ಸೇರುವಿಕೆಯ ಜಾಗ
 (ಎ) ಬಾಲ್ ಅಂಡ್ ಸಾಕೆಟ್ ಜಾಯಿಂಟ್
 (ಬಿ)ಪಿವೋಟಲ್ ಜಾಯಿಂಟ್
 (ಸಿ)ಹಿಂಜ್ ಜಾಯಿಂಟ್
 (ಡಿ)ಫಿಕ್ಸ್ಡ್ ಜಾಯಿಂಟ್

ಸರಿ ಉತ್ತರ

(ಬಿ) ಪಿವೋಟಲ್ ಜಾಯಿಂಟ್


41.ಅಸ್ಕಾರ್ಬಿಕ್ ಆಸಿಡ್ ಅನ್ನು ಸಾಮಾನ್ಯವಾಗಿ ಏನೆಂದು ಕರೆಯುತ್ತಾರೆ?
 (ಎ) ವಿಟಮಿನ್ ಎ
 (ಬಿ)ವಿಟಮಿನ್ ಸಿ
 (ಸಿ)ವಿಟಮಿನ್ ಡಿ
 (ಡಿ)ವಿಟಮಿನ್ ಕೆ

ಸರಿ ಉತ್ತರ

(ಬಿ) ವಿಟಮಿನ್ ಸಿ


42.ಈ ಕೆಳಕಂಡವುಗಳಲ್ಲಿ ಯಾವುದು ಪ್ರತಿನಿರೋಧಕಗಳನ್ನು ಉತ್ಪಾದಿಸುತ್ತದೆ ?
 (ಎ) ಎಸಿನೋಫಿಲ್
 (ಬಿ)ಮೋನೋಸೈಟ್
 (ಸಿ)ಬಾಸೋಫಿಲ್
 (ಡಿ)ಲಿಫೋಸೈಟ್

ಸರಿ ಉತ್ತರ

(ಡಿ) ಲಿಫೋಸೈಟ್


43.ಕ್ಷಯ ರೋಗಕ್ಕೆ ಕಾರಣವಾಗುವುದು ಯಾವುದು ?
 (ಎ) ಮೈಕೋಬ್ಯಾಕ್ಟಿರಿಯಂ
 (ಬಿ)ಆಸ್ಪರಜಿಲ್ಲಸ್
 (ಸಿ)ರಾಬ್ಡೋವೈರಸ್
 (ಡಿ)ಎಚ್.ಐ.ವಿ.

ಸರಿ ಉತ್ತರ

(ಎ) ಮೈಕೋಬ್ಯಾಕ್ಟಿರಿಯಂ


44.ರೋಗಗಳನ್ನು ವರ್ಗಾಯಿಸುವ ಕೀಟಗಳನ್ನು ಏನೆಂದು ಕರೆಯುತ್ತಾರೆ ?
 (ಎ) ವೆಕ್ಟರ್
 (ಬಿ)ಟ್ರಾನ್ಸ್ಮಿಟ್ಟರ್
 (ಸಿ)ಡ್ರೋನ್ಸ್
 (ಡಿ)ಕಂಡಕ್ಟರ್

ಸರಿ ಉತ್ತರ

(ಎ) ವೆಕ್ಟರ್


45.M.R.I. ಇದರ ವಿಸೃತ ರೂಪವೇನು ?
 (ಎ) ಮೀಟರ್ಡ್ ರೆಸೋನಾನ್ಸ್ ಇಮೇಜಿಂಗ್
 (ಬಿ)ಮ್ಯಾಗ್ನೆಟಿಕ್ ರೆಸೋನಾನ್ಸ್ ಇಮೇಜಿಂಗ್
 (ಸಿ)ಮ್ಯಾಗ್ನೆಟಿಕ್ ರಿಯಾಕ್ಷನ್ ಇಮೇಜಿಂಗ್
 (ಡಿ)ಮೀಟರ್ಡ್ ರಿಯಾಕ್ಷನ್ ಇಮೇಜಿಂಗ್

ಸರಿ ಉತ್ತರ

(ಬಿ) ಮ್ಯಾಗ್ನೆಟಿಕ್ ರೆಸೋನಾನ್ಸ್ ಇಮೇಜಿಂಗ್


46.ಕಾಫಿ ಮತ್ತು ಟೀ ಪಾನೀಯದಲ್ಲಿರುವ ಮುಖ್ಯ ಪ್ರಚೋದಕ ಯಾವುದು ?
 (ಎ) ನಿಕೋಟಿನ್
 (ಬಿ)ಕ್ಲೋರೋಫಿಲ್
 (ಸಿ)ಕೆಫಿನ್
 (ಡಿ)ಆಸ್ಪಿರಿನ್

ಸರಿ ಉತ್ತರ

(ಸಿ) ಕೆಫಿನ್


47.ಪಾಲಿಥೀನ್ ಅನ್ನು ಉತ್ಪಾದಿಸಲು ಬೇಕಾಗುವ ವಸ್ತು
 (ಎ) ಈಥೇನ್
 (ಬಿ)ಎಥಿಲೀನ್
 (ಸಿ)ಈಥೈಲ್ ಆಲ್ಕೋಹಾಲ್
 (ಡಿ)ಈಥೀನ್

ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


48.ಒಂದು ಆಮೀಯ ದ್ರಾವಣದ pHನ ಮೌಲ್ಯ _________.
 (ಎ) < 7
 (ಬಿ)> 7
 (ಸಿ)7
 (ಡಿ)0

ಸರಿ ಉತ್ತರ

(ಎ) < 7


49.ನಿರ್ಜಲೀಕರಣ ಉಂಟಾದಾಗ ದೇಹವು ಯಾವ ಅಂಶವನ್ನು ಕಳೆದುಕೊಳ್ಳುತ್ತದೆ ?
 (ಎ) ಸಕ್ಕರೆ
 (ಬಿ)ಸೋಡಿಯಂ ಕ್ಲೋರೈಡ್
 (ಸಿ)ಕ್ಯಾಲ್ಷಿಯಂ ಫಾಸ್ಫೇಟ್
 (ಡಿ)ಪೊಟಾಷಿಯಂ ಕ್ಲೋರೈಡ್

ಸರಿ ಉತ್ತರ

(ಬಿ) ಸೋಡಿಯಂ ಕ್ಲೋರೈಡ್


50.ಒಣ ಐಸ್ ಎಂದರೇನು ?
 (ಎ) ನೀರಿನ ಹರಳುಗಟ್ಟುವಿಕೆಯಿಲ್ಲದ ಐಸ್
 (ಬಿ)ಕರಗದೇ ಇರುವ ಐಸ್
 (ಸಿ)ಗಟ್ಟಿಯಾದ ಇಂಗಾಲದ ಡೈ ಆಕ್ಸೈಡ್
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಸಿ) ಗಟ್ಟಿಯಾದ ಇಂಗಾಲದ ಡೈ ಆಕ್ಸೈಡ್


51.ಗ್ರಾಫೈಟ್ ರಾಡುಗಳನ್ನು ಅಣು ವಿದ್ಯುತ್ ರಿಯಾಕ್ಟರ್ ಗಳಲ್ಲಿ ಬಳಸುವ ಉದ್ದೇಶ ?
 (ಎ) ಯುರೇನಿಯಂನೊಂದಿಗೆ ವರ್ತಿಸಿ ಶಕ್ತಿಯ ಬಿಡುಗಡೆ
 (ಬಿ)ನ್ಯೂಟ್ರಾನ್ಗಳ ಉತ್ಪತ್ತಿ
 (ಸಿ)ಅಣು ವಿದಳನ ಕ್ರಿಯೆಯನ್ನು ಪ್ರಚೋದಿಸುತ್ತದೆ
 (ಡಿ)ವೇಗವಾಗಿ ಚಲಿಸುವ ನ್ಯೂಟ್ರಾನ್ ಗಳನ್ನು ಥರ್ಮಲ್ ನ್ಯೂಟ್ರಾನ್ ಗಳಾಗಿ ಪರಿವರ್ತಿಸುತ್ತದೆ.

ಸರಿ ಉತ್ತರ

(ಡಿ) ವೇಗವಾಗಿ ಚಲಿಸುವ ನ್ಯೂಟ್ರಾನ್ ಗಳನ್ನು ಥರ್ಮಲ್ ನ್ಯೂಟ್ರಾನ್ ಗಳಾಗಿ ಪರಿವರ್ತಿಸುತ್ತದೆ.


52.ಗಾಳಿಯಲ್ಲಿರುವ ಹೆಚ್ಚಿನ ಭಾಗ ಯಾವುದು ?
 (ಎ) ಸಾರಜನಕ
 (ಬಿ)ಇಂಗಾಲದ ಡೈ ಆಕ್ಸೈಡ್
 (ಸಿ)ಆಮ್ಲಜನಕ
 (ಡಿ)ಜಲಜನಕ

ಸರಿ ಉತ್ತರ

(ಎ) ಸಾರಜನಕ


53.ಮೆಗ್ನೀಷಿಯಂ ಮತ್ತು ಕ್ಯಾಲ್ಷಿಯಂ ಎರಡನ್ನೂ ಹೊಂದಿರುವುದು ಯಾವುದು ?
 (ಎ) ಮೆಗ್ನಿಸೈಟ್
 (ಬಿ)ಕ್ಯಾಲ್ಸೈಟ್
 (ಸಿ)ಕಾರ್ನಲೈಟ್
 (ಡಿ)ಡೊಲೋಮೈಟ್

ಸರಿ ಉತ್ತರ

(ಡಿ) ಡೊಲೋಮೈಟ್


54.HCl ನೊಂದಿಗೆ ವರ್ತಿಸಿದಾಗ ಜಲಜನಕವನ್ನು ಬಿಡುಗಡೆ ಮಾಡದ ಲೋಹ ಯಾವುದು ?
 (ಎ) ಸತು
 (ಬಿ)ಕಬ್ಬಿಣ
 (ಸಿ)ಬೆಳ್ಳಿ
 (ಡಿ)ಕ್ಯಾಲ್ಷಿಯಂ

ಸರಿ ಉತ್ತರ

(ಸಿ) ಬೆಳ್ಳಿ


55.ಹೀರುಕಾಗದವು ಶಾಯಿಯನ್ನು ಹೀರುವ ಕ್ರಿಯೆಯು ಇದನ್ನು ಒಳಗೊಳ್ಳುತ್ತದೆ.
 (ಎ) ಶಾಯಿಯ ಜಿಗುಟು
 (ಬಿ)ಲೋಮನಾಳ ಕ್ರಿಯೆ
 (ಸಿ)ಹೀರು ಕಾಗದದ ಮೇಲೆ ಶಾಯಿಯ ಪ್ರಸರಣ
 (ಡಿ)ನುಗ್ಗುವ ಕ್ರಿಯೆ

ಸರಿ ಉತ್ತರ

(ಬಿ) ಲೋಮನಾಳ ಕ್ರಿಯೆ


56.ಘನ ಸ್ಥಿತಿಯಿಂದ ಅನಿಲ ರೂಪಕ್ಕೆ ಬದಲಾಗುವ ಪ್ರಕ್ರಿಯೆಯನ್ನು ಏನೆಂದು ಕರೆಯುತ್ತಾರೆ ?
 (ಎ) ಕರಗುವಿಕೆ
 (ಬಿ)ಕುದಿಯುವುದು
 (ಸಿ)ಮಿಳನ
 (ಡಿ)ಸಂಸ್ಕರಣ

ಸರಿ ಉತ್ತರ

(ಡಿ) ಸಂಸ್ಕರಣ


57.ಥರ್ಮೋಎಲೆಕ್ಟ್ರಿಕ್ ರೆಫ್ರಿಜರೇಟರ್ ಯಾವ ಪರಿಣಾಮದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ ?
 (ಎ) ಜೂಲ್ಸ್ ಪರಿಣಾಮ
 (ಬಿ)ಸೀಬೆಕ್ ಪರಿಣಾಮ
 (ಸಿ)ಪೆಲ್ವಿಯರ್ ಪರಿಣಾಮ
 (ಡಿ)ವೆರ್ನಿಯರ್ ಪರಿಣಾಮ

ಸರಿ ಉತ್ತರ

(ಸಿ) ಪೆಲ್ವಿಯರ್ ಪರಿಣಾಮ


58.ಲೋಹಗಳು ಉತ್ತಮವಾದ ವಿದ್ಯುದ್ವಾಹಕಗಳು. ಏಕೆಂದರೆ
 (ಎ) ಅವು ಅನಿರ್ಬಂಧಿತ ಎಲೆಕ್ಟ್ರಾನ್ ಗಳನ್ನು ಹೊಂದಿವೆ
 (ಬಿ)ಅವುಗಳ ಅಣುಗಳು ವಿರಳವಾಗಿ ಬಂಧಿತವಾಗಿವೆ
 (ಸಿ)ಅವುಗಳು ಹೆಚ್ಚಿನ ಕರಗುವ ಗುಣವನ್ನು ಹೊಂದಿವೆ
 (ಡಿ)ಇವುಗಳಲ್ಲಿ ಎಲ್ಲವೂ

ಸರಿ ಉತ್ತರ

(ಎ) ಅವು ಅನಿರ್ಬಂಧಿತ ಎಲೆಕ್ಟ್ರಾನ್ ಗಳನ್ನು ಹೊಂದಿವೆ


59.ಡಯೋಡ್ ರೆಕ್ಟಿಫೈಯರ್ ಆಗಿ ಕೆಲಸ ಮಾಡುವಾಗ ಈ ಪರಿವರ್ತನೆ ಮಾಡುತ್ತದೆ
 (ಎ) ಪರ್ಯಾಯ ವಿದ್ಯುತ್ ನಿಂದ ನೇರ ವಿದ್ಯುತ್ ಗೆ
 (ಬಿ)ನೇರ ವಿದ್ಯುತ್ ನಿಂದ ಪರ್ಯಾಯ ವಿದ್ಯುತ್ ಗೆ
 (ಸಿ)ನೇರ ವಿದ್ಯುತ್ ನಿಂದ ಸ್ಥಿರ ವಿದ್ಯುತ್ ಗೆ
 (ಡಿ)ಹೆಚ್ಚಿನ ವೋಲ್ಟೇಜ್ ನಿಂದ ಕಡಿಮೆ ವೋಲ್ಟೇಜ್ಗೆ ಮತ್ತು ವೈಸ್- ವರ್ಸಾ

ಸರಿ ಉತ್ತರ

(ಎ) ಪರ್ಯಾಯ ವಿದ್ಯುತ್ ನಿಂದ ನೇರ ವಿದ್ಯುತ್ ಗೆ


60.‘ಟೈಟನ್’ ಎಂಬುದು ಯಾವ ಗ್ರಹದ ಉಪಗ್ರಹವಾಗಿದೆ ?
 (ಎ) ಬುಧ ಗ್ರಹ
 (ಬಿ)ಗುರು ಗ್ರಹ
 (ಸಿ)ಶುಕ್ರ ಗ್ರಹ
 (ಡಿ)ಶನಿ ಗ್ರಹ

ಸರಿ ಉತ್ತರ

(ಡಿ) ಶನಿ ಗ್ರಹ


61.ಸೂರ್ಯನಲ್ಲಿರುವ ಪ್ರಮುಖ ಅನಿಲಗಳು ಯಾವುವು ?
 (ಎ) ಜಲಜನಕ ಮತ್ತು ಹೀಲಿಯಂ
 (ಬಿ)ಜಲಜನಕ ಮತ್ತು ಆರ್ಗನ್
 (ಸಿ)ಆರ್ಗನ್ ಮತ್ತು ಹೀಲಿಯಂ
 (ಡಿ)ಜಲಜನಕ ಮತ್ತು ಇಂಗಾಲದ ಡೈ ಆಕ್ಸೈಡ್

ಸರಿ ಉತ್ತರ

(ಎ) ಜಲಜನಕ ಮತ್ತು ಹೀಲಿಯಂ


62.ಆಕಾಶದ ನೀಲಿ ಬಣ್ಣಕ್ಕೆ ಕಾರಣ
 (ಎ) ಪ್ರತಿಫಲನ
 (ಬಿ)ವಕ್ರಿಭವನ
 (ಸಿ)ಎಲ್ಲೆಡೆ ಚದುರುವಿಕೆ
 (ಡಿ)ಹರಡುವಿಕೆ

ಸರಿ ಉತ್ತರ

(ಸಿ) ಎಲ್ಲೆಡೆ ಚದುರುವಿಕೆ


63.ಎರಡು ವಿಭಿನ್ನ ತೂಕದ ದೇಹಗಳು ಪ್ರಾರಂಭಿಕವಾಗಿ ಸ್ಥಿರಸ್ಥಿತಿಯಲ್ಲಿದ್ದು, ನಂತರ ಒಂದೇ ಸಮಯದಲ್ಲಿ ಒಂದೇ ಪ್ರಮಾಣದ ಬಲ ಉಪಯೋಗ ಮಾಡಿದಾಗ ಈ ಎರಡೂ ದೇಹಗಳು ಸಮನಾಂತರ _____________ ಪಡೆದುಕೊಳ್ಳುತ್ತವೆ.
 (ಎ) ವೇಗ
 (ಬಿ)ಆವೇಗ
 (ಸಿ)ವೇಗದ ಗತಿ
 (ಡಿ)ಚಲನಶಕ್ತಿ

ಸರಿ ಉತ್ತರ

(ಬಿ) ಆವೇಗ


64.ಈ ಕೆಳಕಂಡವುಗಳಲ್ಲಿ ಯಾವುದು ವಿದ್ಯುತ್ ಕಾಂತದ ಒಳಭಾಗಕ್ಕೆ ಸೂಕ್ತವಾಗಿದೆ ?
 (ಎ) ಗಾಳಿ
 (ಬಿ)ಮೆದು ಕಬ್ಬಿಣ
 (ಸಿ)ಉಕ್ಕು
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಬಿ) ಮೆದು ಕಬ್ಬಿಣ


65.ಸಮಾನ ಉದ್ದವಿರುವ ಎರಡು ರೈಲುಗಳು ಸಮಾನಾಂತರ ಹಳಿಗಳ ಮೇಲೆ ಒಂದು ರೈಲು ಗಂಟೆಗೆ 46 ಕಿ.ಮೀ. ವೇಗದಲ್ಲಿ ಮತ್ತು ಮತ್ತೊೊಂದು ರೈಲು 36 ಕಿ.ಮೀ./ಗಂ, ವೇಗದಲ್ಲಿ ಒಂದೇ ದಿಕ್ಕಿನಲ್ಲಿ ಚಲಿಸುತ್ತಿವೆ. ಹೆಚ್ಚು ವೇಗವಾಗಿ ಚಲಿಸುತ್ತಿರುವ ರೈಲು ಕಡಿಮೆ ವೇಗದಲ್ಲಿ ಚಲಿಸುತ್ತಿರುವ ರೈಲನ್ನು 36 ಸೆಕೆಂಡ್ ಗಳಲ್ಲಿ ಹಾದುಹೋಗುತ್ತದೆ. ಪ್ರತಿಯೊಂದು ರೈಲಿನ ಉದ್ದ ಎಷ್ಟು ?
 (ಎ) 50 ಮೀಟರ್
 (ಬಿ)72 ಮೀಟರ್
 (ಸಿ)80 ಮೀಟರ್
 (ಡಿ)82 ಮೀಟರ್

ಸರಿ ಉತ್ತರ

(ಎ) 50 ಮೀಟರ್


66.‘ಎ’ ನು ಒಂದು ಕೆಲಸವನ್ನು 4 ಗಂಟೆಗಳಲ್ಲಿ ಮಾಡುತ್ತಾನೆ; ಅದೇ ಕೆಲಸವನ್ನು ‘ಬಿ’ ಮತ್ತು ‘ಸಿ’ ರವರು ಜೊತೆಯಾಗಿ 3 ಗಂಟೆಗಳಲ್ಲಿ ಮಾಡುತ್ತಾರೆ. ‘ಎ’ ಮತ್ತು ‘ಸಿ’ ರವರು ಜೊತೆಯಾಗಿ 2 ಗಂಟೆಗಳಲ್ಲಿ ಮಾಡುತ್ತಾರೆ; ‘ಬಿ’ ಒಬ್ಬನೇ ಈ ಕೆಲಸ ಮಾಡಲು ಎಷ್ಟು ಸಮಯ ಬೇಕಾಗುತ್ತದೆ?
 (ಎ) 8 ಗಂಟೆಗಳು
 (ಬಿ)10 ಗಂಟೆಗಳು
 (ಸಿ)12 ಗಂಟೆಗಳು
 (ಡಿ)24 ಗಂಟೆಗಳು

ಸರಿ ಉತ್ತರ

(ಸಿ) 12 ಗಂಟೆಗಳು


67.ಸೂಪರ್ ಕಂಡಕ್ಟರ್ ಗಳು ಅಂದರೆ ಏನು ?
 (ಎ) ಕಡಿಮೆ ಉಷ್ಣತೆಯಲ್ಲಿಯೂ ಸಹ ವಿದ್ಯುತ್ ವಾಹಕವಾಗಿದೆ.
 (ಬಿ)ವಿದ್ಯುತ್ ಹರಿಯುವಿಕೆಗೆ ಹೆಚ್ಚಿನ ಪ್ರತಿರೋಧ ತೋರುತ್ತದೆ.
 (ಸಿ)ವಿದ್ಯುತ್ ಹರಿಯುವಿಕೆಗೆ ಪ್ರತಿರೋಧ ತೋರುವುದಿಲ್ಲ.
 (ಡಿ)ಹೆಚ್ಚಿನ ಉಷ್ಣತೆಯಲ್ಲಿಯೂ ಸಹ ವಿದ್ಯುತ್ ವಾಹಕವಾಗಿದೆ.

ಸರಿ ಉತ್ತರ

(ಎ) ಕಡಿಮೆ ಉಷ್ಣತೆಯಲ್ಲಿಯೂ ಸಹ ವಿದ್ಯುತ್ ವಾಹಕವಾಗಿದೆ. or (ಸಿ) ವಿದ್ಯುತ್ ಹರಿಯುವಿಕೆಗೆ ಪ್ರತಿರೋಧ ತೋರುವುದಿಲ್ಲ.


68.ಒಬ್ಬ ವ್ಯಕ್ತಿಯು ಬ್ಯಾಂಕಿನಿಂದ ವಾರ್ಷಿಕವಾಗಿ ಸಾಮಾನ್ಯ ಬಡ್ಡಿದರ ಶೇ. 12 ರಂತೆ ಸಾಲ ಪಡೆದುಕೊಂಡಿರುತ್ತಾನೆ. 3 ವರ್ಷಗಳ ನಂತರ ಆತನು ರೂ. 5,400 ಗಳನ್ನು ಬಡ್ಡಿಯನ್ನು ಕಟ್ಟಬೇಕಾಗುತ್ತದೆ. ಹಾಗಾದರೆ ಆತನು ಸಾಲವಾಗಿ ಪಡೆದುಕೊಂಡಿದ್ದ ಮೂಲಧನ ಎಷ್ಟು ?
 (ಎ) ರೂ. 2,000
 (ಬಿ)ರೂ. 10,000
 (ಸಿ)ರೂ. 15,000
 (ಡಿ)ರೂ. 20,000

ಸರಿ ಉತ್ತರ

(ಸಿ) ರೂ. 15,000


69.ಒಬ್ಬ ವ್ಯಕ್ತಿಯು ಆತನ ಮಗನಿಗಿಂತ 24 ವರ್ಷ ಹಿರಿಯನಾಗಿರುತ್ತಾನೆ. 2 ವರ್ಷಗಳ ನಂತರ ಆತನ ವಯಸ್ಸು ಮಗನ ಎರಡರಷ್ಟಾಗುತ್ತದೆ. ಆತನ ಮಗನ ಪ್ರಸ್ತುತ ವಯಸ್ಸೆಷ್ಟು ?
 (ಎ) 14 ವರ್ಷಗಳು
 (ಬಿ)18 ವರ್ಷಗಳು
 (ಸಿ)20 ವರ್ಷಗಳು
 (ಡಿ)22 ವರ್ಷಗಳು

ಸರಿ ಉತ್ತರ

(ಡಿ) 22 ವರ್ಷಗಳು


70.ನಿಂತಿರುವ ನೀರಿನಲ್ಲಿ ಗಂಟೆಗೆ 15 ಕಿ.ಮೀ. ವೇಗವಾಗಿ ಚಲಿಸುವ ಮೋಟಾರ್ ಬೋಟು ನೀರು ಹರಿಯುವ ದಿಕ್ಕಿನಲ್ಲಿ 30 ಕಿ.ಮೀ. ಚಲಿಸಿ ಮತ್ತೆ ವಾಪಸ್ಸು ಬರಲು 4 ಗಂಟೆ 30 ನಿಮಿಷ ಸಮಯವಾಗುತ್ತದೆ. ಹಾಗಾದರೆ ನೀರಿನ ಹರಿವಿನ ವೇಗ (ಕಿ.ಮೀ./ಗಂಟೆ) ಎಷ್ಟು ?
 (ಎ) 4
 (ಬಿ)5
 (ಸಿ)6
 (ಡಿ)10

ಸರಿ ಉತ್ತರ

(ಬಿ) 5


71.‘ಎ’ ನು ‘ಡಿ’ ಯ ಸೋದರನಾಗಿದ್ದಾನೆ. ‘ಡಿ’ ನು ‘ಬಿ’ ಯ ತಂದೆಯಾಗಿದ್ದಾನೆ, ‘ಬಿ’ ಮತ್ತು ‘ಸಿ’ ರವರು ಸೋದರಿಯರಾಗಿರುತ್ತಾರೆ. ಹಾಗಾದರೆ ‘ಎ’ ನು ‘ಸಿ’ ಗೆ ಹೇಗೆ ಸಂಬಂಧಿಯಾಗಿದ್ದಾನೆ ?
 (ಎ) ಮಗ
 (ಬಿ)ಚಿಕ್ಕಪ್ಪ
 (ಸಿ)ತಂದೆ
 (ಡಿ)ಮೊಮ್ಮಗ

ಸರಿ ಉತ್ತರ

(ಬಿ) ಚಿಕ್ಕಪ್ಪ


72.ಎಷ್ಟು ಎರಡು ಅಂಕಿಗಳ ಸಂಖ್ಯೆಗಳು ಈ ಗುಣವನ್ನು ಹೊಂದಿರುತ್ತವೆ. ಎರಡು ಅಂಕಿಗಳ ಸಂಖ್ಯೆಯ ಘಾತದ ಕೊನೆಯ ಅಂಕಿ 8 ಆಗಿರುತ್ತದೆ
 (ಎ) 1
 (ಬಿ)2
 (ಸಿ)3
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಡಿ) ಇವುಗಳಲ್ಲಿ ಯಾವುದೂ ಅಲ್ಲ


73.'LEADER' ಎಂಬ ಅಕ್ಷರಗಳ ಪದದಿಂದ ಎಷ್ಟು ಬಗೆಯ ಪದಗಳನ್ನು ರಚಿಸಬಹುದು ?
 (ಎ) 72
 (ಬಿ)144
 (ಸಿ)360
 (ಡಿ)720

ಸರಿ ಉತ್ತರ

(ಸಿ) 360


74.ಒಂದು ನದಿಯು ಪಶ್ಚಿಮದಿಂದ ಪೂರ್ವಕ್ಕೆ ಹರಿಯುತ್ತದೆ, ಅದು ಹರಿಯುವಾಗ ಎಡಕ್ಕೆ ತಿರುಗುವ ವೇಳೆಯಲ್ಲಿ ದಿಬ್ಬವೊಂದನ್ನು ಅರೆವೃತ್ತಾಕಾರದಲ್ಲಿ ಸುತ್ತಿ ಮತ್ತೆ ಎಡ ತಿರುವು ತೆಗೆದುಕೊಂಡು ನೇರವಾಗಿ ಹರಿಯುತ್ತದೆ. ಕೊನೆಯದಾಗಿ ನದಿಯು ಯಾವ ದಿಕ್ಕಿಗೆ ಹರಿಯುತ್ತದೆ ?
 (ಎ) ದಕ್ಷಿಣ
 (ಬಿ)ಉತ್ತರ
 (ಸಿ)ಪೂರ್ವ
 (ಡಿ)ಪಶ್ಚಿಮ

ಸರಿ ಉತ್ತರ

(ಎ) ದಕ್ಷಿಣ or (ಬಿ) ಉತ್ತರ or (ಸಿ) ಪೂರ್ವ


75.ಎರಡು ಸಂಖ್ಯೆಗಳ ಸಂಕಲನವು 25 ಆಗಿದ್ದು, ಅವುಗಳ ನಡುವಿನ ವ್ಯತ್ಯಾಸ 13 ಆಗಿರುತ್ತದೆ. ಹಾಗಾದರೆ ಅವುಗಳ ಗುಣಾಕಾರ ಸಂಖ್ಯೆ ಯಾವುದು ?
 (ಎ) 104
 (ಬಿ)114
 (ಸಿ)315
 (ಡಿ)325

ಸರಿ ಉತ್ತರ

(ಬಿ) 114


76.ಸಂವಿಧಾನದ ಈ ಭಾಗವು ಸಂವಿಧಾನದ ರಚನೆಕಾರರ ಮನಸ್ಸು ಮತ್ತು ಚಿಂತನೆಗಳನ್ನು ಪ್ರತಿಬಿಂಬಿಸುತ್ತವೆ.
 (ಎ) ನಿರ್ದೇಶಕ ತತ್ವಗಳು
 (ಬಿ)ಮೂಲಭೂತ ಹಕ್ಕುಗಳು
 (ಸಿ)ಪ್ರಸ್ತಾವನೆ
 (ಡಿ)ಪೌರತ್ವ

ಸರಿ ಉತ್ತರ

(ಸಿ) ಪ್ರಸ್ತಾವನೆ


77.ರಾಷ್ಟ್ರಪತಿಯವರಿಗೆ ಪ್ರಮಾಣ ವಚನವನ್ನು ಯಾರು ಬೋಧನೆ ಮಾಡುತ್ತಾರೆ ?
 (ಎ) ಭಾರತದ ಮುಖ್ಯ ನ್ಯಾಯಮೂರ್ತಿಗಳು
 (ಬಿ)ಲೋಕಸಭೆಯ ಸಭಾಧ್ಯಕ್ಷರು
 (ಸಿ)ಪ್ರಧಾನ ಮಂತ್ರಿಗಳು
 (ಡಿ)ಉಪರಾಷ್ಟ್ರಪತಿಗಳು

ಸರಿ ಉತ್ತರ

(ಎ) ಭಾರತದ ಮುಖ್ಯ ನ್ಯಾಯಮೂರ್ತಿಗಳು


78.‘ಕಲ್ಯಾಣ ರಾಜ್ಯ’ ಎಂಬ ಪರಿಕಲ್ಪನೆಯು ಭಾರತ ಸಂವಿಧಾನದ ಈ ಭಾಗದಲ್ಲಿ ಕಂಡು ಬರುತ್ತದೆ
 (ಎ) ಮೂಲಭೂತ ಕರ್ತವ್ಯಗಳು
 (ಬಿ)ಪ್ರಸ್ತಾವನೆ
 (ಸಿ)ನಿರ್ದೇಶಕ ತತ್ವಗಳು
 (ಡಿ)ಮೂಲಭೂತ ಹಕ್ಕುಗಳು

ಸರಿ ಉತ್ತರ

(ಸಿ) ನಿರ್ದೇಶಕ ತತ್ವಗಳು


79.ಭಾರತ ಸಂವಿಧಾನದ ಯಾವ ಅನುಸೂಚಿಯು ಪಂಚಾಯ್ತಿಗಳ ಅಧಿಕಾರ, ಪ್ರಾಧಿಕಾರ ಮತ್ತು ಜವಾಬ್ದಾರಿಗಳನ್ನು ಒಳಗೊಂಡಿದೆ ?
 (ಎ) ಅನುಸೂಚಿ 4
 (ಬಿ)ಅನುಸೂಚಿ 6
 (ಸಿ)ಅನುಸೂಚಿ 7
 (ಡಿ)ಅನುಸೂಚಿ 11

ಸರಿ ಉತ್ತರ

(ಡಿ) ಅನುಸೂಚಿ 11


80.ಭಾರತ ಸಂವಿಧಾನದ ಯಾವ ಅನುಚ್ಛೇದವು ಮಾದ್ಯಮಗಳಿಗೆ ವಾರ್ತೆಗಳನ್ನು ಪ್ರಸಾರ ಮಾಡುವ ಅವಕಾಶ ನೀಡಿದೆ ?
 (ಎ) ಅನುಚ್ಛೇದ 19
 (ಬಿ)ಅನುಚ್ಛೇದ 17
 (ಸಿ)ಅನುಚ್ಛೇದ 16
 (ಡಿ)ಅನುಚ್ಛೇದ 18

ಸರಿ ಉತ್ತರ

(ಎ) ಅನುಚ್ಛೇದ 19


81.ಈ ಕೆಳಕಂಡವುಗಳಲ್ಲಿ ಯಾವುದು ಸಾಂವಿಧಾನಿಕ ಸಂಸ್ಥೆಯಲ್ಲ ?
 (ಎ) ಚುನಾವಣಾ ಆಯೋಗ
 (ಬಿ)ಯೋಜನಾ ಆಯೋಗ
 (ಸಿ)ರಾಷ್ಟ್ರೀಯ ಸಲಹಾ ಮಂಡಳಿ
 (ಡಿ)ಅಂತರ ರಾಜ್ಯ ಮಂಡಳಿ

ಸರಿ ಉತ್ತರ

(ಬಿ) ಯೋಜನಾ ಆಯೋಗ or (ಸಿ) ರಾಷ್ಟ್ರೀಯ ಸಲಹಾ ಮಂಡಳಿ


82.ಭಾರತ ಸಂವಿಧಾನದ ಯಾವ ಅನುಚ್ಛೇದವು ರಾಷ್ಟ್ರಪತಿಗಳ ವಿಶೇಷ ಭಾಷಣವನ್ನು ಕುರಿತಂತೆ ಒಳಗೊಂಡಿದೆ ?
 (ಎ) ಅನುಚ್ಛೇದ 84
 (ಬಿ)ಅನುಚ್ಛೇದ 85
 (ಸಿ)ಅನುಚ್ಛೇದ 86
 (ಡಿ)ಅನುಚ್ಛೇದ 87

ಸರಿ ಉತ್ತರ

(ಡಿ) ಅನುಚ್ಛೇದ 87


83. ರಾಜ್ಯ ಲೋಕಸೇವಾ ಆಯೋಗದ ಸದಸ್ಯರನ್ನು ಯಾರು ನೇಮಕ ಮಾಡುತ್ತಾರೆ ?
 (ಎ) ಮುಖ್ಯಮಂತ್ರಿಗಳು
 (ಬಿ)ಭಾರತದ ಮುಖ್ಯ ನ್ಯಾಯಮೂರ್ತಿಗಳು
 (ಸಿ)ರಾಜ್ಯಪಾಲರು
 (ಡಿ)ಉಪರಾಷ್ಟ್ರಪತಿಗಳು

ಸರಿ ಉತ್ತರ

(ಸಿ) ರಾಜ್ಯಪಾಲರು


84.ದ್ಯುತಿ ಚಾಂದ್ ರವರು ಯಾವ ಕ್ಷೇತ್ರಕ್ಕೆ ಸಂಬಂಧಪಟ್ಟಿದ್ದಾರೆ ?
 (ಎ) ಅಥ್ಲೆಟಿಕ್ಸ್
 (ಬಿ)ಕ್ರಿಕೆಟ್
 (ಸಿ)ಬ್ಯಾಡ್ಮಿಂಟನ್
 (ಡಿ)ಸ್ಕ್ವಾಷ್

ಸರಿ ಉತ್ತರ

(ಎ) ಅಥ್ಲೆಟಿಕ್ಸ್


85.ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ಯಾರು ನೇಮಿಸುತ್ತಾರೆ ?
 (ಎ) ಪ್ರಧಾನ ಮಂತ್ರಿ
 (ಬಿ)ಭಾರತದ ಮುಖ್ಯ ನ್ಯಾಯಮೂರ್ತಿಗಳು
 (ಸಿ)ಲೋಕಸಭೆಯ ಸಭಾಪತಿಗಳು
 (ಡಿ)ರಾಷ್ಟ್ರಪತಿಗಳು

ಸರಿ ಉತ್ತರ

(ಡಿ) ರಾಷ್ಟ್ರಪತಿಗಳು


86.ಚಾಲ್ಕೋಲಿಥಿಕ್ ಸಂಸ್ಕೃತಿಯ ಒಂದು ಬಗೆಯ ಜೋರ್ವೆ ಸಂಸ್ಕೃತಿಯನ್ನು ಭಾರತದ ಯಾವ ರಾಜ್ಯದಲ್ಲಿ ಪ್ರಥಮ ಬಾರಿಗೆ ಆವಿಷ್ಕರಿಸಲಾಯಿತು ?
 (ಎ) ಮಹಾರಾಷ್ಟ್ರ
 (ಬಿ)ಕರ್ನಾಟಕ
 (ಸಿ)ತಮಿಳುನಾಡು
 (ಡಿ)ರಾಜಸ್ತಾನ

ಸರಿ ಉತ್ತರ

(ಎ) ಮಹಾರಾಷ್ಟ್ರ


87.ಬ್ರಿಯಾನ್ ಆಕ್ಟನ್ ಮತ್ತು ಜಾನ್ ಕೌನ್ ರವರು ಏನನ್ನು ಸೃಜಿಸಿದರು?
 (ಎ) ಟ್ವಿಟ್ಟರ್
 (ಬಿ)ಫೇಸ್ ಬುಕ್
 (ಸಿ)ಇನ್ಸ್ಟಾಗ್ರಾಂ
 (ಡಿ)ವಾಟ್ಸ್ ಆಪ್

ಸರಿ ಉತ್ತರ

(ಡಿ) ವಾಟ್ಸ್ ಆಪ್


88.ಕಂಪ್ಯೂಟರಿಗೆ ಸಂಬಂಧಪಟ್ಟಂತೆ AI ನ ವಿಸ್ತ್ರತ ರೂಪವೇನು ?
 (ಎ) ಆಟೋಮ್ಯಾಟಿಕ್ ಇನ್ಸ್ ಟ್ರೂಮೆಂಟ್ಸ್
 (ಬಿ)ಆರ್ಟಿಫಿಷಿಯಲ್ ಇಂಟಲಿಜೆನ್ಸ್
 (ಸಿ)ಆಟೋಮೇಟೆಡ್ ಇಂಟಲಿಜೆನ್ಸ್
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಬಿ) ಆರ್ಟಿಫಿಷಿಯಲ್ ಇಂಟಲಿಜೆನ್ಸ್


89.ಯಾವುವು 3 ಪ್ರಾಥಮಿಕ ಬಣ್ಣಗಳಾಗಿವೆ ?
 (ಎ) ಕೆಂಪು, ಹಸಿರು, ನೀಲಿ
 (ಬಿ)ಕಪ್ಪು, ಬಿಳಿ, ಕಂದು
 (ಸಿ)ಹಳದಿ, ಹಸಿರು, ನೀಲಿ
 (ಡಿ)ಬಿಳಿ, ಕೆಂಪು, ಹಸಿರು

ಸರಿ ಉತ್ತರ

(ಎ) ಕೆಂಪು, ಹಸಿರು, ನೀಲಿ


90.ಬ್ರಹ್ಮಗಿರಿ ವನ್ಯಜೀವಿಧಾಮವು ಯಾವ ರಾಜ್ಯದಲ್ಲಿದೆ ?
 (ಎ) ಕೇರಳ
 (ಬಿ)ಕರ್ನಾಟಕ
 (ಸಿ)ಒಡಿಸ್ಸಾ
 (ಡಿ)ಅಸ್ಸಾಂ

ಸರಿ ಉತ್ತರ

(ಬಿ) ಕರ್ನಾಟಕ


91. ಈ ಕೆಳಕಂಡವರಲ್ಲಿ ಯಾರನ್ನು ‘ಭಾರತದ ಪುನರುಜ್ಜೀವನದ ಪಿತಾಮಹ’ ಎಂದು ಕರೆಯುತ್ತಾರೆ ?
 (ಎ) ವಿಕ್ರಂ ಸಾರಾಭಾಯ್
 (ಬಿ)ರಾಜಾರಾಮ್ ಮೋಹನ್ ರಾಯ್
 (ಸಿ)ರವೀಂದ್ರನಾಥ ಟ್ಯಾಗೋರ್
 (ಡಿ)ಲಾಲಾ ಲಜಪತ್ ರಾಯ್

ಸರಿ ಉತ್ತರ

(ಬಿ) ರಾಜಾರಾಮ್ ಮೋಹನ್ ರಾಯ್


92.‘CA(ClO)`_2`’ ಇದರ ಸಾಮಾನ್ಯ ಹೆಸರು ಯಾವುದು?
 (ಎ) ಬೇಕಿಂಗ್ ಸೋಡ
 (ಬಿ)ಬ್ಲೀಚಿಂಗ್ ಪೌಡರ್
 (ಸಿ)ವಾಷಿಂಗ್ ಸೋಡ
 (ಡಿ)ಬೇಕಿಂಗ್ ಪೌಡರ್

ಸರಿ ಉತ್ತರ

(ಬಿ) ಬ್ಲೀಚಿಂಗ್ ಪೌಡರ್


93.ಭಾರತವು ಯಾವ ದೇಶದೊಂದಿಗೆ ಜಂಟಿಯಾಗಿ ‘ಶಿನ್ಯೂ ಮೈತ್ರಿ’ ಎಂಬ ಸಮರಾಭ್ಯಾಸವನ್ನು ಆಯೋಜಿಸುತ್ತಿದೆ ?
 (ಎ) ನೇಪಾಳ
 (ಬಿ)ಚೀನಾ
 (ಸಿ)ರಷ್ಯಾ
 (ಡಿ)ಜಪಾನ್

ಸರಿ ಉತ್ತರ

(ಡಿ) ಜಪಾನ್


94.ಭಾರತದ ಈ ಕೆಳಕಂಡ ನಗರವು ಸಮುದ್ರದ ನೀರಿನ ಕೊಳಗಳಿಗೆ ಪ್ರಸಿದ್ಧವಾಗಿದ್ದು, ಇದನ್ನು ‘ಪೂರ್ವದ ವೆನಿಸ್’ ಎಂದು ಕರೆಯಲಾಗುತ್ತದೆ.
 (ಎ) ಹೈದರಾಬಾದ್
 (ಬಿ)ಜೈಪುರ
 (ಸಿ)ಮುಂಬೈ
 (ಡಿ)ಅಲಪ್ಪುಝ್ಹ

ಸರಿ ಉತ್ತರ

(ಡಿ) ಅಲಪ್ಪುಝ್ಹ


95.ವಿಜಯನಗರದ ಆಡಳಿತಗಾರನಾಗಿದ್ದ ಕೃಷ್ಣದೇವರಾಯನು ರಚಿಸಿದ ‘ಅಮುಕ್ತಮಾಲ್ಯದ’ ಕೃತಿಯು ಯಾವ ಭಾಷೆಯಲ್ಲಿದೆ ?
 (ಎ) ತೆಲುಗು
 (ಬಿ)ಸಂಸ್ಕೃತ
 (ಸಿ)ತಮಿಳು
 (ಡಿ)ಕನ್ನಡ

ಸರಿ ಉತ್ತರ

(ಎ) ತೆಲುಗು


96.‘ಸತಪಥ ಬ್ರಾಹ್ಮಣ’ ಮತ್ತು ‘ತೈತ್ತಿರೀಯ ಬ್ರಾಹ್ಮಣ’ ಇವುಗಳು _________ ವೇದದ ಅಂಗಗಳಾಗಿವೆ ?
 (ಎ) ಋಗೈದ
 (ಬಿ)ಯಜುರ್ವೇದ
 (ಸಿ)ಸಾಮವೇದ
 (ಡಿ)ಅಥರ್ವವೇದ

ಸರಿ ಉತ್ತರ

(ಬಿ) ಯಜುರ್ವೇದ


97.ಭಾರತದಲ್ಲಿನ ‘ನೂನ್ ಮತಿ’ ಎಂಬ ಸ್ಥಳವು ಈ ಕೆಳಕಂಡ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ ?
 (ಎ) ಉಪ್ಪಿನ ಕೈಗಾರಿಕೆಗಳು
 (ಬಿ)ಪೆಟ್ರೋಲಿಯಂ ಕೈಗಾರಿಕೆಗಳು
 (ಸಿ)ಕಾಗದದ ಕೈಗಾರಿಕೆಗಳು
 (ಡಿ)ಜವಳಿ ಕೈಗಾರಿಕೆಗಳು

ಸರಿ ಉತ್ತರ

(ಬಿ) ಪೆಟ್ರೋಲಿಯಂ ಕೈಗಾರಿಕೆಗಳು


98.‘ರಾಷ್ಟ್ರೀಯ ಏಕತಾ ಪ್ರಶಸ್ತಿ’ ಯಾರ ಹೆಸರಿನಲ್ಲಿ ನೀಡಲಾಗುತ್ತದೆ ?
 (ಎ) ಮಹಾತ್ಮ ಗಾಂಧಿ
 (ಬಿ)ಜವಹರಲಾಲ್ ನೆಹರೂ
 (ಸಿ)ಸರ್ದಾರ್ ವಲ್ಲಭಭಾಯ್ ಪಟೇಲ್
 (ಡಿ)ಬಿ.ಆರ್. ಅಂಬೇಡ್ಕರ್

ಸರಿ ಉತ್ತರ

(ಸಿ) ಸರ್ದಾರ್ ವಲ್ಲಭಭಾಯ್ ಪಟೇಲ್


99.ಈ ಕೆಳಕಂಡ ಯಾವ ಸಚಿವಾಲಯವು ಇಂಡಿಯಾ ಗೇಟ್ ನ ಹುಲ್ಲುಹಾಸಿನ ಮೇಲೆ ಅಕ್ಟೋಬರ್ 2019 ರಲ್ಲಿ ‘ಸಾರಸ್ ಅಜೀವಿಕ ಮೇಳ’ ವನ್ನು ಆಯೋಜಿಸಿತ್ತು ?
 (ಎ) ರಸ್ತೆ ಸಾಗಣೆ ಮತ್ತು ಹೆದ್ದಾರಿ ಸಚಿವಾಲಯ
 (ಬಿ)ವಸತಿ ಮತ್ತು ನಗರ ಸಂಬಂಧಗಳ ಸಚಿವಾಲಯ
 (ಸಿ)ಗ್ರಾಮೀಣಾಭಿವೃದ್ಧಿ ಸಚಿವಾಲಯ
 (ಡಿ)ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಸರಿ ಉತ್ತರ

(ಸಿ) ಗ್ರಾಮೀಣಾಭಿವೃದ್ಧಿ ಸಚಿವಾಲಯ


100.ಈ ಕೆಳಕಂಡ ಯಾವ ಮಸೂರವನ್ನು ವಾಹನಗಳಲ್ಲಿ ಹಿನ್ನೋಟ ದರ್ಪಣವಾಗಿ ಬಳಸುತ್ತಾರೆ ?
 (ಎ) ನಿಮ್ಮ ಮಸೂರ
 (ಬಿ)ಪೀನ ಮಸೂರ
 (ಸಿ)ಸಾಮಾನ್ಯ ಮಸೂರ
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಬಿ) ಪೀನ ಮಸೂರ


ಇಲ್ಲಿ ನೀಡಲಾಗಿರುವ ಉತ್ತರಗಳು KSP ಯು ಪ್ರಕಟಿಸಿದ್ದಾಗಿರುತ್ತದೆ

Post a Comment

0 Comments

BOTTOM ADS