PSI Question Paper (CIVIL) (03/10/2021)

SUB-INSPECTOR OF POLICE (CIVIL) Exam Held on 03-10-2021 Questions with answers

ದಿನಾಂಕ -03-10-2021 ರಂದು ನಡೆದ ಪೂಲೀಸ್‌ ಸಬ್‌ ಇನ್ಸ್‌ಪೆಕ್ಟರ್‌(ಸಿವಿಲ್‌) ಪ್ರಶ್ನೆಪತ್ರಿಕೆ IIರ ಪ್ರಶ್ನೆಗಳನ್ನು ಉತ್ತರದೊಂದಿಗೆ ನೀಡಲಾಗಿದೆ.

1.ಟೋಕಿಯೊ ಪ್ಯಾರಾಓಲಿಂಪಿಕ್ಸ್ 2020 ಗಾಗಿ, ಭಾರತದ ಧೈಯ ಗೀತೆಯನ್ನು ಯಾರು ರಚಿಸಿದರು?
 (ಎ) ವರುಣ್ ಮಿಶ್ರ
 (ಬಿ)ಸಂಜೀವ್ ಸಿಂಗ್
 (ಸಿ)ಮಾಧವಿ ದಾಸ್
 (ಡಿ)ಹೃದಯ್ ಭಾಟಿಯ

ಸರಿ ಉತ್ತರ

(ಬಿ) ಸಂಜೀವ್ ಸಿಂಗ್


2.ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಜಾರಿಗೆ ತಂದ ಭಾರತದ ಮೊದಲ ರಾಜ್ಯ ಯಾವುದು ?
 (ಎ) ಕೇರಳ
 (ಬಿ)ತಮಿಳುನಾಡು
 (ಸಿ)ಕರ್ನಾಟಕ
 (ಡಿ)ತೆಲಂಗಾಣ

ಸರಿ ಉತ್ತರ

(ಸಿ) ಕರ್ನಾಟಕ


3.ಉಪಗ್ರಹ ಟೆಲಿಫೋನ್ ಗಳನ್ನು ಹೊಂದಿರುವ ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನವು ಯಾವುದು ?
 (ಎ) ಬಂಡೀಪುರ
 (ಬಿ)ಸೈಲೆಂಟ್ ವ್ಯಾಲಿ
 (ಸಿ)ಪೆಂಚ್
 (ಡಿ)ಕಾಜಿರಂಗ

ಸರಿ ಉತ್ತರ

(ಡಿ) ಕಾಜಿರಂಗ


4.'ಸೊನ್ಚಿರೈಯ' ಬಗ್ಗೆಯ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಉತ್ತರವನ್ನು ಆರಿಸಿ :
 1.'ಸೊನ್ಚಿರೈಯ' ವನ್ನು ನಗರ ಸ್ವಸಹಾಯ ಗುಂಪು ಉತ್ಪನ್ನಗಳ ಮಾರುಕಟ್ಟೆಗಾಗಿ ಆರಂಭಿಸಲಾಗಿದೆ.
 2.ಇದನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಆರಂಭಿಸಿದೆ.
 (ಎ) 1 ಮಾತ್ರ
 (ಬಿ)2 ಮಾತ್ರ
 (ಸಿ)- 1 ಮತ್ತು 2 ಎರಡೂ
 (ಡಿ)1 ಮತ್ತು 2 ಅಲ್ಲ

ಸರಿ ಉತ್ತರ

(ಎ) 1 ಮಾತ್ರ


5.ಭಾರತದ ಅತ್ಯುನ್ನತ ಗಿಡಮೂಲಿಕೆ ಉದ್ಯಾನವನವನ್ನು ಎಲ್ಲಿ ಉದ್ಘಾಟಿಸಲಾಗಿದೆ ?
 (ಎ) ಅರುಣಾಚಲ ಪ್ರದೇಶ
 (ಬಿ)ಸಿಕ್ಕಿಂ
 (ಸಿ)ಉತ್ತರಾಖಂಡ
 (ಡಿ)ಹಿಮಾಚಲ ಪ್ರದೇಶ

ಸರಿ ಉತ್ತರ

(ಸಿ) ಉತ್ತರಾಖಂಡ


6.'ಮಂದ್ರ' ಪುಸ್ತಕವನ್ನು ಬರೆದವರು ಯಾರು ?
 (ಎ) ಡಿ.ಆರ್. ಬೇಂದ್ರೆ
 (ಬಿ)ಎಸ್.ಎಲ್. ಭೈರಪ್ಪ
 (ಸಿ)ಗಿರೀಶ್ ಕಾರ್ನಾಡ್
 (ಡಿ)ರಾಜಾ ರಾವ್

ಸರಿ ಉತ್ತರ

(ಬಿ) ಎಸ್.ಎಲ್. ಭೈರಪ್ಪ


7.ಭಾರತದಲ್ಲಿ NGO ಗಳು ಸ್ವೀಕರಿಸಿದ ವಿದೇಶಿ ಅನುದಾನವನ್ನು ಯಾರಿಂದ ನಿಯಂತ್ರಿಸಲಾಗುತ್ತದೆ ?
 (ಎ) ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆ
 (ಬಿ)ವಿದೇಶಿ ವಿನಿಮಯ ಕೊಡುಗೆ ಕಾಯಿದೆ
 (ಸಿ)ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ
 (ಡಿ)ವಿದೇಶಿ ವಿನಿಮಯ ನಿಯಂತ್ರಣ ಕಾಯಿದೆ

ಸರಿ ಉತ್ತರ

(ಸಿ) ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ


8.ಯಾವ ನೆರೆಯ ರಾಷ್ಟ್ರ ಭಾರತದ ಭೀಮ್ ಯುಪಿಐ (BHIM UPI) ಪಾವತಿ ವ್ಯವಸ್ಥೆಯನ್ನು ಮೊದಲು ಅಳವಡಿಸಿಕೊಂಡಿದೆ ?
 (ಎ) ಶ್ರೀಲಂಕಾ
 (ಬಿ)ಭೂತಾನ
 (ಸಿ)ಮ್ಯಾನ್ಮರ್
 (ಡಿ)ಬಾಂಗ್ಲಾದೇಶ

ಸರಿ ಉತ್ತರ

(ಬಿ) ಭೂತಾನ


9.ಜೋಗ ಜಲಪಾತ ಎಲ್ಲಿದೆ(ಯಾವ ನದಿಯಲ್ಲಿ) ?
 (ಎ) ಘಟಪ್ರಭ
 (ಬಿ)ಭೀಮ
 (ಸಿ)ಕಾವೇರಿ
 (ಡಿ)ಶರಾವತಿ

ಸರಿ ಉತ್ತರ

(ಡಿ) ಶರಾವತಿ


10.RBI, ವಸತಿ ಹಣಕಾಸು ಕಂಪನಿಗಳಿಗೆ RBIA ವ್ಯವಸ್ಥೆಯನ್ನು ವಿಸ್ತರಿಸಿದೆ. RBIA ಎಂದರೇನು ?
 (ಎ) ರಿಸ್ಕ್ ಬೇಸ್ಡ್ ಇಂಟರ್ನಲ್ ಆಡಿಟ್ (ಅಪಾಯಆಧಾರಿತ ಅಂತರಿಕ ಲೆಕ್ಕ ಪರಿಶೋಧನೆ)
 (ಬಿ)ರಿಸರ್ವ್ ಬ್ಯಾಂಕ್ ಇಂಟರ್ನಲ್ ಅಸೆಸ್ಮೆಂಟ್ (ರಿಸರ್ವ್ ಬ್ಯಾಂಕ್ ಅಂತರಿಕ ಮೌಲ್ಯಮಾಪನ)
 (ಸಿ)ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಆಡಿಟ್ (ಭಾರತದ ರಿಸರ್ವ್ ಬ್ಯಾಂಕ್ ಲೆಕ್ಕ ಪರಿಶೋಧನೆ)
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಎ) ರಿಸ್ಕ್ ಬೇಸ್ಡ್ ಇಂಟರ್ನಲ್ ಆಡಿಟ್ (ಅಪಾಯಆಧಾರಿತ ಅಂತರಿಕ ಲೆಕ್ಕ ಪರಿಶೋಧನೆ)


11.ಕೆಳಗಿನವುಗಳಲ್ಲಿ ಯಾವುದು "ವೈಟ್ ವಿಟ್ರಿಯೋಲ್' ?
 (ಎ) ಸತು ಆಕ್ಸೈಡ್
 (ಬಿ)ಸತು ಸಲ್ಫೇಟ್
 (ಸಿ)ಸತು ಅಯೋಡೈಡ್
 (ಡಿ)ಸತು ಫಾಸ್ಫೇಟ್

ಸರಿ ಉತ್ತರ

(ಬಿ) ಸತು ಸಲ್ಫೇಟ್


12.ಕೆಳಗಿನವುಗಳಲ್ಲಿ ಯಾವುದು,ಪರಮಾಣು ಬಾಂಬಿನಲ್ಲಿ ಬಿಡುಗಡೆಯಾಗುವ ಶಕ್ತಿಗೆ ಜವಾಬ್ದಾರಿ ಎಂದು ಹೇಳಲಾಗುತ್ತದೆ ?
 (ಎ) ಪರಮಾಣು ಸಮ್ಮಿಳನ
 (ಬಿ)ಗಾಮಾ ಕೊಳೆತ
 (ಸಿ)ಪರಮಾಣು ವಿದಳನ
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಸಿ) ಪರಮಾಣು ವಿದಳನ


13.ಕಲ್ಹಣ ನ ರಾಜತರಂಗಿಣಿ ಯನ್ನು ಯಾವ ಭಾಷೆಯಲ್ಲಿ ಬರೆಯಲಾಗಿದೆ ?
 (ಎ) ಸಂಸ್ಕೃತ
 (ಬಿ)ಪರ್ಷಿಯನ್
 (ಸಿ)ಪ್ರಾಕೃತ
 (ಡಿ)ಪಾಲಿ

ಸರಿ ಉತ್ತರ

(ಎ) ಸಂಸ್ಕೃತ


14.ಯಾವ ಶಾಸನದಲ್ಲಿ ಅಶೋಕನು ತನ್ನನ್ನು ತಾನು ಮಗಧದ ರಾಜನೆಂದು ಉಲ್ಲೇಖಿಸುತ್ತಾನೆ ?
 (ಎ) ಮಾಸ್ಕಿ ಶಾಸನ
 (ಬಿ)ರಮ್ಮಿಂದೈ ಶಾಸನ
 (ಸಿ)ಕೌಸಂಬಿ ಶಾಸನ
 (ಡಿ)ಭಬ್ರು ಶಾಸನ

ಸರಿ ಉತ್ತರ

(ಡಿ) ಭಬ್ರು ಶಾಸನ


15.ಭಾರತದ ಅತ್ಯಂತ ಹಳೆಯ ಪರ್ವತ ಶ್ರೇಣಿ ಯಾವುದು ?
 (ಎ) ಹಿಮಾಲಯ ಪರ್ವತ ಶ್ರೇಣಿ
 (ಬಿ)ಅರಾವಳಿ ಪರ್ವತ ಶ್ರೇಣಿ
 (ಸಿ)ಜೈಂತಿಯಾ ಪರ್ವತ ಶ್ರೇಣಿ
 (ಡಿ)ಸಾತ್ಪುರ ಪರ್ವತ ಶ್ರೇಣಿ

ಸರಿ ಉತ್ತರ

(ಬಿ) ಅರಾವಳಿ ಪರ್ವತ ಶ್ರೇಣಿ


16.ಭಾರತದ ಏಕೈಕ ಖಾಸಗಿ ಅಭಯಾರಣ್ಯ - ಎಸ್ಎಐ (SAI) ಅಭಯಾರಣ್ಯ ಎಲ್ಲಿದೆ ?
 (ಎ) ಚಿಕ್ಕಮಗಳೂರು
 (ಬಿ)ಶಿವಮೊಗ್ಗ
 (ಸಿ)ಕೊಡಗು
 (ಡಿ)ಉತ್ತರ ಕನ್ನಡ

ಸರಿ ಉತ್ತರ

(ಸಿ) ಕೊಡಗು


17.ಭಾರತದಲ್ಲಿ ಹಣದುಬ್ಬರದ ಗುರಿಯನ್ನು ಯಾರು ಹೊಂದಿಸುತ್ತಾರೆ ?
 (ಎ) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
 (ಬಿ)ಎಸ್ ಇ ಬಿ ಐ(SEBI)
 (ಸಿ)ಭಾರತದ ಸರ್ಕಾರ
 (ಡಿ)(ಎ) ಮತ್ತು (ಸಿ) ಎರಡೂ

ಸರಿ ಉತ್ತರ

(ಡಿ) (ಎ) ಮತ್ತು (ಸಿ) ಎರಡೂ


18.ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಎಲ್ಲಿದೆ ?
 (ಎ) ಹುಬ್ಬಳ್ಳಿ (ಹುಬ್ಲಿ)
 (ಬಿ)ಬೆಂಗಳೂರು
 (ಸಿ)ದಕ್ಷಿಣ ಕನ್ನಡ
 (ಡಿ)ಮೈಸೂರು

ಸರಿ ಉತ್ತರ

(ಡಿ) ಮೈಸೂರು


19.ಗ್ರೂಪ್ ವೇರ್ ಒಂದು
 (ಎ) ಸಾಫ್ಟ್ ವೇರ್
 (ಬಿ)ಹಾರ್ಡ್ ವೇರ್
 (ಸಿ)ಆ್ಯಂಕರ್
 (ಡಿ)ನೆಟ್ವರ್ಕ್ (ಸಂಕೀರ್ಣ ವ್ಯವಸ್ಥೆ)

ಸರಿ ಉತ್ತರ

(ಎ) ಸಾಫ್ಟ್ ವೇರ್


20.'ತೊಗಲು ಗೊಂಬೆಯಾಟ' ಏನು ?
 (ಎ) ಬೊಂಬೆಯಾಟ
 (ಬಿ)ಜಾನಪದ ನೃತ್ಯ
 (ಸಿ)ಚಿತ್ರಕಲೆ
 (ಡಿ)ಭಿತ್ತಿಚಿತ್ರ

ಸರಿ ಉತ್ತರ

(ಎ) ಬೊಂಬೆಯಾಟ


21.ಕೆಳಗಿನ ರಿಟ್ ಗಳಲ್ಲಿ ಯಾವುದು ಅಧೀನ ನ್ಯಾಯಾಲಯಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸುತ್ತದೆ ?
 (ಎ) ಮ್ಯಾಂಡಮಸ್ (ಆಜ್ಞಾಪತ್ರ)
 (ಬಿ)ಕ್ವೋ ವಾರಂಟೋ
 (ಸಿ)ಸೆರ್ಶೋರರಿ (ಪ್ರಮಾಣಪತ್ರ)
 (ಡಿ)ಹೇಬಿಯಸ್ ಕಾರ್ಪಸ್

ಸರಿ ಉತ್ತರ

(ಸಿ) ಸೆರ್ಶೋರರಿ (ಪ್ರಮಾಣಪತ್ರ)


22.ಆಫ್ರಿಕಾದ ಪರ್ಯಾಯ ದ್ವೀಪ (ಹಾರ್ನ್), ಈ ಪ್ರದೇಶವನ್ನು ಒಳಗೊಂಡಿದೆ.
 1.ಜಿಬೌಟಿ
 2.ಸೊಮಾಲಿಯ
 3.ಕೆನ್ಯಾ
 4.ಎರಿಟ್ರಿಯಾ
 ಕೊಟ್ಟಿರುವ ಸಂಕೇತಗಳಿಂದ ಸರಿಯುತ್ತರ ಆರಿಸಿ.
 (ಎ) 1 ಮತ್ತು 3
 (ಬಿ)1, 2 ಮತ್ತು 3
 (ಸಿ)1, 2 ಮತ್ತು 4
 (ಡಿ)1, 2, 3 ಮತ್ತು 4

ಸರಿ ಉತ್ತರ

(ಸಿ) 1, 2 ಮತ್ತು 4


23.ಬಿ ಒ ಎಲ್ ಡಿ (BOLD) ಯೋಜನೆ ಬಗ್ಗೆ, ಕೆಳಗಿನ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
 1.ಬಿ ಒ ಎಲ್ ಡಿ (BOLD) ಯೋಜನೆಯನ್ನು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ಆರಂಭಿಸಲಾಗಿದೆ.
 2.ಇದು ಶುಷ್ಕ ಮತ್ತು ಅರೆ ಒಣ ಭೂಮಿ ವಲಯಗಳಲ್ಲಿ ಬಿದಿರು ಆಧಾರಿತ ಹಸಿರು ತೇಪೆಗಳನ್ನು - ಸೃಷ್ಟಿಸುವ ಗುರಿಯನ್ನು ಹೊಂದಿದೆ.
 (ಎ) 1 ಮಾತ್ರ
 (ಬಿ)2 ಮಾತ್ರ
 (ಸಿ)1 ಮತ್ತು 2 ಎರಡೂ
 (ಡಿ)1 ಮತ್ತು 2 ಅಲ್ಲ

ಸರಿ ಉತ್ತರ

(ಸಿ) 1 ಮತ್ತು 2 ಎರಡೂ


24.ಏಷ್ಯಾ ಆರ್ಥಿಕ ಸಂವಾದ (ಏಷ್ಯಾ ಏಕನಾಮಿಕ್ ಡಯಲಾಗ್) ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
 1.ಇದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಪ್ರಮುಖ ಭೂ - ಅರ್ಥಶಾಸ್ತ್ರ ಸಮ್ಮೇಳನವಾಗಿದೆ.
 2.ಏಷ್ಯಾ ಆರ್ಥಿಕ ಸಂವಾದವು ಏಷ್ಯಾ ಮತ್ತು ಅದರ ವಿಸ್ತೃತ ನೆರೆ ಹೊರೆಯಲ್ಲಿ ವ್ಯಾಪಾರ ಮತ್ತು ಹಣಕಾಸಿನ ಕ್ರಿಯಾಶೀಲತೆಯ ಮೇಲೆ ಕೇಂದ್ರೀಕರಿಸುತ್ತದೆ.
 (ಎ) 1 ಮಾತ್ರ
 (ಬಿ)2 ಮಾತ್ರ
 (ಸಿ)1 ಮತ್ತು 2 ಎರಡೂ
 (ಡಿ)1 ಮತ್ತು 2 ಅಲ್ಲ

ಸರಿ ಉತ್ತರ

(ಬಿ) 2 ಮಾತ್ರ


25.ರಾಷ್ಟ್ರೀಯ ಕೈಮಗ್ಗ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
 (ಎ) ಜುಲೈ 7
 (ಬಿ)ಆಗಸ್ಟ್ 7
 (ಸಿ)ಸೆಪ್ಟೆಂಬರ್ 7
 (ಡಿ)ನವೆಂಬರ್ 7

ಸರಿ ಉತ್ತರ

(ಬಿ) ಆಗಸ್ಟ್ 7


26.ಸುತ್ತುಪಥ ಓಟ ಮತ್ತು ಬಯಲು ಕ್ರೀಡೆಯ ಆಟಗಳಲ್ಲಿ, ಭಾರತದ ಮೊದಲ ಸ್ವರ್ಣ ಪದಕವು ಯಾವುದರಲ್ಲಿ ದೊರಕಿತು ?
 (ಎ) ಹ್ಯಾಮರ್ ಎಸೆತ
 (ಬಿ)ಡಿಸ್ಕಸ್ (ಎಸೆಬಿಲ್ಲೆ) ಎಸೆತ
 (ಸಿ)ಜಾವೆಲಿನ್ (ಈಟಿ) ಎಸೆತ
 (ಡಿ)ಶಾಟ್ಪುಟ್ (ಗುಂಡು) ಎಸೆತ

ಸರಿ ಉತ್ತರ

(ಸಿ) ಜಾವೆಲಿನ್ (ಈಟಿ) ಎಸೆತ


27.ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ, ಕೆಳಗಿನ ಯಾವ ಬುಡಕಟ್ಟುಗಳು ಕಂಡು ಬರುತ್ತವೆ ?
 1.ಸೆಂಟಿನೆಲೀಸ್
 2.ಉಲ್ಲಡನ್
 3.ಜರವ
 3.ಬಕರ್ವಾಲ್
 ಸರಿಯಾದ ಆಯ್ಕೆಯನ್ನು ಆರಿಸಿ.
 (ಎ) 1 ಮತ್ತು 3
 (ಬಿ)2 ಮತ್ತು 4
 (ಸಿ)1, 2, 3
 (ಡಿ)1, 2, 3 ಮತ್ತು 4

ಸರಿ ಉತ್ತರ

(ಎ) 1 ಮತ್ತು 3


28.ಗಾಳಿ ಕ್ರಿಯೆಯಿಂದ ರೂಪುಗೊಂಡ ಸರೋವರವನ್ನು ಏನೆಂದು ಕರೆಯುತ್ತಾರೆ ?
 (ಎ) ಫ್ಲೊವಿಯಲ್ ಸರೋವರ
 (ಬಿ)ಎಯೊಲಿಯನ್ ಸರೋವರ
 (ಸಿ)ಆಕ್ಸ್ ಬೋ ಸರೋವರ
 (ಡಿ)ಶೋರ್ ಲೈನ್ ಸರೋವರ

ಸರಿ ಉತ್ತರ

(ಬಿ) ಎಯೊಲಿಯನ್ ಸರೋವರ


29.ಭಾರತದ ನೈರುತ್ಯ ಮಾನ್ಸೂನ್ ಬಗ್ಗೆ, ಕೆಳಗಿನ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದುದನ್ನು ಆಯ್ಕೆ ಮಾಡಿ.
 1.ನೈರುತ್ಯ ಮುಂಗಾರು ಎರಡು ಶಾಖೆಗಳಲ್ಲಿ ಭಾರತೀಯ ಭೂಸಮೂಹವನ್ನು ತಲುಪುತ್ತದೆ - ಅರಬ್ಬಿ ಸಮುದ್ರದ ಶಾಖೆ ಮತ್ತು ಬಂಗಾಳ ಕೊಲ್ಲಿ ಶಾಖೆ.
 2.ಇದು ಮಳೆಯಲ್ಲಿ ವಿರಾಮಗಳನ್ನು ಹೊಂದುವ ಪ್ರವೃತ್ತಿಯನ್ನು ಹೊಂದಿದೆ.
 3.ನೇರುತ್ಯ ಮಾನ್ಸೂನ್ ಹಿಮ್ಮೆಟ್ಟುತ್ತದೆ, ಖಾಯಂ ಗಾಳಿಪಟ್ಟಿಗಳು (ವಿಂಡ್ ಬೆಲ್ಟ್ ಗಳು) ದಕ್ಷಿಣಕ್ಕೆ ಚಲಿಸಲು ಆರಂಭಿಸಿದಾಗ
 (ಎ) 1 ಮಾತ್ರ
 (ಬಿ)1 ಮತ್ತು 2
 (ಸಿ)1 ಮತ್ತು 3,
 (ಡಿ)1, 2, 3

ಸರಿ ಉತ್ತರ

(ಡಿ) 1, 2, 3


30.ಗುಪ್ತಚಲಾವಣೆ ನೋಟು ನಾಣ್ಯಗಳ ನಿಷೇಧಕ್ಕೆ ಕೆಳಗಿನ ಯಾವ ಸಮಿತಿ ಶಿಫಾರಸ್ಸು ಮಾಡಿದೆ ?
 (ಎ) ಸುಭಾಷ್ ಚಂದ್ರ ಗಾರ್ಗ್ ಸಮಿತಿ
 (ಬಿ) ಪಿ.ಎಲ್. ಟಂಡನ್ ಸಮಿತಿ
 (ಸಿ)ಕರ್ತಾರ್ ಸಿಂಗ್ ಸಮಿತಿ
 (ಡಿ)ಜೆ.ಜೆ. ಇರಾನಿ ಸಮಿತಿ

ಸರಿ ಉತ್ತರ

(ಎ) ಸುಭಾಷ್ ಚಂದ್ರ ಗಾರ್ಗ್ ಸಮಿತಿ


31.ಇತ್ತೀಚೆಗೆ ಯಾವ ರಾಜ್ಯ ಸರ್ಕಾರ 2021-2030 ಕ್ಕಾಗಿ ಹೊಸ ಜನಸಂಖ್ಯಾ ನೀತಿಯನ್ನು ಘೋಷಿಸಿತು ?
 (ಎ) ಮಹಾರಾಷ್ಟ್ರ
 (ಬಿ)ಉತ್ತರ ಪ್ರದೇಶ
 (ಸಿ)ಕರ್ನಾಟಕ
 (ಡಿ)ಪಶ್ಚಿಮ ಬಂಗಾಳ

ಸರಿ ಉತ್ತರ

(ಬಿ) ಉತ್ತರ ಪ್ರದೇಶ


32.ಡೆಕನ್ ಟ್ರ್ಯಾಪ್ಸ್ ಬಗ್ಗೆಯ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದುದನ್ನು ಆಯ್ಕೆ ಮಾಡಿ.
 1.ಜ್ವಾಲಾಮುಖಿ ಸ್ಪೋಟಗಳ ಪ್ರವಾಹವು ಡೆಕ್ಕನ್ ಟ್ರ್ಯಾಪ್ ರಚನೆಗೆ ಕಾರಣವಾಗಿದೆ.
 2.ಡೆಕನ್ ಟ್ರ್ಯಾಪ್ ನಲ್ಲಿ ಕಪ್ಪು ಮಣ್ಣು ಇರುತ್ತದೆ.
 (ಎ) 1 ಮಾತ್ರ
 (ಬಿ)2 ಮಾತ್ರ
 (ಸಿ)1 ಮತ್ತು 2 ಎರಡೂ
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಸಿ) 1 ಮತ್ತು 2 ಎರಡೂ


33.ಭಾರತೀಯ ಪ್ರಾಕೃತಿಕ ಕೃಷಿ ಪದ್ಧತಿ (BPKP)ಯ ಬಗ್ಗೆ, ಕೆಳಗಿನ ಹೇಳಿಕೆಗಳನ್ನು ಗಮನಿಸಿ.
 1.ಇದು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಒಂದು ಉಪಯೋಜನೆ.
 2.ಇದು ಸಂಪ್ರದಾಯಿಕ ಸ್ಥಳೀಯ ಪದ್ಧತಿಗಳನ್ನು ಉತ್ತೇಜಿಸುತ್ತದೆ.
 3.ಇದು ಸಂಶ್ಲೇಷಿತ ರಾಸಾಯನಿಕ ಒಳಹರಿವುಗಳನ್ನು ಒದಗಿಸುವಿಕೆಯನ್ನು ಹೊರಗಿಡಲು ಒತ್ತು ನೀಡುತ್ತದೆ.
 4.BPKPಯ ಅಡಿಯಲ್ಲಿ, ಕ್ಲಸ್ಟರ್ (ಗೊಂಚಲು) ರಚನೆಗೆ 3 ವರ್ಷಗಳ ಕಾಲ ಹಣಕಾಸಿನ ನೆರವು ನೀಡಲಾಗುತ್ತದೆ.
 ಇವುಗಳಲ್ಲಿ ಯಾವುದು ಸರಿ ?
 (ಎ) 1 ಮಾತ್ರ
 (ಬಿ)1 ಮತ್ತು 3
 (ಸಿ)1, 2 ಮತ್ತು 4
 (ಡಿ)2, 3 ಮತ್ತು 4

ಸರಿ ಉತ್ತರ

(ಡಿ) 2, 3 ಮತ್ತು 4


34.NASA ದ VIPER MISSION ಏನನ್ನು ಅನ್ವೇಶಿಸಲು ?
 (ಎ) ಚಂದ್ರನ ದಕ್ಷಿಣ ಧ್ರುವ
 (ಬಿ)ಮಂಗಳ ಗ್ರಹದ ದಕ್ಷಿಣ ಧ್ರುವ
 (ಸಿ)ಗುರು ಗ್ರಹದ ದಕ್ಷಿಣ ಧ್ರುವ
 (ಡಿ)ಬುಧ ಗ್ರಹದ ದಕ್ಷಿಣ ಧ್ರುವ

ಸರಿ ಉತ್ತರ

(ಎ) ಚಂದ್ರನ ದಕ್ಷಿಣ ಧ್ರುವ


35.ವಿಜ್ಞಾನಿಗಳು “ಬ್ರ್ಯೂಮ್ ಭರಟಿಯೆನ್ಸಿಸ್" ಎಂಬ ಹೆಸರಿನ ಮೋಸ್ ಜಾತಿಯ ಒಂದು ಪ್ರಕಾರವನ್ನು ಶೋಧಿಸಿದ್ದಾರೆ. ಅದು ಎಲ್ಲಿದೆ ?
 (ಎ) ಹಿಮಾಲಯ
 (ಬಿ)ಪಶ್ಚಿಮ ಘಟ್ಟ
 (ಸಿ)ಅಂಟಾರ್ಟಿಕ
 (ಡಿ)ಮಡಗಾಸ್ಕರ್

ಸರಿ ಉತ್ತರ

(ಸಿ) ಅಂಟಾರ್ಟಿಕ


36."2-deoxy-D-Glucose" ಈ ಪದವು ಯಾವುದರ ಜೊತೆ ಸಂಬಂಧಿಸಿದೆ ?
 (ಎ) ನಂಜು ನಿರೋಧಕ ಔಷಧ
 (ಬಿ)ಶೀಲೀಂಧ್ರ ವಿರೋಧಿ ಔಷಧ
 (ಸಿ)ಕೋವಿಡ್ ವಿರೋಧಿ ಔಷಧ
 (ಡಿ)ಬ್ಯಾಕ್ಟೀರಿಯಾ ವಿರೋಧಿ ಔಷಧ

ಸರಿ ಉತ್ತರ

(ಸಿ) ಕೋವಿಡ್ ವಿರೋಧಿ ಔಷಧ


37.ಕೆಳಗಿನ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
 1.ಅಗ್ನಿ -ಪಿ ಪರಮಾಣು ಸಾಮರ್ಥ್ಯವುಳ್ಳ ಪ್ರಕ್ಷೇಪಣ ಬ್ಯಾಲಿಸ್ಟಿಕ್ ಕ್ಷಿಪಣಿ.
 2.DRDO ನಿಂದ ಇದನ್ನು ಪರೀಕ್ಷಿಸಲಾಗಿದೆ.
 3.ಇದು 1000-2000 KM ನಡುವಿನ ಶ್ರೇಣಿಯ ಸಾಮರ್ಥ್ಯದೊಂದಿಗೆ ಡಬ್ಬಿಯಲ್ಲಿರುವ ಕ್ಷಿಪಣಿಯಾಗಿದೆ.
 (ಎ) 1 ಮಾತ್ರ
 (ಬಿ)1 ಮತ್ತು 2
 (ಸಿ)1 ಮತ್ತು 3
 (ಡಿ)1, 2 ಮತ್ತು 3

ಸರಿ ಉತ್ತರ

(ಡಿ) 1, 2 ಮತ್ತು 3


38.ಕೆಳಗಿನವರುಗಳಲ್ಲಿ ಯಾರನ್ನು ಇತ್ತೀಚೆಗೆ ಫುಕುಓಕಾ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಯಿತು ?
 (ಎ) P. ಸಾಯಿನಾಥ್
 (ಬಿ)U.R. ಅನಂತಮೂರ್ತಿ
 (ಸಿ)ಸಾಯಿನಾ ನೆಹ್ವಾಲ್
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಎ) P. ಸಾಯಿನಾಥ್


39.ಇವರುಗಳಲ್ಲಿ ಯಾರೆಲ್ಲರೂ ಜ್ಞಾನಪೀಠ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ?
 1.ಕೆ. ಶಿವರಾಮ ಕಾರಂತ್
 2.ಮಾಸ್ತಿ ವೆಂಕಟೇಶ ಅಯ್ಯಂಗಾರ್
 3.ಯು.ಆರ್. ಅನಂತಮೂರ್ತಿ
 4.ಗಿರೀಶ್ ಕಾರ್ನಾಡ್
 5.ಚಂದ್ರಶೇಖರ ಕಂಬಾರ
 (ಎ) 1 ಮಾತ್ರ
 (ಬಿ)1, 2 ಮತ್ತು 4 ಮಾತ್ರ
 (ಸಿ)1, 2 ಮತ್ತು 3 ಮಾತ್ರ
 (ಡಿ)1, 2, 3, 4 ಮತ್ತು 5

ಸರಿ ಉತ್ತರ

(ಡಿ) 1, 2, 3, 4 ಮತ್ತು 5


40.ಕೇಂದ್ರ ಜಾಗೃತ ಆಯೋಗವು ತನ್ನ ವರದಿಯನ್ನು ಯಾರಿಗೆ ಸಲ್ಲಿಸುತ್ತದೆ ?
 (ಎ) ಭಾರತದ ರಾಷ್ಟ್ರಪತಿ
 (ಬಿ)ಭಾರತದ ಪ್ರಧಾನಮಂತ್ರಿ
 (ಸಿ)ಲೋಕಸಭೆಯ ಸ್ಪೀಕರ್ (ಅಧ್ಯಕ್ಷ)
 (ಡಿ)ಸಂಸತ್ತು

ಸರಿ ಉತ್ತರ

(ಎ) ಭಾರತದ ರಾಷ್ಟ್ರಪತಿ


41.ಬಾಲ್ಫೊರ್ ಘೋಷಣೆಯು ಯಾವುದಕ್ಕೆ ಸಂಬಂಧಿಸಿದೆ ?
 (ಎ) ಸುಡಾನ್
 (ಬಿ)ಆಫ್ಘಾನಿಸ್ತಾನ
 (ಸಿ)ಪ್ಯಾಲೆಸ್ಟೈನ್
 (ಡಿ)ಸಿರಿಯಾ

ಸರಿ ಉತ್ತರ

(ಸಿ) ಪ್ಯಾಲೆಸ್ಟೈನ್


42.'ಡಾವಿನ್ಸಿ +' ಮತ್ತು 'ವೆರಿಟಸ್’ ಈ ಯಾನಗಳು ಯಾವುದಕ್ಕೆ ಸಂಬಂಧಿಸಿದೆ ?
 (ಎ) ಶುಕ್ರ ಗ್ರಹ
 (ಬಿ)ಮಂಗಳ ಗ್ರಹ
 (ಸಿ)ಗುರು ಗ್ರಹ
 (ಡಿ)ಚಂದ್ರ ಗ್ರಹ

ಸರಿ ಉತ್ತರ

(ಎ) ಶುಕ್ರ ಗ್ರಹ


43.ತೈಲ ಸೋರಿಕೆಯ ಬಯೋರೆಮೆಡಿಯೇಶನ್ ಗಾಗಿ (ಜೈವಿಕ ಸುಧಾರಿಸುವಿಕೆಗಾಗಿ) ತೈಲ ಜ್ಯಾಪರ್ ತಂತ್ರಜ್ಞಾನವನ್ನು ಯಾರಿಂದ ಅಭಿವೃದ್ಧಿಪಡಿಸಲಾಗಿದೆ
 (ಎ) DRDO
 (ಬಿ)ICAR
 (ಸಿ)TERI
 (ಡಿ)BARC

ಸರಿ ಉತ್ತರ

(ಸಿ) TERI


44.ಭೌಗೋಳಿಕ ಸಮಯದ ಮೂಲಕ ಭೂಮಿಯ ಮೇಲ್ಮೈ ಮೇಲೆ ಕಾಂತೀಯ ಧ್ರುವಗಳ ವಲಸೆಯನ್ನು ಏನೆಂದು ಕರೆಯಲಾಗುತ್ತದೆ ?
 (ಎ) ಆಕಾಶ ಧ್ರುವ (ಸೆಲೆಸ್ಬಿಯಲ್ ಪೋಲ್)
 (ಬಿ)ಅರೋರಾ ಪೋಲಾರಿಸ್
 (ಸಿ)ಅಕ್ಷಿಯ ತಿರುಗುವಿಕೆ
 (ಡಿ)ಧ್ರುವ ಅಲೆದಾಟ (ವಾಂಡರಿಂಗ್)

ಸರಿ ಉತ್ತರ

(ಡಿ) ಧ್ರುವ ಅಲೆದಾಟ (ವಾಂಡರಿಂಗ್)


45.ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತಗಳ ರಚನೆಗೆ ಕಾರಣವಾದುದು
 1.ಕಡಿಮೆ ಒತ್ತಡ
 2.ಸಮುದ್ರದ ಮೇಲೈಯ ಕಡಿಮೆ ತಾಪಮಾನ
 3.ನಿಧಾನವಾದ ಮಂದವಾದ ಗಾಳಿ
 (ಎ) 1 ಮಾತ್ರ
 (ಬಿ)1 ಮತ್ತು 2
 (ಸಿ)1 ಮತ್ತು 3
 (ಡಿ)1, 2 ಮತ್ತು 3

ಸರಿ ಉತ್ತರ

(ಸಿ) 1 ಮತ್ತು 3


46.UNHRC (ಯುನೈಟೆಡ್ ನ್ಯಾಶನಲ್ಸ್ ಹ್ಯುಮನ್ ರೈಟ್ಸ್ ಕೌನ್ಸಿಲ್) ಯ ಪ್ರಧಾನ ಕಛೇರಿ ಎಲ್ಲಿದೆ ?
 (ಎ) ಪ್ಯಾರಿಸ್
 (ಬಿ)ಜೆನೆವಾ
 (ಸಿ)ಲಂಡನ್
 (ಡಿ)ನ್ಯೂಯಾರ್ಕ್

ಸರಿ ಉತ್ತರ

(ಬಿ) ಜೆನೆವಾ


47.QUAD ಗುಂಪುಗಾರಿಕೆಯ ಭಾಗವಾಗಿ, ಈ ಕೆಳಗಿನ ಯಾವ ದೇಶಗಳಿವೆ ?
 1.ಭಾರತ
 2.ಯುಎಸ್ಎ
 3.ಜಪಾನ್
 4.ಆಸ್ಟ್ರೇಲಿಯ
 5.ರಷ್ಯಾ
 6.ಜರ್ಮನಿ
 (ಎ) 1, 2, 4, 5
 (ಬಿ)1, 2, 3, 4
 (ಸಿ)1, 2, 4, 6
 (ಡಿ)1, 2, 3, 5

ಸರಿ ಉತ್ತರ

(ಬಿ) 1, 2, 3, 4


48."ವಿಂಚ್ ಕಾಂಬ್' ಎಂದರೆ ಏನು ?
 (ಎ) ಒಂದು ಉಲ್ಕಾಶಿಲೆ
 (ಬಿ)ಒಂದು ಪೂತಿನಾಶಕ
 (ಸಿ)ಆಕ್ರಮಣಕಾರಿ ಸಸ್ಯ
 (ಡಿ)ಒಂದು ಹೊಸ ಕೀಟ ಜಾತಿ

ಸರಿ ಉತ್ತರ

(ಎ) ಒಂದು ಉಲ್ಕಾಶಿಲೆ


49.ಯಾರು ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯ ಮುಖ್ಯಸ್ಥರಾಗಿದ್ದಾರೆ ?
 (ಎ) ಭಾರತದ ಪ್ರಧಾನ ಮಂತ್ರಿ
 (ಬಿ)ಕೇಂದ್ರ ಗೃಹ ಮಂತ್ರಿ
 (ಸಿ)ಲೋಕಸಭೆಯ ಸಭಾಪತಿ (ಸ್ಪೀಕರ್)
 (ಡಿ)ಕ್ಯಾಬಿನೆಟ್ ಕಾರ್ಯದರ್ಶಿ

ಸರಿ ಉತ್ತರ

(ಡಿ) ಕ್ಯಾಬಿನೆಟ್ ಕಾರ್ಯದರ್ಶಿ


50.ಕೆಳಗಿನ ಯಾವುದರಲ್ಲಿ ಚಿತ್ರವು ರೆಟಿನಾ (ಅಕ್ಷಿಪಟ)ದ ಮುಂಭಾಗದಲ್ಲಿ ರೂಪುಗೊಳ್ಳುತ್ತದೆ ?
 (ಎ) ಸಮೀಪದೃಷ್ಟಿ (ಮಯೋಪಿಯಾ)
 (ಬಿ)ಗೆಂಟುಕಣ್ಣು (ಹೈಪರ್ಮೆಟ್ರೋಪಿಯಾ)
 (ಸಿ)ದೂರದೃಷ್ಟಿ (ಪ್ರೆಸ್ ಬಯೋಪಿಯಾ)
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಎ) ಸಮೀಪದೃಷ್ಟಿ (ಮಯೋಪಿಯಾ)


51.ಕೇಶಾನ್ ರೋಗ ಯಾವುದರ ಕೊರತೆಯಿಂದ ಉಂಟಾಗುತ್ತದೆ ?
 (ಎ) ನಿಯಾಸಿನ್
 (ಬಿ)ವಿಟಮಿನ್ C
 (ಸಿ)ಮ್ಯಾಗ್ನೇಸಿಯಂ
 (ಡಿ)ಸೆಲೆನಿಯಮ್

ಸರಿ ಉತ್ತರ

(ಡಿ) ಸೆಲೆನಿಯಮ್


52.ಹಿಮಾಲಯದ ಹಿಮನದಿಗಳ (ನೀರ್ಗಲು) ದಪ್ಪವನ್ನು ಅಂದಾಜು ಮಾಡಲು ಯಾವ ದೇಶವು ವಾಯುಗಾಮಿ ರೇಡಾರ್ ಸಮೀಕ್ಷೆಗಳನ್ನು ನಡೆಸುತ್ತದೆ ?
 (ಎ) ನೇಪಾಳ
 (ಬಿ)ಭೂತಾನ್
 (ಸಿ)ಭಾರತ
 (ಡಿ)ಚೈನಾ

ಸರಿ ಉತ್ತರ

(ಸಿ) ಭಾರತ


53.ಒಂದು ಮೇಣದಬತ್ತಿಯು ಶೂನ್ಯ ಗುರುತ್ವಾಕರ್ಷಣೆಯ ಸ್ಥಿತಿಯಲ್ಲಿ ಉರಿದರೆ,
 (ಎ) ಮೇಣದಬತ್ತಿ ಉರಿಯುವುದಿಲ್ಲ
 (ಬಿ)ಮೇಣದಬತ್ತಿಯ ಜ್ವಾಲೆ ಗೋಳಾಕಾರವಾಗಿದೆ
 (ಸಿ)ಮೇಣದಬತ್ತಿಯು ಸ್ವಲ್ಪಕಾಲ ಉರಿಯುವುದು
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಬಿ) ಮೇಣದಬತ್ತಿಯ ಜ್ವಾಲೆ ಗೋಳಾಕಾರವಾಗಿದೆ


54.ಭಾರತದ ರಾಷ್ಟ್ರಪತಿಯವರು ರಾಜ್ಯಸಭೆಗೆ ಎಷ್ಟು ಸದಸ್ಯರ ಹೆಸರನ್ನು ಸೂಚಿಸುತ್ತಾರೆ ?
 (ಎ) 10
 (ಬಿ)12
 (ಸಿ)15
 (ಡಿ)20

ಸರಿ ಉತ್ತರ

(ಬಿ) 12


55.ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಬಗ್ಗೆ, ಕೆಳಗಿನ ಹೇಳಿಕೆಗಳನ್ನು ಗಮನಿಸಿ.
 1.ಇದು 15 ಲೋಕಸಭೆಯ ಸದಸ್ಯರು ಮತ್ತು 7 ರಾಜ್ಯಸಭೆ ಸದಸ್ಯರನ್ನು ಒಳಗೊಂಡಿದೆ.
 2.ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಕಾಲಾವಧಿ 1 ವರ್ಷ.
 3.CAG ಯ ವಾರ್ಷಿಕ ವರದಿಗಳನ್ನು ಲೆಕ್ಕಪರಿಶೋಧಿಸುವುದು ಇದರ ಮುಖ್ಯ ಕಾರ್ಯವಾಗಿದೆ.
 ಇವುಗಳಲ್ಲಿ ಯಾವುದು ಸರಿ ?
 (ಎ) 1 ಮಾತ್ರ
 (ಬಿ)1 ಮತ್ತು 2
 (ಸಿ)1,2,3
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಸಿ) 1,2,3


56.ಯಾರು ಎಲೆಕ್ಟ್ರಾನು (ವಿದ್ಯುತ್ ಮೂಲಕಣ)ಗಳನ್ನು ಶೋಧನೆ ಮಾಡಿದರು ?
 (ಎ) ಜೇಮ್ಸ್ ಚಾಂಡ್ ವಿಕ್
 (ಬಿ)ಗೋಲ್ಡ್ ಸ್ಟೈನ್
 (ಸಿ)ಜೆ.ಜೆ. ಥಾಮ್ಸನ್
 (ಡಿ)ಎರ್ನೆಸ್ಟ್ ರುಥರ್ಫೋರ್ಡ್

ಸರಿ ಉತ್ತರ

(ಸಿ) ಜೆ.ಜೆ. ಥಾಮ್ಸನ್


57.'ಕಂಬಳ' ಹೆಸರಿನ ವಾರ್ಷಿಕ ಎಮ್ಮೆ ಓಟ, ಯಾವ ರಾಜ್ಯದಲ್ಲಿ ನಡೆಯುತ್ತದೆ ?
 (ಎ) ತಮಿಳು ನಾಡು
 (ಬಿ)ಆಂಧ್ರ ಪ್ರದೇಶ
 (ಸಿ)ಮಹಾರಾಷ್ಟ್ರ
 (ಡಿ)ಕರ್ನಾಟಕ

ಸರಿ ಉತ್ತರ

(ಡಿ) ಕರ್ನಾಟಕ


58.ಸೋವಾ – ರಿಗ್ಪಾ ದ ರಾಷ್ಟ್ರೀಯ ಸಂಸ್ಥೆಯನ್ನು ಎಲ್ಲಿ ಸ್ಥಾಪಿಸಲಾಯಿತು ?
 (ಎ) ಗ್ಯಾಂಗ್ಟಾಕ್
 (ಬಿ)ಲೇಹ್
 (ಸಿ)ತವಾಂಗ್
 (ಡಿ)ದಾರ್ಜಿಲಿಂಗ್

ಸರಿ ಉತ್ತರ

(ಬಿ) ಲೇಹ್


59.ಭಾರತದ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರನ್ನು ಯಾರು ನೇಮಿಸುತ್ತಾರೆ ?
 (ಎ) ರಾಷ್ಟ್ರಪತಿ
 (ಬಿ)ಪ್ರಧಾನ ಮಂತ್ರಿ
 (ಸಿ)ಭಾರತದ ಮುಖ್ಯ ನ್ಯಾಯಾಧೀಶರು
 (ಡಿ)ಸಂಸತ್ತಿನ ಸಮಿತಿ

ಸರಿ ಉತ್ತರ

(ಎ) ರಾಷ್ಟ್ರಪತಿ


60.ರಾಷ್ಟ್ರೀಯ ತುರ್ತುಪರಿಸ್ಥಿತಿಯ ಘೋಷಣೆಯನ್ನು ಯಾವ ಸಂದರ್ಭದಲ್ಲಿ ಮಾಡಲಾಗುತ್ತದೆ ?
 (ಎ) ಯುದ್ಧ
 (ಬಿ)ಸಶಸ್ತ್ರದಂಗೆ
 (ಸಿ)ಬಾಹ್ಯ ಆಕ್ರಮಣ
 (ಡಿ)ಇವುಗಳಲ್ಲಿ ಎಲ್ಲವೂ

ಸರಿ ಉತ್ತರ

(ಡಿ) ಇವುಗಳಲ್ಲಿ ಎಲ್ಲವೂ


61.ಮೊಲಕೊಲುಕುಲು, ನವರ ಮತ್ತು ದುಬ್ರಾಜ್, ಇವುಗಳು ಏನು ?
 (ಎ) ಭಾರತದ ಬಗೆಬಗೆಯ ಅಕ್ಕಿ
 (ಬಿ)ಭಾರತದ ಬಗೆಬಗೆಯ ಗೋಧಿ
 (ಸಿ)ಭಾರತದ ಜಾನುವಾರು ತಳಿಗಳು
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಎ) ಭಾರತದ ಬಗೆಬಗೆಯ ಅಕ್ಕಿ


62.ಅಂತರ-ರಾಜ್ಯ ಪರಿಷತ್ತಿನ ಸ್ಥಾಯಿ ಸಮಿತಿಯ ಅಧ್ಯಕ್ಷರು ಯಾರು ?
 (ಎ) ಪ್ರಧಾನ ಮಂತ್ರಿ
 (ಬಿ)ರಾಷ್ಟ್ರಪತಿ
 (ಸಿ)ಕೇಂದ್ರ ಗೃಹ ಮಂತ್ರಿ
 (ಡಿ)ಲೋಕಸಭೆಯ ಸಭಾಪತಿ (ಸ್ಪೀಕರ್)

ಸರಿ ಉತ್ತರ

(ಸಿ) ಕೇಂದ್ರ ಗೃಹ ಮಂತ್ರಿ


63.ಭಾರತದ ಅಧಿಕೃತ ಭಾಷೆಗಳ ಬಗ್ಗೆ, ಕೆಳಗಿನ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದುದನ್ನು ಆಯ್ಕೆಮಾಡಿ.
 1.ಸಂವಿಧಾನದ XVII ನೆಯ ಭಾಗವು ಅಧಿಕೃತ ಭಾಷೆಗಳಿಗೆ ಸಂಬಂಧ ಪಟ್ಟಿದೆ.
 2.ಭಾಗXVII ರ ನಿಬಂಧನೆಗಳನ್ನು 4 ಶೀರ್ಷಿಕೆಗಳಾಗಿ ವಿಂಗಡಿಸಲಾಗಿದೆ. ಒಕ್ಕೂಟದ ಭಾಷೆಗಳು, ಪ್ರಾದೇಶಿಕ ಭಾಷೆಗಳು, ನ್ಯಾಯಾಂಗದ ಭಾಷೆಗಳು ಮತ್ತು ಕಾನೂನುಗಳು ಮತ್ತು ವಿಶೇಷ ನಿರ್ದೇಶನಗಳು.
 (ಎ) 1 ಮಾತ್ರ
 (ಬಿ)2 ಮಾತ್ರ
 (ಸಿ)1 ಮತ್ತು 2
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಸಿ) 1 ಮತ್ತು 2


64.ಪಟ್ಟದಕಲ್ಲು ದೇವಾಲಯ ಸಂಕೀರ್ಣದ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
 1.ಇದು UNESCOವಿನ ಒಂದು ವಿಶ್ವ ಪರಂಪರೆಯ ತಾಣವಾಗಿದೆ ಮತ್ತು ಮಲಪ್ರಭ ನದಿಯ ತೀರದಲ್ಲಿದೆ.
 2.ಇದು ಪಾಂಡ್ಯ ರಾಜವಂಶದ ಆಳ್ವಿಕೆಯ ಸಮಯದಲ್ಲಿ ನಿರ್ಮಿಸಲಾಗಿತ್ತು.
 3.ಸಂಕೀರ್ಣದಲ್ಲಿರುವ ವಿರೂಪಾಕ್ಷ ದೇವಾಲಯವನ್ನು ರಾಣಿ ಲೋಕಮಹಾದೇವಿಯವರಿಂದ ನಿರ್ಮಿಸಲಾಗಿದೆ
 ಕೆಳಗಿನವುಗಳಲ್ಲಿ ಯಾವುದು/ವು ಸರಿ ?
 (ಎ) 1 ಮಾತ್ರ
 (ಬಿ)1 ಮತ್ತು 2
 (ಸಿ)1 ಮತ್ತು 3
 (ಡಿ)1, 2 ಮತ್ತು 3

ಸರಿ ಉತ್ತರ

(ಸಿ) 1 ಮತ್ತು 3


65.ರಾಜ್ಯಪಾಲರಿಗೆ ಯಾರು ಪ್ರಮಾಣವಚನ ಬೋಧಿಸುತ್ತಾರೆ ?
 (ಎ) ಮುಖ್ಯಮಂತ್ರಿ
 (ಬಿ)ಶ್ರೇಷ್ಠ ನ್ಯಾಯಾಲಯದ (ಹೈಕೋರ್ಟ್) ಮುಖ್ಯ ನ್ಯಾಯಾಧೀಶರು
 (ಸಿ)ವಿಧಾನಸಭೆಯ ಸ್ಪೀಕರ್ (ಅಧ್ಯಕ್ಷ)
 (ಡಿ) ಭಾರತದ ರಾಷ್ಟ್ರಪತಿ

ಸರಿ ಉತ್ತರ

(ಬಿ) ಶ್ರೇಷ್ಠ ನ್ಯಾಯಾಲಯದ (ಹೈಕೋರ್ಟ್) ಮುಖ್ಯ ನ್ಯಾಯಾಧೀಶರು


66.ಕೆಳಗಿನ ಯಾವ ಭಾರತದ ಬಟ್ಟೆಗಳು (ವಸ್ತ್ರಗಳು) ಭೌಗೋಳಿಕ ಸೂಚನಾ ಟ್ಯಾಗ್ ಪಡೆದಿದೆ ?
 1.ಕೋಟಾ ಡೊರಿಯಾ
 2.ಇಳಕಲ್ ಸೀರೆ
 3.ಮೊಳಕಾಲ್ಮೂರು ಸೀರೆ
 4.ಬಲರಾಮಪುರಮ್ ಸೀರೆ
 5.ಕುಥಂಪುಲ್ಲಿ ಸೀರೆ
 6.ಪುನೇರಿ ಪಗಡಿ
 (ಎ) 1, 3, 5
 (ಬಿ)2, 4, 6
 (ಸಿ)1, 2, 5, 6
 (ಡಿ)1,2,3, 4, 5, 6

ಸರಿ ಉತ್ತರ

(ಡಿ) 1,2,3, 4, 5, 6


67.ಪಟಚಿತ್ರ ಚಿತ್ರಕಲೆಯ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದುದನ್ನು ಆಯ್ಕೆ ಮಾಡಿ.
 1.ಓಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಚಿತ್ರಕಲೆಯ ಅತ್ಯಂತ ಹಳೆಯ ಶೈಲಿಯಲ್ಲಿ ಇದು ಒಂದಾಗಿದೆ.
 2.ಪಟಚಿತ್ರದ ಭೌಗೋಳಿಕ ಚನೆಗಳನ್ನು ಎರಡೂ ರಾಜ್ಯಗಳಲ್ಲಿ ವಿಭಿನ್ನವಾಗಿ ನೊಂದಾಯಿಸಲಾಗಿದೆ. ಏಕೆಂದರೆ ಎರಡೂ ರಾಜ್ಯಗಳಲ್ಲಿನ ವರ್ಣಚಿತ್ರ ಶೈಲಿ ಮತ್ತು ಲಕ್ಷಣಗಳು ವಿಭಿನ್ನವಾಗಿವೆ.
 (ಎ) 1 ಮಾತ್ರ
 (ಬಿ)2 ಮಾತ್ರ
 (ಸಿ)1 ಮತ್ತು 2
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಸಿ) 1 ಮತ್ತು 2


68.‘ಪತ್ರೊಡೆ’ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
 1.ಇದು ಕೊಲೆಕೇಶಿಯಾ ಎಲೆಗಳನ್ನು ಬಳಸಿ, ತಯಾರಿಸಿದ ಸಸ್ಯಹಾರಿ ಖಾದ್ಯವಾಗಿದೆ ಮತ್ತು ಇದನ್ನು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಅಡುಗೆ ಮಾಡುತ್ತಾರೆ.
 2.2021 ರಲ್ಲಿ ಆಯುಷ್ ಕೇಂದ್ರ ಸಚಿವಾಲಯವು, ಆಯುಷ್ ಔಷಧ ಪದ್ದತಿಯ ಸಾಂಪ್ರದಾಯಿಕ ಆಹಾರ ಪಾಕವಿಧಾನಗಳಲ್ಲಿ ಪತ್ರೋಡೆ ಒಂದಾಗಿದೆ ಎಂದು ಸೂಚಿಸಿದ್ದಾರೆ.
 (ಎ) 1 ಮಾತ್ರ
 (ಬಿ)2 ಮಾತ್ರ
 (ಸಿ)1 ಮತ್ತು 2 ಎರಡೂ
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಸಿ) 1 ಮತ್ತು 2 ಎರಡೂ


69.ಕೆಳಗಿನ ಮಾಹಿತಿಯ ಆಧಾರದ ಮೇಲೆ ಇದು ಭಾರತದ ಯಾವ ಬುಡಕಟ್ಟು ಎಂದು ಕಂಡು ಹಿಡಿಯಿರಿ.
 1.ಜನಾಂಗೀಯ ಗುಂಪನ್ನು ಹಬ್ಶಿ ಹೆಸರಿನಿಂದಲೂ ಕರೆಯುತ್ತಾರೆ ಮತ್ತು ಮೂಲದಲ್ಲಿ ಆಫ್ರಿಕಾ ಎಂದು ನಂಬಲಾಗಿದೆ.
 2.ಅವರ ಜನಸಂಖ್ಯೆ ಮುಖ್ಯವಾಗಿ ಗುಜರಾತ್, ಕರ್ನಾಟಕ, ಹೈದರಾಬಾದ್ ಮೊದಲಾದ ಭಾರತದ ಕ್ಷೇತ್ರಗಳಲ್ಲಿವೆ.
 3.ಅವರನ್ನು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
 (ಎ) ಗಾರೊ
 (ಬಿ)ಸಿದ್ಧಿ
 (ಸಿ)ಗೊಂಡ್
 (ಡಿ)ಅಪಟಾನಿಗಳು

ಸರಿ ಉತ್ತರ

(ಬಿ) ಸಿದ್ಧಿ


70.ಕೆಳಗಿನವುಗಳನ್ನು ಹೊಂದಿಸಿ.
 A.ನಾತುಪುರ ಪಟ್ಟು1.ಕರ್ನಾಟಕ
 B.ಲಾವಣಿ2.ತಮಿಳುನಾಡು
 C.ಭಾವಗೀತೆ3.ಪಂಜಾಬ್
 D.ಭಾಂಗ್ರಾ4.ಮಹಾರಾಷ್ಟ್ರ
 (ಎ) A-2, B-4, C-1, D-3
 (ಬಿ)A-4, B-2, C-1, D-3
 (ಸಿ)A-2, B-3, C-4, D-1
 (ಡಿ)A-1, B-4, C-2, D-3

ಸರಿ ಉತ್ತರ

(ಎ) A-2, B-4, C-1, D-3


71.ಲೋಕ್ ಅದಾಲತ್ ಗಳ ಬಗ್ಗೆ, ಕೆಳಗಿನ ಸರಿಯಾದ ಹೇಳಿಕೆಗಳನ್ನು ಆಯ್ಕೆ ಮಾಡಿ.
 1.ಲೋಕ್ ಅದಾಲತ್ ಪ್ರಶಸ್ತಿಯನ್ನು ಸಿವಿಲ್ ನ್ಯಾಯಾಲಯದ ತೀರ್ಪು ಅಥವಾ ಯಾವುದೇ ಇತರ ನ್ಯಾಯಾಲಯದ ಆದೇಶವೆಂದು ಪರಿಗಣಿಸಲಾಗುತ್ತದೆ.
 2.ಲೋಕ್ ಅದಾಲತ್ ಪ್ರಶಸ್ತಿಯ ವಿರುದ್ದ , ಸಂಬಂಧಪಟ್ಟ ಪಕ್ಷಗಳು ಮೇಲ್ಮನವಿ ಸಲ್ಲಿಸಬಹುದು.
 (ಎ) 1 ಮಾತ್ರ
 (ಬಿ)2 ಮಾತ್ರ
 (ಸಿ)1 ಮತ್ತು 2 ಎರಡೂ
 (ಡಿ)1 ಮತ್ತು 2 ಅಲ್ಲ

ಸರಿ ಉತ್ತರ

(ಎ) 1 ಮಾತ್ರ


72.ಭಾರತದಲ್ಲಿ ಸ್ಥಳೀಯ ಸ್ವಯಂ ಸರ್ಕಾರದ ತಂದೆಯಾಗಿ ಯಾರನ್ನು ಪರಿಗಣಿಸಿದ್ದಾರೆ ?
 (ಎ) ಲಾರ್ಡ್ ಕರ್ಜನ್
 (ಬಿ)ಲಾರ್ಡ್ ರಿಪ್ಟನ್
 (ಸಿ)ಲಾರ್ಡ್ ಡಲ್ಹೌಸಿ
 (ಡಿ)ಲಾರ್ಡ್ ಮೇಯೊ

ಸರಿ ಉತ್ತರ

(ಬಿ) ಲಾರ್ಡ್ ರಿಪ್ಟನ್


73.ಶಹತೂಷ್, ಒಂದು ವಿಧದ ಶಾಲು ಆಗಿದ್ದು, ಅದನ್ನು ಯಾವುದರ ಕೂದಲಿನಿಂದ ತಯಾರಿಸಲಾಗಿದೆ ?
 (ಎ) ಕಪ್ಪು ಬಕ್ (ಕೃಷ್ಣಮೃಗ)
 (ಬಿ)ಹಿಮಾಲಯದ ಕಾಡು ಯಾಕ್ (ಚಮರೀಮೃಗ- ವೃಷಭ ಜಾತಿಯ ಮೃಗ)
 (ಸಿ)ಟಿಬೆಟಿನ ಹುಲ್ಲೆ
 (ಡಿ)ಕಪ್ಪು ಕರಡಿ

ಸರಿ ಉತ್ತರ

(ಸಿ) ಟಿಬೆಟಿನ ಹುಲ್ಲೆ


74.ಸಹಕಾರಿ ಸಂಘಗಳನ್ನು ರೂಪಿಸುವುದು ಮೂಲಭೂತ ಹಕ್ಕು ಎಂದು ಸಂವಿಧಾನದ ಯಾವ ವಿಧಿಯು ಹಕ್ಕನ್ನು ಮಾಡಿದೆ ?
 (ಎ) ಲೇಖನ 17
 (ಬಿ)ಲೇಖನ 18
 (ಸಿ)ಲೇಖನ 19
 (ಡಿ)ಲೇಖನ 20

ಸರಿ ಉತ್ತರ

(ಸಿ) ಲೇಖನ 19


75.ಎಷ್ಟು ಉಪನಿಷತ್ತುಗಳು ಇವೆ ?
 (ಎ) 102
 (ಬಿ)104
 (ಸಿ)106
 (ಡಿ)108

ಸರಿ ಉತ್ತರ

(ಡಿ) 108


76.ಯಾರ ಜನ್ಮ ವಾರ್ಷಿಕೋತ್ಸವವನ್ನು ರಾಷ್ಟ್ರೀಯ ಏಕತಾ ದಿವಸ ವನ್ನಾಗಿ ಆಚರಿಸಲಾಗುತ್ತದೆ ?
 (ಎ) ಮಹಾತ್ಮ ಗಾಂಧಿ
 (ಬಿ)ಸರ್ದಾರ್ ವಲ್ಲಭಭಾಯ್ ಪಟೇಲ್
 (ಸಿ)ಜವಹರಲಾಲ್ ನೆಹರು
 (ಡಿ)ಲಾಲ್ ಬಹಾದೂರ್ ಶಾಸ್ತ್ರೀ

ಸರಿ ಉತ್ತರ

(ಬಿ) ಸರ್ದಾರ್ ವಲ್ಲಭಭಾಯ್ ಪಟೇಲ್


77.ಗಾಯಿತ್ರಿ ಮಂತ್ರವು ಯಾವುದರಲ್ಲಿದೆ ?
 (ಎ) ಋಗ್ವೇದ
 (ಬಿ)ಯಜುರ್ವೇದ
 (ಸಿ)ಸಾಮ ವೇದ
 (ಡಿ)ಅಥರ್ವ ವೇದ

ಸರಿ ಉತ್ತರ

(ಎ) ಋಗ್ವೇದ


78.ವಿವಿದೋದ್ದೇಶ (ಬಹುಪಯೋಗಿ) ನೀರಾವರಿ ಯೋಜನೆ, 'ಪೋಲಾವರಂ' ಯಾವುದರಲ್ಲಿದೆ ?
 (ಎ) ಮಹಾನದಿ
 (ಬಿ)ಕೃಷ್ಣಾ
 (ಸಿ)ನರ್ಮದಾ
 (ಡಿ)ಗೋದಾವರಿ

ಸರಿ ಉತ್ತರ

(ಡಿ) ಗೋದಾವರಿ


79.'ಫುಮ್ ಡಿಸ್' ಎಂದು ಕರೆಯಲಾದ ತೇಲುವ ದ್ವೀಪಗಳು ಯಾವ ಸರೋವರದಲ್ಲಿ ಕಂಡು ಬರುತ್ತವೆ?
 (ಎ) ಚಿಲ್ಕಾ ಸರೋವರ
 (ಬಿ)ಲೋಕ್ ಟಕ್ ಸರೋವರ
 (ಸಿ)ಕೊಲ್ಲೆರು ಸರೋವರ
 (ಡಿ)ವೆಂಬನಾಡು ಸರೋವರ

ಸರಿ ಉತ್ತರ

(ಬಿ) ಲೋಕ್ ಟಕ್ ಸರೋವರ


80.'ಮೈಕ್ರೋ ಪ್ಲಾಸ್ಟಿಕ್ಸ್ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
 1.ಅವು ನೀರಿನಲ್ಲಿ ಕರಗುವುದಿಲ್ಲ ಮತ್ತು ಆದ್ದರಿಂದ ಸಮುದ್ರ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ.
 2.ನೈಲಾನ್ ಒಂದು ವಿಧದ ಮೈಕ್ರೋಪ್ಲಾಸ್ಟಿಕ್,
 (ಎ) 1 ಮಾತ್ರ
 (ಬಿ)2 ಮಾತ್ರ
 (ಸಿ)1 ಮತ್ತು 2 ಎರಡೂ
 (ಡಿ)1 ಮತ್ತು 2 ಅಲ್ಲ

ಸರಿ ಉತ್ತರ

(ಸಿ) 1 ಮತ್ತು 2 ಎರಡೂ


81.ಚೌಗು ಪ್ರದೇಶಗಳಲ್ಲಿ ಬೆಳೆಯುವ ಸಸ್ಯಗಳನ್ನು ಏನೆಂದು ಕರೆಯುತ್ತಾರೆ ?
 (ಎ) ಹೆಲೊಫೈಟ್ಸ್
 (ಬಿ)ಜೆರೋಫೈಟ್ಸ್
 (ಸಿ)ಎರೆಟೊಫೈಟ್ಸ್
 (ಡಿ)ಸ್ಯಾಮೊಫೈಟ್ಸ್

ಸರಿ ಉತ್ತರ

(ಎ) ಹೆಲೊಫೈಟ್ಸ್


82.'ಬಾಬಾ ಕಲ್ಯಾಣಿ ಕಮಿಟಿ' ಯಾವುದರ ಕೂಡ ಸಂಬಂಧಿಸಿದೆ ?
 (ಎ) MSME
 (ಬಿ)ವಿಶೇಷ ಆರ್ಥಿಕ ವಲಯ
 (ಸಿ)ಕೃಷಿ ಮರುಹಣಕಾಸು
 (ಡಿ)ಶಿಕ್ಷಣ ಕ್ಷೇತ್ರ

ಸರಿ ಉತ್ತರ

(ಬಿ) ವಿಶೇಷ ಆರ್ಥಿಕ ವಲಯ


83.ಈ-1-00 ಪೈಲಟ್ (ಪ್ರಾಯೋಗಿಕ) ಯೋಜನೆಯು ಯಾವುದರ ಕೂಡ ಸಂಬಂಧಿಸಿದೆ ?
 (ಎ) ವಿದ್ಯುತ್ ವಾಹನಗಳು
 (ಬಿ)ಪರಿಸರ ರಕ್ಷಣೆ
 (ಸಿ)ಈ-ತ್ಯಾಜ್ಯ ನಿರ್ವಹಣೆ
 (ಡಿ)ಎಥನಾಲ್ ಉತ್ಪಾದನೆ

ಸರಿ ಉತ್ತರ

(ಡಿ) ಎಥನಾಲ್ ಉತ್ಪಾದನೆ


84.'ಕಾರ್ಬಿಸ್ ಕೊಲ್ಲಿ ಘೋಷಣೆ, ಇದು ಯಾವ ಶೃಂಗಸಭೆ/ ಸಮ್ಮೇಳನದ ಕೂಡ ಸಂಬಂಧಿಸಿದೆ?
 (ಎ) BRICS ಶೃಂಗಸಭೆ 2021
 (ಬಿ)G-7 ಶೃಂಗಸಭೆ 2021
 (ಸಿ)G-20 ಶೃಂಗಸಭೆ 2021
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಬಿ) G-7 ಶೃಂಗಸಭೆ 2021


85.'ಬ್ಲೂ ಬೇಬಿ ಸಿಂಡ್ರೋಮ್ ಇದಕ್ಕೆ ಕಾರಣವೇನು ?
 (ಎ) ಪ್ಲೋರೈಡ್
 (ಬಿ)ಕ್ಲೋರೈಡ್
 (ಸಿ)ನೈಟ್ರೇಟ್
 (ಡಿ)ಸಲ್ಫೇಟ್

ಸರಿ ಉತ್ತರ

(ಸಿ) ನೈಟ್ರೇಟ್


86.'ಮುಶೈರಾ' ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಉತ್ತರಗಳನ್ನು ಆಯ್ಕೆ ಮಾಡಿ.
 1.ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಮುಶೈರಾವನ್ನು ಆಯೋಜಿಸುತ್ತದೆ.
 2.ಇದರಲ್ಲಿ ದೇಶಾದ್ಯಂತ, ಕವಿಗಳು ತಮ್ಮ ಕವಿತೆಗಳನ್ನು ಪಠಿಸುತ್ತಾರೆ.
 3.ಇದು ಯುವ ಪೀಳಿಗೆಗೆ ದೇಶದ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ.
 (ಎ) 1 ಮಾತ್ರ
 (ಬಿ)1 ಮತ್ತು 2
 (ಸಿ)1 ಮತ್ತು 3
 (ಡಿ)1, 2 ಮತ್ತು 3

ಸರಿ ಉತ್ತರ

(ಡಿ) 1, 2 ಮತ್ತು 3


87.ಭಾರತದಲ್ಲಿ ಯಾವ ಬ್ಯಾಂಕ್ ಕೃಷಿಗಾಗಿ ಮರು ಹಣಕಾಸನ್ನು ಒದಗಿಸುತ್ತದೆ ?
 (ಎ) RBI
 (ಬಿ)SBI
 (ಸಿ)NABARD
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಸಿ) NABARD


88.ಯಾವ ಕೇಂದ್ರ ಸಶಸ್ತ್ರ ಪಡೆ ದಿವ್ಯಾಂಗ್ ಸಬಲೀಕರಣಕ್ಕಾಗಿ ರಾಷ್ಟ್ರೀಯ ಕೇಂದ್ರ (ನ್ಯಾಶನಲ್ ಸೆಂಟರ್ ಫಾರ್ ದಿವ್ಯಾಂಗ್ ಎಮ್-ಪವರ್-ಮೆಂಟ್) (NCDE) ಸ್ಥಾಪಿಸಿದೆ ?
 (ಎ) ಕೇಂದ್ರ ರಿಸರ್ವ್ ಪೊಲೀಸ್ ಫೋರ್ಸ್
 (ಬಿ)ಗಡಿ ಭದ್ರತಾ ಪಡೆ
 (ಸಿ)ಅಸ್ಸಾಂ ರೈಫಲ್ಸ್
 (ಡಿ)ಕೇಂದ್ರ ಕೈಗಾರಿಕಾ ಭದ್ರತಾ ಪಡೆ

ಸರಿ ಉತ್ತರ

(ಎ) ಕೇಂದ್ರ ರಿಸರ್ವ್ ಪೊಲೀಸ್ ಫೋರ್ಸ್


89.ಕಾಲೋಚಿತ ವ್ಯತ್ಯಾಸಗಳು ಎಲ್ಲಿ ಗರಿಷ್ಠವಾಗಿರುತ್ತದೆ ?
 (ಎ) ಸಮಭಾಜಕ
 (ಬಿ)ಕಡಿಮೆ ಅಕ್ಷಾಂಶಗಳು
 (ಸಿ)ಮಧ್ಯ ಅಕ್ಷಾಂಶಗಳು
 (ಡಿ)ಹೆಚ್ಚಿನ ಅಕ್ಷಾಂಶಗಳು

ಸರಿ ಉತ್ತರ

(ಸಿ) ಮಧ್ಯ ಅಕ್ಷಾಂಶಗಳು


90.ಯಾವುದೇ ಪ್ರದೇಶದ ಮೇಲ್ಮೈಯ ವಿಶೇಷತೆಯನ್ನು ತೋರಿಸುವ ನಕ್ಷೆಯನ್ನು ಏನೆಂದು ಕರೆಯಲಾಗುತ್ತದೆ ?
 (ಎ) ಪ್ರದೇಶ ನಕ್ಷೆ
 (ಬಿ)ಪರಿಹಾರ ನಕ್ಷೆ(ಛಾಯಾ ಭೂಪಟ)
 (ಸಿ)ವಿಷಯಾಧಾರಿತ ನಕ್ಷೆ
 (ಡಿ)ಕ್ಯಾಡಾಸ್ಟ್ರಲ್ ನಕ್ಷೆ (ಪಹಣಿಯ ನಕ್ಷೆ)

ಸರಿ ಉತ್ತರ

(ಬಿ) ಪರಿಹಾರ ನಕ್ಷೆ(ಛಾಯಾ ಭೂಪಟ)


91.ಭಾರತದ ಅತ್ಯಂತ ಆಳವಾದ ಗಣಿ ಯಾವುದು ?
 (ಎ) ಸೋನ್ ಭದ್ರ ಗಣಿ
 (ಬಿ)ಖೇತ್ರಿ ಗಣಿ
 (ಸಿ)ಮಯೂರ್ ಭಂಜ್ ಗಣಿ
 (ಡಿ)ಕೋಲ್ಡ್ ಚಿನ್ನದ ಗಣಿ

ಸರಿ ಉತ್ತರ

Grace mark


92.ಕೆಳಗಿನ ಸಸ್ಯವರ್ಗಗಳಲ್ಲಿ ಯಾವುದು ಗರಿಷ್ಟ ಜೈವಿಕ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ ?
 (ಎ) ಉಷ್ಣವಲಯದ ಮಳೆಕಾಡು
 (ಬಿ)ಒಣ ಪತನಶೀಲ ಕಾಡು
 (ಸಿ)ತೇವಾಂಶವುಳ್ಳ ಪತನಶೀಲ ಕಾಡು
 (ಡಿ)ಆಲ್ಪೈನ್ ಅರಣ್ಯ (ಉನ್ನತ ಪರ್ವತದ ಅರಣ್ಯ)

ಸರಿ ಉತ್ತರ

(ಎ) ಉಷ್ಣವಲಯದ ಮಳೆಕಾಡು


93.ಜೀವಗೋಳದ ಮೀಸಲು/ ಸಂಚಯಗಳು (ರಿಸರ್ವ್) ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
 1.ಮನುಷ್ಯ ಮತ್ತು ಜೀವಗೋಳ, ಅಂತರ ಸರ್ಕಾರೀಯ ಕಾರ್ಯಕ್ರಮವನ್ನು UNESCO ಆರಂಭಿಸಿತು.
 2.ಜೀವಗೋಳ ಸಂಚಯಗಳು/ಮೀಸಲುಗಳು ಕೋರ್ ಪ್ರದೇಶ, ಬಫರ್ ವಲಯ ಮತ್ತು ಪರಿವರ್ತನೆಯ ಪ್ರದೇಶ ಎಂದು ಕರೆಯಲ್ಪಡುವ 3 ಮುಖ್ಯ ವಲಯಗಳನ್ನು ಹೊಂದಿವೆ.
 3.ಮನ್ನಾರ್ ಕೊಲ್ಲಿ ಸಿಮ್ಲಿಪಲ್ ಮತ್ತು ಪಚ್ ಮರ್ರಿ, ಇವುಗಳು ಭಾರತದ ಜೀವಗೋಳದ ಮೀಸಲುಗಳು.
 (ಎ) 1 ಮಾತ್ರ
 (ಬಿ)1 ಮತ್ತು 2
 (ಸಿ)1 ಮತ್ತು 3
 (ಡಿ)1, 2 ಮತ್ತು 3

ಸರಿ ಉತ್ತರ

(ಡಿ) 1, 2 ಮತ್ತು 3


94.'ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ತಿದ್ದುಪಡಿ ನಿಯಮಗಳು, 2021' ಬಗ್ಗೆ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ,
 1.ಹೊಸ ನಿಯಮವು, 2022 ರ ವೇಳೆಗೆ, ಕಡಿಮೆ ಉಪಯುಕ್ತತೆ ಮತ್ತು ಹೆಚ್ಚಿನ ಕಸದ ಸಾಮರ್ಥ್ಯವನ್ನು ಹೊಂದಿರುವ ನಿರ್ದಿಷ್ಟ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇದಿಸುತ್ತದೆ.
 2.ಕಂಪೊಸ್ಟಬಲ್ (ಮಿಶ್ರಗೊಬ್ಬರವಾಗುವಂತಹ) ಪ್ಲಾಸ್ಟಿಕ್ ನ ವಸ್ತುಗಳಿಗೆ ನಿಷೇಧ ಅನ್ವಯಿಸುವುದಿಲ್ಲ.
 (ಎ) 1 ಮಾತ್ರ
 (ಬಿ)2 ಮಾತ್ರ
 (ಸಿ)1 ಮತ್ತು 2 ಎರಡೂ
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಸಿ) 1 ಮತ್ತು 2 ಎರಡೂ


95.ಭಾರತದ ಆಳವಾದ ಸಮುದ್ರದ ಮಿಷನ್ ಅನ್ನು ಅನುಷ್ಠಾನ ಗೊಳಿಸುವ ನೋಡಲ್ ಸಚಿವಾಲಯ ಯಾವುದು ?
 (ಎ) ಬಂದರುಗಳು, ನೌಕಾತಂಡ ಮತ್ತು ಜಲಮಾರ್ಗಗಳ ಸಚಿವಾಲಯ
 (ಬಿ)ಭೂ ವಿಜ್ಞಾನ ಸಚಿವಾಲಯ
 (ಸಿ)ಜಲ ಶಕ್ತಿಯ ಸಚಿವಾಲಯ
 (ಡಿ)ಪ್ರವಾಸೋದ್ಯಮ ಸಚಿವಾಲಯ

ಸರಿ ಉತ್ತರ

(ಬಿ) ಭೂ ವಿಜ್ಞಾನ ಸಚಿವಾಲಯ


96.ಭಾರತದ ಹಣಕಾಸು ಸೂಕ್ಷ್ಮ ಜ್ಞಾನ (ಗುಪ್ತಚರ) ವಿಭಾಗದ ಬಗ್ಗೆ, ಕೆಳಗಿನ ಹೇಳಿಕೆಗಳಿಂದ ಸರಿಯಾದುದನ್ನು ಆಯ್ಕೆ ಮಾಡಿ.
 1.FIU-IND ಯು ಸಂಶಯಾಸದ ಹಣಕಾಸು, ವಹಿವಾಟುಗಳಿಗೆ ಸಂಬಂಧಿಸಿದ ಮಾಹಿತಿ ಯನ್ನು ಸಂಸ್ಕರಿಸುವುದು, ವಿಶ್ಲೇಷಿಸುವುದು ಮತ್ತು ಪ್ರಸಾರ ಮಾಡುವುದಕ್ಕೆ ಜವಾಬ್ದಾರಿ ಹೊಂದಿದೆ.
 2.ಇದರ ಕೆಲಸವನ್ನು ಹಣಕಾಸು ಸಚಿವರು ಮೇಲ್ವಿಚಾರಣೆ ಮಾಡುತ್ತಾರೆ
 (ಎ) 1 ಮಾತ್ರ
 (ಬಿ)2 ಮಾತ್ರ
 (ಸಿ)1 ಮತ್ತು 2 ಎರಡೂ
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಸಿ) 1 ಮತ್ತು 2 ಎರಡೂ


97.'ಗತಿಶಕ್ತಿ ಮಾಸ್ಟರ್ ಪ್ಲಾನ್ (ಶ್ರೇಷ್ಠ ಯೋಜನೆ)' ಎಂದರೆ ಏನು ?
 (ಎ) ಭಾರತದಲ್ಲಿ ಸಮಗ್ರ ಮೂಲಸೌಕರ್ಯ ಅಭಿವೃದ್ದಿ ಗೋಸ್ಕರ, ರಾಷ್ಟ್ರೀಯ ಶ್ರೇಷ್ಠ ಯೋಜನೆ.
 (ಬಿ)ಒಳನಾಡಿನ ಸಂಚರಣೆ ಅಭಿವೃದ್ಧಿ, ವಿಕಾಸಗೋಸ್ಕರ ರಾಷ್ಟ್ರೀಯ ಶ್ರೇಷ್ಠ ಯೋಜನೆ.
 (ಸಿ)ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದಕೋಸ್ಕರ ರಾಷ್ಟ್ರೀಯ ಶ್ರೇಷ್ಠ ಯೋಜನೆ.
 (ಡಿ)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಎ) ಭಾರತದಲ್ಲಿ ಸಮಗ್ರ ಮೂಲಸೌಕರ್ಯ ಅಭಿವೃದ್ದಿ ಗೋಸ್ಕರ, ರಾಷ್ಟ್ರೀಯ ಶ್ರೇಷ್ಠ ಯೋಜನೆ.


98.ಮೇಕೆದಾಟು ಒಂದು ವಿವಿದೋದ್ದೇಶ ಯೋಜನೆ. ಇದು ಎಲ್ಲಿದೆ ?
 (ಎ) ಕಾವೇರಿ
 (ಬಿ)ಕೃಷ್ಣ
 (ಸಿ)ತುಂಗಭದ್ರಾ
 (ಡಿ)ಭೀಮ

ಸರಿ ಉತ್ತರ

(ಎ) ಕಾವೇರಿ


99.ಭಾರತದ ಯಾವ ನಗರವು 100% ಕೋವಿಡ್-1-9 ಲಸಿಕೆಯನ್ನು ಮೊದಲು ಸಾಧಿಸಿತು ?
 (ಎ) ಚೆನ್ನೈ
 (ಬಿ)ಬೆಂಗಳೂರು
 (ಸಿ)ಭುವನೇಶ್ವರ್
 (ಡಿ)ಗೌಹಾಟಿ

ಸರಿ ಉತ್ತರ

(ಸಿ) ಭುವನೇಶ್ವರ್


100.ಕೆಳಗಿನ ಹೇಳಿಕೆಗಳನ್ನು ಗಮನಿಸಿ.
 1.ಭಾರತದ ಮೊದಲ ಏಕಕಾಲೀಯವಾಗಿ ಜನಗಣತಿಯನ್ನು 1881 ರಲ್ಲಿ ನಡೆಸಲಾಯಿತು.
 2.ದಶಮಾನದ ಜನಗಣತಿಯನ್ನು ನಡೆಸುವ ಜವಾಬ್ದಾರಿ ಭಾರತದ ರೆಜಿಸ್ಟಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಯ ಮೇಲೆ ಇರುತ್ತದೆ.
 3.2011 ರ ಸಾಮಾಜಿಕ ಆರ್ಥಿಕ ಜಾತಿ ಗಣತಿಯು ವಿವಿಧ ಸಮುದಾಯಗಳ ಸಾಮಾಜಿಕ ಆರ್ಥಿಕ ಸ್ಥಿತಿಯ ಬಗ್ಗೆ ದಾಖಲೆಯನ್ನು ಪಡೆಯಿತು.
 ಯಾವ ಹೇಳಿಕೆಗಳು ಸರಿ ?
 (ಎ) 2 ಮಾತ್ರ
 (ಬಿ)2 ಮತ್ತು 3
 (ಸಿ)1, 2 ಮತ್ತು 3
 (ಡಿ)3 ಮಾತ್ರ

ಸರಿ ಉತ್ತರ

(ಸಿ) 1, 2 ಮತ್ತು 3


ಇಲ್ಲಿ ನೀಡಲಾಗಿರುವ ಉತ್ತರಗಳು KSP ಯು ಪ್ರಕಟಿಸಿದ್ದಾಗಿರುತ್ತದೆ

Post a Comment

0 Comments

BOTTOM ADS