sdaa question paper -2013 Specific Paper-2

SDAA-2013 Specific Paper (Paper-II) Questions with answers


ದಿನಾಂಕ 24.02.2013 ರಂದು ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ದ್ವಿತೀಯ ದರ್ಜೆ ಲೆಕ್ಕ ಸಹಾಯಕ [SDAA] ನಿರ್ದಿಷ್ಟ ಪತ್ರಿಕೆ  (ಪತ್ರಿಕೆ-II)ರ ಪ್ರಶ್ನೆಗಳನ್ನು ಉತ್ತರದೊಂದಿಗೆ ಇಲ್ಲಿ ನೀಡಲಾಗಿದೆ.

1.ಗ್ರಾಮ ಪಂಚಾಯ್ತಿಯು, ಬಾಕಿ ಇರುವ ಮೊಬಲಗನ್ನು ಕೆಳಕಂಡ ದಂಡದೊಂದಿಗೆ ವಸೂಲು ಮಾಡಬಹುದು.
 (1) ಶೇಕಡಾ ಇಪ್ಪತ್ತು
 (2)ಶೇಕಡಾ ಹತ್ತು
 (3)ಶೇಕಡಾ ಮೂವತ್ತು
 (4)ಶೇಕಡಾ ಹದಿನೈದು

ಸರಿ ಉತ್ತರ

(2) ಶೇಕಡಾ ಹತ್ತು


2.ಅಚರ ಆಸ್ತಿಯ ಮೇಲೆ ಕೆಳಕಂಡ ದರದಲ್ಲಿ ಸರ್ ಚಾರ್ಜನ್ನು ವಿಧಿಸಲಾಗುವುದು.
 (1) ಶೇಕಡಾ ಮೂರು
 (2)ಶೇಕಡಾ ನಾಲ್ಕು
 (3)ಶೇಕಡಾ ಐದು
 (4)ಶೇಕಡಾ ಎರಡು

ಸರಿ ಉತ್ತರ

(1) ಶೇಕಡಾ ಮೂರು


3.1993 ರ ಕಾಯಿದೆಯ ಯಾವ ಪರಿಚ್ಛೇದದ ಅನ್ವಯ ಗ್ರಾಮ ಪಂಚಾಯತ್ ಗಳು ರಾಜ್ಯ ಸರ್ಕಾರದಿಂದ ತಮ್ಮ ವಾರ್ಷಿಕ ಶಾಸನಬದ್ಧ ಅನುದಾನವನ್ನು ಪಡೆದುಕೊಳ್ಳುತ್ತವೆ ?
 (1) 206
 (2)205
 (3)207
 (4)204

ಸರಿ ಉತ್ತರ

(1) 206


4.ಜಿಲ್ಲಾ ಪಂಚಾಯತ್ ಕೆಲಸಗಳಿಗೆ ಸಂಬಂಧಿಸಿದ ತಮ್ಮ ಪರಿವೀಕ್ಷಣಾ ಟಿಪ್ಪಣಿಗಳನ್ನು ತಾಂತ್ರಿಕ ಅಧಿಕಾರಿಗಳು ಕೆಳಕಂಡವರಿಗೆ ಕಳುಹಿಸುತ್ತಾರೆ.
 (1) ಜಿಲ್ಲಾ ಪಂಚಾಯತ್ ನ ಅಧ್ಯಕ್ಷರಿಗೆ
 (2)ಮುಖ್ಯ ಯೋಜನಾ ಅಧಿಕಾರಿಯವರಿಗೆ.
 (3)ಮುಖ್ಯ ಲೆಕ್ಕಪತ್ರಾಧಿಕಾರಿಯವರಿಗೆ
 (4)ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ.

ಸರಿ ಉತ್ತರ

(4) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ.


5.ಪಂಚತಂತ್ರ ಎಂಬ ವೆಬ್ ಆಧಾರಿತ ಸಾಫ್ಟ್ವೇರ್, ಗ್ರಾಮ ಪಂಚಾಯತ್ ಗಳಲ್ಲಿ
 (1) ಡಬಲ್ ಎಂಟ್ರಿ ಲೆಕ್ಕ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
 (2)ಸಿಂಗಲ್ ಎಂಟ್ರಿ ಲೆಕ್ಕವ್ಯವಸ್ಥೆಯನ್ನು ಜಾರಿಗೆ ತಂದಿದೆ.
 (3)ಮಲ್ಟಿಪಲ್ಎಂಟ್ರಿ ಲೆಕ್ಕವ್ಯವಸ್ಥೆಯನ್ನು ಜಾರಿಗೆ ತಂದಿದೆ.
 (4)ಜೀರೋಎಂಟ್ರಿ ಲೆಕ್ಕವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಸರಿ ಉತ್ತರ

(1) ಡಬಲ್ ಎಂಟ್ರಿ ಲೆಕ್ಕ ವ್ಯವಸ್ಥೆಯನ್ನು ಜಾರಿಗೆ ತಂದಿದೆ.


6.2006 ರ ಕರ್ನಾಟಕ ಪಂಚಾಯತ್ ರಾಜ್ ( ಗ್ರಾಮ ಪಂಚಾಯಿತಿಗಳ ಲೆಕ್ಕಪತ್ರಗಳು ಮತ್ತು ಬಜೆಟ್) ನಿಯಮಗಳು ಜಾರಿಗೆ ಬಂದ ದಿನಾಂಕ.
 (1) ಏಪ್ರಿಲ್ 1, 2007
 (2)ಮಾರ್ಚ್ 31, 2007
 (3)ಏಪ್ರಿಲ್ 1, 2006
 (4)ಏಪ್ರಿಲ್ 1, 2008

ಸರಿ ಉತ್ತರ

(1) ಏಪ್ರಿಲ್ 1, 2007 or (3) ಏಪ್ರಿಲ್ 1, 2006


7.ಈ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಪ್ರಕಾರ ಕಟ್ಟಡಗಳ ಮೇಲೆ ತೆರಿಗೆಯನ್ನು ವಿಧಿಸುವ ಅಧಿಕಾರವನ್ನು ಪ್ರತಿಯೊಂದು ಗ್ರಾಮಪಂಚಾಯ್ತಿಯೂ ಹೊಂದಿರುತ್ತದೆ.
 (1) ಅನುಸೂಚಿ III
 (2)ಅನುಸೂಚಿ I
 (3)ಅನುಸೂಚಿ IV
 (4)ಅನುಸೂಚಿ XI

ಸರಿ ಉತ್ತರ

(3) ಅನುಸೂಚಿ IV


8.ಜಿಲ್ಲಾ ಪಂಚಾಯತ್ ಗೆ ಸಂಬಂಧಿಸಿದ ಲೆಕ್ಕಪತ್ರಗಳ ಲೆಕ್ಕಪರಿಶೋಧನೆ ಮತ್ತು ಪ್ರಮಾಣೀಕರಣವನ್ನು ಯಾರು ಮಾಡುತ್ತಾರೆ?
 (1) ಮುಖ್ಯ ಲೆಕ್ಕಪತ್ರಾಧಿಕಾರಿ.
 (2)ರಾಜ್ಯ ಲೆಕ್ಕಪತ್ರಗಳ ಮುಖ್ಯ ನಿಯಂತ್ರಕರು.
 (3)ಭಾರತದ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು.
 (4)ರಾಜ್ಯ ಹಣಕಾಸು ಕಾರ್ಯದರ್ಶಿ.

ಸರಿ ಉತ್ತರ

(3) ಭಾರತದ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು.


9.1996 ರ ಕರ್ನಾಟಕ ಪಂಚಾಯತ್ ರಾಜ್ (ಜಿಲ್ಲಾ ಪಂಚಾಯತಗಳು/ ತಾಲ್ಲೂಕು ಪಂಚಾಯತಗಳ ಹಣಕಾಸು ಮತ್ತು ಲೆಕ್ಕಪತ್ರಗಳು) ನಿಯಮಗಳ ಪ್ರಕಾರ, ಜಿಲ್ಲಾ ಪಂಚಾಯತ್ ಗಳು ಹಾಗೂ ತಾಲ್ಲೂಕು ಪಂಚಾಯತ್ ಗಳ ವಾರ್ಷಿಕ ಲೆಕ್ಕಪತ್ರಗಳನ್ನು
 (1) ಐದು ವಿವರಣಪತ್ರಗಳಲ್ಲಿ ಸಿದ್ಧಪಡಿಸಲಾಗುತ್ತದೆ.
 (2)ನಾಲ್ಕು ವಿವರಣಪತ್ರಗಳಲ್ಲಿ ಸಿದ್ಧಪಡಿಸಲಾಗುತ್ತದೆ.
 (3)ಮೂರು ವಿವರಣಪತ್ರಗಳಲ್ಲಿ ಸಿದ್ಧಪಡಿಸಲಾಗುತ್ತದೆ.
 (4)ಎರಡು ವಿವರಣ ಪತ್ರಗಳಲ್ಲಿ ಸಿದ್ಧಪಡಿಸಲಾಗುತ್ತದೆ.

ಸರಿ ಉತ್ತರ

(1) ಐದು ವಿವರಣಪತ್ರಗಳಲ್ಲಿ ಸಿದ್ಧಪಡಿಸಲಾಗುತ್ತದೆ.


10.1993 ರ ಕಾಯಿದೆಯ ಯಾವ ಪರಿಚ್ಛೇದದ ಕೆಳಗೆ ಪಂಚಾಯತ್ ಗಳು ಮತ್ತು ಅದರ ಅಧಿಕಾರಿಗಳನ್ನು ‘ಸರ್ಕಾರಿ ನೌಕರ’ ಎಂದು ಕರೆಯಲಾಗಿದೆ ?
 (1) 287
 (2)285
 (3)286
 (4)284

ಸರಿ ಉತ್ತರ

(3) 286


11.ಕೆಳಕಂಡ ಉದ್ದೇಶಕ್ಕಾಗಿ ತಾಲ್ಲೂಕು ಪಂಚಾಯತ್, ಋಣ ತೀರಿಕೆ ನಿಧಿ (Fund)ಯನ್ನು ರೂಪಿಸಬಹುದು.
 (1) ಸಾಲಗಳನ್ನು ಎತ್ತಲು
 (2)ಸಾಲಗಳ ಮರುಪಾವತಿ ಮಾಡಲು
 (3)ವೇತನಗಳನ್ನು ಕೊಡಲು
 (4)ಗೌರವಧನವನ್ನು ಕೊಡಲು

ಸರಿ ಉತ್ತರ

(2) ಸಾಲಗಳ ಮರುಪಾವತಿ ಮಾಡಲು


12.ಈ ಕೆಳಗಿನವರಿಂದ ಮೊದಲೇ ಅನುಮೋದನೆ ಪಡೆದುಕೊಂಡು ಗ್ರಾಮ ಪಂಚಾಯತ್ ಗಳು ಉಪ-ಕಾನೂನುಗಳನ್ನು ಮಾಡಬಹುದು.
 (1) ತಾಲ್ಲೂಕು ಪಂಚಾಯತ್
 (2)ಜಿಲ್ಲಾ ಪಂಚಾಯತ್
 (3)ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿ
 (4)ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರು

ಸರಿ ಉತ್ತರ

(2) ಜಿಲ್ಲಾ ಪಂಚಾಯತ್


13.ರಾಜ್ಯದ ಚುನಾವಣಾ ಆಯುಕ್ತರನ್ನು ಯಾರು ನೇಮಕ ಮಾಡುತ್ತಾರೆ?
 (1) ಭಾರತದ ರಾಷ್ಟ್ರಪತಿಯವರು
 (2)ಕರ್ನಾಟಕದ ಮುಖ್ಯ ನ್ಯಾಯಮೂರ್ತಿಗಳು
 (3)ರಾಜ್ಯದ ರಾಜ್ಯಪಾಲರು
 (4)ಭಾರತದ ಚುನಾವಣಾ ಆಯೋಗ

ಸರಿ ಉತ್ತರ

(3) ರಾಜ್ಯದ ರಾಜ್ಯಪಾಲರು


14.ಈ ಕೆಳಕಂಡವರಿಗೆ ಬರೆದುಕೊಡುವ ಮೂಲಕ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರು ತಮ್ಮ ರಾಜೀನಾಮೆಯನ್ನು ನೀಡಬಹುದು.
 (1) ರಾಜ್ಯದ ಹಣಕಾಸು ಸಚಿವರಿಗೆ
 (2)ಕೇಂದ್ರ ಹಣಕಾಸು ಸಚಿವರಿಗೆ
 (3)ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ
 (4)ರಾಜ್ಯದ ಹಣಕಾಸು ಕಾರ್ಯದರ್ಶಿಯವರಿಗೆ

ಸರಿ ಉತ್ತರ

(4) ರಾಜ್ಯದ ಹಣಕಾಸು ಕಾರ್ಯದರ್ಶಿಯವರಿಗೆ


15.ಈ ಕೆಳಗಿನ ದಿನಾಂಕದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ MGNREGAಯ ಅನುಷ್ಠಾನವು ಕಾರ್ಯಾಚರಣೆಯಲ್ಲಿದೆ.
 (1) 2-2-2006
 (2)3-2-3007
 (3)1-4-2008
 (4)1-4-2007

ಸರಿ ಉತ್ತರ

(3) 1-4-2008


16.MGNREGA ಕೆಲಸಗಳಿಗೆ ಸಾಮಾಜಿಕ ಪರೀಕ್ಷೆಯನ್ನು (Social Auditing) ಯಾರು ಮಾಡಬೇಕು?
 (1) ತಾಲ್ಲೂಕು ಪಂಚಾಯತ್
 (2)ಗ್ರಾಮಸಭಾ
 (3)ಗ್ರಾಮ ಪಂಚಾಯತ್
 (4)ತಾಲ್ಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿ

ಸರಿ ಉತ್ತರ

(2) ಗ್ರಾಮಸಭಾ


17.ಕೆಳಕಂಡ ಅನುಬಂಧಗಳ ಪ್ರಕಾರ, ನೌಕರ ಪಟ್ಟಿಗಳ (MGNERGA ಕೆಳಗೆ) ವಿವರವಾದ ದಾಖಲೆಯನ್ನು ನೋಂದಣಿ ಪುಸ್ತಕಗಳಲ್ಲಿ ನಿರ್ವಹಿಸಬೇಕು.
 (1) B-3, B-4, B-5 ಮತ್ತು B-6
 (2)A-3, A-4, A-5 ಮತ್ತು A-6
 (3)E-3, E-4, E-5 ಮತ್ತು E-6
 (4)C-3, C-4, C-5 ಮತ್ತು C-6

ಸರಿ ಉತ್ತರ

(1) B-3, B-4, B-5 ಮತ್ತು B-6


18.ಕೇಂದ್ರ ಮತ್ತು ರಾಜ್ಯಗಳ ನಡುವೆ ಸುಮಾರು ಈ ಕೆಳಕಂಡ ಅನುಪಾತದಂತೆ ವೆಚ್ಚವನ್ನು ಹಂಚಿಕೊಳ್ಳುವ ಆಧಾರದ ಮೇಲೆ MGNREGA ಯನ್ನು ಜಾರಿಗೊಳಿಸಲಾಗುತ್ತಿದೆ.
 (1) 90:10
 (2)70:30
 (3)85:15
 (4)80:20

ಸರಿ ಉತ್ತರ

(1) 90:10


19.ಜಿಲ್ಲಾ ಪಂಚಾಯತ್ ಗಳು, ತಾಲ್ಲೂಕು ಪಂಚಾಯತ್ ಗಳು ಮತ್ತು ಗ್ರಾಮ ಪಂಚಾಯತ್ ಗಳಿಗೆ ಅನುಕ್ರಮವಾಗಿ ಈ ಕೆಳಗಿನ ಅನುಪಾತದಂತೆ ಹದಿಮೂರನೇ ಹಣಕಾಸು ಆಯೋಗದ ಅನುದಾನಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
 (1) 10:25:65
 (2)10:20:70
 (3)10:15:75
 (4)10:10:80

ಸರಿ ಉತ್ತರ

(2) 10:20:70


20.ಕರ್ನಾಟಕದಲ್ಲಿ MGNREGA ಅನ್ವಯ ಪ್ರಸ್ತುತ ನೀಡಲಾಗುತ್ತಿರುವ ಮಜೂರಿಯು (1-4-2012ರಿಂದ ನಂತರ)
 (1) 160ರೂ.
 (2)155ರೂ.
 (3)150ರೂ.
 (4)145ರೂ.

ಸರಿ ಉತ್ತರ

(2) 155ರೂ.


21.ಪಜಾ/ಪಪಂ ಕಲ್ಯಾಣ ಚಟುವಟಿಕೆಗಳನ್ನು ಪ್ರವರ್ಧಿಸುವುದಕ್ಕಾಗಿ, ಗ್ರಾಮ ಪಂಚಾಯಿತಿಯು ತನ್ನ ನಿಧಿಯಿಂದ ಈ ಕೆಳಗಿನದಕ್ಕೆ ಕಡಿಮೆ ಇಲ್ಲದಂತೆ ವ್ಯಯ ಮಾಡಬೇಕು.
 (1) ಶೇ.20
 (2)ಶೇ.21
 (3)ಶೇ.18
 (4)ಶೇ.19

ಸರಿ ಉತ್ತರ

(1) ಶೇ.20


22.ಪ್ರತಿಯೊಂದು ಕುಟುಂಬಕ್ಕೂ ಒಂದು ಹಣಕಾಸು ವರ್ಷದಲ್ಲಿ 100 ದಿನಗಳ ಮಜೂರಿ ಖಾತರಿಯ ಉದ್ಯೋಗವನ್ನು ದೊರಕಿಸಿಕೊಡುವುದು.
 (1) ಸ್ವರ್ಣ ಜಯಂತಿ ಗ್ರಾಮ ಸ್ವರೋಜ್ಗಾರ್ ಯೋಜನೆಯ ಧ್ಯೇಯ
 (2)ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಧ್ಯೇಯ
 (3)MGNREGAಯ ಧ್ಯೇಯ
 (4)ಸುವರ್ಣ ಗ್ರಾಮೋದಯ ಯೋಜನೆಯ ಧ್ಯೇಯ

ಸರಿ ಉತ್ತರ

(3) MGNREGAಯ ಧ್ಯೇಯ


23.ಗ್ರಾಮ ಪಂಚಾಯತ್ ನೇಮಕ ಮಾಡಿದ ಯಾವುದೇ ಉದ್ಯೋಗಿಯ ವೇತನ ಬಡ್ತಿಯನ್ನು ಯಾರು ತಡೆಹಿಡಿಯಬಹುದು?
 (1) ಕಾರ್ಯದರ್ಶಿ
 (2)ಗ್ರಾಮ ಪಂಚಾಯಿತಿಯ ಅಧ್ಯಕ್ಷರು
 (3)ಪಂಚಾಯತ್ ಅಭಿವೃದ್ಧಿ ಅಧಿಕಾರಿ
 (4)ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ

ಸರಿ ಉತ್ತರ

(3) ಪಂಚಾಯತ್ ಅಭಿವೃದ್ಧಿ ಅಧಿಕಾರಿ


24.ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಕೆಳಕಂಡ ಮೊಬಲಗನ್ನು ________ ವರೆಗೆ ಮಂಜೂರು ಮಾಡುವ ಅಧಿಕಾರವು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗಿರುತ್ತದೆ.
 (1) ರೂ. ಎರಡು ಲಕ್ಷ
 (2)ರೂ. ಒಂದು ಲಕ್ಷ
 (3)ರೂ. ಮೂರು ಲಕ್ಷ
 (4)ರೂ. ಐದು ಲಕ್ಷ

ಸರಿ ಉತ್ತರ

(2) ರೂ. ಒಂದು ಲಕ್ಷ


25.ಪಂಚಾಯತ್ ಅಭಿವೃದ್ಧಿ ಅಧಿಕಾರಿಯು ಗ್ರಾಮ ಪಂಚಾಯತ್ ನ ಲೆಕ್ಕಪತ್ರಗಳು ಮತ್ತು ಬಜೆಟ್ಗಳೆರಡನ್ನೂ ಕೆಳಕಂಡ ಅವಧಿಯೊಳಗೆ ಸಿದ್ಧಪಡಿಸತಕ್ಕದ್ದು.
 (1) ಫೆಬ್ರವರಿ 1ನೇ ದಿನಾಂಕ ಮತ್ತು ಮಾರ್ಚ್ 10ನೇ ದಿನಾಂಕದ ನಡುವೆ
 (2)ಫೆಬ್ರವರಿ 15ನೇ ದಿನಾಂಕ ಮತ್ತು ಮಾರ್ಚ್ 10ನೇ ದಿನಾಂಕದ ನಡುವೆ
 (3)ಫೆಬ್ರವರಿ 3ನೇ ದಿನಾಂಕ ಮತ್ತು ಮಾರ್ಚ್ 15ನೇ ದಿನಾಂಕದ ನಡುವೆ
 (4)ಫೆಬ್ರವರಿ 1ನೇ ದಿನಾಂಕ ಮತ್ತು ಮಾರ್ಚ್ 31ನೇ ದಿನಾಂಕದ ನಡುವೆ

ಸರಿ ಉತ್ತರ

(1) ಫೆಬ್ರವರಿ 1ನೇ ದಿನಾಂಕ ಮತ್ತು ಮಾರ್ಚ್ 10ನೇ ದಿನಾಂಕದ ನಡುವೆ


26.ಮೂರನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದವರು?
 (1)ಜಿ.ತಿಮ್ಮಯ್ಯ
 (2)ಅಬ್ದುಲ್ ಅಜೀಜ್
 (3)ಮಹೇದ್ರ ಕಂಠಿ
 (4)ಎ.ಜಿ.ಕೋಡ್ಗಿ

ಸರಿ ಉತ್ತರ

(4) ಎ.ಜಿ.ಕೋಡ್ಗಿ


27.1993ರ ಕಾಯಿದೆಯ ಯಾವ ಪರಿಚ್ಛೇದದ ಅನ್ವಯ ಯಾವುದೇ ನೊಂದ ವ್ಯಕ್ತಿಯು ಗ್ರಾಮ ಪಂಚಾಯತ್ ನ ಆದೇಶದ ವಿರುದ್ಧ ಅಪೀಲು ಹೋಗಬಹುದು?
 (1) 269
 (2)270
 (3)268
 (4)271

ಸರಿ ಉತ್ತರ

(1) 269


28.ಪಂಚಾಯತ್ ಅಭಿವೃದ್ಧಿ ಅಧಿಕಾರಿಯು ಗ್ರಾಮ ಪಂಚಾಯಿತಿಯ ಮಾಸಿಕ ಲೆಕ್ಕಪತ್ರಗಳನ್ನು
 (1) ಬರಲಿರುವ ತಿಂಗಳ ಹನ್ನೊೊಂದನೇ ದಿನಾಂಕಕ್ಕಿಂತ ಮೊದಲೇ ಸಲ್ಲಿಸುತ್ತಾರೆ
 (2) ಬರಲಿರುವ ತಿಂಗಳ ಹತ್ತನೇ ದಿನಾಂಕಕ್ಕಿಂತ ಮೊದಲೇ ಸಲ್ಲಿಸುತ್ತಾರೆ
 (3) ಬರಲಿರುವ ತಿಂಗಳ ಒಂಬತ್ತನೇ ದಿನಾಂಕಕ್ಕಿಂತ ಮೊದಲೇ ಸಲ್ಲಿಸುತ್ತಾರೆ
 (4) ಹನ್ನೆರಡನೇ ದಿನಾಂಕಕ್ಕಿಂತ ಮೊದಲೇ ಸಲ್ಲಿಸುತ್ತಾರೆ

ಸರಿ ಉತ್ತರ

(2) ಬರಲಿರುವ ತಿಂಗಳ ಹತ್ತನೇ ದಿನಾಂಕಕ್ಕಿಂತ ಮೊದಲೇ ಸಲ್ಲಿಸುತ್ತಾರೆ


29.136-ಎ ಪರಿಚ್ಛೇದದ ಪ್ರಕಾರ, ತಾಲ್ಲೂಕು ಪಂಚಾಯಿತಿಯ ಪ್ರತಿಯೊಬ್ಬ ಸದಸ್ಯರೂ ಸಹ ಅವಧಿಯು ಪ್ರಾರಂಭವಾದ ದಿನಾಂಕದಿಂದ ಕೆಳಕಂಡ ಅವಧಿಯೊಳಗಾಗಿ ತಮ್ಮ ಆಸ್ತಿಗಳನ್ನು ಘೋಷಿಸಬೇಕು.
 (1) ನಾಲ್ಕು ತಿಂಗಳು
 (2)ಮೂರು ತಿಂಗಳು
 (3)ಎರಡು ತಿಂಗಳು
 (4)ಒಂದು ತಿಂಗಳು

ಸರಿ ಉತ್ತರ

(2) ಮೂರು ತಿಂಗಳು


30.ಉತ್ತರ ಕನ್ನಡದಲ್ಲಿ ತಾಲ್ಲೂಕು ಪಂಚಾಯಿತಿಗಳ ಜನಸಂಖ್ಯೆಯು ಈ ಕೆಳಗಿನದಕ್ಕಿಂತ ಕಡಿಮೆ ಇದೆ.
 (1) 4,000
 (2)2,500
 (3)3,000
 (4)3,500

ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


31.ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರು
 (1) ನೇರವಾಗಿ ಜನರಿಂದ ಚುನಾಯಿತರಾಗುತ್ತಾರೆ
 (2)ವಿಧಾನಸಭಾ ಸದಸ್ಯರು ಮತ್ತು ಸಂಸತ್ ಸದಸ್ಯರಿಂದ ನಾಮನಿರ್ದೇಶನಗೊಳ್ಳುತ್ತಾರೆ
 (3)ಜಿಲ್ಲಾ ಪಂಚಾಯ್ತಿಯ ಚುನಾಯಿತ ಸದಸ್ಯರಿಂದ ಆಯ್ಕೆಯಾಗುತ್ತಾರೆ
 (4)ಸರ್ಕಾರದಿಂದ ನೇಮಕಗೊಳ್ಳುತ್ತಾರೆ

ಸರಿ ಉತ್ತರ

(3) ಜಿಲ್ಲಾ ಪಂಚಾಯ್ತಿಯ ಚುನಾಯಿತ ಸದಸ್ಯರಿಂದ ಆಯ್ಕೆಯಾಗುತ್ತಾರೆ


32.ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ವೇತನವನ್ನು
 (1) ಗ್ರಾಮ ಪಂಚಾಯತ್ ನಿಧಿಯಿಂದ ಪಡೆದುಕೊಳ್ಳಲಾಗುತ್ತದೆ
 (2)ರಾಜ್ಯ ಸರ್ಕಾರದಿಂದ ಪಡೆದುಕೊಳ್ಳಲಾಗುತ್ತದೆ
 (3)ಜಿಲ್ಲಾ ಪಂಚಾಯತ್ ನಿಧಿಯಿಂದ ಪಡೆದುಕೊಳ್ಳಲಾಗುತ್ತದೆ
 (4)ತಾಲ್ಲೂಕು ಪಂಚಾಯತ್ ನಿಧಿಯಿಂದ ಪಡೆದುಕೊಳ್ಳಲಾಗುತ್ತದೆ

ಸರಿ ಉತ್ತರ

(2) ರಾಜ್ಯ ಸರ್ಕಾರದಿಂದ ಪಡೆದುಕೊಳ್ಳಲಾಗುತ್ತದೆ


33.ಪ್ರಸ್ತುತ ತಾಲ್ಲೂಕು ಪಂಚಾಯಿತಿಗಳಲ್ಲಿ ಜಂಟಿಸಹಿದಾರರ ಸಹಿಯೊಂದಿಗೆ ಚೆಕ್ ಗಳನ್ನು ನೀಡಲಾಗುತ್ತಿದೆ. ಇದಕ್ಕೆ ಈ ಕೆಳಗಿನ ಇಬ್ಬರೂ ಸಹಿದಾರರಾಗಿರುತ್ತಾರೆ.
 (1) ಅಧ್ಯಕ್ಷರು ಮತ್ತು ಕಾರ್ಯದರ್ಶಿ
 (2)ಅಧ್ಯಕ್ಷರು ಮತ್ತು ಉಪಾಧ್ಯಕ್ಷರು
 (3)ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು
 (4)ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿ

ಸರಿ ಉತ್ತರ

(3) ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು


34.ಕಟ್ಟಡಗಳ ಮೇಲೆ ಒಂದು ವರ್ಷಕ್ಕೆ ತಾಲ್ಲೂಕು ಪಂಚಾಯಿತಿಯು ವಿಧಿಸುವ ಗರಿಷ್ಠ ತೆರಿಗೆ ದರವು
 (1) ವಾರ್ಷಿಕ ಬಾಡಿಗೆ ಮೌಲ್ಯದ ಶೇ.10
 (2)ವಾರ್ಷಿಕ ಬಾಡಿಗೆ ಮೌಲ್ಯದ ಶೇ.15
 (3)ವಾರ್ಷಿಕ ಬಾಡಿಗೆ ಮೌಲ್ಯದ ಶೇ.20
 (4)ವಾರ್ಷಿಕ ಬಾಡಿಗೆ ಮೌಲ್ಯದ ಶೇ.13

ಸರಿ ಉತ್ತರ

(1) ವಾರ್ಷಿಕ ಬಾಡಿಗೆ ಮೌಲ್ಯದ ಶೇ.10


35.ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದ ಒಂದು ಕ್ರೋಡೀಕೃತ ವಾರ್ಷಿಕ ವರದಿಯನ್ನು ಈ ಕೆಳಕಂಡವರು ಸಲ್ಲಿಸುತ್ತಾರೆ.
 (1) ಜಿಲ್ಲಾ ಪಂಚಾಯತ್ ನ ಮುಖ್ಯ ಲೆಕ್ಕಪತ್ರಾಧಿಕಾರಿ
 (2)ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ
 (3)ರಾಜ್ಯ ಲೆಕ್ಕ ಪತ್ರಗಳ ನಿಯಂತ್ರಕರು
 (4)ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಸರಿ ಉತ್ತರ

(3) ರಾಜ್ಯ ಲೆಕ್ಕ ಪತ್ರಗಳ ನಿಯಂತ್ರಕರು


36.ಮಧ್ಯಕಾಲೀನ ಗ್ರಾಮ ಪಂಚಾಯತ್ ಸದಸ್ಯರು ಹೊಂದಿರುವ ಅವಧಿ
 (1) ಮೂರು ವರ್ಷಗಳು
 (2)ಐದು ವರ್ಷಗಳು
 (3)ಆರು ವರ್ಷಗಳು
 (4)ನಾಲ್ಕು ವರ್ಷಗಳು

ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


37.ತಾಲ್ಲೂಕು ಪಂಚಾಯಿತಿಯ ಲೆಕ್ಕಪತ್ರಗಳು ಹಾಗೂ ಬಜೆಟ್ ವಿವರಗಳನ್ನು ಸಿದ್ಧಪಡಿಸಿ ಮಂಡಿಸುವವರು
 (1) ಕಾರ್ಯನಿರ್ವಾಹಕ ಅಧಿಕಾರಿ
 (2)ಅಧ್ಯಕ್ಷರು
 (3)ಸಾಮಾನ್ಯ ಸ್ಥಾಯಿ ಸಮಿತಿ
 (4)ಹಣಕಾಸು, ಯೋಜನೆ ಹಾಗೂ ಲೆಕ್ಕಪರಿಶೋಧನಾ ಸಮಿತಿ

ಸರಿ ಉತ್ತರ

(4) ಹಣಕಾಸು, ಯೋಜನೆ ಹಾಗೂ ಲೆಕ್ಕಪರಿಶೋಧನಾ ಸಮಿತಿ


38.ನಿಗದಿತ ದಿನಾಂಕದೊಳಗಾಗಿ ಬಜೆಟ್ ಅಂದಾಜನ್ನು ಜಿಲ್ಲಾ ಪಂಚಾಯತ್ ಅನುಮೋದಿಸದಿದ್ದರೆ, ಅದನ್ನು ಸರ್ಕಾರಕ್ಕೆ ಯಾರು ಸಲ್ಲಿಸುತ್ತಾರೆ?
 (1) ಅಧ್ಯಕ್ಷರು
 (2)ಮುಖ್ಯಲೆಕ್ಕಪತ್ರಾಧಿಕಾರಿ
 (3)ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
 (4)ಹಣಕಾಸು ಯೋಜನೆ ಮತ್ತು ಲೆಕ್ಕಪರಿಶೋಧನಾ ಸಮಿತಿ

ಸರಿ ಉತ್ತರ

(3) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ


39.ಈ ಕೆಳಗಿನವರು ಜಿಲ್ಲಾ ಯೋಜನಾ ಸಮಿತಿಯ ಕಾರ್ಯದರ್ಶಿಯಾಗಿರುತ್ತಾರೆ.
 (1) ಜಿಲ್ಲಾಧಿಕಾರಿ
 (2)ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾ ಅಧಿಕಾರಿ
 (3)ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
 (4)ನಗರ ಮುನಿಸಿಪಾಲಿಟಿಯ ಆಯುಕ್ತರು

ಸರಿ ಉತ್ತರ

(3) ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ


40.1993ರ ಕಾಯಿದೆಯ ಯಾವ ಪರಿಚ್ಛೇದದ ಕೆಳಗೆ ಗ್ರಾಮ ಪಂಚಾಯತ್ ಗಳು, ತಾಲ್ಲೂಕು ಪಂಚಾಯತ್ ಗಳು ಮತ್ತು ಜಿಲ್ಲಾ ಪಂಚಾಯತ್ ಗಳು ವಿವೇಚನಾಧೀನ ಅನುದಾನಗಳನ್ನು ಪಡೆದುಕೊಳ್ಳುತ್ತವೆ?
 (1) 208
 (2)207
 (3)206
 (4)205

ಸರಿ ಉತ್ತರ

(1) 208


41.ಸಂವಿಧಾನದ 74ನೇ ತಿದ್ದುಪಡಿಯ ಯಾವ ಅನುಚ್ಛೇದದ ಅನ್ವಯ ಜಿಲ್ಲಾ ಯೋಜನಾ ಸಮಿತಿಯು ರಚಿತವಾಗಿದೆ?
 (1) 243ZD
 (2)243ZE
 (3)243ZF
 (4)243ZC

ಸರಿ ಉತ್ತರ

(1) 243ZD


42.ಮಧ್ಯಕಾಲೀನ ಗ್ರಾಮ ಪಂಚಾಯಿತಿ ಎಂದರೆ,
 (1) ಚಿಕ್ಕದಾದ ನಗರ ಪ್ರದೇಶ ಅಥವಾ ಸಂಕ್ರಮಣ ಪ್ರದೇಶದ ಪರಿವರ್ತನೆ
 (2)ಮುನಿಸಿಪಾಲಿಟಿಗಳ ಪರಿವರ್ತನೆ
 (3)ಅಧಿಸೂಚಿತ ಪ್ರದೇಶ ಸಮಿತಿಯ ಪರಿವರ್ತನೆ
 (4)ದೊಡ್ಡದಾದ ಪ್ರದೇಶದ ಪರಿವರ್ತನೆ

ಸರಿ ಉತ್ತರ

(1) ಚಿಕ್ಕದಾದ ನಗರ ಪ್ರದೇಶ ಅಥವಾ ಸಂಕ್ರಮಣ ಪ್ರದೇಶದ ಪರಿವರ್ತನೆ


43.1993ರ ಕರ್ನಾಟಕ ಪಂಚಾಯತ್ ರಾಜ್ ಕಾಯಿದೆಯು
 (1) XVIII ಅಧ್ಯಾಯಗಳು ಹಾಗೂ 321 ಭಾಗಗಳನ್ನು ಹೊಂದಿದೆ
 (2)XVII ಅಧ್ಯಾಯಗಳು ಹಾಗೂ 319 ಭಾಗಗಳನ್ನು ಹೊಂದಿದೆ
 (3)XIX ಅಧ್ಯಾಯಗಳು ಹಾಗೂ 321 ಭಾಗಗಳನ್ನು ಹೊಂದಿದೆ
 (4)XVIII ಅಧ್ಯಾಯಗಳು ಹಾಗೂ 318 ಭಾಗಗಳನ್ನು ಹೊಂದಿದೆ

ಸರಿ ಉತ್ತರ

(1) XVIII ಅಧ್ಯಾಯಗಳು ಹಾಗೂ 321 ಭಾಗಗಳನ್ನು ಹೊಂದಿದೆ


44.1993ರ ಕರ್ನಾಟಕ ಪಂಚಾಯತ್ ರಾಜ್ ಕಾಯಿದೆಯ ಎಲ್ಲಾ ಉಪಬಂಧಗಳು ಇಡೀ ರಾಜ್ಯದಲ್ಲಿ ಈ ಕೆಳಕಂಡ ದಿನಾಂಕದಿಂದ ಜಾರಿಗೆ ಬಂದವು.
 (1) ಏಪ್ರಿಲ್ 10, 1993 ರಿಂದ
 (2)ಮೇ 10, 1993 ರಿಂದ
 (3)ಮಾರ್ಚ್ 10, 1993 ರಿಂದ
 (4)ಫೆಬ್ರವರಿ 10, 1993 ರಿಂದ

ಸರಿ ಉತ್ತರ

(2) ಮೇ 10, 1993 ರಿಂದ


45.ಗ್ರಾಮ ಪಂಚಾಯಿತಿಯು ಈ ಕೆಳಕಂಡಷ್ಟು ಜನಸಂಖ್ಯೆಯನ್ನು ಹೊಂದಿದ ಪ್ರದೇಶವಾಗಿರುತ್ತದೆ.
 (1) 5,000ಕ್ಕಿಂತ ಕಡಿಮೆ ಇಲ್ಲದ ಮತ್ತು 7,000ಕ್ಕಿಂತ ಜಾಸ್ತಿ ಇಲ್ಲದ ಜನಸಂಖ್ಯೆ
 (2) 6,000ಕ್ಕಿಂತ ಕಡಿಮೆ ಇಲ್ಲದ ಮತ್ತು 7,000ಕ್ಕಿಂತ ಜಾಸ್ತಿ ಇಲ್ಲದ ಜನಸಂಖ್ಯೆ
 (3) 7,000ಕ್ಕಿಂತ ಕಡಿಮೆ ಇಲ್ಲದ ಮತ್ತು 8,000ಕ್ಕಿಂತ ಜಾಸ್ತಿ ಇಲ್ಲದ ಜನಸಂಖ್ಯೆ
 (4) 3,000ಕ್ಕಿಂತ ಕಡಿಮೆ ಇಲ್ಲದ ಮತ್ತು 5,000ಕ್ಕಿಂತ ಜಾಸ್ತಿ ಇಲ್ಲದ ಜನಸಂಖ್ಯೆ

ಸರಿ ಉತ್ತರ

(1) 5,000ಕ್ಕಿಂತ ಕಡಿಮೆ ಇಲ್ಲದ ಮತ್ತು 7,000ಕ್ಕಿಂತ ಜಾಸ್ತಿ ಇಲ್ಲದ ಜನಸಂಖ್ಯೆ


46.ಗ್ರಾಮ ಪಂಚಾಯಿತಿಗಳ ಪ್ರದೇಶವನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಅಧಿಕಾರ ಈ ಕೆಳಕಂಡ ಯಾರಿಗೆ ಇರುತ್ತದೆ?
 (1) ಜಿಲ್ಲಾಧಿಕಾರಿ
 (2)ಸಹಾಯಕ ಆಯುಕ್ತರು
 (3)ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
 (4)ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ

ಸರಿ ಉತ್ತರ

(1) ಜಿಲ್ಲಾಧಿಕಾರಿ


47.ಗ್ರಾಮ ಪಂಚಾಯಿತಿಯ ಪ್ರತಿಯೊಬ್ಬ ಸದಸ್ಯರೂ ಈ ಕೆಳಕಂಡ ಜನಸಂಖ್ಯೆಯನ್ನು ಪ್ರತಿನಿಧಿಸುತ್ತಾರೆ.
 (1) 500
 (2)400
 (3)450
 (4)600

ಸರಿ ಉತ್ತರ

(2) 400


48.ಪಂಚಾಯಿತಿಗಳಲ್ಲಿ ಹಿಂದುಳಿದ ವರ್ಗಗಳಿಗೆ ಸ್ಥಾನಗಳ ಮೀಸಲಾತಿಯು ಈ ಕೆಳಕಂಡ ಪ್ರಮಾಣದಲ್ಲಿರುತ್ತದೆ.
 (1) A ಪ್ರವರ್ಗದವರಿಗೆ ಶೇ.75, ಮತ್ತು B ಪ್ರವರ್ಗದವರಿಗೆ ಶೇ.25
 (2)A ಪ್ರವರ್ಗದವರಿಗೆ ಶೇ.60, ಮತ್ತು B ಪ್ರವರ್ಗದವರಿಗೆ ಶೇ.40
 (3)A ಪ್ರವರ್ಗದವರಿಗೆ ಶೇ.80, ಮತ್ತು B ಪ್ರವರ್ಗದವರಿಗೆ ಶೇ.20
 (4)A ಪ್ರವರ್ಗದವರಿಗೆ ಶೇ.65, ಮತ್ತು B ಪ್ರವರ್ಗದವರಿಗೆ ಶೇ.35

ಸರಿ ಉತ್ತರ

(3) A ಪ್ರವರ್ಗದವರಿಗೆ ಶೇ.80, ಮತ್ತು B ಪ್ರವರ್ಗದವರಿಗೆ ಶೇ.20


49.ಸಂವಿಧಾನದ 73ನೇ ತಿದ್ದುಪಡಿಯ ಕೆಳಕಂಡ ಯಾವ ಅನುಚ್ಛೇದವು ಪಿ ಆರ್ ಐ ಗಳನ್ನು ‘ಸ್ವಯಂ ಆಡಳಿತ ಸಂಸ್ಥೆಗಳು’ ಎಂದು ವಿವರಿಸುತ್ತದೆ?
 (1) 243 ಜಿ
 (2)245 ಜಿ
 (3)240 ಜಿ
 (4)246 ಜಿ

ಸರಿ ಉತ್ತರ

(1) 243 ಜಿ


50.ಗ್ರಾಮ ಪಂಚಾಯಿತಿಯ ಆಡಳಿತ ಸಮಿತಿಯನ್ನು ಯಾರು ನೇಮಕ ಮಾಡುತ್ತಾರೆ?
 (1) ಸಹಾಯಕ ಆಯುಕ್ತರು
 (2)ವಿಭಾಗೀಯ ಆಯುಕ್ತರು
 (3)ತಹಸೀಲ್ದಾರ್
 (4)ಜಿಲ್ಲಾಧಿಕಾರಿ

ಸರಿ ಉತ್ತರ

(4) ಜಿಲ್ಲಾಧಿಕಾರಿ


51.ಪ್ರತಿಯೊಂದು ಗ್ರಾಮ ಪಂಚಾಯಿತಿಯೂ ತನ್ನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಕೆಳಕಂಡ ಅವಧಿಯೊಳಗಾಗಿ ಆಯ್ಕೆ ಮಾಡತಕ್ಕದ್ದು:
 (1) ಎರಡು ತಿಂಗಳು
 (2)ಒಂದು ತಿಂಗಳು
 (3)ಮೂರು ತಿಂಗಳು
 (4)ನಲವತ್ತೈದು ತಿಂಗಳು

ಸರಿ ಉತ್ತರ

(2) ಒಂದು ತಿಂಗಳು


52.ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರ ಅವಧಿಯು ಕೆಳಕಂಡ ಕಾಲಾವಧಿಯವರೆಗೆ ಇರುತ್ತದೆ.
 (1) ಅರವತ್ತು ತಿಂಗಳು
 (2)ನಲವತ್ತೈದು ತಿಂಗಳು
 (3)ಮೂವತ್ತು ತಿಂಗಳು
 (4)ನಲವತ್ತು ತಿಂಗಳು

ಸರಿ ಉತ್ತರ

(3) ಮೂವತ್ತು ತಿಂಗಳು


53.ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಈ ಕೆಳಕಂಡವರಿಗೆ ತಮ್ಮ ಹಸ್ತಾಕ್ಷರದಲ್ಲಿ ಬರೆದುಕೊಡುವ ಮೂಲಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಹುದು.
 (1) ಜಿಲ್ಲಾಧಿಕಾರಿ
 (2)ಸಹಾಯಕ ಆಯುಕ್ತರು
 (3)ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು
 (4)ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರು

ಸರಿ ಉತ್ತರ

(2) ಸಹಾಯಕ ಆಯುಕ್ತರು


54.ಗ್ರಾಮ ಪಂಚಾಯಿತಿಯ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಜಾರಿಗೆ ತರಬೇಕಾದರೆ ಈ ಕೆಳಕಂಡಷ್ಟು ಬಹುಮತ ಇರುವುದು ಅಗತ್ಯ.
 (1) ಸಭೆಯಲ್ಲಿ ಉಪಸ್ಥಿತರಿರುವ ನಾಲ್ಕನೇ ಮೂರರಷ್ಟಕ್ಕಿಂತ ಕಡಿಮೆ ಇಲ್ಲದ ಸದಸ್ಯರು
 (2)ಸಭೆಯಲ್ಲಿ ಉಪಸ್ಥಿತರಿರುವ ಮೂರನೇ ಒಂದರಷ್ಟಕ್ಕಿಂತ ಕಡಿಮೆ ಇಲ್ಲದ ಸದಸ್ಯರು
 (3)ಸಭೆಯಲ್ಲಿ ಉಪಸ್ಥಿತರಿರುವ ಮೂರನೇ ಎರಡರಷ್ಟಕ್ಕಿಂತ ಕಡಿಮೆ ಇಲ್ಲದ ಸದಸ್ಯರು
 (4)ಸಭೆಯಲ್ಲಿ ಉಪಸ್ಥಿತರಿರುವ ಅರ್ಧಕ್ಕೆ ಕಡಿಮೆ ಇಲ್ಲದಷ್ಟು ಸದಸ್ಯರು

ಸರಿ ಉತ್ತರ

(3) ಸಭೆಯಲ್ಲಿ ಉಪಸ್ಥಿತರಿರುವ ಮೂರನೇ ಎರಡರಷ್ಟಕ್ಕಿಂತ ಕಡಿಮೆ ಇಲ್ಲದ ಸದಸ್ಯರು


55.ಗ್ರಾಮ ಪಂಚಾಯಿತಿಯು ತನ್ನ ವ್ಯವಹಾರಗಳನ್ನು ನಡೆಸುವುದಕ್ಕಾಗಿ ಕನಿಷ್ಠ
 (1) ಎರಡು ತಿಂಗಳಿಗೊಮ್ಮೆ ಸಭೆ ಸೇರುತ್ತದೆ
 (2)ಒಂದು ತಿಂಗಳಿಗೊಮ್ಮೆ ಸಭೆ ಸೇರುತ್ತದೆ
 (3)ಒಂದೂವರೆ ತಿಂಗಳಿಗೊಮ್ಮೆ ಸಭೆ ಸೇರುತ್ತದೆ
 (4)ಮೂರು ತಿಂಗಳಿಗೊಮ್ಮೆ ಸಭೆ ಸೇರುತ್ತದೆ

ಸರಿ ಉತ್ತರ

(2) ಒಂದು ತಿಂಗಳಿಗೊಮ್ಮೆ ಸಭೆ ಸೇರುತ್ತದೆ


56.ಗ್ರಾಮ ಪಂಚಾಯಿತಿಗೆ ಕೆಳಕಂಡ ಆಧಾರದ ಮೇಲೆ ಚುನಾವಣೆಯನ್ನು ನಡೆಸಲಾಗುತ್ತದೆ.
 (1) ಪಕ್ಷದ ಆಧಾರ
 (2)ಸಮ್ಮಿಶ್ರ ಆಧಾರ
 (3)ಪಕ್ಷರಹಿತ ಆಧಾರ
 (4)ನಾಮನಿರ್ದೇಶನದ ಆಧಾರ

ಸರಿ ಉತ್ತರ

(3) ಪಕ್ಷರಹಿತ ಆಧಾರ


57.ಗ್ರಾಮ ಪಂಚಾಯಿತಿ ನಿರ್ವಹಿಸಬೇಕಾದ ಕಾರ್ಯಗಳನ್ನು 1993ರ ಕಾಯಿದೆಯ ಕೆಳಕಂಡ ಅನುಸೂಚಿಯಲ್ಲಿ ನಿರ್ದಿಷ್ಟ ಪಡಿಸಲಾಗಿದೆ.
 (1) ಅನುಸೂಚಿ II
 (2)ಅನುಸೂಚಿ I
 (3)ಅನುಸೂಚಿ VI
 (4)ಅನುಸೂಚಿ III

ಸರಿ ಉತ್ತರ

(2) ಅನುಸೂಚಿ I


58.ಗ್ರಾಮ ಪಂಚಾಯಿತಿಯ ಸೌಕರ್ಯಗಳ ಸಮಿತಿಗೆ ಈ ಕೆಳಗಿನವರು ಮುಖ್ಯಸ್ಥರಾಗಿರುತ್ತಾರೆ.
 (1) ಅಧ್ಯಕ್ಷ
 (2)ಉಪಾಧ್ಯಕ್ಷ
 (3)ಪಂಚಾಯತ್ ಅಭಿವೃದ್ಧಿ ಅಧಿಕಾರಿ
 (4)ಅಧ್ಯಕ್ಷ ಅಥವಾ ಉಪಾಧ್ಯಕ್ಷರನ್ನು ಬಿಟ್ಟು ಇತರ ಯಾವುದೇ ಸದಸ್ಯ

ಸರಿ ಉತ್ತರ

(1) ಅಧ್ಯಕ್ಷ


59.61ನೇ ಪರಿಚ್ಛೇದದ ಪ್ರಕಾರ, ಗ್ರಾಮ ಪಂಚಾಯಿತಿಯು
 (1) ಐದು ಸ್ಥಾಯಿ ಸಮಿತಿಗಳನ್ನು ರಚಿಸಬಹುದು
 (2)ಮೂರು ಸ್ಥಾಯಿ ಸಮಿತಿಗಳನ್ನು ರಚಿಸಬಹುದು
 (3)ನಾಲ್ಕು ಸ್ಥಾಯಿ ಸಮಿತಿಗಳನ್ನು ರಚಿಸಬಹುದು
 (4)ಎರಡು ಸ್ಥಾಯಿ ಸಮಿತಿಗಳನ್ನು ರಚಿಸಬಹುದು

ಸರಿ ಉತ್ತರ

(2) ಮೂರು ಸ್ಥಾಯಿ ಸಮಿತಿಗಳನ್ನು ರಚಿಸಬಹುದು


60.3(1)ನೇ ಪರಿಚ್ಛೇದದ ಪ್ರಕಾರ, ವಿಭಾಗ ಸಭೆಯು (ವಾರ್ಡ್ ಸಭೆ) ಕನಿಷ್ಠ
 (1) ನಾಲ್ಕು ತಿಂಗಳಿಗೊಮ್ಮೆ ಸಭೆ ಸೇರುತ್ತದೆ
 (2)ಮೂರು ತಿಂಗಳಿಗೊಮ್ಮೆ ಸಭೆ ಸೇರುತ್ತದೆ
 (3)ಆರು ತಿಂಗಳಿಗೊಮ್ಮೆ ಸಭೆ ಸೇರುತ್ತದೆ
 (4)ಹನ್ನೆರಡು ತಿಂಗಳಿಗೊಮ್ಮೆ ಸಭೆ ಸೇರುತ್ತದೆ

ಸರಿ ಉತ್ತರ

(3) ಆರು ತಿಂಗಳಿಗೊಮ್ಮೆ ಸಭೆ ಸೇರುತ್ತದೆ


61.ಗ್ರಾಮ ಸಭೆಯ ಸಭೆಗಳನ್ನು ನಡೆಸುವುದಕ್ಕೆ ಈ ಕೆಳಗಿನದಕ್ಕೆ ಕಡಿಮೆ ಇಲ್ಲದಷ್ಟು ಸದಸ್ಯರ ಕೋರಂ ಇರಬೇಕು.
 (1) ಐದನೇ ಒಂದು
 (2)ಹತ್ತನೇ ಒಂದು
 (3)ನಾಲ್ಕನೇ ಒಂದು
 (4)ಮೂರನೇ ಒಂದು

ಸರಿ ಉತ್ತರ

(2) ಹತ್ತನೇ ಒಂದು


62.ಈ ಕೆಳಗಿನದರ ಸದಸ್ಯರು ಗ್ರಾಮದ ಮತದಾರರಾಗಿರುತ್ತಾರೆ
 (1) ಗ್ರಾಮ ಪಂಚಾಯಿತಿ
 (2)ಗ್ರಾಮಸಭಾ
 (3)ಪಂಚಾಯತ್ ಜಮಾಬಂಧಿ
 (4)ತಾಲ್ಲೂಕು ಪಂಚಾಯಿತಿ

ಸರಿ ಉತ್ತರ

(2) ಗ್ರಾಮಸಭಾ


63.ಗ್ರಾಮ ಪಂಚಾಯಿತಿಯ ಸಭೆ ನಡೆಸಲು ಇರಬೇಕಾದ ಸದಸ್ಯರ ಕೋರಂ (ಅವಶ್ಯ ಸಂಖ್ಯೆ)
 (1) ಒಟ್ಟು ಸದಸ್ಯರ ಮೂರನೇ ಒಂದರಷ್ಟು ಸದಸ್ಯರ ಉಪಸ್ಥಿತಿ
 (2)ಒಟ್ಟು ಸದಸ್ಯರ ಮೂರನೇ ಎರಡರಷ್ಟು ಸದಸ್ಯರ ಉಪಸ್ಥಿತಿ
 (3)ಒಟ್ಟು ಸದಸ್ಯರ ಅರ್ಧದಷ್ಟು ಸದಸ್ಯರ ಉಪಸ್ಥಿತಿ
 (4)ಒಟ್ಟು ಸದಸ್ಯರ ನಾಲ್ಕನೇ ಮೂರರಷ್ಟು ಸದಸ್ಯರ ಉಪಸ್ಥಿತಿ

ಸರಿ ಉತ್ತರ

(3) ಒಟ್ಟು ಸದಸ್ಯರ ಅರ್ಧದಷ್ಟು ಸದಸ್ಯರ ಉಪಸ್ಥಿತಿ


64.ಈ ಕೆಳಗಿನವುಗಳಲ್ಲಿ ಯಾವುದು ಗ್ರಾಮ ಪಂಚಾಯಿತಿಯ ನಿರ್ಬಂಧಕ ಕಾರ್ಯವಾಗಿರುತ್ತದೆ?
 (1) ಸಣ್ಣ ಕೆರೆಗಳ ನಿರ್ವಹಣೆ
 (2)ಕಾಲೇಜು ಕಟ್ಟಡಗಳ ನಿರ್ಮಾಣ
 (3)ಎಲ್ಲ ಮಕ್ಕಳೂ ಪ್ರಾಥಮಿಕ ಶಾಲೆಗೆ ಭರ್ತಿಯಾಗುವಂತೆ ಖಚಿತಪಡಿಸಿಕೊಳ್ಳುವುದು
 (4)ಸಾರ್ವಜನಿಕ ಆಸ್ಪತ್ರೆಗಳ ನಿರ್ವಹಣೆ

ಸರಿ ಉತ್ತರ

(3) ಎಲ್ಲ ಮಕ್ಕಳೂ ಪ್ರಾಥಮಿಕ ಶಾಲೆಗೆ ಭರ್ತಿಯಾಗುವಂತೆ ಖಚಿತಪಡಿಸಿಕೊಳ್ಳುವುದು


65.1993ರ ಕಾಯಿದೆಯ ಯಾವ ಪರಿಚ್ಛೇದದ ಕೆಳಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಧಿಕಾರ ಹಾಗೂ ಕರ್ತವ್ಯಗಳನ್ನು ಕುರಿತು ಚರ್ಚಿಸಲಾಗಿದೆ?
 (1) 61ಬಿ
 (2)63
 (3)68
 (4)62

ಸರಿ ಉತ್ತರ

(4) 62


66.ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಗೈರು ಹಾಜರಿಯಲ್ಲಿ ಅಧ್ಯಕ್ಷರ ಅಧಿಕಾರಗಳನ್ನು ಯಾರು ನಿರ್ವಹಿಸುತ್ತಾರೆ?
 (1) ಪಂಚಾಯತ್ ಅಭಿವೃದ್ಧಿ ಅಧಿಕಾರಿ
 (2)ಕಾರ್ಯದರ್ಶಿ
 (3)ಉಪಾಧ್ಯಕ್ಷ
 (4)ತಾಲ್ಲೂಕು ಪಂಚಾಯಿತಿ ಅಧ್ಯಕ್ಷ

ಸರಿ ಉತ್ತರ

(3) ಉಪಾಧ್ಯಕ್ಷ


67.ಗ್ರಾಮ ಪಂಚಾಯತ್ ಸಭೆಗಳನ್ನು ಸೇರಿಸುವ ಅಧಿಕಾರ ಯಾರಲ್ಲಿ ಇರುತ್ತದೆ?
 (1) ಪಂಚಾಯತ್ ಅಭಿವೃದ್ಧಿ ಅಧಿಕಾರಿ
 (2)ಅಧ್ಯಕ್ಷ
 (3)ತಹಸೀಲ್ದಾರ್
 (4)ಕಾರ್ಯದರ್ಶಿ

ಸರಿ ಉತ್ತರ

(2) ಅಧ್ಯಕ್ಷ


68.ಈ ಕೆಳಗಿನ ಪರಿಚ್ಛೇದದ ಅನ್ವಯ ಗ್ರಾಮ ಪಂಚಾಯಿತಿಯು ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಸಮಿತಿಗಳನ್ನು ರಚಿಸಬಹುದು.
 (1) 61
 (2)61ಬಿ
 (3)61ಎ
 (4)59

ಸರಿ ಉತ್ತರ

(3) 61ಎ


69.ಈ ಕೆಳಗಿನವರಲ್ಲಿ ಯಾರು ಗ್ರಾಮ ಪಂಚಾಯಿತಿಯ ಸಾಮಾಜಿಕ ನ್ಯಾಯ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ?
 (1) ಅಧ್ಯಕ್ಷ
 (2)ಪಂಚಾಯತ್ ಅಭಿವೃದ್ಧಿ ಅಧಿಕಾರಿ
 (3)ಉಪಾಧ್ಯಕ್ಷ
 (4)ಯಾವುದೇ ನಾಮನಿರ್ದೇಶಿತ ವ್ಯಕ್ತಿ

ಸರಿ ಉತ್ತರ

(3) ಉಪಾಧ್ಯಕ್ಷ


70.ಮಹಿಳೆಯರು ಮತ್ತು ಮಕ್ಕಳ ಕಲ್ಯಾಣವು ಈ ಕೆಳಗಿನ ಸಮಿತಿಯ ಕೆಲಸವಾಗಿರುತ್ತದೆ.
 (1) ಉತ್ಪಾದನಾ ಸಮಿತಿ
 (2)ಸಾಮಾಜಿಕ ನ್ಯಾಯ ಸಮಿತಿ
 (3)ಸೌಕರ್ಯ ಸಮಿತಿ
 (4)ಪೌರ ಸಮಿತಿ (ಸಿವಿಕ್ಸ್ ಸಮಿತಿ)

ಸರಿ ಉತ್ತರ

(2) ಸಾಮಾಜಿಕ ನ್ಯಾಯ ಸಮಿತಿ


71.ಈ ಕೆಳಗಿನ ತಿಂಗಳುಗಳ ನಡುವೆ ಜಮಾಬಂಧಿ ಸಭೆಗಳನ್ನು ನಡೆಸಬೇಕು.
 (1) ಜನವರಿ ಮತ್ತು ಫೆಬ್ರವರಿ
 (2)ಮಾರ್ಚ್ ಮತ್ತು ಏಪ್ರಿಲ್
 (3)ಮೇ ಮತ್ತು ಜೂನ್
 (4)ಆಗಸ್ಟ್ ಮತ್ತು ಸೆಪ್ಟೆಂಬರ್

ಸರಿ ಉತ್ತರ

(4) ಆಗಸ್ಟ್ ಮತ್ತು ಸೆಪ್ಟೆಂಬರ್


72.ಇತರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಬೇಕಾದರೆ, ಗ್ರಾಮ ಪಂಚಾಯಿತಿಯು ಈ ಕೆಳಗಿನವರಿಂದ ಮೊದಲೇ ಅನುಮೋದನೆ ಪಡೆದುಕೊಳ್ಳಬೇಕು.
 (1) ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ
 (2)ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
 (3)ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರು
 (4)ಗ್ರಾಮ ಪಂಚಾಯಿತಿಯ ಅಧ್ಯಕ್ಷರು

ಸರಿ ಉತ್ತರ

(2) ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ


73. 2011-12ರ ಅವಧಿಯಲ್ಲಿ ಗ್ರಾಮ ಪಂಚಾಯಿತಿಗಳು ರಾಜ್ಯ ಸರ್ಕಾರದಿಂದ ಈ ಕೆಳಗಿನಷ್ಟು ವಾರ್ಷಿಕ ಶಾಸನಬದ್ಧ ಅನುದಾನವನ್ನು ಪಡೆಯುತ್ತಿದ್ದವು.
 (1) ಆರು ಲಕ್ಷ
 (2)ಎಂಟು ಲಕ್ಷ
 (3)ಒಂಬತ್ತು ಲಕ್ಷ
 (4)ಐದು ಲಕ್ಷ

ಸರಿ ಉತ್ತರ

(2) ಎಂಟು ಲಕ್ಷ


74.ತಾಲ್ಲೂಕು ಪಂಚಾಯಿತಿಯ ಆಡಳಿತ ಮುಖ್ಯಸ್ಥರನ್ನು ಹೀಗೆ ಕರೆಯುತ್ತಾರೆ.
 (1) ಅಧ್ಯಕ್ಷ
 (2)ಸಹಾಯಕ ಆಯುಕ್ತರು
 (3)ಕಾರ್ಯನಿರ್ವಾಹಕ ಅಧಿಕಾರಿ
 (4)ಆಡಳಿತಾಧಿಕಾರಿ

ಸರಿ ಉತ್ತರ

(3) ಕಾರ್ಯನಿರ್ವಾಹಕ ಅಧಿಕಾರಿ


75.ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರ ಅಧಿಕಾರಾವಧಿಯು
 (1) 60 ತಿಂಗಳು
 (2)20 ತಿಂಗಳು
 (3)30 ತಿಂಗಳು
 (4)40 ತಿಂಗಳು

ಸರಿ ಉತ್ತರ

(2) 20 ತಿಂಗಳು


76.ಒಬ್ಬ ತಾಲ್ಲೂಕು ಪಂಚಾಯತ್ ಸದಸ್ಯರು ಕೆಳಕಂಡ ಜನಸಂಖ್ಯೆಯನ್ನು ಪ್ರತಿನಿಧಿಸುತ್ತಾರೆ.
 (1) 12,000
 (2)10,000
 (3)15,000
 (4)18,000

ಸರಿ ಉತ್ತರ

(2) 10,000


77.ಸಂಬಂಧಿಸಿದ ತಾಲೂಕಿನ ಜನಸಂಖ್ಯೆಯು ಈ ಕೆಳಕಂಡದ್ದಕ್ಕಿಂತ ಹೆಚ್ಚಾಗಿರದಿದ್ದಲ್ಲಿ ಅದು ಕನಿಷ್ಠ 11 ಸದಸ್ಯರನ್ನು ಹೊಂದಿರಬೇಕು.
 (1) ಎರಡು ಲಕ್ಷ ಜನಸಂಖ್ಯೆ
 (2)ಮೂರು ಲಕ್ಷ ಜನಸಂಖ್ಯೆ
 (3)ನಾಲ್ಕು ಲಕ್ಷ ಜನಸಂಖ್ಯೆ
 (4)ಒಂದು ಲಕ್ಷ ಜನಸಂಖ್ಯೆ

ಸರಿ ಉತ್ತರ

(4) ಒಂದು ಲಕ್ಷ ಜನಸಂಖ್ಯೆ


78.ತನ್ನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡುವುದಕ್ಕಾಗಿ ತಾಲ್ಲೂಕು ಪಂಚಾಯಿತಿಯು ಕರೆದ ಮೊದಲ ಸಭೆಯ ಅಧ್ಯಕ್ಷತೆಯನ್ನು ಕೆಳಕಂಡವರು ವಹಿಸಬೇಕು.
 (1) ಜಿಲ್ಲಾಧಿಕಾರಿ
 (2)ಸಹಾಯಕ ಆಯುಕ್ತರು
 (3)ಕಾರ್ಯ ನಿರ್ವಾಹಕ ಅಧಿಕಾರಿ
 (4)ತಹಸೀಲ್ದಾರ್

ಸರಿ ಉತ್ತರ

(2) ಸಹಾಯಕ ಆಯುಕ್ತರು


79.1993ರ ಕಾಯಿದೆಯ 78ನೇ ಪರಿಚ್ಛೇದವು ಈ ಕೆಳಗಿನದಕ್ಕೆ ಸಂಬಂಧಿಸಿದ ಉಪನಿಯಮಗಳನ್ನು ಮಾಡಿಕೊಳ್ಳಲು ಗ್ರಾಮ ಪಂಚಾಯಿತಿಗೆ ಅಧಿಕಾರ ನೀಡುತ್ತದೆ.
 (1) ರಸ್ತೆಗಳು
 (2)ನೀರಿನ ಸರಬರಾಜು
 (3)ಚರಂಡಿ ವ್ಯವಸ್ಥೆ
 (4)ಶಾಲಾ ಕಟ್ಟಡಗಳು

ಸರಿ ಉತ್ತರ

(2) ನೀರಿನ ಸರಬರಾಜು


80.1993ರ ಕಾಯಿದೆಯ ಯಾವ ಪರಿಚ್ಛೇದದ ಅಡಿಯಲ್ಲಿ ತಾಲ್ಲೂಕು ಪಂಚಾಯಿತಿಯ ಕಾರ್ಯಗಳು ಹಾಗೂ ಸಾಮಾನ್ಯ ಅಧಿಕಾರಗಳ ಬಗ್ಗೆ ಚರ್ಚಿಸಲಾಗಿದೆ?
 (1) 144 ಮತ್ತು 146
 (2)145 ಮತ್ತು 147
 (3)143 ಮತ್ತು 144
 (4)146 ಮತ್ತು 148

ಸರಿ ಉತ್ತರ

(2) 145 ಮತ್ತು 147


81.ಈ ಕೆಳಗೆ ತಿಳಿಸಿದಷ್ಟು ಹಣಕ್ಕೆ ಮಂಜೂರಾತಿ ನೀಡುವ ಅಧಿಕಾರವನ್ನು ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರು ಹೊಂದಿರುತ್ತಾರೆ.
 (1) 50,000ರೂ. ವರೆಗೆ
 (2)25,000ರೂ. ವರೆಗೆ
 (3)35,000ರೂ. ವರೆಗೆ
 (4)20,000ರೂ. ವರೆಗೆ

ಸರಿ ಉತ್ತರ

(2) 25,000ರೂ. ವರೆಗೆ


82.ತಾಲ್ಲೂಕು ಪಂಚಾಯಿತಿಯ ಪರವಾಗಿ ಕರಾರು ಮತ್ತು ಒಪ್ಪಂದವನ್ನು ಯಾರು ನಿರ್ವಹಿಸುತ್ತಾರೆ?
 (1) ಕಾರ್ಯನಿರ್ವಾಹಕ ಅಧಿಕಾರಿ
 (2)ಅಧ್ಯಕ್ಷರು
 (3)ಉಪಾಧ್ಯಕ್ಷರು
 (4)ಇತರ ಯಾವುದೇ ಸದಸ್ಯರು

ಸರಿ ಉತ್ತರ

(1) ಕಾರ್ಯನಿರ್ವಾಹಕ ಅಧಿಕಾರಿ


83.ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿಯ ಅಧಿಕಾರವು (1993ರ ಕಾಯಿದೆಯ 155ನೇ ಪರಿಚ್ಛೇದದ ಪ್ರಕಾರ) ಈ ಕೆಳಕಂಡವರ ದರ್ಜೆಗೆ ಸಮಾನವಾಗಿರುತ್ತಾರೆ.
 (1) ಕಾರ್ಯನಿರ್ವಾಹಕ ಎಂಜಿನಿಯರ್
 (2)ಪಶು ಸಂಗೋಪನಾ ವೈದ್ಯರು
 (3)ಸಹಾಯಕ ಆಯುಕ್ತರು
 (4)ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್

ಸರಿ ಉತ್ತರ

(3) ಸಹಾಯಕ ಆಯುಕ್ತರು


84.ಈ ಕೆಳಗಿನವರಲ್ಲಿ ಯಾರು ಜಿಲ್ಲಾ ಪಂಚಾಯತ್ ಗಳ ಸದಸ್ಯರಲ್ಲ?
 (1) ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷರು
 (2)ವಿಧಾನಸಭಾ ಸದಸ್ಯರು
 (3)ಸಂಸತ್ ಸದಸ್ಯರು
 (4)ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳು

ಸರಿ ಉತ್ತರ

(4) ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳು


85.ಜಿಲ್ಲಾ ಪಂಚಾಯಿತಿಯ ಸದಸ್ಯರು, ಈ ಕೆಳಕಂಡವರಿಗೆ ತಮ್ಮ ಹಸ್ತಾಕ್ಷರದಲ್ಲಿ ಬರೆದುಕೊಡುವ ಮೂಲಕ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಬಹುದು.
 (1) ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ
 (2)ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷರಿಗೆ
 (3)ಜಿಲ್ಲಾಧಿಕಾರಿಯವರಿಗೆ
 (4)ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರಿಗೆ

ಸರಿ ಉತ್ತರ

(4) ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರಿಗೆ


86.ಅಧ್ಯಕ್ಷರಲ್ಲಿ ವಿಶ್ವಾಸವಿಲ್ಲದಿರುವುದನ್ನು ವ್ಯಕ್ತಪಡಿಸುವುದಕ್ಕಾಗಿ ಕರೆಯಲಾದ ತಾಲ್ಲೂಕು ಪಂಚಾಯತ್ ಸಭೆಯ ಅಧ್ಯಕ್ಷತೆಯನ್ನು ಯಾರು ನಿರ್ವಹಿಸುತ್ತಾರೆ?
 (1) ಸಹಾಯಕ ಆಯುಕ್ತರು
 (2)ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ
 (3)ಅಧ್ಯಕ್ಷರು
 (4)ಉಪಾಧ್ಯಕ್ಷರು

ಸರಿ ಉತ್ತರ

(4) ಉಪಾಧ್ಯಕ್ಷರು


87.ಸದಸ್ಯರಿಗೆ ಸೂಚನೆ ನೀಡಿದ ದಿನಾಂಕ ಮತ್ತು ಜಿಲ್ಲಾ ಪಂಚಾಯಿತಿಯು ಸಾಮಾನ್ಯ ಸಭೆಗಾಗಿ ಕರೆದ ದಿನಾಂಕದ ನಡುವಿನ ಕಾಲದ ಅಂತರವು ಎಷ್ಟಿರಬೇಕು?
 (1) ಸೂಚನೆ ನೀಡಿದ ದಿನಾಂಕದಿಂದ ನಿಖರವಾಗಿ ಏಳು ದಿನಗಳು
 (2)ಸೂಚನೆ ನೀಡಿದ ದಿನಾಂಕದಿಂದ ನಿಖರವಾಗಿ ಹತ್ತು ದಿನಗಳು
 (3)ಸೂಚನೆ ನೀಡಿದ ದಿನಾಂಕದಿಂದ ನಿಖರವಾಗಿ ಐದು ದಿನಗಳು
 (4)ಸೂಚನೆ ನೀಡಿದ ದಿನಾಂಕದಿಂದ ನಿಖರವಾಗಿ ಹನ್ನೊೊಂದು ದಿನಗಳು

ಸರಿ ಉತ್ತರ

(2) ಸೂಚನೆ ನೀಡಿದ ದಿನಾಂಕದಿಂದ ನಿಖರವಾಗಿ ಹತ್ತು ದಿನಗಳು


88.ಒಂದು ಪ್ರಶ್ನೆಗೆ ಸಂಬಂಧಿಸಿದಂತೆ ಸಮಾನ ಮತಗಳು ಬಂದಾಗ ಜಿಲ್ಲಾ ಪಂಚಾಯತ್ ಸಭೆಗಳಲ್ಲಿ ಯಾವ ವಿಧಾನವನ್ನು ಅನುಸರಿಸಲಾಗುತ್ತದೆ?
 (1) ಬಹುಮತದ ಅನುಮೋದನೆ (Vote by Majority)
 (2)ಚೀಟಿ ಎತ್ತುವ ಮೂಲಕ
 (3)ಒಟ್ಟು ಅಭಿಪ್ರಾಯದ ಮೂಲಕ
 (4)ಅಧ್ಯಕ್ಷತೆ ವಹಿಸಿದ ಸದಸ್ಯರ ಮತದಾನದ ಮೂಲಕ

ಸರಿ ಉತ್ತರ

(4) ಅಧ್ಯಕ್ಷತೆ ವಹಿಸಿದ ಸದಸ್ಯರ ಮತದಾನದ ಮೂಲಕ


89.1993ರ ಕಾಯಿದೆಯ IIIನೇ ಅನುಸೂಚಿಯು ಈ ಕೆಳಗಿನದಕ್ಕೆ ಸಂಬಂಧಿಸಿದ ಕಾರ್ಯಗಳನ್ನು ನಿರ್ದಿಷ್ಟ ಪಡಿಸುತ್ತದೆ.
 (1) ತಾಲ್ಲೂಕು ಪಂಚಾಯತ್
 (2)ಗ್ರಾಮ ಪಂಚಾಯತ್
 (3)ಸಂಕ್ರಮಣ ಪಂಚಾಯತ್ ಗಳು (Transition Panchayats)
 (4)ಜಿಲ್ಲಾ ಪಂಚಾಯತ್

ಸರಿ ಉತ್ತರ

(4) ಜಿಲ್ಲಾ ಪಂಚಾಯತ್


90.ಜಿಲ್ಲಾ ಪಂಚಾಯತ್ ಅಧ್ಯಕ್ಷರ ಪದನಾಮವು ಹೀಗಿರುತ್ತದೆ.
 (1) ಆಡಳಿತಗಾರರು
 (2)ಆಯುಕ್ತರು
 (3)ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
 (4)ಕಾರ್ಯ ನಿರ್ವಾಹಕ ಮುಖ್ಯಸ್ಥರು

ಸರಿ ಉತ್ತರ

(4) ಕಾರ್ಯ ನಿರ್ವಾಹಕ ಮುಖ್ಯಸ್ಥರು


91.ಈ ಕೆಳಗೆ ತಿಳಿಸಿದವರ ದರ್ಜೆಗೆ ಕಡಿಮೆ ಇಲ್ಲದಂಥ ಅಧಿಕಾರಿಯನ್ನು ಸರ್ಕಾರವು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ನೇಮಕ ಮಾಡುತ್ತದೆ.
 (1) ಜಿಲ್ಲಾ ಆರೋಗ್ಯಾಧಿಕಾರಿ
 (2)ಕಾರ್ಯನಿರ್ವಾಹಕ ಎಂಜಿನಿಯರ್
 (3)ಜಿಲ್ಲಾಧಿಕಾರಿ
 (4)ಜಿಲ್ಲಾ ಸಾಂಖ್ಯಿಕ ಅಧಿಕಾರಿ

ಸರಿ ಉತ್ತರ

(3) ಜಿಲ್ಲಾಧಿಕಾರಿ


92. ಜಿಲ್ಲಾ ಪಂಚಾಯಿತಿಯ ಯೋಜನಾ ಭಾಗಕ್ಕೆ ಯಾರು ಮುಖ್ಯಸ್ಥರಾಗಿರುತ್ತಾರೆ?
 (1) ಮುಖ್ಯ ಯೋಜನಾ ಅಧಿಕಾರಿ
 (2)ಪರಿಯೋಜನಾ ನಿರ್ದೇಶಕರು
 (3)ಮುಖ್ಯ ಲೆಕ್ಕಪತ್ರಾಧಿಕಾರಿ
 (4)ಉಪಕಾರ್ಯದರ್ಶಿ (ಅಭಿವೃದ್ಧಿ)

ಸರಿ ಉತ್ತರ

(1) ಮುಖ್ಯ ಯೋಜನಾ ಅಧಿಕಾರಿ


93.ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನವು ಖಾಲಿಯಾದ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಯಾರು ಕಾರ್ಯನಿರ್ವಹಿಸುತ್ತಾರೆ?
 (1) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು
 (2)ಸಾಮಾಜಿಕ ನ್ಯಾಯ ಕುರಿತ ಸ್ಥಾಯಿ ಸಮಿತಿಯ ಅಧ್ಯಕ್ಷರು
 (3)ಕೃಷಿ ಮತ್ತು ಕೈಗಾರಿಕೆಗಳನ್ನು ಕುರಿತ ಸ್ಥಾಯಿ ಸಮಿತಿಯ ಅಧ್ಯಕ್ಷರು
 (4)ಜಿಲ್ಲಾಧಿಕಾರಿಯವರು

ಸರಿ ಉತ್ತರ

(2) ಸಾಮಾಜಿಕ ನ್ಯಾಯ ಕುರಿತ ಸ್ಥಾಯಿ ಸಮಿತಿಯ ಅಧ್ಯಕ್ಷರು


94.1993ರ ಕಾಯಿದೆಯ 232ನೇ ಪರಿಚ್ಛೇದವು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗೆ ಕೆಳಕಂಡ ಅಧಿಕಾರವನ್ನು ನೀಡುತ್ತದೆ.
 (1) ಗ್ರಾಮಸಭೆಯ ಸಭೆಗಳನ್ನು ನಡೆಸುವುದು
 (2)ಗ್ರಾಮ ಪಂಚಾಯತ್ ಸಭೆಗಳನ್ನು ನಡೆಸುವುದು
 (3)ಗ್ರಾಮ ಪಂಚಾಯಿತಿಗಳ ಕಛೇರಿಗಳು ಅಥವಾ ಆವರಣಗಳ ಪರಿವೀಕ್ಷಣೆ ಮಾಡುವುದು
 (4)ಜಿಲ್ಲಾ ಪಂಚಾಯತ್ ಕಛೇರಿಗಳ ಪರಿವೀಕ್ಷಣೆ ಮಾಡುವುದು

ಸರಿ ಉತ್ತರ

(3) ಗ್ರಾಮ ಪಂಚಾಯಿತಿಗಳ ಕಛೇರಿಗಳು ಅಥವಾ ಆವರಣಗಳ ಪರಿವೀಕ್ಷಣೆ ಮಾಡುವುದು


95.ಜಿಲ್ಲಾ ಯೋಜನಾ ಸಮಿತಿಗೆ ಈ ಕೆಳಗಿನವರು ಅಧ್ಯಕ್ಷರಾಗಿರುತ್ತಾರೆ.
 (1) ಜಿಲ್ಲಾ ಉಸ್ತುವಾರಿ ಸಚಿವರು
 (2)ಉಪ ಸಚಿವರು
 (3)ಸಿಟಿ ಮುನಿಸಿಪಲ್ ಕೌನ್ಸಿಲ್ನ ಅಧ್ಯಕ್ಷರು
 (4)ಜಿಲ್ಲಾ ಪಂಚಾಯತ್ ಅಧ್ಯಕ್ಷರು

ಸರಿ ಉತ್ತರ

(4) ಜಿಲ್ಲಾ ಪಂಚಾಯತ್ ಅಧ್ಯಕ್ಷರು


96.ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ನ ಸಚಿವರು ಈ ಕೆಳಗಿನದರ ಉಪಾಧ್ಯಕ್ಷರೂ ಆಗಿರುತ್ತಾರೆ.
 (1) ರಾಜ್ಯ ಚುನಾವಣಾ ಆಯೋಗ
 (2)ರಾಜ್ಯ ಹಣಕಾಸು ಆಯೋಗ
 (3)ರಾಜ್ಯ ಪಂಚಾಯತ್ ಕೌನ್ಸಿಲ್
 (4)ರಾಜ್ಯ ಅಭಿವೃದ್ಧಿ ಕೌನ್ಸಿಲ್

ಸರಿ ಉತ್ತರ

(3) ರಾಜ್ಯ ಪಂಚಾಯತ್ ಕೌನ್ಸಿಲ್


97.ಜಿಲ್ಲಾ ಯೋಜನಾ ಸಮಿತಿಯಲ್ಲಿ ಚುನಾಯಿತವಾದ ಭಾಗ ಎಷ್ಟಿರುತ್ತದೆ?
 (1) ಒಟ್ಟು ಭಾಗದ ಮೂರನೇ ಒಂದರಷ್ಟು
 (2)ಒಟ್ಟು ಭಾಗದ ಅರ್ಧದಷ್ಟು
 (3)ಒಟ್ಟು ಭಾಗದ ಐದನೇ ನಾಲ್ಕರಷ್ಟು
 (4)ಒಟ್ಟು ಭಾಗದ ಮೂರನೇ ಎರಡರಷ್ಟು

ಸರಿ ಉತ್ತರ

(3) ಒಟ್ಟು ಭಾಗದ ಐದನೇ ನಾಲ್ಕರಷ್ಟು


98.ಈ ಕೆಳಗಿನವರ ಶಿಫಾರಸಿನ ಮೇರೆಗೆ, ಗ್ರಾಮ ಪಂಚಾಯಿತಿಯನ್ನು, ಜಿಲ್ಲಾ ಪಂಚಾಯತ್ ವಿಸರ್ಜಿಸಬಹುದು.
 (1) ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಶಿಫಾರಸು
 (2)ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಶಿಫಾರಸು
 (3)ಗ್ರಾಮ ಪಂಚಾಯಿತಿಯ ಶಿಫಾರಸು
 (4)ತಾಲ್ಲೂಕು ಪಂಚಾಯಿತಿಯ ಶಿಫಾರಸು

ಸರಿ ಉತ್ತರ

(4) ತಾಲ್ಲೂಕು ಪಂಚಾಯಿತಿಯ ಶಿಫಾರಸು


99.ವಿಸರ್ಜಿತವಾದ ಜಿಲ್ಲಾ ಪಂಚಾಯತ್ಅನ್ನು ಕೆಳಕಂಡ ಅವಧಿ ಮುಗಿಯುವುದರೊಳಗಾಗಿ ಪುನರ್ ರಚಿಸಲಾಗುವುದು.
 (1) ಮೂರು ತಿಂಗಳು
 (2)ಆರು ತಿಂಗಳು
 (3)ಏಳು ತಿಂಗಳು
 (4)ಐದು ತಿಂಗಳು

ಸರಿ ಉತ್ತರ

(2) ಆರು ತಿಂಗಳು


100.ಜಿಲ್ಲಾ ಪಂಚಾಯತ್ ನಿಧಿಯಿಂದ ಹಣವನ್ನು ತೆಗೆಯುವ ಹಾಗೂ ವಿತರಿಸುವ ಅಧಿಕಾರವನ್ನು ಯಾರು ಹೊಂದಿರುತ್ತಾರೆ?
 (1) ಅಧ್ಯಕ್ಷರು
 (2)ಮುಖ್ಯ ಲೆಕ್ಕಪತ್ರಾಧಿಕಾರಿ
 (3)ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿಯ ಅಧ್ಯಕ್ಷರು
 (4)ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಸರಿ ಉತ್ತರ

(4) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

Post a Comment

0 Comments

BOTTOM ADS