sdaa question paper -2013 general paper-1

SDAA-2013 Paper-I General Paper Questions with answers


ದಿನಾಂಕ 24.02.2013 ರಂದು ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ದ್ವಿತೀಯ ದರ್ಜೆ ಲೆಕ್ಕ ಸಹಾಯಕ [SDAA] ಸಾಮಾನ್ಯ ಪತ್ರಿಕೆ - ಪತ್ರಿಕೆ-Iರ ಪ್ರಶ್ನೆಗಳನ್ನು ಉತ್ತರದೊಂದಿಗೆ ಇಲ್ಲಿ ನೀಡಲಾಗಿದೆ.

1.ಬಿಹಾರ್ ರಾಜ್ಯದ ಝಾರಿಯಾದಲ್ಲಿ
 (1) ಚಿನ್ನದ ಗಣಿಗಳು ಇವೆ
 (2)ತಾಮ್ರದ ಗಣಿಗಳು ಇವೆ
 (3)ಕಬ್ಬಿಣದ ಅದುರಿನ ಗಣಿಗಳು ಇವೆ
 (4)ಕಲ್ಲಿದ್ದಲ ಗಣಿಗಳು ಇವೆ

ಸರಿ ಉತ್ತರ

(4) ಕಲ್ಲಿದ್ದಲ ಗಣಿಗಳು ಇವೆ


2.ಭಾರತದ ಅತಿ ದೊಡ್ಡ ಅಭ್ರಕ ನಿಕ್ಷೇಪಗಳು ಕೆಳಕಂಡ ರಾಜ್ಯದಲ್ಲಿವೆ.
 (1) ಆಂಧ್ರಪ್ರದೇಶ
 (2)ಕೇರಳ
 (3)ಜಾರ್ಖಂಡ್
 (4)ತಮಿಳುನಾಡು

ಸರಿ ಉತ್ತರ

(3) ಜಾರ್ಖಂಡ್


3.ಕರ್ನಾಟಕದ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಬುಡಕಟ್ಟು ಜನರು
 (1) ಬಿಲ್ಲವರು
 (2)ಸೋಲಿಗರು
 (3)ಹಕ್ಕಿಪಿಕ್ಕಿಗಳು
 (4)ಕಾಡುಕುರುಬರು

ಸರಿ ಉತ್ತರ

(2) ಸೋಲಿಗರು


4.ಭಾರತದಲ್ಲಿ ಭೌಗೋಳಿಕ ಲಕ್ಷಣಗಳಿಗೆ ಸಂಬಂಧಿಸಿದ ಭೂಪಟಗಳನ್ನು ಪ್ರಕಟಿಸುವ ಸಂಸ್ಥೆ
 (1) ಸರ್ವೆ ಆಫ್ ಇಂಡಿಯಾ
 (2)ಭಾರತೀಯ ಪವನಶಾಸ್ತ್ರ ಇಲಾಖೆ
 (3)ರಾಷ್ಟ್ರೀಯ ಅಟ್ಲಾಸ್ ಮತ್ತು ಥಿಮ್ಯಾಟಿಕ್ ಮ್ಯಾಪಿಂಗ್ ಸಂಸ್ಥೆ
 (4)ರಾಷ್ಟ್ರೀಯ ದೂರ ಸಂವೇದಿ ಸಂಸ್ಥೆ

ಸರಿ ಉತ್ತರ

(1) ಸರ್ವೆ ಆಫ್ ಇಂಡಿಯಾ


5.ಇಂದ್ರಾವತಿ ನದಿಯು ಯಾವುದರ ಉಪನದಿಯಾಗಿದೆ ?
 (1) ಗಂಗಾ
 (2)ಮಹಾನದಿ
 (3)ಕೃಷ್ಣಾ
 (4)ಗೋದಾವರಿ

ಸರಿ ಉತ್ತರ

(4) ಗೋದಾವರಿ


6.ಕಾರವಾರದಲ್ಲಿರುವ ಭಾರತೀಯ ನೌಕಾನೆಲೆಯ ಹೆಸರು
 (1) INS ಕುಶಾನ್
 (2)INS ಹರ್ಷವರ್ಧನ
 (3)INS ವಿಕ್ರಮಾದಿತ್ಯ
 (4)INS ಕದಂಬ

ಸರಿ ಉತ್ತರ

(4) INS ಕದಂಬ


7.ಶಿಪ್ ಕಿ ಲಾ ಎನ್ನುವುದು ಕೆಳಕಂಡ ನದೀಕಣಿವೆಯಲ್ಲಿರುವ ಒಂದು ಪರ್ವತ ಕಿರುದಾರಿ (Mountain Pass)
 (1) ಚೀನಾಬ್
 (2)ಸಟ್ಲೆಜ್
 (3)ಜೀಲಂ
 (4)ಬಿಯಾಸ್

ಸರಿ ಉತ್ತರ

(2) ಸಟ್ಲೆಜ್


8.ವಿಕ್ಟೋರಿಯಾ ಮೆಮೋರಿಯಲ್ ಎಲ್ಲಿದೆ ?
 (1) ಬೆಂಗಳೂರು
 (2)ಕೋಲ್ಕೊತ್ತಾ
 (3)ಮುಂಬೈ
 (4)ನವದೆಹಲಿ

ಸರಿ ಉತ್ತರ

(2) ಕೋಲ್ಕೊತ್ತಾ


9.ಭಾರತದ ಏಕೈಕ ಕತ್ತೆಗಳ ಧಾಮವು ಎಲ್ಲಿದೆ ?
 (1) ರಾಜಸ್ಥಾನ
 (2)ಬಿಹಾರ್
 (3)ಮಧ್ಯಪ್ರದೇಶ್
 (4)ಗುಜರಾತ್

ಸರಿ ಉತ್ತರ

(4) ಗುಜರಾತ್


10.ರಾಣಿ ಝಾನ್ಸಿ ಕಡಲ ರಾಷ್ಟ್ರೀಯ ಉದ್ಯಾನವು ಎಲ್ಲಿದೆ ?
 (1) ತಮಿಳುನಾಡು
 (2)ಅಂಡಮಾನ್ ಮತ್ತು ನಿಕೋಬಾರ್
 (3)ಗುಜರಾತ್
 (4) ಒಡಿಶಾ

ಸರಿ ಉತ್ತರ

(2) ಅಂಡಮಾನ್ ಮತ್ತು ನಿಕೋಬಾರ್


11.ರಾಜಸ್ಥಾನದಲ್ಲಿ ನಡೆಯುವ ಒಂಟೆ ವ್ಯಾಪಾರದ ವಾರ್ಷಿಕ ಜಾತ್ರೆ
 (1) ಕುಂಭ ಮೇಳ
 (2)ಸೂರಜ್ ಕುಂಡ್ ಮೇಳ
 (3)ಪುಷ್ಕರ ಮೇಳ
 (4)ಕೃಷಿ ಮೇಳ

ಸರಿ ಉತ್ತರ

(3) ಪುಷ್ಕರ ಮೇಳ


12.ನಿರ್ವಹಣೆಯಾಗದ ಸ್ವತ್ತು (NPA) ಎಂಬುದು ಏನನ್ನು ಸೂಚಿಸುತ್ತದೆ ?
 (1) ಎರವಲು ಪಡೆದವರು ನಿಗದಿಪಡಿಸಿದ ಅವಧಿಯೊಳಗಾಗಿ ಬಡ್ಡಿ ಹಾಗೂ ಕಂತುಗಳ ಮರುಪಾವತಿ ಮಾಡದಿರುವಂಥ ಬ್ಯಾಂಕಿನ ಸಾಲ
 (2)ಯಾವುದೇ ಆದಾಯವನ್ನು ದೊರಕಿಸದಿರುವಂತಹ ಭೂಮಿ ಮತ್ತು ಕಟ್ಟಡ ಮೊದಲಾದ ಅಚರ ಸ್ವತ್ತು
 (3)ಕಡಿಮೆ ಆದಾಯವನ್ನು ದೊರಕಿಸುವಂಥ ಬ್ಯಾಂಕಿನ ಸ್ವತ್ತು
 (4) ಆರ್.ಬಿ.ಐ ನಿರ್ದೇಶನದ ಪ್ರಕಾರ ಆದ್ಯತಾ ನೀಡಿಕೆ

ಸರಿ ಉತ್ತರ

(1) ಎರವಲು ಪಡೆದವರು ನಿಗದಿಪಡಿಸಿದ ಅವಧಿಯೊಳಗಾಗಿ ಬಡ್ಡಿ ಹಾಗೂ ಕಂತುಗಳ ಮರುಪಾವತಿ ಮಾಡದಿರುವಂಥ ಬ್ಯಾಂಕಿನ ಸಾಲ


13.____________ ಎನ್ನುವುದು ಬ್ಯಾಂಕುಗಳು ತಮ್ಮ ಅಲ್ಪಾವಧಿ ಲಿಕ್ವಿಡಿಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಸ್ವಲ್ಪಕಾಲ ಇರಿಸುವಂಥ ದರ.
 (1) ರಿಪೊ ದರ
 (2)ವಿಪರ್ಯಯ ರಿಪೊ ದರ
 (3)ಪ್ರೈಮ್ ಲೆಂಡಿಂಗ್ ದರ
 (4)ಠೇವಣಿ ಬಡ್ಡಿ

ಸರಿ ಉತ್ತರ

(2) ವಿಪರ್ಯಯ ರಿಪೊ ದರ


14.ಹಣದುಬ್ಬರ ಎನ್ನುವುದು
 (1) ಕೆಲವೇ ಕೆಲವು ಸರಕುಗಳನ್ನು ಅತಿಯಾದ ಹಣವು ಬೆನ್ನಟ್ಟುತ್ತಿರುವಂಥ ಸ್ಥಿತಿ.
 (2)ಹಣದ ಮೌಲ್ಯವು ಹೆಚ್ಚಾಗುತ್ತಿರುವ ಸ್ಥಿತಿ.
 (3)ಸರಬರಾಜಾಗುತ್ತಿರುವ ಸರಕುಗಳು ಮತ್ತು ಸೇವೆಗಳ ಪ್ರಮಾಣಕ್ಕಿಂತ ಬೇಡಿಕೆಯು ಕಡಿಮೆಯಾಗಿರುವ ಸ್ಥಿತಿ.
 (4)ಬೇಡಿಕೆಗಿಂತ ಹಣದ ಸರಬರಾಜಿನ ಪ್ರಮಾಣವು ಕಡಿಮೆಯಾಗಿರುವ ಸ್ಥಿತಿ

ಸರಿ ಉತ್ತರ

(1) ಕೆಲವೇ ಕೆಲವು ಸರಕುಗಳನ್ನು ಅತಿಯಾದ ಹಣವು ಬೆನ್ನಟ್ಟುತ್ತಿರುವಂಥ ಸ್ಥಿತಿ.


15.ಭಾರತದ ರೈತರಿಗೆ ಅಗತ್ಯವಾಗಿರುವ ಅಲ್ಪಾವಧಿ ಸಾಲದ ಅವಧಿಯು ಕೇವಲ
 (1) ಆರು ತಿಂಗಳು
 (2)15 ತಿಂಗಳು
 (3)3 ತಿಂಗಳು
 (4)3 ವರ್ಷಗಳು

ಸರಿ ಉತ್ತರ

(2) 15 ತಿಂಗಳು


16.ಭಾರತದ ರಿಸರ್ವ್ ಬ್ಯಾಂಕು ರಾಷ್ಟ್ರೀಕರಣಗೊಂಡ ವರ್ಷ
 (1) 1969
 (2)1935
 (3)1955
 (4)1949

ಸರಿ ಉತ್ತರ

(4) 1949


17.ಭಾರತದ ಪೂರ್ವದತ್ತ ನೋಡಿ ನೀತಿಯನ್ನು (Look East Policy) ಜನಪ್ರಿಯಗೊಳಿಸಿದ ಪ್ರಧಾನಮಂತ್ರಿ
 (1) ಇಂದಿರಾ ಗಾಂಧಿ
 (2)ನರಸಿಂಹರಾವ್
 (3)ವಿ.ಪಿ. ಸಿಂಗ್
 (4)ಜವಾಹರಲಾಲ್ ನೆಹರೂ

ಸರಿ ಉತ್ತರ

(2) ನರಸಿಂಹರಾವ್


18.‘ಸಂಪೂರ್ಣ ಕ್ರಾಂತಿ’ ಯ ಪರಿಕಲ್ಪನೆಯನ್ನು ಪ್ರತಿಪಾದಿಸಿದವರು :
 (1) ಜಯಪ್ರಕಾಶ್ ನಾರಾಯಣ್
 (2)ರಾಜ್ ನಾರಾಯಣ್
 (3)ಎಂ.ಎನ್.ರಾಯ್
 (4)ಮಹಾತ್ಮ ಗಾಂಧಿ

ಸರಿ ಉತ್ತರ

(1) ಜಯಪ್ರಕಾಶ್ ನಾರಾಯಣ್


19.ಬ್ರಿಟಿಷ್ ಸಂಸದೀಯ ವ್ಯವಸ್ಥೆಯನ್ನು ಈ ಕೆಳಗಿನಂತೆಯೂ ಉಲ್ಲೇಖಿಸುತ್ತಾರೆ :
 (1) ದಿ ವೆಸ್ಟ್ ಮಿನ್ ಸ್ಟರ್ ಮಾಡೆಲ್
 (2)ದಿ ಕಲೆಜಿಯೇಟ್ ಮಾಡೆಲ್
 (3)ದಿ ಬಂಡೆಸ್ಟ್ಯಾಗ್ ಮಾಡೆಲ್
 (4)ದಿ ಲಂಡನ್ ಮಾಡೆಲ್

ಸರಿ ಉತ್ತರ

(1) ದಿ ವೆಸ್ಟ್ ಮಿನ್ ಸ್ಟರ್ ಮಾಡೆಲ್


20.ಭಾರತದಲ್ಲಿ ನ್ಯಾಯಿಕ ಪುನರಾವಲೋಕನದ ಅಧಿಕಾರವನ್ನು
 (1) ಉನ್ನತ ನ್ಯಾಯಾಲಯಗಳು ಮಾತ್ರ ಅನುಭವಿಸುತ್ತವೆ.
 (2)ಸರ್ವೋನ್ನತ ನ್ಯಾಯಾಲಯವು ಮಾತ್ರ ಅನುಭವಿಸುತ್ತವೆ.
 (3)ಸರ್ವೋನ್ನತ ನ್ಯಾಯಾಲಯ ಹಾಗೂ ಉನ್ನತ ನ್ಯಾಯಾಲಯಗಳು ಅನುಭವಿಸುತ್ತವೆ.
 (4)ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯಗಳು ಅನುಭವಿಸುತ್ತವೆ.

ಸರಿ ಉತ್ತರ

(3) ಸರ್ವೋನ್ನತ ನ್ಯಾಯಾಲಯ ಹಾಗೂ ಉನ್ನತ ನ್ಯಾಯಾಲಯಗಳು ಅನುಭವಿಸುತ್ತವೆ.


21.ಭಾರತೀಯ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು
 (1) ಸಂವಿಧಾನದ ಭಾಗ II ರಲ್ಲಿ ಅಳವಡಿಸಲಾಗಿದೆ.
 (2)ಸಂವಿಧಾನದ ಭಾಗ IV ರಲ್ಲಿ ಅಳವಡಿಸಲಾಗಿದೆ.
 (3)ಸಂವಿಧಾನದ ಭಾಗ V ರಲ್ಲಿ ಅಳವಡಿಸಲಾಗಿದೆ.
 (4)ಸಂವಿಧಾನದ ಭಾಗ III ರಲ್ಲಿ ಅಳವಡಿಸಲಾಗಿದೆ.

ಸರಿ ಉತ್ತರ

(4) ಸಂವಿಧಾನದ ಭಾಗ III ರಲ್ಲಿ ಅಳವಡಿಸಲಾಗಿದೆ.


22.ಈಗ ಹೆಚ್ಚು ಹೆಚ್ಚಾಗಿ ಕೇಳಿ ಬರುತ್ತಿರುವ ‘ಕಾಂಡಕೋಶ’ ಗಳಿಗೆ (Stem Cells) ಸಂಬಂಧಿಸಿದಂತೆ ಈ ಕೆಳಗಿನ ಯಾವ ವಿವರಣೆಯು/ಗಳು ಸರಿಯಾಗಿವೆ ?
 I.ಕಾಂಡಕೋಶಗಳನ್ನು ಸಸ್ತನಿಗಳಿಂದ ಮಾತ್ರ ಪಡೆದುಕೊಳ್ಳಬಹುದು.
 II.ಕಾಂಡಕೋಶಗಳನ್ನು ಹೊಸ ಔಷಧಗಳ ಪರೀಕ್ಷಣೆಗಾಗಿ ಬಳಸಿಕೊಳ್ಳಬಹುದು.
 III.ಕಾಂಡಕೋಶಗಳನ್ನು ವೈದ್ಯಕೀಯ ಚಿಕಿತ್ಸೆಗಳಿಗೆ ಬಳಸಿಕೊಳ್ಳಬಹುದು.
 ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ಸರಿ ಉತ್ತರವನ್ನು ಆಯ್ಕೆ ಮಾಡಿ.
 (1) I ಮತ್ತು II
 (2)II ಮತ್ತು III
 (3)III ಮಾತ್ರ
 (4)I, II ಮತ್ತು III

ಸರಿ ಉತ್ತರ

(2) II ಮತ್ತು III


23.ಭಾರತದ ವನ್ಯಜೀವಿ ಸಂದರ್ಭದಲ್ಲಿ ಯಾವುದನ್ನು ಫ್ಲೈಯಿಂಗ್ ಫಾಕ್ಸ್ ಎಂದು ಕರೆಯುತ್ತಾರೆ?
 (1) ಬಾವಲಿ
 (2)ಗಿಡುಗ
 (3)ಕೊಕ್ಕರೆ
 (4)ರಣಹದ್ದು

ಸರಿ ಉತ್ತರ

(1) ಬಾವಲಿ


24.1909ರ ಇಂಡಿಯನ್ ಕೌನ್ಸಿಲ್ ಆ್ಯಕ್ಟ್ ಅನ್ನು ಹೀಗೂ ಕರೆಯಲಾಗುತ್ತದೆ.
 (1) ಮಾಂಟೆಗ್ಯೂ-ಚಲ್ಮ್ಸ್ ಫರ್ಡ್
 (2)ಮಹಾರಾಣಿಯ ಉದ್ಘೋಷಣೆ
 (3)ಮಿಂಟೋ-ಮಾರ್ಲೆ ಸುಧಾರಣೆಗಳು
 (4)ಮಾಂಟೆಗ್ಯೂ-ಮಾರ್ಲೆ ಸುಧಾರಣೆಗಳು

ಸರಿ ಉತ್ತರ

(3) ಮಿಂಟೋ-ಮಾರ್ಲೆ ಸುಧಾರಣೆಗಳು


25.ಈ ಕೆಳಕಂಡ ಕೊಕ್ಕರೆಯು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತದೆ.
 (1) Adjutant ಕೊಕ್ಕರೆ
 (2)ಬಿಳಿಕೊಕ್ಕರೆ
 (3)Painted ಕೊಕ್ಕರೆ
 (4)ತೆರೆದ-ಕೊಕ್ಕಿನ ಕೊಕ್ಕರೆ

ಸರಿ ಉತ್ತರ

(1) Adjutant ಕೊಕ್ಕರೆ


26.ಮಾನವ ಶರೀರದ ಈ ಕೆಳಕಂಡ ಎಲುಬುಗಳಲ್ಲಿ ತೋಳಿಗೆ ಸಂಬಂಧಿಸಿದ ಎಲುಬು ಯಾವುದು?
 (1) ರೇಡಿಯಸ್
 (2)ಸ್ಟೆರ್ನಮ್
 (3)ಫೀಮರ್
 (4)ಪಟಿಲ್ಲಾ

ಸರಿ ಉತ್ತರ

(1) ರೇಡಿಯಸ್


27.ಆಲ್ಬರ್ಟ್ ಐನ್ ಸ್ಟೀನನ ಸಾಪೇಕ್ಷತಾ ಸಾರ್ವತ್ರಿಕ ಸಿದ್ಧಾಂತವು ಪ್ರಾಯೋಗಿಕವಾಗಿ ಸರಿ ಎಂದು ಮೊಟ್ಟ ಮೊದಲಿಗೆ ಈ ಕೆಳಕಂಡ ಅಂಶದಿಂದ ರುಜುವಾತುಗೊಂಡಿತು.
 (1) ಸೂರ್ಯಗ್ರಹಣ
 (2)ಚಂದ್ರಗ್ರಹಣ
 (3)ಆಕಾಶನೌಕೆ (Space Shuttle)
 (4)ಸೈಕ್ಲೋಟ್ರಾನ್

ಸರಿ ಉತ್ತರ

(1) ಸೂರ್ಯಗ್ರಹಣ


28.ಭಾರೀ ಗಾತ್ರದ ಸಸ್ಯ
 (1) ಅರಳಿಮರ
 (2)ಆಲದಮರ
 (3)ಹೂಜಿಗಿಡ
 (4)ದೈತ್ಯ ಸೆಕೊಯಿಯಾ

ಸರಿ ಉತ್ತರ

(4) ದೈತ್ಯ ಸೆಕೊಯಿಯಾ


29.ರಾತ್ರಿಯ ಆಕಾಶದಲ್ಲಿ ಕಾಣುವ ಅತ್ಯಂತ ಪ್ರಖರವಾದ ತಾರೆ
 (1) Betelguese
 (2)Procyon
 (3)Sirius
 (4)Vega

ಸರಿ ಉತ್ತರ

(3) Sirius


30.ನೀರನ್ನು ತಂಪುಕಾರಕವಾಗಿ (Coolant) ಬಳಸುವ ಕಾರಣವೇನೆಂದರೆ,
 (1) ಇದು ಅಧಿಕ ವಿಶಿಷ್ಟ ಉಷ್ಣವನ್ನು ಹೊಂದಿದೆ
 (2)ಇದು ಅಧಿಕ ಕುದಿಬಿಂದುವನ್ನು ಹೊಂದಿದೆ
 (3)ಇದು ಘನೀಕರಣ ಬಿಂದುವಿನಿಂದ ಕುದಿಯುವ ಬಿಂದುವಿನವರೆಗೆ ಸಾಕಷ್ಟು ದೀರ್ಘವಾದ ಉಷ್ಣಾಂಶ ವ್ಯಾಪ್ತಿಯನ್ನು ಹೊಂದಿದೆ.
 (4)ಇದು ಹೆಚ್ಚಿನ ಸಾಂದ್ರತೆ ಹೊಂದಿದೆ.

ಸರಿ ಉತ್ತರ

(1) ಇದು ಅಧಿಕ ವಿಶಿಷ್ಟ ಉಷ್ಣವನ್ನು ಹೊಂದಿದೆ


31.ಕೆಳಗಿನ ಯಾವ ಗ್ರಹವು ಅಧಿಕ ಸಂಖ್ಯೆಯ ಸ್ವಾಭಾವಿಕ ಉಪಗ್ರಹಗಳನ್ನು ಅಥವಾ ಚಂದ್ರರನ್ನು ಹೊಂದಿದೆ ?
 (1) ಗುರು
 (2)ಮಂಗಳ
 (3)ಶನಿ
 (4)ಶುಕ್ರ

ಸರಿ ಉತ್ತರ

(1) ಗುರು


32.ಸುಗಂಧ ದ್ರವ್ಯದ ತೆರೆದ ಶೀಶೆಯನ್ನು ಕೊಠಡಿಯ ಒಂದು ಮೂಲೆಯಲ್ಲಿಟ್ಟರೆ ಇದರ ಸುಗಂಧ ಎಲ್ಲಾ ಕಡೆಯೂ ಹಬ್ಬಿರುತ್ತದೆ. ಯಾವ ವಿದ್ಯಮಾನವು ಇದಕ್ಕೆ ಕಾರಣ ?
 (1) ಬಾಷ್ಪೀ ಭವನ
 (2)ವಿಸರಣ
 (3)ಉತ್ಪತನ
 (4)ಕುದಿಯುವಿಕೆ

ಸರಿ ಉತ್ತರ

(1) ಬಾಷ್ಪೀ ಭವನ


33.ವಿಶ್ವ ವ್ಯಾಪಾರ ಸಂಸ್ಥೆಯ ಪ್ರಧಾನ ಕಛೇರಿ ಇರುವ ಸ್ಥಳ
 (1) ಜಿನೀವಾ
 (2)ಮ್ಯಾಡ್ರಿಡ್
 (3)ಲಂಡನ್
 (4)ಪ್ಯಾರಿಸ್

ಸರಿ ಉತ್ತರ

(1) ಜಿನೀವಾ


34.ಹರ್ಷೆಲ್ ಖಗೋಳ ವೀಕ್ಷಣಾಲಯದ ಬೃಹತ್ ಟೆಲಿಸ್ಕೋಪ್ ಹಾಗೂ ಇನ್ ಫ್ರಾರೆಡ್ ಶೋಧಕಾರಕಗಳು ಖಗೋಳದಲ್ಲಿ ಆಮ್ಲಜನಕದ ಅಣುಗಳು ಇರುವುದರ ಬಗ್ಗೆ ಪ್ರಥಮ ದೃಢೀಕೃತ ಮಾಹಿತಿಯನ್ನು ಒದಗಿಸಿದವು. ಈ ಕೆಳಗಿನ ಯಾವ ವರ್ಷದಲ್ಲಿ ಆಮ್ಲಜನಕ ಅನಿಲವನ್ನು ಕಂಡು ಹಿಡಿಯಲಾಯಿತು ?
 (1) 1774
 (2)1974
 (3)1600
 (4)1707

ಸರಿ ಉತ್ತರ

(1) 1774


35.ಈ ಕೆಳಗಿನ ಯಾವ ಅನಿಲಗಳ ಜೋಡಿಯು, ಗಣಿಗಳಲ್ಲಿ ಸಂಭವಿಸುವ ಬಹುತೇಕಣ ಸ್ಫೋಟಗಳಿಗೆ ಕಾರಣವಾಗಿದೆ?
 (1) ಜಲಜನಕ ಮತ್ತು ಆಮ್ಲಜನಕ
 (2)ಆಮ್ಲಜನಕ ಮತ್ತು ಅಸಿಟಲಿನ್
 (3)ಮೀಥೇನ್ ಮತ್ತು ವಾಯು
 (4)ಇಂಗಾಲದ ಡಯಾಕ್ಸೈಡ್ ಮತ್ತು ಮೀಥೇನ್

ಸರಿ ಉತ್ತರ

(3) ಮೀಥೇನ್ ಮತ್ತು ವಾಯು


36.ಒಂದು ಬ್ಯಾರೆಲ್ ಎಣ್ಣೆ ಸುಮಾರು ಎಷ್ಟು ಲೀಟರ್ ಗಳಿಗೆ ಸಮ?
 (1) 131 ಲೀಟರ್ ಗಳು
 (2)159 ಲೀಟರ್ ಗಳು
 (3)257 ಲೀಟರ್ ಗಳು
 (4)321 ಲೀಟರ್ ಗಳು

ಸರಿ ಉತ್ತರ

(2) 159 ಲೀಟರ್ ಗಳು


37.ಸೊಳ್ಳೆಗಳನ್ನು ನಿಯಂತ್ರಿಸುವುದಕ್ಕಾಗಿ ಸಿಹಿ ನೀರಿನ ಕೊಳಗಳು ಮತ್ತು ಬಾವಿಗಳಲ್ಲಿ ಬಿಡುವಂಥ ಜಲಚರ ಯಾವುದು ?
 (1) ಏಡಿ
 (2)ಡಾಗ್ ಫಿಶ್
 (3)ಗಾಂಬೂಸಿಯಾ ಅಫಿನಿಸ್
 (4)ಬಸವನಹುಳು

ಸರಿ ಉತ್ತರ

(3) ಗಾಂಬೂಸಿಯಾ ಅಫಿನಿಸ್


38.ಕಾಳಬೇನೆ (Kala-Azar) ರೋಗದ ರೋಗವಾಹಕ ಯಾವುದು ?
 (1) ನೊಣ
 (2)ಗುಂಗಾಡು (Sand fly)
 (3)ಏಡಿಸ್ ಸೊಳ್ಳೆ
 (4)ಅನಾಫಿಲಿಸ್ ಸೊಳ್ಳೆ

ಸರಿ ಉತ್ತರ

(2) ಗುಂಗಾಡು (Sand fly)


39.ಸಿತಾರ್ ಮತ್ತು ಕೊಳಲಿನಲ್ಲಿ ಅದೇ ಸ್ವರವನ್ನು ನುಡಿಸಿದಾಗಲೂ ಅವುಗಳಿಂದ ಹೊರಡುವ ನಾದದಲ್ಲಿ ಪರಸ್ಪರ ವ್ಯತ್ಯಾಸವನ್ನು ಗುರುತಿಸಬಹುದಾಗಿದೆ. ಇದಕ್ಕೆ ಕಾರಣ
 (1) ಪಿಚ್ ಗಟ್ಟಿಯಾಗಿ ಕೇಳಿಸುವಿಕೆ ಮತ್ತು ಗುಣದಲ್ಲಿರುವ ವ್ಯತ್ಯಾಸ
 (2)ಗಟ್ಟಿಯಾಗಿ ಕೇಳಿಸುವಿಕೆಯಲ್ಲಿರುವ ವ್ಯತ್ಯಾಸ ಮಾತ್ರ
 (3)ಪಿಚ್ ಮತ್ತು ಗಟ್ಟಿಯಾಗಿ ಕೇಳಿಸುವಿಕೆಯಲ್ಲಿರುವ ವ್ಯತ್ಯಾಸ
 (4)ಗುಣದ ವ್ಯತ್ಯಾಸ ಮಾತ್ರ

ಸರಿ ಉತ್ತರ

(4) ಗುಣದ ವ್ಯತ್ಯಾಸ ಮಾತ್ರ


40.ಬೇಸಿಗೆಯ ಕಾಲದಲ್ಲಿ ಭಾರತ ಉಪಖಂಡದಲ್ಲಿರುವ ಅಧಿಕ ಉಷ್ಣಾಂಶ ಮತ್ತು ಕೆಳ ಒತ್ತಡಗಳು ಹಿಂದೂ ಮಹಾಸಾಗರದಿಂದ ಗಾಳಿಯನ್ನು ಸೆಳೆಯುತ್ತವೆ. ಇದರಿಂದ ಈ ಕೆಳಕಂಡ ಮಾರುತಗಳು ಬೀಸಿ ಬರುತ್ತವೆ.
 (1) ಆಗ್ನೇಯ ಮಾನ್ಸೂನ್
 (2)ನೈರುತ್ಯ ಮಾನ್ಸೂನ್
 (3)ವಾಣಿಜ್ಯ ಮಾರುತಗಳು
 (4)ಪಶ್ಚಿಮ ಮಾರುತಗಳು

ಸರಿ ಉತ್ತರ

(2) ನೈರುತ್ಯ ಮಾನ್ಸೂನ್


41.ಸಿಮ್ಲಾ ಒಪ್ಪಂದಕ್ಕೆ ಇವರಿಬ್ಬರ ನಡುವೆ ಸಹಿಯಾಯಿತು.
 (1) ಅಯೂಬ್ ಖಾನ್ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ
 (2)ಇಂದಿರಾ ಗಾಂಧಿ ಮತ್ತು ಜುಲ್ಫೀಕರ್ ಅಲಿ ಭುಟ್ಟೊ
 (3)ಇಂದಿರಾಗಾಂಧಿ ಮತ್ತು ಯಾಹ್ಯಾಖಾನ್
 (4)ಇಂದಿರಾಗಾಂಧಿ ಮತ್ತು ಅಯೂಬ್ ಖಾನ್

ಸರಿ ಉತ್ತರ

(2) ಇಂದಿರಾ ಗಾಂಧಿ ಮತ್ತು ಜುಲ್ಫೀಕರ್ ಅಲಿ ಭುಟ್ಟೊ


42.ಇಲ್ಲಿ ಕೆಳಕಂಡ ಅಂಕಿಗಳ ಸರಣಿಯನ್ನು ಕೊಟ್ಟಿದೆ :
A 0 B 1 1 1 0 C 11 D 1
ಇಲ್ಲಿ ಕೆಲವು ಅಂಕಿಗಳಿಗೆ ಬದಲಾಗಿ A, B, C, D ಎಂಬ ಅಕ್ಷರಗಳನ್ನು ಕೊಡಲಾಗಿದೆ. ಕೆಳಗೆ ಕೊಟ್ಟಿರುವ ಯಾವ ಸರಿಯಾದ ಅಂಕಿಗಳ ಸರಣಿಯು ಈ ಅಕ್ಷರಗಳಿಗೆ ಸಂವಾದಿಯಾಗಿದೆ ?
 (1) 0, 0, 0, 1
 (2)0, 0, 1, 1
 (3)1, 0, 0, 0
 (4)0, 1, 0, 1

ಸರಿ ಉತ್ತರ

(4) 0, 1, 0, 1


43.ಈ ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ಕಾಣೆಯಾಗಿರುವ ಸಂಖ್ಯೆಯನ್ನು ಕಂಡು ಹಿಡಿಯರಿ :
 (1) 10 + 16
 (2)16 + 15
 (3)10 + 15
 (4)10 + 24

ಸರಿ ಉತ್ತರ

(4) 10 + 24


44.ಯಾವುದೋ ಒಂದು ಸಂಕೇತದಲ್ಲಿ, ‘WATER’ ಎಂಬುದಕ್ಕೆ 25, 3, 22, 7, 20 ಎಂಬ ಸಂಕೇತವನ್ನು ಮತ್ತು ‘BRICK’ ಎಂಬುದಕ್ಕೆ 4, 20, 11, 5, 13 ಎಂಬ ಸಂಕೇತವನ್ನು ಕೊಡಲಾಗಿದೆ. ಹೀಗಿದ್ದರೆ, ‘KPSC’ ಎಂಬುದಕ್ಕೆ ಸಂಕೇತವನ್ನು ಕೊಡಿ.
 (1) 23, 18, 24, 5
 (2)13, 18, 21, 5
 (3)13, 19, 21, 5
 (4) 23, 18, 7, 5

ಸರಿ ಉತ್ತರ

(2) 13, 18, 21, 5


45.ಈ ಕೆಳಗಿನ ಯಾವುದು ಆಮ್ಲೀಯ ಸ್ವಭಾವವನ್ನು ಹೊಂದಿದೆ ?
 (1) ನಿಂಬೆರಸ
 (2)ಮಾನವನ ರಕ್ತ
 (3)ಸುಣ್ಣದ ನೀರು
 (4)ಅಂಟಾಸಿಡ್

ಸರಿ ಉತ್ತರ

(1) ನಿಂಬೆರಸ


46.ಈ ಕೆಳಗಿನ ಚೌಕಗಳಲ್ಲಿ ಯಾವುದೋ ಒಂದು ನಿಯಮಾನುಸಾರವಾಗಿ ಸಂಖ್ಯೆಗಳನ್ನು ತುಂಬಲಾಗಿದೆ.
ಪ್ರಶ್ನಾರ್ಥಕ ಚಿಹ್ನೆ ಇರುವ ಚೌಕದಲ್ಲಿ ಅಳವಡಿಸುವಂಥ ಸರಿಯಾದ ಸಂಖ್ಯೆ ಯಾವುದು ?
 (1) 15
 (2)14
 (3)13
 (4)12

ಸರಿ ಉತ್ತರ

(2) 14


47.ಇಲ್ಲಿ ಸಂಖ್ಯೆಗಳ ಒಂದು ಸರಣಿಯನ್ನು ಕೊಡಲಾಗಿದೆ. 2, 5, 16, 64, 326. ಈ ಸರಣಿಯಲ್ಲಿನ ಒಂದು ಸಂಖ್ಯೆ ಮಾತ್ರ ತಪ್ಪಾಗಿದೆ. ಇಲ್ಲಿರಬೇಕಾದ ಸರಿಯಾದ ಸಂಖ್ಯೆ ಯಾವುದು ?
 (1) 6
 (2)17
 (3)65
 (4)327

ಸರಿ ಉತ್ತರ

(3) 65


48.ಸಂಜೆ 4 :10 ಗಂಟೆಯಾಗಿದ್ದಾಗ ಗಡಿಯಾರದ ನಿಮಿಷದ ಮುಳ್ಳು ಮತ್ತು ಗಂಟೆಯ ಮುಳ್ಳುಗಳ ನಡುವೆ ಇರುವ ಕೋನ ಎಷ್ಟು ?
 (1) 60°
 (2)65°
 (3)70°
 (4)`72 (1°)/2`

ಸರಿ ಉತ್ತರ

(2) 65°


49.ಈ ಕೆಳಕಂಡ ಅನುಕ್ರಮಣಿಕೆಯ ಸಾಮಾನ್ಯ ಅನುಪಾತ ಯಾವುದು ? `3/(r^3), 6/(5r), (12r)/(25),( 24r^2)/(125)` _______
 (1) `(2r^2)/(5)`
 (2)`(r^2)/(5)`
 (3)`(2r^3)/(3)`
 (4)`(r)/(5)`

ಸರಿ ಉತ್ತರ

(1) `(2r^2)/(5)`


50.ಚೌಕಾಕಾರದ ಕಾಗದವೊಂದನ್ನು ಅಡ್ಡಡ್ಡವಾಗಿ ಎರಡು ಸಲ ಮಡಿಸಲಾಗಿದೆ. ಅನಂತರ ಉದ್ದುದ್ದವಾಗಿ ಎರಡು ಸಲ ಮಡಿಸಲಾಗಿದೆ. ಹೀಗೆ ಮಡಿಸಿದ ಕಾಗದದ ಮೇಲೆ ಒಂದು ರಂಧ್ರವನ್ನು ಮಾಡಲಾಗಿದೆ. ಮಡಿಸಿದ ಕಾಗದವನ್ನು ಬಿಡಿಸಿದಾಗ ಎಷ್ಟು ರಂಧ್ರಗಳನ್ನು ನೋಡಬಹುದು ?
 (1) 1
 (2)8
 (3)16
 (4)32

ಸರಿ ಉತ್ತರ

(3) 16


51.ಮಾನವ ಹಕ್ಕುಗಳ ಪ್ರಸಿದ್ಧ ಹೋರಾಟಗಾರ್ತಿ ಆಸ್ಮಾ ಜಹಾಂಗೀರ್ ಯಾವ ದೇಶದವರು ?
 (1) ಭಾರತ
 (2)ಪಾಕಿಸ್ತಾನ
 (3)ಬಾಂಗ್ಲಾ ದೇಶ್
 (4)ಮ್ಯಾನ್ಮಾರ್ (ಬರ್ಮಾ)

ಸರಿ ಉತ್ತರ

(2) ಪಾಕಿಸ್ತಾನ


52.ಪ್ರಸ್ತಾಪಿಸಲಾಗಿರುವ ಜೈತಾಪುರ್ ನ್ಯೂಕ್ಲಿಯರ್ ಸ್ಥಾವರವು ಎಲ್ಲಿದೆ ?
 (1) ಮಹಾರಾಷ್ಟ್ರದ ಕೊಂಕಣದಲ್ಲಿರುವ ರತ್ನಗಿರಿ-ಸಿಂಧೂದುರ್ಗ ಜಿಲ್ಲೆಗಳು.
 (2)ಗೋವಾದ ಪಶ್ಚಿಮಘಟ್ಟಗಳ ಬುಡದಲ್ಲಿರುವ ಗುಡ್ಡಗಳು.
 (3)ರಾಜಸ್ಥಾನದ ಬಿಕಾನೇರ್
 (4)ಗುಜರಾತ್ ನ ಆನಂದ್

ಸರಿ ಉತ್ತರ

(1) ಮಹಾರಾಷ್ಟ್ರದ ಕೊಂಕಣದಲ್ಲಿರುವ ರತ್ನಗಿರಿ- ಸಿಂಧೂದುರ್ಗ ಜಿಲ್ಲೆಗಳು.


53.ಈ ಕೆಳಕಂಡ ಕಾರ್ಯಕ್ರಮಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಗೆ (SKDRDP) ಮೇ 2012 ರಲ್ಲಿ ಹಸಿರು ಆಸ್ಕರ್ ಪ್ರಶಸ್ತಿ ನೀಡಲಾಯಿತು.
 (1) ಗ್ರಾಮೀಣ ವಯಸ್ಕರ ಶಿಕ್ಷಣ
 (2)ಗ್ರಾಮೀಣ ಬಡ ಮಹಿಳೆಯರ ತರಬೇತಿ
 (3)ಸಮುದಾಯ ಅಭಿವೃದ್ಧಿಗಾಗಿ, ನವೀಕರಿಸಬಹುದಾದ ಸ್ಥಿರ ಇಂಧನ ಮೂಲಗಳಿಗೆ ಬೆಂಬಲವಾಗಿ ಸಣ್ಣ ಪ್ರಮಾಣದ ಸಾಲ ನೀಡಿಕೆ
 (4)ಗ್ರಾಮೀಣ ಅರಣ್ಯೀಕರಣ ಯೋಜನೆಗಳು

ಸರಿ ಉತ್ತರ

(3) ಸಮುದಾಯ ಅಭಿವೃದ್ಧಿಗಾಗಿ, ನವೀಕರಿಸಬಹುದಾದ ಸ್ಥಿರ ಇಂಧನ ಮೂಲಗಳಿಗೆ ಬೆಂಬಲವಾಗಿ ಸಣ್ಣ ಪ್ರಮಾಣದ ಸಾಲ ನೀಡಿಕೆ


54.‘ಕಿಂಗ್ ಆಫ್ ಕ್ಲೇ ಕೋರ್ಟ್’ ಎಂಬ ಅಡ್ಡ ಹೆಸರು ಪಡೆದಿರುವ ಅಂತರರಾಷ್ಟ್ರೀಯ ಲಾನ್ ಟೆನಿಸ್ ಆಟಗಾರ
 (1) ರೋಜರ್ ಫೆಡರರ್
 (2)ರಫೇಲ್ ನಡಾಲ್
 (3)ನೊವಾಕ್ ಜೊಕೊವಿಕ್
 (4)ಮಹೇಶ್ ಭೂಪತಿ

ಸರಿ ಉತ್ತರ

(2) ರಫೇಲ್ ನಡಾಲ್


55.ಕೂಡುಂಕುಳಂ ಅಣು ವಿದ್ಯುತ್ ಸ್ಥಾವರವು ____________ ರಾಜ್ಯದಲ್ಲಿದೆ ಮತ್ತು ಇದು ಭಾರತ ಹಾಗೂ ____________ ನಡುವಿನ ಸಹಯೋಗ ಕಾರ್ಯಕ್ರಮವಾಗಿದೆ.
 (1) ತಮಿಳುನಾಡು, ರಷ್ಯಾ
 (2)ಕೇರಳ, ರಷ್ಯಾ
 (3)ತಮಿಳುನಾಡು, ಇರಾನ್
 (4)ಕೇರಳ, ಇರಾನ್

ಸರಿ ಉತ್ತರ

(1) ತಮಿಳುನಾಡು, ರಷ್ಯಾ


56.ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನವನ್ನು ಕೆಲವೊಮ್ಮೆ ಹೀಗೂ ಕರೆಯುತ್ತಾರೆ.
 (1) ರೈಸಿನಾ ಹಿಲ್ಸ್
 (2)ಬಂಜಾರಾ ಹಿಲ್ಸ್
 (3)ದಿ ಹ್ಯಾಂಗಿಂಗ್ ಗಾರ್ಡನ್
 (4)ವೈಟ್ ಹೌಸ್

ಸರಿ ಉತ್ತರ

(1) ರೈಸಿನಾ ಹಿಲ್ಸ್


57.ಕರ್ನಾಟಕದ ವಿಧಾನಸಭೆಯು 2012ರ ಜೂನ್ 18 ರಂದು ತನ್ನ ____________ ಮಹೋತ್ಸವವನ್ನು ಆಚರಿಸಿತು.
 (1) ರಜತ ಮಹೋತ್ಸವ
 (2)ಸುವರ್ಣ ಮಹೋತ್ಸವ
 (3)ವಜ್ರ ಮಹೋತ್ಸವ
 (4)ಪ್ಲಾಟಿನಂ ಮಹೋತ್ಸವ

ಸರಿ ಉತ್ತರ

(3) ವಜ್ರ ಮಹೋತ್ಸವ


58.____________ ದೇಶಕ್ಕೆ ಸೇರಿದ ಲಿಯೋನಲ್ ಮೆಸ್ಸಿಯ ಹೆಸರು ____________ ಆಟಕ್ಕೆ ಸಂಬಂಧಿಸಿದೆ.
 (1) ಅರ್ಜೆಂಟೀನಾ, ಸಾಕರ್
 (2)ಬ್ರೆಜಿಲ್, ಸಾಕರ್
 (3)ಫ್ರಾನ್ಸ್, ಲಾನ್ ಟೆನಿಸ್
 (4)ಸ್ವಿಟ್ಜರ್ ಲ್ಯಾಂಡ್, ಲಾನ್ ಟೆನಿಸ್

ಸರಿ ಉತ್ತರ

(1) ಅರ್ಜೆಂಟೀನಾ, ಸಾಕರ್


59.ಭಾರತದ ಈ ಕೆಳಕಂಡ ತಾಣವು 2012 ರಲ್ಲಿ ಯುನೆಸ್ಕೋದ ವಿಶ್ವಪರಂಪರೆಯ ಪಟ್ಟಿಗೆ ಸೇರ್ಪಡೆಗೊಂಡಿತು:
 (1) ತಾಜ್ ಮಹಲ್
 (2)ಪಶ್ಚಿಮ ಘಟ್ಟಗಳು
 (3)ಕೋವಳಂ ಬೀಚ್
 (4) ಅಜಂತಾ ಮತ್ತು ಎಲ್ಲೋರಾ ಗುಹಾ ದೇವಾಲಯಗಳು

ಸರಿ ಉತ್ತರ

(2) ಪಶ್ಚಿಮ ಘಟ್ಟಗಳು


60.ಹಿಗ್ಸ್-ಬೋಸಾನ್ (ದೇವಕಣ) ಎಂದು ಬಳಕೆಯಾಗುತ್ತಿರುವ ಪದದಲ್ಲಿ ‘ಬೋಸಾನ್’ ಎಂಬ ಪದವು ಈ ಕೆಳಕಂಡ ಭಾರತೀಯ ಭೌತ ವಿಜ್ಞಾನಿಯ ಹೆಸರನ್ನು ಆಧರಿಸಿದೆ :
 (1) ಜಗದೀಶ್ ಚಂದ್ರ ಬೋಸ್
 (2)ದೇವೇಂದ್ರನಾಥ ಬೋಸ್
 (3)ಮಹೇಂದ್ರನಾಥ ಬೋಸ್
 (4)ಸತ್ಯೇಂದ್ರನಾಥ ಬೋಸ್

ಸರಿ ಉತ್ತರ

(4) ಸತ್ಯೇಂದ್ರನಾಥ ಬೋಸ್


61.ಔಷಧಕ್ಕೆ ಪ್ರತಿರೋಧ ಒಡ್ಡುವ ರೂಪಗಳನ್ನು ಬೆಳೆಸಿಕೊಳ್ಳುವ ಮೂಲಕ ಭಾರತಕ್ಕೆ ಅಗಾಧವಾದ ಭೀತಿಯನ್ನುಂಟು ಮಾಡುತ್ತಿರುವ ರೋಗ:
 (1) ಕ್ಷಯ
 (2)ಮಕ್ಕಳಿಗೆ ಬರುವ ಪೋಲಿಯೋ
 (3)ಏಡ್ಸ್
 (4)ಮಲೇರಿಯಾ

ಸರಿ ಉತ್ತರ

(1) ಕ್ಷಯ


62.ನೇತಾಜಿ ಸುಭಾಷ್ ಚಂದ್ರ ಬೋಸರ ಇಂಡಿಯನ್ ನ್ಯಾಷನಲ್ ಆರ್ಮಿ (INA) ಯೊಂದಿಗೆ ಒಡನಾಟ ಹೊಂದಿದ್ದ ಹಾಗೂ 2012 ರ ಜುಲೈನಲ್ಲಿ ನಿಧನರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ
 (1) ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್
 (2)ಕ್ಯಾಪ್ಟನ್ ಸರಸ್ವತಿ ಸೆಹಗಲ್
 (3)ಕ್ಯಾಪ್ಟನ್ ಲೀಲಾಬಾಯಿ
 (4)ಕ್ಯಾಪ್ಟನ್ ಗಂಗೆ ಅಮ್ಮಾಳ್

ಸರಿ ಉತ್ತರ

(1) ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್


63.2012 ರ ಜುಲೈ ತಿಂಗಳಲ್ಲಿ ಘೋಷಿತವಾದ ಮ್ಯಾಗ್ಸೆಸೆ ಪುರಸ್ಕಾರಗಳನ್ನು ಪಡೆದವರಲ್ಲಿರುವ ಭಾರತೀಯ ವ್ಯಕ್ತಿ
 (1) ಎ.ಪಿ.ಜೆ.ಕಲಾಂ
 (2)ಸಾಲುಮರದ ತಿಮ್ಮಕ್ಕ
 (3)ಕುಳಂದೇಯಿ ಫ್ರಾನ್ಸಿಸ್
 (4)ಅಣ್ಣಾ ಹಜಾರೆ

ಸರಿ ಉತ್ತರ

(3) ಕುಳಂದೇಯಿ ಫ್ರಾನ್ಸಿಸ್


64.ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ಆಟಗಾರ್ತಿ
 (1) ಸಾನಿಯಾ ಮಿರ್ಜಾ
 (2)ಸೈನಾ ಅಗರ್ ವಾಲ್
 (3)ಪಿಂಕಿ ಪ್ರಮಾಣಿಕ್
 (4)ಸೈನಾ ನೆಹ್ವಾಲ್

ಸರಿ ಉತ್ತರ

(4) ಸೈನಾ ನೆಹ್ವಾಲ್


65.2012 ರ ಆಗಸ್ಟ್ ತಿಂಗಳಲ್ಲಿ ಯಶಸ್ವಿಯಾಗಿ ಮಂಗಳ ಗ್ರಹದ ಮೇಲಿಳಿದ ನಾಸಾದ (ಯು.ಎಸ್.ಎ) ಮಂಗಳ ವಿಜ್ಞಾನ ಪ್ರಯೋಗಾಲಯಕ್ಕೆ ಯಾವ ಹೆಸರು ಕೊಡಲಾಗಿದೆ ?
 (1) ಎಕ್ಸ್ ಪ್ಲೋರರ್
 (2)ಗೇಲ್
 (3)ಕ್ಯೂರಿಯಾಸಿಟಿ
 (4)ರೊಬೊಟಿಕ್ ರೋವರ್

ಸರಿ ಉತ್ತರ

(3) ಕ್ಯೂರಿಯಾಸಿಟಿ


66.2012 ರಲ್ಲಿ ಭಾರತದ ಯಾವ ನಗರದಲ್ಲಿ ಕಸ ವಿಲೇವಾರಿಯು ಒಂದು ಬೃಹತ್ ಸಮಸ್ಯೆಯಾಗಿ ಕಾಣಿಸಿಕೊಂಡಿತು ?
 (1) ನವದೆಹಲಿ
 (2)ಬೆಂಗಳೂರು
 (3)ಚೆನ್ನೈ
 (4)ಕೋಲ್ಕತ್ತಾ

ಸರಿ ಉತ್ತರ

(2) ಬೆಂಗಳೂರು


67.ಖಾಯಂ ಒಪ್ಪಂದವನ್ನು ಜಾರಿಗೆ ತಂದವರು :
 (1) ಲಾರ್ಡ್ ವೆಲ್ಲೆಸ್ಲಿ
 (2)ಲಾರ್ಡ್ ಕಾರ್ನ್ ವಾಲೀಸ್
 (3)ಲಾರ್ಡ್ ಹೇಸ್ಟಿಂಗ್ಸ್
 (4)ಲಾರ್ಡ್ ವಿಲಿಯಂ ಬೆಂಟಿಂಕ್

ಸರಿ ಉತ್ತರ

(2) ಲಾರ್ಡ್ ಕಾರ್ನ್ ವಾಲೀಸ್


68.2012 ರ ಡಿಸೆಂಬರ್ ತಿಂಗಳಲ್ಲಿ ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾದ ಪಂಡಿತ್ ರವಿಶಂಕರ್ ಅವರು ಯಾವ ವಾದ್ಯದ ನುಡಿಸುವಿಕೆಗೆ ಪ್ರಸಿದ್ಧರಾಗಿದ್ದರು ?
 (1) ಕೊಳಲು
 (2)ಸಿತಾರ್
 (3)ವೀಣೆ
 (4)ಸರೋದ್

ಸರಿ ಉತ್ತರ

(2) ಸಿತಾರ್


69.2012 ರ ಉತ್ತರಾರ್ಧದಲ್ಲಿ ಭಯೋತ್ಪಾದಕರ ದಾಳಿಯಿಂದ ಬದುಕುಳಿದ ಹಾಗೂ ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರತಿಪಾದಿಸಿದ ಮಲಾಲ ಎಂಬ ಬಾಲಕಿ ಯಾವ ದೇಶದವಳು ?
 (1) ಆಫ್ಘಾನಿಸ್ತಾನ
 (2)ಬಾಂಗ್ಲಾದೇಶ್
 (3)ಪಾಕಿಸ್ತಾನ
 (4)ಮ್ಯಾನ್ಮಾರ್ (ಬರ್ಮಾ)

ಸರಿ ಉತ್ತರ

(3) ಪಾಕಿಸ್ತಾನ


70.ಕರ್ನಾಟಕದ ಗಿರೀಶ್ ಎಂಬ ವಿಕಲಚೇತನ ಬಾಲಕ, 2012 ರಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್ ನ ____________ ವಿಭಾಗದಲ್ಲಿ ಅಂತರರಾಷ್ಟ್ರೀಯ ಮನ್ನಣೆ ಗಳಿಸಿದರು.
 (1) ಹೈಜಂಪ್
 (2)ಲಾಂಗ್ ಜಂಪ್
 (3)ಪೋಲ್ ವಾಲ್ಟ್
 (4)ಈಜುಗಾರಿಕೆ

ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


71.ಈ ಕೆಳಗಿನವುಗಳಲ್ಲಿ ಯಾವುದು ಚಂಡಮಾರುತ ಬಿರುಗಾಳಿಯ ಹೆಸರಲ್ಲ ?
 (1) ನೀಲಾ
 (2)ಕೊಲವೆರಿ ಡಿ
 (3)ಸ್ಯಾಂಡಿ
 (4)ಕ್ಯಾಥರೀನಾ

ಸರಿ ಉತ್ತರ

(2) ಕೊಲವೆರಿ ಡಿ


72.ಲಂಡನ್ ನಲ್ಲಿ ನಡೆದ 2012 ರ ಒಲಿಂಪಿಕ್ಸ್ ಪಂದ್ಯಗಳಲ್ಲಿ, ಭಾರತದ ಕ್ರೀಡಾಪಟು ಎಂ.ಸಿ.ಮೇರಿಕೋಂ ಅವರು ಯಾವ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದರು ?
 (1) ಧನುರ್ವಿದ್ಯೆ (ಆರ್ಚರಿ)
 (2)ಮಲ್ಲಯುದ್ಧ (ರೆಸ್ಲಿಂಗ್)
 (3)ಶೂಟಿಂಗ್
 (4)ಮುಷ್ಟಿಕಾಳಗ (ಬಾಕ್ಸಿಂಗ್)

ಸರಿ ಉತ್ತರ

(4) ಮುಷ್ಟಿಕಾಳಗ (ಬಾಕ್ಸಿಂಗ್)


ಈ ಕೆಳಗಿನ 73 ಮತ್ತು 74 ನೇ ಪ್ರಶ್ನೆಗಳು I ಮತ್ತು II ಎಂಬ ತಲಾ ಎರಡು ವಿವರಣೆಗಳನ್ನು ಹೊಂದಿವೆ. ಕೆಳಕಂಡ ಸಂಕೇತಗಳನ್ನು ಬಳಸಿ ಇವುಗಳಿಗೆ ಉತ್ತರಿಸಿ:

73.I.2013-14ನೇ ವರ್ಷವನ್ನು ಸ್ವಾಮಿ ವಿವೇಕಾನಂದರ ಜನ್ಮ ಶತಮಾನೋತ್ಸವ ವರ್ಷವಾಗಿ ಆಚರಿಸಲಾಗುವುದು.
 II.ಹೈದ್ರಾಬಾದ್ ಕರ್ನಾಟಕ ಪ್ರದೇಶದ ಹಿಂದುಳಿದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನವನ್ನು ನೀಡುವ ಹೈದ್ರಾಬಾದ್ ಕರ್ನಾಟಕ ವಿಧೇಯಕಕ್ಕೆ ಲೋಕಸಭೆಯು 2012ರ ಡಿಸೆಂಬರ್ನಲ್ಲಿ ತನ್ನ ಒಪ್ಪಿಗೆಯನ್ನು ನೀಡಿತು.
 (1) ಎರಡೂ ವಿವರಣೆಗಳು ಸರಿ.
 (2) I ವಿವರಣೆ ಮಾತ್ರ ಸರಿ
 (3)II ವಿವರಣೆ ಮಾತ್ರ ಸರಿ
 (4)ಎರಡೂ ವಿವರಣೆಗಳು ತಪ್ಪು

ಸರಿ ಉತ್ತರ

(3) II ವಿವರಣೆ ಮಾತ್ರ ಸರಿ


74.I.ನ್ಯಾಯಮೂರ್ತಿ ಅಲ್ತಾಮಸ್ ಕಬೀರ್ ಅವರು, ಎಸ್.ಎಚ್.ಕಪಾಡಿಯಾ ಅವರ ನಂತರ ಭಾರತದ ಮುಖ್ಯ ನ್ಯಾಯಮೂರ್ತಿಗಳಾಗಿ ಬಂದರು.
 II.ಶ್ರೀ ಎಚ್.ಆರ್.ಭಾರದ್ವಾಜ್ ಅವರು, ಶ್ರೀ ಜಿ.ಎನ್.ತ್ರಿವೇದಿಯವರ ನಂತರ ಕರ್ನಾಟಕದ ರಾಜ್ಯಪಾಲರಾಗಿ ಬಂದರು.
 (1) ಎರಡೂ ವಿವರಣೆಗಳು ಸರಿ.
 (2)I ವಿವರಣೆ ಮಾತ್ರ ಸರಿ
 (3)II ವಿವರಣೆ ಮಾತ್ರ ಸರಿ
 (4)ಎರಡೂ ವಿವರಣೆಗಳು ತಪ್ಪುು

ಸರಿ ಉತ್ತರ

(2) I ವಿವರಣೆ ಮಾತ್ರ ಸರಿ


75.‘‘My Presidential Years’’ ಎಂಬ ಕೃತಿಯನ್ನು ಬರೆದವರು ____________
 (1) ಅಬ್ದುಲ್ ಕಲಾಂ
 (2)ಪ್ರತಿಭಾ ಪಾಟೀಲ್
 (3)ಆರ್.ವೆಂಕಟರಾಮನ್
 (4)ಡಾ.ರಾಧಾಕೃಷ್ಣನ್

ಸರಿ ಉತ್ತರ

(3) ಆರ್.ವೆಂಕಟರಾಮನ್


76.ದೇವಾನಂದ್ ಅವರ ಆತ್ಮಕಥೆಯ ಶೀರ್ಷಿಕೆ
 (1) ರೋಮಾನ್ಸಿಂಗ್ ವಿತ್ ಲೈಫ್
 (2)ಮೈ ಲೈಫ್ ಇನ್ ಫಿಲ್ಮ್ ವರ್ಲ್ಡ್
 (3)ಜರ್ನಿ ಆಫ್ ಮೈ ಲೈಫ್
 (4)ಟುವರ್ಡ್ಸ್ ದ ಎಂಡ್

ಸರಿ ಉತ್ತರ

(1) ರೋಮಾನ್ಸಿಂಗ್ ವಿತ್ ಲೈಫ್


77.ಯಾವ ದೇಶದ ಅಧ್ಯಕ್ಷರು 1980ರ ದಶಕದಲ್ಲಿ ವಿಶ್ವ ಸಿನೆಮಾ ಕುರಿತಂತೆ ಪುಸ್ತಕ ಬರೆದರು ?
 (1) ಅಮೆರಿಕಾ
 (2)ಇಂಗ್ಲೆಂಡ್
 (3)ಭಾರತ
 (4)ಉತ್ತರ ಕೊರಿಯಾ

ಸರಿ ಉತ್ತರ

(4) ಉತ್ತರ ಕೊರಿಯಾ


78.ಭಾರತದಲ್ಲಿ ಕೊಡಲಾಗುವ ಶಾಂತಿಕಾಲದ ಅತ್ಯುನ್ನತ ಶೌರ್ಯಪ್ರಶಸ್ತಿ ಯಾವುದು ?
 (1) ಪರಮವೀರಚಕ್ರ
 (2)ಅಶೋಕಚಕ್ರ
 (3)ಅರ್ಜುನ ಪ್ರಶಸ್ತಿ
 (4)ಖೇಲ್ ರತ್ನ

ಸರಿ ಉತ್ತರ

(2) ಅಶೋಕಚಕ್ರ


79.2012 ರ ಡಿಸೆಂಬರ್ ಅವಧಿಯಲ್ಲಿ, ಭಾರತವು ಯಾವ ದೇಶದೊಂದಿಗೆ ಸುಮಾರು 22 ಸಾವಿರ ಕೋಟಿ ರೂ. ಗಳ ರಕ್ಷಣಾ ಒಪ್ಪಂದವನ್ನು ಮಾಡಿ ಕೊಂಡಿತು ?
 (1) ಅಮೆರಿಕಾ
 (2)ಜಪಾನ್
 (3)ಇಂಗ್ಲೆಂಡ್
 (4)ರಷ್ಯಾ

ಸರಿ ಉತ್ತರ

(4) ರಷ್ಯಾ


80.ಕರ್ನಾಟಕ ರಾಜ್ಯದಲ್ಲಿರುವ ಅತಿ ಉದ್ದವಾದ ನದಿ ಯಾವುದು ?
 (1) ಶರಾವತಿ
 (2)ಕೃಷ್ಣಾ
 (3)ತುಂಗಭದ್ರಾ
 (4)ಕಾವೇರಿ

ಸರಿ ಉತ್ತರ

(2) ಕೃಷ್ಣಾ


81.ಭಾರತದ ಬಿಲ್ ಗೇಟ್ಸ್ ಎಂದು ಯಾರನ್ನು ಕರೆಯಲಾಗುತ್ತಿದೆ ?
 (1) ಅಜೀಂ ಪ್ರೇಮ್ ಜೀ
 (2)ನಾರಾಯಣಮೂರ್ತಿ
 (3)ಮುಖೇಶ್ ಅಂಬಾನಿ
 (4)ಅನಿಲ್ ಅಂಬಾನಿ

ಸರಿ ಉತ್ತರ

(1) ಅಜೀಂ ಪ್ರೇಮ್ ಜೀ


82.2010-11 ರ ಸಾಲಿನಲ್ಲಿ ಭಾರತದ ತಲಾ ಆದಾಯ ಎಷ್ಟಿದ್ದಿತು ?
 (1) ರೂ.34,000
 (2)ರೂ.54,000
 (3)ರೂ.70,000
 (4)ರೂ. 60,000

ಸರಿ ಉತ್ತರ

(2) ರೂ.54,000


83.‘‘we make a living by what we get but we make a life by what we give’’ ಎಂದು ಹೇಳಿದವರು.
 (1) ಅಬ್ದುಲ್ ಕಲಾಂ
 (2)ವಿನ್ ಸ್ಟನ್ ಚರ್ಚಿಲ್
 (3)ಬಟಾರ್ರ್ಂಡ್ ರಸೆಲ್
 (4)ಜಾರ್ಜ್ ಬರ್ನಾರ್ಡ್ ಷಾ

ಸರಿ ಉತ್ತರ

(2) ವಿನ್ ಸ್ಟನ್ ಚರ್ಚಿಲ್


84.ಭಾರತರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಮಹಿಳೆ
 (1) ಅರುಣಾ ಅಸಫ್ ಅಲಿ
 (2)ಇಂದಿರಾ ಗಾಂಧಿ
 (3)ಮದರ್ ತೆರೆಸಾ
 (4)ಎಂ.ಎಸ್.ಸುಬ್ಬಲಕ್ಷ್ಮಿ

ಸರಿ ಉತ್ತರ

(2) ಇಂದಿರಾ ಗಾಂಧಿ


85.ಟಾಬೊ ಮೊನಾಸ್ಟರಿ ಯಾವ ರಾಜ್ಯದಲ್ಲಿದೆ ?
 (1) ಉತ್ತರಾಖಂಡ್
 (2)ಹಿಮಾಚಲ ಪ್ರದೇಶ
 (3)ಅರುಣಾಚಲ ಪ್ರದೇಶ
 (4)ಸಿಕ್ಕಿಂ

ಸರಿ ಉತ್ತರ

(2) ಹಿಮಾಚಲ ಪ್ರದೇಶ


86.ಭಾರತದ ಯೋಜನಾ ಆಯೋಗದ ಈಗಿನ ಅಧ್ಯಕ್ಷರು ಯಾರು ?
 (1) ಡಾ. ಮನಮೋಹನ್ ಸಿಂಗ್
 (2)ಡಾ. ಮಾಂಟೆಕ್ ಸಿಂಗ್ ಅಹ್ಲುವಾಲಿಯಾ
 (3)ಚಿದಂಬರಂ
 (4)ಪ್ರಣಬ್ ಮುಖರ್ಜಿ

ಸರಿ ಉತ್ತರ

(1) ಡಾ. ಮನಮೋಹನ್ ಸಿಂಗ್


87.ಭಾರತದ ಹೊರಗೆ ಶಾಖೆಯನ್ನು ಆರಂಭಿಸಿದ ಮೊದಲ ಭಾರತೀಯ ಬ್ಯಾಂಕು
 (1) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
 (2)ಬ್ಯಾಂಕ್ ಆಫ್ ಇಂಡಿಯಾ
 (3)ದಿ ಪಂಜಾಬ್ ನ್ಯಾಷನಲ್ ಬ್ಯಾಂಕ್
 (4)ಕೆನರಾ ಬ್ಯಾಂಕ್

ಸರಿ ಉತ್ತರ

(2) ಬ್ಯಾಂಕ್ ಆಫ್ ಇಂಡಿಯಾ


88.ಭಾರತದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ದಳದಿಂದ ರಕ್ಷಣೆಯನ್ನು ಪಡೆದುಕೊಂಡ ಮೊದಲ ಖಾಸಗಿ ಕಂಪೆನಿ ಯಾವುದು ?
 (1) ರಿಲಯನ್ಸ್ ಇಂಡಸ್ಟ್ರೀಸ್
 (2)ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್
 (3)ಟಾಟಾ ಮೋಟಾರ್ಸ್
 (4)ಎಂ.ಆರ್.ಎಫ್ ಲಿಮಿಟೆಡ್

ಸರಿ ಉತ್ತರ

(2) ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್


89.ಕರ್ನಾಟಕ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ?
 (1) 27
 (2)28
 (3)30
 (4)29

ಸರಿ ಉತ್ತರ

(3) 30


90.ವಿಷ್ಣು ಪ್ರಯಾಗ ಜಲವಿದ್ಯುತ್ ಶಕ್ತಿ ಪರಿಯೋಜನೆ ಎಲ್ಲಿದೆ ?
 (1) ಹಿಮಾಚಲ ಪ್ರದೇಶ
 (2)ಛತ್ತೀಸ್ ಘರ್
 (3)ಮಧ್ಯಪ್ರದೇಶ
 (4)ಉತ್ತರಾಖಂಡ್

ಸರಿ ಉತ್ತರ

(4) ಉತ್ತರಾಖಂಡ್


91.‘‘ಮಾರುಕಟ್ಟೆ ನಿಬಂಧನೆ” ಗಳನ್ನು ಜಾರಿಗೆ ತಂದವರು
 (1) ಅಲ್ಲಾ ಉದ್ದೀನ್ ಖಿಲ್ಜಿ
 (2)ಮೊಹಮದ್ ಬಿನ್ ತುಘಲಕ್
 (3)ಬಲ್ಬನ್
 (4)ಫೀರೋಜ್ ಷಾ ತುಘಲಕ್

ಸರಿ ಉತ್ತರ

(1) ಅಲ್ಲಾ ಉದ್ದೀನ್ ಖಿಲ್ಜಿ


92.ಕನ್ನಡದ ಮೊದಲ ಶಿಲಾಶಾಸನವಾಗಿರುವ ಹಲ್ಮಿಡಿ ಶಾಸನವನ್ನು ಯಾವ ಜಿಲ್ಲೆಯಲ್ಲಿ ಕಂಡು ಹಿಡಿಯಲಾಯಿತು?
 (1) ಹಾಸನ
 (2)ಚಿಕ್ಕಮಗಳೂರು
 (3)ಶಿವಮೊಗ್ಗ
 (4)ಮಂಡ್ಯ

ಸರಿ ಉತ್ತರ

(1) ಹಾಸನ


93.ವೆಲ್ಲೆಸ್ಲಿಯ ಪೂರಕ ಮೈತ್ರಿಕೂಟ (Subsidiary Alliance)ವು ಯಾವ ಉದ್ದೇಶ ಹೊಂದಿತ್ತು ?
 (1) ಭಾರತದಲ್ಲಿ ಬ್ರಿಟಿಷ್ ವ್ಯಾಪಾರದ ವಿಸ್ತರಣೆ
 (2)ಭಾರತದ ರಾಜರುಗಳನ್ನು ಬ್ರಿಟಿಷ್ ನಿಯಂತ್ರಣಕ್ಕೆ ಒಳಪಡಿಸುವುದು.
 (3)ಫ್ರೆಂಚ್ ರೊಂದಿಗೆ ಯುದ್ಧವನ್ನು ಕೊನೆಗಾಣಿಸುವುದು
 (4)ಮರಾಠರು ಹಾಗೂ ಫ್ರೆಂಚರೊಂದಿಗೆ ಮೈತ್ರಿಯನ್ನು ಸಾಧಿಸುವುದು.

ಸರಿ ಉತ್ತರ

(2) ಭಾರತದ ರಾಜರುಗಳನ್ನು ಬ್ರಿಟಿಷ್ ನಿಯಂತ್ರಣಕ್ಕೆ ಒಳಪಡಿಸುವುದು.


94. ‘ಮತ್ತವಿಲಾಸ ಪ್ರಹಸನ’ವನ್ನು ರಚಿಸಿದವರು
 (1) ನರಸಿಂಹವರ್ಮನ್ I
 (2)ಮಹೇಂದ್ರವರ್ಮನ್ I
 (3)ಪರಮೇಶ್ವರವರ್ಮನ್
 (4)ನಂದಿವರ್ಮನ್

ಸರಿ ಉತ್ತರ

(2) ಮಹೇಂದ್ರವರ್ಮನ್ I


95.‘ಲಾಖ್ಬಕ್ಷ್’ ಎಂಬುದು ಈ ಕೆಳಕಂಡವನಿಗಿದ್ದ ಬಿರುದು
 (1) ಕುತುಬುದ್ದೀನ್ ಐಬಕ್
 (2)ಇಲ್ತಮಿಷ್
 (3)ಅಲ್ಲಾಉದ್ದೀನ್ ಖಿಲ್ಜಿ
 (4)ಫಿರೋಜ್ ಷಾ

ಸರಿ ಉತ್ತರ

(1) ಕುತುಬುದ್ದೀನ್ ಐಬಕ್


96.ಬೀದರ್ನಲ್ಲಿರುವ ಪ್ರಸಿದ್ಧ ಮದರಸಾವನ್ನು ನಿರ್ಮಿಸಿದವರು
 (1) ಮಹಮದ್ ಗವಾನ್
 (2)ಮಹಮದ್ ಷಾ
 (3)ಇಬ್ರಾಹಿಂ II
 (4)ಮಹಮದ್ ಅದಿಲ್ ಷಾ

ಸರಿ ಉತ್ತರ

(1) ಮಹಮದ್ ಗವಾನ್


97.‘ಕೋಟೆಕೋಲಾಹಲ’ ಎಂಬ ಬಿರುದನ್ನು ಪಡೆದಿದ್ದ ಕೆಳದಿಯ ಅರಸ
 (1) ಸದಾಶಿವ ನಾಯಕ
 (2)ವೆಂಕಟಪ್ಪ ನಾಯಕ
 (3)ವೀರಭದ್ರ ನಾಯಕ
 (4)ಸೋಮಶೇಖರ ನಾಯಕ

ಸರಿ ಉತ್ತರ

(1) ಸದಾಶಿವ ನಾಯಕ


98.ದತ್ತುಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನನ್ನು ಜಾರಿಗೆ ತಂದವರು
 (1) ಲಾರ್ಡ್ ಡಾಲ್ ಹೌಸಿ
 (2)ಲಾರ್ಡ್ ಕಾರ್ನ್ವಾಲೀಸ್
 (3)ಲಾರ್ಡ್ ವೆಲ್ಲೆಸ್ಲಿ
 (4)ಸರ್ ಜಾನ್ ಶೋರ್

ಸರಿ ಉತ್ತರ

(1) ಲಾರ್ಡ್ ಡಾಲ್ ಹೌಸಿ


99.ಗಾಂಧಿಯವರು ದಂಡಿಯಾತ್ರೆಯನ್ನು ನಡೆಸಿದ ವರ್ಷ
 (1) ಏಪ್ರಿಲ್ 1931
 (2)ಜನವರಿ 1929
 (3)ಮಾರ್ಚ್ 1930
 (4)ಮೇ 1933

ಸರಿ ಉತ್ತರ

(3) ಮಾರ್ಚ್ 1930


100.ತನ್ನ ಪ್ರಜೆಗಳ ನೈತಿಕ ಬದುಕನ್ನು ಸುಧಾರಿಸುವುದಕ್ಕಾಗಿ ಅಶೋಕನು ____________ ರನ್ನು ನೇಮಕ ಮಾಡಿದ.
 (1) ಧರ್ಮಪಾಲರು
 (2)ಅಮಾತ್ಯರು
 (3)ಧರ್ಮಾಧಿಕರಣರು
 (4)ಧರ್ಮ ಮಹಾಮಾತ್ರರು

ಸರಿ ಉತ್ತರ

(4) ಧರ್ಮ ಮಹಾಮಾತ್ರರು


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

Post a Comment

0 Comments

BOTTOM ADS