KPSC GROUP C Technical & Non Technical Paper-1 Question Paper 22-09-2018

KPSC GROUP C Technical & Non Technical General Knowledge Paper-1 (Exam held on 22-09-2018) Questions with answers

KPSC GROUP C ಪತ್ರಿಕೆ -1 ಸಾಮಾನ್ಯ ಅಧ್ಯಯನ (Below Degree Standard): ವಿವಿಧ ತಾಂತ್ರಿಕ/ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ದಿನಾಂಕ: 22-09-2018 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳು

1.ವರ್ಮಿ ಕಂಪೋಸ್ಟಿಂಗ್ (ಹುಳುಗೊಬ್ಬರ) ಇದಕ್ಕೆ ಸಂಬಂಧಿಸಿದ್ದು
 (1)ಸಾವಯವ ತ್ಯಾಜ್ಯವನ್ನು ಕಪ್ಪು, ಮಣ್ಣಿನ ವಾಸನೆಯ, ಪೋಷಕ ಸಮೃದ್ಧ ಹ್ಯೂಮಸ್ ಆಗಿ ಎರೆ ಹುಳು ಮತ್ತು ಸೂಕ್ಷ್ಮ ಜೀವಿಗಳ ಬಳಕೆಯಿಂದ ಪರಿವರ್ತಿಸುವುದು
 (2)ಎರೆ ಹುಳು ಸಾಕಣೆ
 (3)ಎರೆ ಹುಳು ಬಳಕೆ ಮಾಡಿ ವರ್ಮಿಕಂಪೋಸ್ಟ್ ಕೃಷಿ ಮತ್ತು ಉತ್ಪಾದನೆ
 (4)ಎರೆ ಹುಳು ಬಳಕೆ ಮಾಡಿ ಕಂಪೋಸ್ಟ್ ಉತ್ಪಾದನೆ

ಸರಿ ಉತ್ತರ

(1) ಸಾವಯವ ತ್ಯಾಜ್ಯವನ್ನು ಕಪ್ಪು, ಮಣ್ಣಿನ ವಾಸನೆಯ, ಪೋಷಕ ಸಮೃದ್ಧ ಹ್ಯೂಮಸ್ ಆಗಿ ಎರೆ ಹುಳು ಮತ್ತು ಸೂಕ್ಷ್ಮ ಜೀವಿಗಳ ಬಳಕೆಯಿಂದ ಪರಿವರ್ತಿಸುವುದು


2.ಎಕಿಡ್ನಾ ಎಂಬುದು ಒಂದು
 (1)ಮೊಟ್ಟೆಯನ್ನಿಡುವ ಸಸ್ತನಿ
 (2)ಚೀಲವನ್ನು ಹೊಂದಿರುವ ಸಸ್ತನಿ
 (3)ಕೀಟಭಕ್ಷಕ ಸಸ್ತನಿ
 (4)ಹಾರುವ ಸಸ್ತನಿ

ಸರಿ ಉತ್ತರ

(1) ಮೊಟ್ಟೆಯನ್ನಿಡುವ ಸಸ್ತನಿ


3.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಕೇರಳದಲ್ಲಿ ಪೂರ್ವಕ್ಕೆ ಹರಿವ ನದಿಗಳಿಲ್ಲ.
 B.ಮಧ್ಯ ಪ್ರದೇಶದಲ್ಲಿ ಪಶ್ಚಿಮಕ್ಕೆ ಹರಿವ ನದಿಗಳಿಲ್ಲ.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಇವೆರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ

ಸರಿ ಉತ್ತರ

(4) A ಆಗಲೀ ಅಥವಾ B ಆಗಲೀ ಅಲ್ಲ


4.ಈ ಪೈಕಿ ಯಾವುದು ಸರಿಯಲ್ಲ ?
 (1)ಸ್ಥಳದಲ್ಲಿ ತಂತಾನೇ ಬಂಡೆಗಳು ಶಿಥಿಲ ವಾಗುವುದಕ್ಕೆ ವೆದರಿಂಗ್ ಎನ್ನುವರು.
 (2)ಏಕ ಕೇಂದ್ರಿತ ಹಾಳೆಗಳು, ಚಪ್ಪಡಿಗಳು, ಹಾಳೆಗಳು ಇಲ್ಲವೆ ಹಲ್ಲೆಗಳು ಅನುಕ್ರಮವಾಗಿ ಸಡಿಲಗೊಂಡು ಮುರಿದು ಬಂಡೆರಾಶಿಯಿಂದ ಕೊಚ್ಚಿ ಹೋದದ್ದನ್ನು ಪಟ್ಟೆಸೀಳುವಿಕೆ ಎನ್ನುತ್ತಾರೆ.
 (3)ಯಾಂತ್ರಿಕ ವೆದರಿಂಗ್ ಮರು ಭೂಮಿಗೆ ಸೀಮಿತ ಗೊಂಡಿದೆ.
 (4)ವೆದರಿಂಗ್ ಮೇಲೆ ಏಕೈಕವಾಗಿ ಮುಖ್ಯವಾಗಿ ಪ್ರಭಾವಬೀರುವುದೆಂದರೆ ವಾಯು ಗುಣ.

ಸರಿ ಉತ್ತರ

(3) ಯಾಂತ್ರಿಕ ವೆದರಿಂಗ್ ಮರು ಭೂಮಿಗೆ ಸೀಮಿತ ಗೊಂಡಿದೆ.


5.ವಾಯುಸಾಗಣೆಯನ್ನು ಪ್ರಭಾವಿಸುವುದು
 A.ವಾಯುವಿನ ಸ್ವಾತಂತ್ರ್ಯ
 B.ಅ ಕ ವಾಯುಯಾನ ದರಗಳು
 C.ವಾಯು ಟರ್ಮಿನಲ್ಗಳ (ನಿಲ್ದಾಣಗಳ) ಲಭ್ಯತೆ
 ಈ ಪೈಕಿ ಯಾವುದು / ವು ವಾಯು ಸಾಗಣೆ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವಂತಹವು ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)A ಮತ್ತು B ಮಾತ್ರ
 (3)A, B ಮತ್ತು C
 (4)B ಮತ್ತು C ಮಾತ್ರ

ಸರಿ ಉತ್ತರ

(3) A, B ಮತ್ತು C


6.ಪಟ್ಟಿ I (ಮ್ಯಾಂಗ್ರೋವ್ ಸ್ಥಳಗಳು) ಮತ್ತು ಪಟ್ಟಿ II (ರಾಜ್ಯ) ಗಳನ್ನು ಹೊಂದಿಸಿ :
  ಪಟ್ಟಿ I (ಮ್ಯಾಂಗ್ರೋವ್ ಸ್ಥಳ) ಪಟ್ಟಿ II (ರಾಜ್ಯ)
 A.ಅಚ್ರಾ ರತ್ನಗಿರಿI.ಕರ್ನಾಟಕ
 B.ಕೂಂದಾಪುರII.ಕೇರಳ
 C.ಪಿಚಾವರಂIII.ಮಧ್ಯ ಪ್ರದೇಶ
 D.ವೆಂಬನಾಡ್IV.ಮಹಾರಾಷ್ಟ್ರ
 V.ತಮಿಳು ನಾಡು
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIVIV
 (2)IVVIIIII
 (3)IIVIIIIV
 (4)IVIVII

ಸರಿ ಉತ್ತರ

(4) IV I V II


7.ಈ ಕೆಳಗಿನ ರಾಜ್ಯಗಳ ವಿಸ್ತೀರ್ಣಕ್ಕನುಗುಣವಾದ ಸರಿಯಾದ ಇಳಿಕೆ ಅನುಕ್ರಮ ವೇನು ?
 A.ಆಂಧ್ರ ಪ್ರದೇಶ
 B.ಬಿಹಾರ
 C.ಮಧ್ಯ ಪ್ರದೇಶ
 D.ಉತ್ತರ ಪ್ರದೇಶ
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A, B, C, D
 (2)B, C, D, A
 (3)D, C, B, A
 (4)C, D, A, B

ಸರಿ ಉತ್ತರ

(4) C, D, A, B


8.ನಿತ್ಯ ಹರಿದ್ವರ್ಣ ಅರಣ್ಯವು ವರ್ಷವಿಡೀ ಸದಾ ಹಸಿರಾಗಿರಲು ಕಾರಣವೆಂದರೆ
 (1)ಅದರ ಎಲೆಗಳು ಉದುರುತ್ತವೆ ಮತ್ತು ಒಂದು ದಿನದೊಳಗಾಗಿಯೇ ಅದು ಹೊಸ ಎಲೆಗಳನ್ನು ಪಡೆಯುತ್ತದೆ.
 (2)ವರ್ಷದಾದ್ಯಂತವೆಲ್ಲ ತನ್ನ ಎಲೆಗಳನ್ನು ಉದುರಿಸಿಕೊಳ್ಳುವುದಿಲ್ಲ.
 (3)ಅದು ಎಲೆಗಳನ್ನು ಉದುರಿಸಿ ಕೊಳ್ಳುತ್ತವೆ ಮತ್ತು ಮುಕ್ತವಾಗಿರುವಂತೆ ಕಾಣಿಸಿಕೊಳ್ಳುತ್ತದೆ ಅದರೆ ಅದನ್ನು ಸರಳವಾಗಿ ನಿತ್ಯ ಪರಿದ್ವರ್ಣವೆಂತಲೇ ಕರೆಯಲಾಗುತ್ತದೆ.
 (4)ಅದು ವಿವಿಧ ಜಾತಿಪ್ರಭೇದಗಳನ್ನುಳ್ಳ ಒಂದು ದಟ್ಟ ಅರಣ್ಯವಾಗಿದೆ, ಬೇರೆ ಬೇರೆ ಕಾಲಾವಧಿಯಲ್ಲಿ ಪ್ರತಿಯೊಂದು ಜಾತಿ ಪ್ರಭೇದಗಳೂ ತಮ್ಮ ಎಲೆಗಳನ್ನು ಉದುರಿಸಿಕೊಳ್ಳುತ್ತವೆ.

ಸರಿ ಉತ್ತರ

(4) ಅದು ವಿವಿಧ ಜಾತಿಪ್ರಭೇದಗಳನ್ನುಳ್ಳ ಒಂದು ದಟ್ಟ ಅರಣ್ಯವಾಗಿದೆ, ಬೇರೆ ಬೇರೆ ಕಾಲಾವಧಿಯಲ್ಲಿ ಪ್ರತಿಯೊಂದು ಜಾತಿ ಪ್ರಭೇದಗಳೂ ತಮ್ಮ ಎಲೆಗಳನ್ನು ಉದುರಿಸಿಕೊಳ್ಳುತ್ತವೆ.


9.ಬಹುತೇಕ ಒಂದು ಸಂಪೂರ್ಣ ವೃತ್ತದಲ್ಲಿ ತಿರುವನ್ನು ಹೊಂದಿದ ಹರಿದಾಡುವ ಒಂದು ನದಿಯಿಂದು ರೂಪಿತವಾದ ಒಂದು ಕೊಳವನ್ನು ಹೀಗೆನ್ನುತ್ತಾರೆ
 (1)ಲೆವೀಸ್ (ನೈಸರ್ಗಿಕ ನೆರೆಯೊಡ್ಡು)
 (2)(ನೊಗ) ನದಿ ಕಮಾನು ಕೊಳ
 (3)ಫಲವತ್ತು ಪಂಕ
 (4)ಫಲವತ್ತು ಸಮತಲ

ಸರಿ ಉತ್ತರ

(2) (ನೊಗ) ನದಿ ಕಮಾನು ಕೊಳ


10.ಬೀಟಾಟ್ರಾನು ವೇಗವರ್ಧಕವಾಗಿದ್ದು ಇದರ ವೇಗವರ್ಧನೆಯನ್ನು ಮಾಡಲು ಬಳಸಲಾಗುತ್ತದೆ
 (1)ಪ್ರೋಟಾನುಗಳು
 (2)ನ್ಯೂಟ್ರಾನುಗಳು
 (3)ಇಲೆಕ್ಟ್ರಾನುಗಳು
 (4)ಯಾವುದೇ ವಿದ್ಯುದಾವಿಷ್ಟನ ಹೊಂದಿದ ಕಣಗಳು

ಸರಿ ಉತ್ತರ

(3) ಇಲೆಕ್ಟ್ರಾನುಗಳು


11.ಗುಲ್ಮಾರ್ಗ್ ಎಂಬ ಗಿರಿ ಧಾಮವು ಈ ರಾಜ್ಯದಲ್ಲಿದೆ
 (1)ಹಿಮಾಚಲ್ ಪ್ರದೇಶ
 (2)ಜಮ್ಮು ಮತ್ತು ಕಾಶ್ಮೀರ್
 (3)ಮಹಾರಾಷ್ಟ್ರ
 (4)ಮಿರೆರಾಂ

ಸರಿ ಉತ್ತರ

(2) ಜಮ್ಮು ಮತ್ತು ಕಾಶ್ಮೀರ್


12.ಅಷ್ಟ ದಿಗ್ಗಜರೆಂಬ ಕವಿ ವಿದ್ವಾಂಸರಿಗೆ ಆಶ್ರಯ ನೀಡಿದ್ದ ವಿಜಯನಗರ ಸಾಮ್ರಾಜ್ಯದ ದೊರೆ
 (1)I ನೇ ದೇವರಾಯ
 (2)ಶ್ರೀ ಕೃಷ್ಣದೇವರಾಯ
 (3)II ನೇ ದೇವರಾಯ
 (4)ರಾಮರಾಯ

ಸರಿ ಉತ್ತರ

(2) ಶ್ರೀ ಕೃಷ್ಣದೇವರಾಯ


13.ಕರ್ನಾಟಕವು ಏಕೀಕರಣವಾದ ವರ್ಷ ಯಾವುದು ಮತ್ತು ಅದರ ಪ್ರಥಮ ಮುಖ್ಯ ಮಂತ್ರಿ ಯಾರು?
 (1)ನವೆಂಬರ 1, 1956, ಶ್ರೀ ಎಸ್. ನಿಜಲಿಂಗಪ್ಪ
 (2)ನವೆಂಬರ 1, 1947, ಶ್ರೀ ಕೆ.ಸಿ. ರೆಡ್ಡಿ
 (3)ನವೆಂಬರ 1, 1973, ಶ್ರೀ ದೇವರಾಜ ಅರಸು
 (4)ನವೆಂಬರ 1, 1973, ಶ್ರೀ ಎಸ್. ನಿಜಲಿಂಗಪ್ಪ

ಸರಿ ಉತ್ತರ

(1) ನವೆಂಬರ 1, 1956, ಶ್ರೀ ಎಸ್. ನಿಜಲಿಂಗಪ್ಪ


14.ಮದ್ಯಕಾಲೀನ ಭಾರತದದಲ್ಲಿ ಮಾರುಕಟ್ಟೆ ಸುಧಾರಣೆಗಳನ್ನು ಪರಿಚಯಿಸಿದವರು ಯಾರು ಮತ್ತು ಈತನ ಸೇನೆಯ ಪ್ರಸಿದ್ಧ ಪ್ರಧಾನ ದಂಡ ನಾಯಕನಾರು ?
 (1)ಕುತುಬುದ್ದೀನ ಐಬಕ್ - ಅಮೀರ್ ಖುಸ್ರೋ
 (2)ಮಹಮ್ಮದ್ ಬಿನ್ ತುಘಲಕ್ - ಆಬ್ದುಲ್ ರಜಾಕ್
 (3)ಅಲ್ಲಾವುದ್ದೀನ ಖಿಲ್ಜಿ - ಮಲ್ಲಿಕ್ ಕಾಫರ್
 (4)ಜಲಾಲುದ್ದೀನ್ ಖಿಲ್ಜಿ - ಹಸನ್ ನಿಜಾಮಿ

ಸರಿ ಉತ್ತರ

(3) ಅಲ್ಲಾವುದ್ದೀನ ಖಿಲ್ಜಿ - ಮಲ್ಲಿಕ್ ಕಾಫರ್


15.ಇತ್ತೀಚೆಗೆ ಜಕಾರ್ತದಲ್ಲಿ 18 ನೇ ಏಷಿಯನ್ ಕ್ರೀಡೆಗಳಲ್ಲಿ ದಾಖಲೆ ನಿರ್ಮಿಸಿದ, ಚಿನ್ನವನ್ನು ಗೆದ್ದ ಮೊದಲ ಭಾರತೀಯ ಸೇನೆಯ ಹೆಪ್ಟಾಅಥ್ಲೀಟ್ ಯಾರು ?
 (1)ಅರ್ಚನಾ ಬಿಸ್ವಾಸ್
 (2)ಸ್ವಪ್ನ ಬರ್ಮನ್
 (3)ಲೀಲಾ ದೇವರಾಜ್
 (4)ಪೂರ್ಣಿಮಾ ಅಯ್ಯಪ್ಪ

ಸರಿ ಉತ್ತರ

(2) ಸ್ವಪ್ನ ಬರ್ಮನ್


16.ರಾಜ್ಯ ನೀತಿಯ ನಿರ್ದೇಶಕ ತತ್ವಗಳಲ್ಲಿನ ಯಾವ ಕಲಮು, ಗ್ರಾಮ ಪಂಚಾಯಿತಿಯ ಉಪಬಂಧದೊಂದಿಗೆ ವ್ಯವಹರಿಸುತ್ತದೆ ?
 (1)40 ನೇ ಕಲಮು
 (2)42 ನೇ ಕಲಮು
 (3)44 ನೇ ಕಲಮು
 (4)36 ನೇ ಕಲಮು

ಸರಿ ಉತ್ತರ

(1) 40 ನೇ ಕಲಮು


17.ಯಾವ ಸಮಿತಿಯು ಪ್ರಜಾಪ್ರಭುತ್ವ ವಿಕೇಂದ್ರೀಕರಣಕ್ಕಾಗಿ ಶಿಫಾರಸನ್ನು ಮಾಡಿದ ಮೊದಲ ಸಮಿತಿ ಯಾವುದು ?
 (1)ಅಶೋಕ್ ಮೆಹ್ತಾ ಸಮಿತಿ
 (2)ಮಂಡಲ್ ಆಯೋಗ
 (3)ಬಲವಂತ ರಾಯ್ ಮೆಹ್ತಾ ಸಮಿತಿ
 (4)ಕೊಂಡಜ್ಜಿ ಬಸಪ್ಪ ಸಮಿತಿ

ಸರಿ ಉತ್ತರ

(3) ಬಲವಂತ ರಾಯ್ ಮೆಹ್ತಾ ಸಮಿತಿ


18.ಕಳಸಾ ಮತ್ತು ಬಂಡೂರಿ ಇವು ಈ ಕೆಳಗಿನ ಯಾವ ನದಿಯ ಎರಡು ಚಿಕ್ಕ ಉಪನದಿಗಳು ?
 (1)ಕೃಷ್ಣ
 (2)ಭೀಮಾ
 (3)ಮಲಪ್ರಭಾ
 (4)ಘಟಪ್ರಭಾ

ಸರಿ ಉತ್ತರ

(3) ಮಲಪ್ರಭಾ


19.ಇತ್ತೀಚೆಗೆ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಸ್ಟ್ರೇಲಿಯಾದ ‘ಗೋಲ್ಡ್ ಕೋಸ್ಟ್’ ನಗರದಲ್ಲಿ ಆಯೋಜಿಸಲಾಗಿತ್ತು. ಗೋಲ್ಡ್ ಕೋಸ್ಟ್ ನಗರವಿರುವುದು ಇಲ್ಲಿ
 (1)ನ್ಯೂ ಸೌತ್ ವೇಲ್ಸ್
 (2)ಕ್ವೀನ್ಸ್ ಲ್ಯಾಂಡ್
 (3)ವಿಕ್ಟೋರಿಯಾ
 (4)ವೆಸ್ಟರ್ನ್ ಆಸ್ಟ್ರೇಲಿಯಾ

ಸರಿ ಉತ್ತರ

(2) ಕ್ವೀನ್ಸ್ ಲ್ಯಾಂಡ್


20.ಇದರ ಉತ್ಪಾದನೆಗೆ ಸಿಂಗರೇಣಿ ಗಣಿಗಳು ಪ್ರಸಿದ್ಧಿ ಪಡೆದಿರುವುದು
 (1)ಯುರೇನಿಯಂ ಮತ್ತು ಥೋರಿಯಂ
 (2)ಪೆಟ್ರೋಲಿಯಂ
 (3)ಕಲ್ಲಿದ್ದಲು
 (4)ಕಬ್ಬಿಣದ ಅದಿರು

ಸರಿ ಉತ್ತರ

(3) ಕಲ್ಲಿದ್ದಲು


21.ಇಲ್ಲಿ ಪ್ರಪಂಚದ ಅತಿದೊಡ್ಡ ಸಿಹಿ ನೀರಿನ ಸರೋವರಗಳಲ್ಲಿ ಒಂದಾದ ಬೈಕಲ್ ಸರೋವರವಿದೆ
 (1)ರಷ್ಯಾ
 (2)ಕೆನಡಾ
 (3)ಯು.ಎಸ್.ಎ.
 (4)ಫಿನ್ಲ್ಯಾಂಡ್

ಸರಿ ಉತ್ತರ

(1) ರಷ್ಯಾ


22.ಪಟ್ಟಿ I ಮತ್ತು ಪಟ್ಟಿ II ಗಳನ್ನು ಹೊಂದಿಸಿರಿ :
  ಪಟ್ಟಿ I ಪಟ್ಟಿ II
 A.ಪಾಂಪಾಸ್I.ಆಫ್ರಿಕ
 B.ವೆಲ್ಡ್ಸ್II.ಯುರೇಷಿಯಾ
 C.ಸ್ಟೆಪ್ಪೀಸ್III.ದಕ್ಷಿಣ ಅಮೆರಿಕಾ
 D.ಪ್ರೈರೀಸ್IV.ಉತ್ತರ ಅಮೆರಿಕಾ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIIIIV
 (2)IIIIVIII
 (3)IVIIIIII
 (4)IIIIIIIV

ಸರಿ ಉತ್ತರ

(1) III I II IV


23.23`1/2`° N ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ ಈ ಕೆಳಗಿನ ರಾಜ್ಯಗಳ ಮೂಲಕ ಹಾದು ಹೋಗುತ್ತದೆ ?
 (1)ಗುಜರಾತ್, ರಾಜಸ್ತಾನ್, ಮಧ್ಯ ಪ್ರದೇಶ, ಝಾರ್ಖಂಡ್, ಛತ್ತೀಸ್ ಘಡ್, ಪಶ್ಚಿಮ ಬಂಗಾಳ, ತ್ರಿಪುರಾ, ಮಿರೆರಾಂ
 (2)ಗುಜರಾತ್, ರಾಜಸ್ತಾನ್, ಮಧ್ಯ ಪ್ರದೇಶ್, ಛತ್ತೀಸ್ ಘಡ್, ಝಾರ್ಖಂಡ್, ಪಶ್ಚಿಮ ಬಂಗಾಳ, ಮಿರೆರಾಂ, ತ್ರಿಪುರಾ
 (3)ಗುಜರಾತ್, ರಾಜಸ್ತಾನ್, ಮಧ್ಯ ಪ್ರದೇಶ್, ಛತ್ತೀಸ್ ಘಡ್, ಝಾರ್ಖಂಡ್, ಪಶ್ಚಿಮ ಬಂಗಾಳ, ತ್ರಿಪುರಾ, ಮಿರೆರಾಂ
 (4)ಗುಜರಾತ್, ರಾಜಸ್ತಾನ್, ಮಧ್ಯ ಪ್ರದೇಶ್, ಛತ್ತೀಸ್ ಘಡ್, ಪಶ್ಚಿಮ ಬಂಗಾಳ, ಝಾರ್ಖಂಡ್, ತ್ರಿಪುರಾ, ಮಿರೆರಾಂ

ಸರಿ ಉತ್ತರ

(3) ಗುಜರಾತ್, ರಾಜಸ್ತಾನ್, ಮಧ್ಯ ಪ್ರದೇಶ್, ಛತ್ತೀಸ್ ಘಡ್, ಝಾರ್ಖಂಡ್, ಪಶ್ಚಿಮ ಬಂಗಾಳ, ತ್ರಿಪುರಾ, ಮಿರೆರಾಂ


24.ಯಾವ ರೇಖಾಂಶವು ಹಿಂದೂಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳ ಮಧ್ಯೆ ಗಡಿ ರೇಖೆಯನ್ನು ರೂಪಿಸುತ್ತದೆ ?
 (1)ಕೇಪ್ ಆಫ್ ಟೌನ್ ನ ರೇಖಾಂಶ
 (2)ಪರ್ತ್ ನ ರೇಖಾಂಶ
 (3)ಕೇಪ್ ಆಫ್ ತಸ್ಮೀನಿಯಾದ ರೇಖಾಂಶ
 (4)ವೆಲ್ಲಿಂಗ್ ಟನ್ ನ ರೇಖಾಂಶ

ಸರಿ ಉತ್ತರ

(3) ಕೇಪ್ ಆಫ್ ತಸ್ಮೀನಿಯಾದ ರೇಖಾಂಶ


25.ಕೆಳಗಿನವುಗಳಲ್ಲಿ ಕನಕದಾಸರನ್ನು ಗುರುತಿಸುವ ಕೃತಿ ಯಾವುದು ?
 (1)ಪ್ರಭುಲಿಂಗ ಲೀಲೆ
 (2)ಜೈಮಿನಿ ಭಾರತ
 (3)ರಾಮಧಾನ್ಯ ಚರಿತೆ
 (4)ಬಸವ ಪುರಾಣ

ಸರಿ ಉತ್ತರ

(3) ರಾಮಧಾನ್ಯ ಚರಿತೆ


26.ದ್ವಿತೀಯ ಆಂಗ್ಲೋ-ಮೈಸೂರು ಯುದ್ಧದಲ್ಲಿ ಯಾರು ಸೋತರು?
 (1)ಹೈದರ್ ಅಲಿ
 (2)ಟಿಪ್ಪು ಸುಲ್ತಾನ್
 (3)ನಿಜಾಮ್-ಉದ್-ದೌಲ
 (4)ಚಂದಾ ಸಾಹೇಬ್

ಸರಿ ಉತ್ತರ

(1) ಹೈದರ್ ಅಲಿ


27.360 ನೇ ಕಲಮಿನಡಿ ಘೋಷಿಸಲ್ಪಟ್ಟ ವಿತ್ತೀಯ ತುರ್ತುಪರಿಸ್ಥಿತಿಯು ಕೇಂದ್ರ ಸಂಸತ್ತಿನಿಂದ ಅನುಮೋದನೆಗೊಳ್ಳದ ಹೊರತು, __________ ದಿನಗಳ ಅಂತ್ಯದ ನಂತರ ನಿಲುಗಡೆಯಾಗುವುದು.
 (1)10 ದಿನಗಳು
 (2)14 ದಿನಗಳು
 (3)1 ತಿಂಗಳು
 (4)2 ತಿಂಗಳು

ಸರಿ ಉತ್ತರ

(4) 2 ತಿಂಗಳು


28.ನೇರಳಾತೀತ ಬೆಳಕಿನ ಆವರ್ತಾಂಕವು
 (1)ನೋಡಲಾಗುವ ಬೆಳಕಿನ ವ್ಯಾಪ್ತಿಗಿಂತ ಕೆಳಗಿನದು
 (2)ಅವರೋಹಿತ ಬೆಳಕಿನ ವ್ಯಾಪ್ತಿಗಿಂತ ಕೆಳಗಿನದು
 (3)ನೋಡಲಾಗುವ ಬೆಳಕಿನ ವ್ಯಾಪ್ತಿಗಿಂತ ಮೇಲಿನದು
 (4)ಅವರೋಹಿತ ಬೆಳಕಿನ ವ್ಯಾಪ್ತಿಗಿಂತ ಮೇಲಿನದು

ಸರಿ ಉತ್ತರ

(3) ನೋಡಲಾಗುವ ಬೆಳಕಿನ ವ್ಯಾಪ್ತಿಗಿಂತ ಮೇಲಿನದು


29.ಡಿ.ಎನ್.ಎ. ಕೈಬೆರಳಚ್ಚು ಇದಕ್ಕೆ ಸಂಬಂಧಿಸಿದ್ದು
 (1)ವಿವಿಧ ಡಿ.ಎನ್.ಎ. ಪ್ರೊಫೈಲ್ ಗಳ (ರೇಖಾಕೃತಿ) ಆಣುವಿಕ ವಿಶ್ಲೇಷಣೆ
 (2)ಬೆರಳಚ್ಚುಗಳ ಗುರುತಿಸುವರೆಗೆ ಉಪಯೋಗ ಆಗುವ ತಂತ್ರನಗಳು
 (3)ಡಿ.ಎನ್.ಎ. ಮಾದರಿಗಳ ವಿಶ್ಲೇಷಣೆಯು ಅಚ್ಚು / ಮುದ್ರೆ ಸಾಧನಗಳನ್ನು ಬಳಸುತ್ತದೆ
 (4)ಮಾಲಿಕ್ಯುಲರ್ (ಆಣ್ವಿಕ) ಜೆನೆಟಿಕ್ ವಿಧಾನವು ಕೂದಲು, ರಕ್ತ, ವೀರ್ಯ ಅಥವಾ ಇತರ ಜೀವ ವಿಜ್ಞಾನೀಯ ಮಾದರಿಗಳನ್ನು ವಿಶಿಷ್ಟ ನಮೂನೆಗಳನ್ನು ಆಧರಿಸಿ ವ್ಯಕ್ತಿಗಳ ಗುರ್ತಿಸುವಿಕೆಯನ್ನು ಮಾಡಲು ಸಾಧ್ಯವಾಗಿಸುತ್ತದೆ

ಸರಿ ಉತ್ತರ

(1) ವಿವಿಧ ಡಿ.ಎನ್.ಎ. ಪ್ರೊಫೈಲ್ ಗಳ (ರೇಖಾಕೃತಿ) ಆಣುವಿಕ ವಿಶ್ಲೇಷಣೆ


30.ಸ್ಟ್ರಾಟೋಸ್ಪಿಯರ್ (ವಾಯುಮಂಡಲ) ಮತ್ತು ಟ್ರೋಪೊಸ್ಪಿಯರ್ಗಳನ್ನು ಪ್ರತ್ಯೇಕಿಸುವ ವಾತಾವರಣದ ತೆಳು ಸಾಗಣೆ ಪದರವನ್ನು ಹೀಗೆನ್ನುತ್ತಾರೆ
 (1)ಟ್ರೋಪೋಪಾಸ್
 (2)ಸ್ಟ್ರಾಟೋಪಾಸ್
 (3)ಮೀಸೋಪಾಸ್
 (4)ಥರ್ಮೋಪಾಸ್

ಸರಿ ಉತ್ತರ

(1) ಟ್ರೋಪೋಪಾಸ್


31.ಜಲ ಮಾಲಿನ್ಯವನ್ನು ಸೂಚಿಸುವ ಸಸ್ಯ ಜಾತಿ ಪ್ರಭೇದವು
 (1)ಹೈಡ್ರಿಲ್ಲಾ ಜಾತಿ ಪ್ರಭೇದ
 (2)ಐಕೊರ್ನಿಯಾ ಜಾತಿ ಪ್ರಭೇದ
 (3)ಯುಪಟೋರಿಯಂ ಜಾತಿ ಪ್ರಭೇದ
 (4)ಟ್ರೈಡಕ್ಸ್ ಜಾತಿ ಪ್ರಭೇದ

ಸರಿ ಉತ್ತರ

(2) ಐಕೊರ್ನಿಯಾ ಜಾತಿ ಪ್ರಭೇದ


32.ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಂಭೀರ ಆರೋಗ್ಯ ತೊಂದರೆ ಉಂಟು ಮಾಡಿದ ಕೀಟನಾಶಕ
 (1)DDT
 (2)ಎಂಡೊಸಲ್ಫಾನ್
 (3)ಸೈಪರ್ಮೆಥ್ರಿನ್
 (4)ಕ್ಲೊರ್ ಪೈರಿಫೋಸ್

ಸರಿ ಉತ್ತರ

(2) ಎಂಡೊಸಲ್ಫಾನ್


33.ಮಾನವನಲ್ಲಿ ಸೀಸಕ್ಕೆ ತೀವ್ರ ಒಡ್ಡುವಿಕೆಯಿಂದುಂಟಾಗುವ ರೋಗವು
 (1)ಇಟಾಯಿ-ಇಟಾಯಿ
 (2)ನ್ಯೂರಾಲ್ಜಿಯಾ
 (3)ಪ್ಲಂಬಿಸಂ
 (4)ಬೈಸಿನ್ನೊಸಿಸ್

ಸರಿ ಉತ್ತರ

(3) ಪ್ಲಂಬಿಸಂ


34.ಪೇಲಿಯೋ ಇಕಾಲಜಿಯು (ಪರಿಸರವು) ಇದಕ್ಕೆ ಸಂಬಂಧಿಸಿದೆ
 (1)ಪ್ರಸ್ತುತ ಅಸ್ತಿತ್ವದಲ್ಲಿರುವ ಜೀವಿಗಳು ಮತ್ತು ಅವುಗಳ ಪರಿಸರ
 (2)ದೂರದ, ಭೌಗೋಳೀಯವಾಗಿ ಹಿಂದೆ ಅಸ್ತಿತ್ವದಲ್ಲಿದ್ದ ಜೀವಿಗಳು ಮತ್ತು ಅವುಗಳ ಪರಿಸರ
 (3)ಬಾಹ್ಯಾಕಾಶದಲ್ಲಿ ಅಸ್ತಿತ್ವದಲ್ಲಿರುವ ಸಸ್ಯಗಳು ಮತ್ತು ಪ್ರಾಣಿಗಳು
 (4)ಇವ್ಯಾವುವೂ ಅಲ್ಲ

ಸರಿ ಉತ್ತರ

(2) ದೂರದ, ಭೌಗೋಳೀಯವಾಗಿ ಹಿಂದೆ ಅಸ್ತಿತ್ವದಲ್ಲಿದ್ದ ಜೀವಿಗಳು ಮತ್ತು ಅವುಗಳ ಪರಿಸರ


35.ಪಟ್ಟಿ I (ಆಕರ) ಮತ್ತು ಪಟ್ಟಿ II (ಶಕ್ತಿ ಉತ್ಪಾದನೆ) ಗಳನ್ನು ಹೊಂದಿಸಿ :
  ಪಟ್ಟಿ I (ಆಕರ) ಪಟ್ಟಿ II (ಶಕ್ತಿ ಉತ್ಪಾದನೆ)
 A.ಮರI.ಮೀಥೇನ್
 B.ತಾಳೆ ಎಣ್ಣೆII.ಎಥನಾಲ್
 C.ಕಬ್ಬುIII.ಬಯೋಡೀಸೆಲ್
 D.ಪ್ರಾಣಿ ಅವಶೇಷಗಳು ಮತ್ತು ಗೊಬ್ಬರಗಳುIV.ಇದ್ದಿಲು
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IVIIIIII
 (2)IVIIIIII
 (3)IIIIIIIV
 (4)IVIIIIII

ಸರಿ ಉತ್ತರ

(4) IV III II I


36.ಭೂ ಜಲದಲ್ಲಿನ ಟೆಟ್ರಾಕ್ಲೊರೋ ಇಥಿಲೀನ್ ನ ಪ್ರಧಾನ ಆಕರ
 (1)ಲೋಹ ಲೇಪನ (ಪ್ಲೇಟಿಂಗ್)
 (2)ಡ್ರೈಕ್ಲೀನಿಂಗ್ (ಶುಷ್ಕ ಶುದ್ಧ ಗೊಳಿಸುವಿಕೆ)
 (3)ಔಷಧಗಳು
 (4)ಆಸ್ಫಾಲ್ಟ್ ಉತ್ಪಾದನೆ

ಸರಿ ಉತ್ತರ

(2) ಡ್ರೈಕ್ಲೀನಿಂಗ್ (ಶುಷ್ಕ ಶುದ್ಧ ಗೊಳಿಸುವಿಕೆ)


37.ಭಾರತದ ಪ್ರಥಮ ಮಹಿಳಾ ಮುಖ್ಯ ಚುನಾವಣಾ ಆಯುಕ್ತರನ್ನು ಗುರುತಿಸಿರಿ.
 (1)ಶ್ರೀಮತಿ ನೀಲಮಣಿ ರಾಜು
 (2)ಶ್ರೀಮತಿ ಮಾಲತಿ ದಾಸ್
 (3)ಶ್ರೀಮತಿ ಎಮ್. ಫಾಥಿಮಾ ಬೀವಿ
 (4)ಶ್ರೀಮತಿ ವಿ.ಎಸ್. ರಮಾದೇವಿ

ಸರಿ ಉತ್ತರ

(4) ಶ್ರೀಮತಿ ವಿ.ಎಸ್. ರಮಾದೇವಿ


38.ಸರಕು ಮತ್ತು ಸೇವಾ ತೆರಿಗೆಯನ್ನು (GST) ಭಾರತ ಸಂವಿಧಾನದ ಕೆಳಗಿನ ಯಾವ ತಿದ್ದುಪಡಿಯ ಮೂಲಕ ಜಾರಿಗೆ ತರಲಾಯಿತು ?
 (1)99 ನೆಯ
 (2)101 ನೆಯ
 (3)96 ನೆಯ
 (4)94 ನೆಯ

ಸರಿ ಉತ್ತರ

(2) 101 ನೆಯ


39.‘‘ಕೊರಿಯಾ ಪರ್ಯಾಯ ದ್ವೀಪದ ಮೇಲೆ ಇನ್ನು ಮುಂದೆ ಯುದ್ಧವಿಲ್ಲ’’ ಮತ್ತು ‘‘ಸಂಪೂರ್ಣ ಅಣ್ವಸ್ತ್ರ ನಾಶ’’ — ಎಂಬ ಘೋಷಣೆಯನ್ನು ಇತ್ತೀಚೆಗಷ್ಟೇ ಕೊರಿಯನ್ ಶೃಂಗಸಭೆಯಲ್ಲಿ ಮಾಡಲಾಗಿದ್ದು, ಇದು ಇವರಿಂದ ಸಹಿ ಹಾಕಲ್ಪಟ್ಟಿದೆ
 (1)ಉತ್ತರ ಕೊರಿಯಾ ಮತ್ತು ಯು.ಎಸ್.ಎ.
 (2)ಉತ್ತರ ಕೊರಿಯಾ ಮತ್ತು ಜಪಾನ್
 (3)ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ
 (4)ಉತ್ತರ ಕೊರಿಯಾ ಮತ್ತು ಚೀನಾ

ಸರಿ ಉತ್ತರ

(3) ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ


40.ಚಹಾಬಾರ್ ಅಂತರರಾಷ್ಟ್ರೀಯ ಬಂದರಿನ ಬೆಳವಣಿಗೆಯಲ್ಲಿ ಭಾರತವು ಮುಖ್ಯ ಪಾತ್ರವನ್ನು ವಹಿಸಿದ್ದು ಇದು ಈ ಕೆಳಗಿನ ಯಾವ ರಾಷ್ಟ್ರಕ್ಕೆ ಸೇರಿದ್ದು ?
 (1)ಪಾಕೀಸ್ತಾನ
 (2)ಆಪ್ಘಾನಿಸ್ಥಾನ
 (3)ಸೌದಿ ಅರೇಬಿಯಾ
 (4)ಇರಾನ್

ಸರಿ ಉತ್ತರ

(4) ಇರಾನ್


41.ಪಟ್ಟಿ I (ಮಂಡಳಿ) ಮತ್ತು ಪಟ್ಟಿ II (ಕೇಂದ್ರಸ್ಥಾನ) ಗಳನ್ನು ಹೊಂದಿಸಿ :
  ಪಟ್ಟಿ I(ಮಂಡಳಿ) ಪಟ್ಟಿ II(ಕೇಂದ್ರಸ್ಥಾನ)
 A.ಕಾಫಿ ಮಂಡಳಿI.ಬೆಂಗಳೂರು
 B.ರಬ್ಬರ್ ಮಂಡಳಿII.ಗುಂಟೂರು
 C.ಚಹಾ ಮಂಡಳಿIII.ಕೊಟ್ಟಾಯಂ
 D.ಹೊಗೆಸೊಪ್ಪು ಮಂಡಳಿIV.ಕೋಲ್ಕತಾ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIVIIII
 (2)IIIIIVII
 (3)IIIIIIVI
 (4)IIVIIIII

ಸರಿ ಉತ್ತರ

(2) I III IV II


42.ವಿಶ್ವದ ಅತಿ ದೊಡ್ಡದಾದ ಬಿಸಿ ಮರುಭೂಮಿಯು
 (1)ಕಲಹರಿ
 (2)ಗೋಬಿ
 (3)ಸಹಾರಾ
 (4)ಥಾರ್

ಸರಿ ಉತ್ತರ

(3) ಸಹಾರಾ


43.ಆಳ ಸಮುದ್ರ ಮುಳುಗುಕಾರರು ಇದರಿಂದ ಭರ್ತಿಯಾದ ಧಾರಕಗಳನ್ನು ಬಳಸಿ ಉಸಿರಾಡುತ್ತಾರೆ
 (1)ಆಮ್ಲಜನಕ ಮಾತ್ರ
 (2)ಆಮ್ಲಜನಕ ಮತ್ತು ಹೀಲಿಯಂಗಳ ಮಿಶ್ರಣ
 (3)ಆಮ್ಲಜನಕ ಮತ್ತು ಸಾರಜನಕಗಳ ಮಿಶ್ರಣ
 (4)ಆಮ್ಲಜನಕ ಮತ್ತು ಇಂಗಾಲದ ಡೈ ಆಕ್ಸೈಡ್ ಗಳ ಮಿಶ್ರಣ

ಸರಿ ಉತ್ತರ

(2) ಆಮ್ಲಜನಕ ಮತ್ತು ಹೀಲಿಯಂಗಳ ಮಿಶ್ರಣ


44.ಮಳೆಗಾಲದಲ್ಲಿ ತೈಲ ಚೆಲ್ಲಿ ಹರಡಿದ್ದಾಗ ರಸ್ತೆ ಮೇಲೆ ಬಣ್ಣದ ವಿನ್ಯಾಸವನ್ನು ನೀವು ನೋಡುವಿರಿ ಅದಕ್ಕೆ ಕಾರಣ
 (1)ಬೆಳಕಿನ ಪ್ರತಿಫಲನ
 (2)ಭೂಮಿಯ ಮೇಲ್ಮೈನಲ್ಲಿ ತೈಲದ ಪೊರೆ ಉಂಟು ಮಾಡುವ ಬೆಳಕಿನ ವಿವರ್ತನ
 (3)ಭೂಮಿಯ ಮೇಲ್ಮೈ ಮೇಲೆ ತೈಲ ಪೊರೆ ಉಂಟು ಮಾಡುವ ವ್ಯತಿಕರಣ
 (4)ಬೆಳಕಿನ ವರ್ಣ ವಿಭಜನೆ

ಸರಿ ಉತ್ತರ

(3) ಭೂಮಿಯ ಮೇಲ್ಮೈ ಮೇಲೆ ತೈಲ ಪೊರೆ ಉಂಟು ಮಾಡುವ ವ್ಯತಿಕರಣ


45.ಒಂದು ಲಿಫ್ಟ್ ವೇಗೋತ್ಕರ್ಷದೊಡನೆ ಮೇಲೆ ಹೋಗುತ್ತಿದ್ದಲ್ಲಿ ಒಂದು ವಸ್ತುವಿನ ಅಳೆಯಲಾದ ತುಕವು
 (1)ನಿಜತೂಕಕ್ಕಿಂತ ಅಧಿಕ
 (2)ನಿಜತೂಕಕ್ಕಿಂತ ಕಡಿಮೆ
 (3)ತೂಕದಲ್ಲಿ ಬದಲಾವಣೆ ಇಲ್ಲ
 (4)ಯಾವುವೂ ಅಲ್ಲ

ಸರಿ ಉತ್ತರ

(1) ನಿಜತೂಕಕ್ಕಿಂತ ಅಧಿಕ


46.ಡೈಆಪ್ಟರ್ ಇದರ ಏಕಮಾನವಾಗಿದೆ
 (1)ಮಸೂರದ ಸಾಮರ್ಥ್ಯ
 (2)ಮಸೂರದ ಸಂಗಮ ದೂರ
 (3)ರಂಧ್ರ
 (4)ಕ್ಯಾಮೆರಾದಲ್ಲಿನ ಮುಚ್ಚಳದ ವೇಗ

ಸರಿ ಉತ್ತರ

(1) ಮಸೂರದ ಸಾಮರ್ಥ್ಯ


47.ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 ಗಡಸು ನೀರು ಇದಕ್ಕೆ ಸೂಕ್ತವಲ್ಲ
 A.ಕುಡಿಯಲು
 B.ಸಾಬೂನಿನೊಂದಿಗೆ ಬಟ್ಟೆಗಳನ್ನು ತೊಳೆಯಲು
 C.ಬಾಯ್ಲರ್ ಗಳಲ್ಲಿ ಬಳಸಲು
 D.ಬೆಳೆಗಳ ನೀರಾವರಿಗೆ
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮತ್ತು C ಮಾತ್ರ
 (2)B ಮತ್ತು C ಮಾತ್ರ
 (3)A, B ಮತ್ತು D ಮಾತ್ರ
 (4)A, B, C ಮತ್ತು D

ಸರಿ ಉತ್ತರ

(2) B ಮತ್ತು C ಮಾತ್ರ


48.ಜಿಬ್ರಾಲ್ಟರ್ ಜಲ ಸಂಧಿಯು ಯಾವ ದೇಶ ಮತ್ತು ಯಾವ ಸಮುದ್ರಗಳನ್ನು ಪ್ರತ್ಯೇಕಿಸುತ್ತದೆ ?
 (1)ಸ್ಪೈನ್, ಮೊರೊಕ್ಕೊ ಮತ್ತು ಮೆಡಿಟೆರಿಯನ್ ಸಮುದ್ರ
 (2)ಪೋರ್ಚುಗಲ್, ಮೊರೊಕ್ಕೊ ಮತ್ತು ಕಪ್ಪು ಸಮುದ್ರ
 (3)ಆಲ್ಜೀರಿಯಾ, ಸ್ಪೈನ್ ಮತ್ತು ಕ್ಯಾಸ್ಪಿಯನ್ ಸಮುದ್ರ
 (4)ಪೋರ್ಚುಗಲ್, ಆಲ್ಜೀರಿಯಾ ಮತ್ತು ಕೆಂಪು ಸಮುದ್ರ

ಸರಿ ಉತ್ತರ

(1) ಸ್ಪೈನ್, ಮೊರೊಕ್ಕೊ ಮತ್ತು ಮೆಡಿಟೆರಿಯನ್ ಸಮುದ್ರ


49.‘‘ಡೊಮಿನಿಯನ್ ಸ್ಥಾನಮಾನ ಪರಿಕಲ್ಪನೆ ಬಾಗಿಲ ಮೊಳೆಯಹಾಗೆ ಮೃತ.’’ ಈ ಹೇಳಿಕೆ ನೀಡಿದವರು ಯಾರು ?
 (1)ಮಹಾತ್ಮಾ ಗಾಂಧಿ
 (2)ಡಾ. ರಾಜೇಂದ್ರ ಪ್ರಸಾದ್
 (3)ವಿನೋಬಾ ಭಾವೆ
 (4)ಜವಹರ್ ಲಾಲ್ ನೆಹರೂ

ಸರಿ ಉತ್ತರ

(4) ಜವಹರ್ ಲಾಲ್ ನೆಹರೂ


50.ಈ ಕೆಳಗಿನ ಪೈಕಿ ಯಾವ ಎರಡು ದೇಶಗಳು ವಿಶ್ವದಲ್ಲಿ ಅತ್ಯಧಿಕ ಕಬ್ಬು ಉತ್ಪಾದಿಸುವ ದೇಶಗಳು?
 (1)ಬ್ರೆಜಿಲ್, ಭಾರತ
 (2)ಚೈನಾ, ಭಾರತ
 (3)ಫಿಲಿಪೈನ್ಸ್, ಇಂಡೊನೇಷಿಯಾ
 (4)ಇಂಡೊನೇಷಿಯಾ, ಭಾರತ

ಸರಿ ಉತ್ತರ

(1) ಬ್ರೆಜಿಲ್, ಭಾರತ


51.ಮಾನವ ರಕ್ತದ ಗುಂಪುಗಳು ಮತ್ತು ಪ್ರತಿಕಾಯಗಳ ಸಂಶೋಧನೆಗಾಗಿ ನೊಬೆಲ್ ಪ್ರಶಸ್ತಿಯನ್ನು ಗಳಿಸಿದವರಾರು ?
 (1)ಕೆ. ಲ್ಯಾಂಡ್ ಸ್ಟೈನರ್
 (2)ಟಿ. ಸ್ವಡ್ ಬರ್ಗ್
 (3)ಓ. ವಾರಬರ್ಗ್
 (4)ಟಿ.ಹೆಚ್. ಮಾರ್ಗನ್

ಸರಿ ಉತ್ತರ

(1) ಕೆ. ಲ್ಯಾಂಡ್ ಸ್ಟೈನರ್


52.ಕೆಳಗಿನ ದೆಹಲಿ ಸುಲ್ತಾನ ಮನೆತನಗಳನ್ನು ಕಾಲಾನುಕ್ರಮಣಿಕೆಯಲ್ಲಿ ಜೋಡಿಸಿ :
 A.ಗುಲಾಮೀ
 B.ಖಿಲ್ಜಿ
 C.ತುಘಲಕ್
 D.ಸೈಯದ್
 E.ಲೋದಿ
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)B, A, C, D, E
 (2)A, B, C, D, E
 (3)A, B, D, C, E
 (4)A, B, D, E, C

ಸರಿ ಉತ್ತರ

(2) A, B, C, D, E


53.ಐ.ಟಿ. ಸಚಿವಾಲಯದಿಂದ 7 ಭಾಷೆಗಳು - ಹಿಂದಿ, ಬಾಂಗ್ಲಾ, ಮಲೆಯಾಳಂ, ಗುರುಮುಖಿ, ತಮಿಳು, ಕನ್ನಡ ಮತ್ತು ಅಸ್ಸಾಮೀಗಳಲ್ಲಿ ತಂತ್ರಾಂಶವನ್ನು ಜಾರಿಗೆ ತಂದ ಮುದ್ರಿತ ಭಾರತೀಯ ಭಾಷೆಗಳ ದಾಖಲೆಗಳನ್ನು ಪೂರ್ಣವಾಗಿ ಸಂಪಾದಿಸಬಲ್ಲ ಪಠ್ಯ ಕೋಡ್ ಆಗಿ ಯೂನಿಕೋಡ್ ಎನ್ಕೋಡಿಂಗ್ ರೂಪಿಸಿ ಭಾರತೀಯ ಭಾಷೆಗಳಲ್ಲಿನ ವಿಷಯದ ಅಲಭ್ಯಕೆಯಿಂದಾಗಿ ಅಂತರ್ಜಾಲ ಲಭ್ಯತೆಯ ಅಂತರವನ್ನು ಕೊನೆಗೋಳಿಸಿತು, ಈ ತಂತ್ರಾಂಶದ ಹೆಸರು
 (1)e-ಅಕ್ಷರಯಾನ
 (2)e-ಭಾಷ್ಯಾಂತರ
 (3)e-ವಾಚನ
 (4)ಇಂಡಿ ಡಾಕ್ ಟೈಪ್

ಸರಿ ಉತ್ತರ

(1) e-ಅಕ್ಷರಯಾನ


54.ಈ ಕೆಳಗಿನವುಗಳಲ್ಲಿ ಯಾವ ವಾಹಕವು ಭಾರತದ ಮೊತ್ತಮೊದಲಿನ ಬಯೋಜೆಟ್ ಇಂಧನ ಸಾಮರ್ಥ್ಯದ ಜೆಟ್ ಹಾರಾಟವನ್ನು ಡೆಹ್ರಾಡೂನ್ ಮತ್ತು ನವದೆಹಲಿ ನಡುವೆ ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿಸಿತು ?
 (1)ಸ್ಪೈಸ್ ಜೆಟ್
 (2)ವಿಸ್ತಾರ
 (3)ಇಂಡಿಗೋ
 (4)ಗೋ ಏರ್

ಸರಿ ಉತ್ತರ

(1) ಸ್ಪೈಸ್ ಜೆಟ್


55.ಪ್ರಸಿದ್ಧ ದಿಗಂಬರ ಜೈನ ಮುನಿ ತರುಣ್ ಸಾಗರ್ ಜೀ ಇತ್ತೀಚೆಗೆ ನವದೆಹಲಿಯಲ್ಲಿ ವಿಧಿವಿಶರಾದರು. ಅವರು ಕೈಗೊಂಡ ಸರಣಿ ಉಪದೇಶ ಮಾಲೆಗಳ ಹೆಸರು ಕೆಳಗಿನವುಗಳಲ್ಲಿ ಯಾವುದು ?
 (1)ಕಡ್ವೆ ಪ್ರವಚನ
 (2)ಏರಿಕೆಯ ಧ್ವನಿ
 (3)ಕಡವೆ ಶಬ್ದ
 (4)ರಿಷಭ್ ಸಂದೇಶ

ಸರಿ ಉತ್ತರ

(1) ಕಡ್ವೆ ಪ್ರವಚನ


56.ಅಲಾಸ್ಟೈರ್ ಕುಕ ಬಗ್ಗೆ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
 A.ಓವಲ್ ನಲ್ಲಿನ ಭಾರತದ ವಿರುದ್ಧದ 5 ನೇ ಮತ್ತು ಅಂತಿಮ ಟೆಸ್ಟ್ ಮ್ಯಾಚ್ ನ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ಇವರು ನಿವೃತ್ತರಾದರು.
 B.2018 ರ ಭಾರತ ಇಂಗ್ಲೆಂಡ್ ಟೆಸ್ಟ್ ಸರಣಿ ಪಂದ್ಯಗಳಿಗಾಗಿ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಟೀಂನ ಕ್ಯಾಪ್ಟನ್ ಆಗಿದ್ದರು.
 C.ಇವನು ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಗಳಿಸಿದ ಇಂಗ್ಲೆಂಡಿನವ.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)A ಮತ್ತು B ಮಾತ್ರ
 (3)A ಮತ್ತು C ಮಾತ್ರ
 (4)A, B ಮತ್ತು C

ಸರಿ ಉತ್ತರ

(3) A ಮತ್ತು C ಮಾತ್ರ


57.ರ್ಯಾಪಿಡ್ ಟ್ರೈಡೆಂಟ್ 2018 ಎಂದರೇನು ?
 (1)ಇಂಗ್ಲೆಂಡಿನ ಫಾರ್ಮುಲಾ ವನ್ ನಡೆಸಿದ (ರೇಸ್) ಸ್ಪರ್ಧಾ ಕ್ರೀಡೆ
 (2)ಸೆಪ್ಟಂಬರ್ 2018 ರಲ್ಲಿ ಅಂತರರಾಷ್ಟ್ರೀಯ ರಸಪ್ರಶ್ನೆ ಸ್ಪರ್ಧೆಯನ್ನು ಸಂಯುಕ್ತ ರಾಷ್ಟ್ರ ಆಯೋಜಿಸಿದ್ದು
 (3)ಸಂಯುಕ್ತ ರಾಷ್ಟ್ರ ದೊಂದಿಗೆ ಯುಕ್ರೇನ್ ನಡೆಸಿದ ಜಂಟಿ ಮಿಲಿಟರಿ ಕಾರ್ಯಾಚರಣೆ ಮತ್ತು ಇತರ ನ್ಯಾಟೋ ದೇಶಗಳ ಒಂದು ಸ್ಟ್ರಿಂಗ್ (ತಂತು)
 (4)ಇರಾನ್ ಸರ್ಕಾರ ಮೊದಲು ಕೈಗೊಂಡ ನ್ಯೂಕ್ಲಿಯರೀ ಕರಣದ ಬೃಹತ್ ಕಾರ್ಯಕ್ರಮ

ಸರಿ ಉತ್ತರ

(3) ಸಂಯುಕ್ತ ರಾಷ್ಟ್ರ ದೊಂದಿಗೆ ಯುಕ್ರೇನ್ ನಡೆಸಿದ ಜಂಟಿ ಮಿಲಿಟರಿ ಕಾರ್ಯಾಚರಣೆ ಮತ್ತು ಇತರ ನ್ಯಾಟೋ ದೇಶಗಳ ಒಂದು ಸ್ಟ್ರಿಂಗ್ (ತಂತು)


58.ಇತ್ತೀಚೆಗೆ ತೀರಿಕೊಂಡ ಗುರುದಾಸ್ ಕಾಮತ್ ಅವರು ತಮ್ಮನ್ನು ಯಾವ ಪಕ್ಷದೊಂದಿಗೆ ಗುರುತಿಸಿ ಕೊಂಡಿದ್ದರು ?
 (1)ಭಾರತ ರಾಷ್ಟ್ರೀಯ ಕಾಂಗ್ರೆಸ್ (ಐ.ಎನ್.ಸಿ.)
 (2)ಭಾರತೀಯ ಕಮ್ಯೂನಿಸ್ಟ್ ಪಕ್ಷ
 (3)ಭಾರತೀಯ ಜನತಾ ಪಕ್ಷ
 (4)ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕಿಸ್ಟ್ )

ಸರಿ ಉತ್ತರ

(1) ಭಾರತ ರಾಷ್ಟ್ರೀಯ ಕಾಂಗ್ರೆಸ್ (ಐ.ಎನ್.ಸಿ.)


59.ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಡಾ. ಅರಿಫ್ ಅಲ್ವಿಯವರು ಪಾಕಿಸ್ತಾನದ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
 B.ಅವರು ಮಮ್ನೂನ್ ಹುಸೇನ್ಗಿಂತ ಮುಂದಿರುವವರು.
 C.ಅವರು ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಸ್ಥಾಪಕ ಸದಸ್ಯರು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)A ಮತ್ತು C ಮಾತ್ರ
 (3)B ಮತ್ತು C ಮಾತ್ರ
 (4)A, B ಮತ್ತು C

ಸರಿ ಉತ್ತರ

(4) A, B ಮತ್ತು C


60.ಈ ಹೇಳಿಕೆಗಳನ್ನು ಪರಿಗಶಿಸಿ :
 A.ಭಾರತವು 2018 ರ ಏಷ್ಯನ್ ಕ್ರೀಡೆಗಳ ಪಂದ್ಯಮಕ್ತಾಯದಲ್ಲಿ ಅತ್ಯಧಿಕ 69 ಪದಕ ಗಳೊಂದಿಗೆ ಪೊರೈಸಿತು.
 B.ರಾಣಿ, ರಾಮ್ ಪಾಲರು, ಭಾರತೀಯ ಮಹಿಳಾ ಹಾಕಿ ಕ್ಯಾಪ್ಟಿನ್, 2018 ರ 18 ನೇ ಏಷ್ಯನ್ ಕ್ರೀಡೆಗಳ ಸಮಾರೋಪ ಸಮಾರಂಭದಲ್ಲಿ ಭಾರತೀಯ ಧ್ವಜ ಹೊತ್ತವರು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಇವೆರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ

ಸರಿ ಉತ್ತರ

(3) A ಮತ್ತು B ಇವೆರಡೂ


61.2011 ರ ಜನಗಣತಿಯ ಮೇರೆಗೆ, ಈ ಕೆಳಗಿನ ಕೇಂದ್ರಾಡಳಿತ ಪ್ರದೇಶದಲ್ಲಿ ಕನಿಷ್ಠ ಜನಸಂಖ್ಯೆಯನ್ನು ಹೊಂದಿರುವಂತಹುದು ಯಾವುದು ?
 (1)ದಾಮನ್ ಮತ್ತು ಡಿಯು
 (2)ದಾದ್ರಾ ಮತ್ತು ನಗರ್ ಹವೇಲಿ
 (3)ಲಕ್ಷದ್ವೀಪ್
 (4)ಪುದುಚೇರಿ

ಸರಿ ಉತ್ತರ

(3) ಲಕ್ಷದ್ವೀಪ್


62.ಅಂತರರಾಷ್ಟ್ರೀಯ ದಿನಾಂಕ ರೇಖೆಯು ಒಂದು ಕಾಲ್ಪನಿಕ ರೇಖೆಯಾಗಿದ್ದು, ಬೇರಿಂಗ್ ಜಲಸಂಧಿಯ ಮೂಲಕ ಹಾದು ಹೋಗುವುದು, ಸಾಮಾನ್ಯವಾಗಿ ಈ ಕೆಳಗಿನ ಮೆರಿಡಿಯನ್ ನ್ನು (ಖಗೋಳ ಮಧ್ಯಾಹ್ನ ರೇಖೆ) ಅನುಸರಿಸುವುದು
 (1)
 (2)180°
 (3)90°
 (4)60°

ಸರಿ ಉತ್ತರ

(2) 180°


63.ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿ ಹೊಂದಿಕೆಯಾಗಿದೆ ?
 A.ಪಿಗ್ಮೀಸ್ - ಕಾಂಗೊ ಕಣಿವೆ
 B.ಲ್ಯಾಪ್ಸ್ - ನಾರ್ವೆ
 C.ಕಿರ್ಗಿಝ್ - ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)A ಮತ್ತು B ಮಾತ್ರ
 (3)C ಮಾತ್ರ
 (4)A, B ಮತ್ತು C

ಸರಿ ಉತ್ತರ

(3) C ಮಾತ್ರ


64.ಭಾರತದ ಸಹಕಾರಿ ಸಂಸ್ಥೆಗಳಲ್ಲಿ ಕೆಳಗಿನ ಯಾವುದು ರಸ ಗೊಬ್ಬರಗಳ ಉತ್ಪಾದನೆಗೆ ಹೊಣೆಯಾಗಿದೆ ?
 (1)NAFED
 (2)IFFCO
 (3)NCPC
 (4)TRIFED

ಸರಿ ಉತ್ತರ

(2) IFFCO


65.ರಾಜ್ಯಸಭೆಯು ಹಣಕಾಸಿನ ಮಸೂದೆಯನ್ನು ಲೋಕಸಭೆಯ ಪರಿಗಣನೆಗಾಗಿ ಕಳುಹಿಸಿದ ನಂತರ, ವಿಳಂಬ (ಮುಂದೂಡು) ಮಾಡಬಹುದಾದ ಗರಿಷ್ಠ ದಿನಗಳವರೆಗಿನ ಅವಧಿ
 (1)21 ದಿನಗಳು
 (2)ಒಂದು ತಿಂಗಳು
 (3)7 ದಿನಗಳು
 (4)14 ದಿನಗಳು

ಸರಿ ಉತ್ತರ

(4) 14 ದಿನಗಳು


66.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಮೊದಲನೇ ದುಂಡು ಮೇಜಿನ ಸಮಾವೇಶದಲ್ಲಿ ಮೊಹ್ಮದ್ ಅಲಿ ಜಿನ್ಹಾರವರು ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕ ಎಲೆಕ್ಟೋರೇಟ್ (ಚುನಾಯಕ ಸಮುದಾಯ) ಗಳಿಗಾಗಿ ಬೇಡಿಕೆಯನ್ನು ಮುಂದಿಟ್ಟರು.
 B.ಎಲ್ಲಾ ದುಂಡು ಮೇಜಿನ ಸಮಾವೇಶಗಳಲ್ಲೂ ಕಾಂಗ್ರೆಸ್ ಭಾಗವಹಿಸಿತು.
 ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ ?
 ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ

ಸರಿ ಉತ್ತರ

(4) A ಆಗಲೀ ಅಥವಾ B ಆಗಲೀ ಅಲ್ಲ


67.ಭಾರತೀಯ ರಿಜರ್ವ್ ಬ್ಯಾಂಕು ಹಣ ಮೀಸಲು ಅನುಪಾತದಲ್ಲಿ ಹೆಚ್ಚಳವನ್ನು ಪ್ರಕಟಿಸಿತೆಂದರೆ ಅದು ಯಾವ ಅರ್ಥವನ್ನು ಸೂಚಿಸುತ್ತದೆ ?
 (1)ವಾಣಿಜ್ಯ ಬ್ಯಾಂಕುಗಳು ಸಾಲವನ್ನು ನೀಡಲು ಕಡಿಮೆ ಹಣವನ್ನು ಹೊಂದುತ್ತವೆ.
 (2)ಭಾರತದ ರಿಸರ್ವ ಬ್ಯಾಂಕ್ ಸಾಲವನ್ನು ನೀಡಲು ಕಡಿಮೆ ಹಣವನ್ನು ಹೊಂದುತ್ತದೆ.
 (3)ಕೇಂದ್ರ ಸರ್ಕಾರವು ಸಾಲವನ್ನು ನೀಡಲು ಕಡಿಮೆ ಹಣವನ್ನು ಹೊಂದುವುದು.
 (4)ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(1) ವಾಣಿಜ್ಯ ಬ್ಯಾಂಕುಗಳು ಸಾಲವನ್ನು ನೀಡಲು ಕಡಿಮೆ ಹಣವನ್ನು ಹೊಂದುತ್ತವೆ.


68.ಎರಡು ಕ್ರಮಾನುಗತ ಅವಧಿಗಳಿಗೆ ಭಾರತದ ಉಪರಾಷ್ಟ್ರಪತಿಗಳಾಗಿ ಅಧಿಕಾರ ನಿರ್ವಹಿಸಿದವರು ಯಾರು ?
 (1)ಡಾ. ರಾಧಾಕೃಷ್ಣನ್
 (2)ಶ್ರೀ ಆರ್. ವೆಂಕಟರಾಮನ್
 (3)ಡಾ. ಶಂಕರ ದಯಾಳ್ ಶರ್ಮಾ
 (4)ಶ್ರೀ ವಿ.ವಿ. ಗಿರಿ

ಸರಿ ಉತ್ತರ

(1) ಡಾ. ರಾಧಾಕೃಷ್ಣನ್


69.ಪಟ್ಟಿ I (ಕಾಗದ ಕೈಗಾರಿಕೆ) ಮತ್ತು ಪಟ್ಟಿ II (ರಾಜ್ಯ) ಗಳನ್ನು ಹೊಂದಿಸಿ :
  ಪಟ್ಟಿ I (ಕಾಗದ ಕೈಗಾರಿಕೆ) ಪಟ್ಟಿ II (ರಾಜ್ಯ)
 A.ಕಾಂಪ್ಟಿI.ಕರ್ನಾಟಕ
 B.ರಾಜಮುಂಡ್ರಿII.ಮಹಾರಾಷ್ಟ್ರ
 C.ಶಾಹ್ಡೊಲ್III.ಆಂಧ್ರ ಪ್ರದೇಶ
 D.ಬೆಳಗೊಳIV.ಮಧ್ಯ ಪ್ರದೇಶ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIIVII
 (2)IIIIIIVI
 (3)IIIIIIIV
 (4)IIIVIIII

ಸರಿ ಉತ್ತರ

(2) II III IV I


70.ಈ ಹೇಳಿಕೆಗಳನ್ನು ಪರಿಗಶಿಸಿ :
 A.ಯೋಜನಾ ಆಯೋಗದಂತಲ್ಲದೆ ರಾಜ್ಯಗಳು ಮತ್ತು ಸಚಿವ ಖಾತೆಗಳಿಗೆ ನೀತಿ ಆಯೋಗವೂ ನಿಧಿ ಹಂಚಿಕೆ ಮಾಡಲು ಅಧಿಕಾರ ಹೊಂದಿಲ್ಲ.
 B.ಈ ನಿಧಿ ಹಂಚಿಕೆಯ ಕಾರ್ಯಗಳು ಹಣಕಾಸು ಮಂತ್ರಿಮಂಡಲದಿಂದ ನೆರವೇರಿಸಲ್ಪಡುವುದು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ

ಸರಿ ಉತ್ತರ

(3) A ಮತ್ತು B ಎರಡೂ


71.ಯಾವ ಅಧಿವೇಶನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸ್ವರಾಜ್ ಪಕ್ಷವು ರೂಪುಗೊಂಡಿತು ?
 (1)ಬೆಳಗಾಂ
 (2)ಗಯಾ
 (3)ಕಲ್ಕತ್ತಾ
 (4)ಲಾಹೋರ್

ಸರಿ ಉತ್ತರ

(2) ಗಯಾ


72.ಪಟ್ಟಿ I (ಪಂಗಡಗಳು) ಮತ್ತು ಪಟ್ಟಿ II (ರಾಜ್ಯ) ಗಳನ್ನು ಹೊಂದಿಸಿ:
  ಪಟ್ಟಿ I (ಪಂಗಡಗಳು) ಪಟ್ಟಿ II (ರಾಜ್ಯ)
 A.ಖಾಸಿಸ್I.ಮೇಘಾಲಯ
 B.ಗರೋಸ್II.ಮಧ್ಯ ಪ್ರದೇಶ
 C.ಗೊಂಡ್III.ನಾಗಾಲ್ಯಾಂಡ್
 D.ಬಾರ್ಡಾIV.ಗುಜರಾತ್
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIIIIV
 (2)IIIIIIIV
 (3)IIIIIIIV
 (4)IIIVIIII

ಸರಿ ಉತ್ತರ

(1) I III II IV


73.MSME ಯ ಹೊಸ ವ್ಯಾಖ್ಯೆಯ ಮೇರೆಗೆ ಒಂದು ಉತ್ಪಾದನಾ ಘಟಕದ ಉದ್ಯಮವನ್ನು ಸಣ್ಣ ಉದ್ಯಮವೆಂದು ಕರೆಯಬೇಕಾದಲ್ಲಿ
 (1)ಅದರ ವಾರ್ಷಿಕ ವಹಿವಾಟು 5 ಕೋಟಿ ರೂ. ಗಳಿಗಿಂತಲೂ ಕಡಿಮೆ ಇರಬೇಕು
 (2)ಆದರ ವಾರ್ಷಿಕ ವಹಿವಾಟು 75 ಕೋಟಿ ರೂ.ನಿಂದ 250 ಕೋಟಿ ರೂ.ಗಳ ನಡುವೆ ಇರಬೇಕು
 (3)ಅದರ ವಾರ್ಷಿಕ ವಹಿವಾಟು 5 ಕೋಟಿ ರೂ. ಗಳಿಂದ 75 ಕೋಟಿ ರೂ.ಗಳ ನಡುವೆ ಇರಬೇಕು
 (4)ಅದರ ವಾರ್ಷಿಕ ವಹಿವಾಟು 10 ಕೋಟಿ ರೂ.ಗಳಿಂದ 50 ಕೋಟಿ ರೂ.ಗಳ ನಡುವೆ ಇರಬೇಕು

ಸರಿ ಉತ್ತರ

(3) ಅದರ ವಾರ್ಷಿಕ ವಹಿವಾಟು 5 ಕೋಟಿ ರೂ. ಗಳಿಂದ 75 ಕೋಟಿ ರೂ.ಗಳ ನಡುವೆ ಇರಬೇಕು


74.2011-12ರ ನಂತರ, ಭಾರತದ ಜಿ.ಡಿ.ಪಿ.ಯ ಶೇಕಡಾವಾರಿನಲ್ಲಿ ಭಾರತ ಸರ್ಕಾರವು ಶಿಕ್ಷಣದ ಮೇಲೆ ಮಾಡುವ ವೆಚ್ಚವನ್ನು ಆರೋಗ್ಯ ಮೇಲಿನ ವೆಚ್ಚಕ್ಕೆ ಹೋಲಿಸಿದಾಗ, ಶಿಕ್ಷಣದ ವೆಚ್ಚವು
 (1)ಅಧಿಕ
 (2)ಕಡಿಮೆ
 (3)ಒಂದೇರೀತಿಯಲ್ಲಿದೆ
 (4)ಆರಂಭದಲ್ಲಿ ಕಡಿಮೆ ಮತ್ತು ಪ್ರಸ್ತುತ ಒಂದೇ ರೀತಿಯಲ್ಲಿದೆ

ಸರಿ ಉತ್ತರ

(1) ಅಧಿಕ


75.ಎಲ್ಲಾ ಸೇವೆಗಳ ಮೇಲೆ ಯಾವ ಸೆಸ್ ನ್ನು (ತೆರಿಗೆ) ಶೇ. 0.5 ಆಗಿ (ತೆರಿಗೆ) ವಸೂಲಿ ಮಾಡಲಾಗುತ್ತದೆ ?
 A.ಸ್ವಚ್ಛ್ ಭಾರತ್
 B.ಕೃಷಿ ಕಲ್ಯಾಣ್
 C.ಕೌಶಲ್ ವಿಕಾಸ್
 ಈ ಮೇಲಿನವು ಗಳಲ್ಲಿ ಯಾವುವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಮಾತ್ರ
 (4)A, B ಮತ್ತು C

ಸರಿ ಉತ್ತರ

(3) A ಮತ್ತು B ಮಾತ್ರ


76.ಪಟ್ಟಿ I ಮತ್ತು ಪಟ್ಟಿ I ಗಳನ್ನು ಹೊಂದಿಸಿ :
  ಪಟ್ಟಿ I ಪಟ್ಟಿ II
 A.ಆಲೂಗಡ್ಡೆI.ಬೇರು ಮಾರ್ಪಾಡು
 B.ಗೆಣಸುII.ಹೂ ಮಾರ್ಪಾಡು
 C.ಕಾಕ್ಟಸ್ ನ ಮುಖ್ಯ ಕಾಯIII.ಭೂಮಿ ಅಡಿಯ ಕಾಂಡ ಮಾರ್ಪಾಡು
 D.ನೆಪೆಂತಿಸ್IV.ಕಾಂಡ ಮಾರ್ಪಾಡು
 V.ಎಲೆ ಮಾರ್ಪಾಡು
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIIVV
 (2)VIIIIII
 (3)VIIIIII
 (4)IVIIIV

ಸರಿ ಉತ್ತರ

(1) III I IV V


77.ಸೂರ್ಯನಿಂದ ಇರುವ ದೂರದ ಆಧಾರದ ಮೇಲೆ ಈ ಗ್ರಹಗಳ ಏರಿಕೆ ಕ್ರಮ
 A.ಶುಕ್ರ
 B.ಮಂಗಳ
 C.ಶನಿ
 D.ಗುರು ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)B, A, D, C
 (2)A, B, D, C
 (3)A, B, C, D
 (4)B, A, C, D

ಸರಿ ಉತ್ತರ

(2) A, B, D, C


78.ಭೂಮಿಯ ಮೇಲೆ ಒಂದು ಬಲ ವರ್ತಿಸುತ್ತಿದೆ ಮತ್ತು ಅದು ಸೂರ್ಯನೆಡೆಗೆ ನಿರ್ದೇಶಿತವಾಗಿದೆ ಎಂಬುದನ್ನು ತೋರಿಸಲು ಈ ಪೈಕಿ ಯಾವುದು ಸಾಕ್ಷಿಯಾಗಿದೆ ?
 (1)ಬೀಳುವ ಕಾಯಗಳ ದಿಕ್ಕು ಭೂಮಿಯೆಡೆಗೆ ಇರುವುದು
 (2)ಸೂರ್ಯನ ಸುತ್ತ ಭೂಮಿ ಸುತ್ತುವುದು
 (3)ಹಗಲು ರಾತ್ರಿಗಳ ವಿದ್ಯಮಾನ
 (4)ವಿಕಸಿಸುತ್ತಿರುವ ವಿಶ್ವ

ಸರಿ ಉತ್ತರ

(2) ಸೂರ್ಯನ ಸುತ್ತ ಭೂಮಿ ಸುತ್ತುವುದು


79.ಡೆಲ್ಟಾ ಫೋರ್ಸ್ ಎಂಬುದು ವಿದ್ರೋಹಿ ವಿರೋಧಿ (ಪ್ರತಿರಕ್ಷಾ) ದಳವಾಗಿದ್ದು, ಇದು ಕೆಳಗಿನ ಯಾವ ಭಾರತೀಯ ಸೇನಾ ವಿಭಾಗದಲ್ಲಿದೆ ?
 (1)ಭಾರತೀಯ ಸೇನೆ (ಕಾಲ್ದಳ)
 (2)ಭಾರತೀಯ ವಾಯುದಳ
 (3)ಭಾರತೀಯ ನೌಕಾದಳ
 (4)ಎಲ್ಲಾ ಮೂರು ದಳಗಳೂ ಡೆಲ್ಟಾ ಫೋರ್ಸ್ ನ್ನು ಹೊಂದಿವೆ

ಸರಿ ಉತ್ತರ

(1) ಭಾರತೀಯ ಸೇನೆ (ಕಾಲ್ದಳ)


80.2018 ರ 11 ನೇ ಸೆಪ್ಟೆಂಬರ್ ರಂದು ಭಾರತ, ಆಫ್ಘಾನಿಸ್ತಾನ ಮತ್ತು ಇರಾನ್ ಗಳ ನಡುವಣ ಮೊದಲ ಬಾರಿಗೆ ತ್ರಿಪಕ್ಷೀಯ ಸಭೆಯು ಈ ಕೆಳಗಿನ ಯಾವ ನಗರದಲ್ಲಿ ಜರುಗಿತು ?
 (1)ನವ ದೆಹಲಿ
 (2)ಕಾಬುಲ್
 (3)ಟೆಹರಾನ್
 (4)ಷಿರಾಝ್

ಸರಿ ಉತ್ತರ

(2) ಕಾಬುಲ್


81.ಅಂತರರಾಷ್ಟ್ರೀಯ ಸಾಕ್ಷರತಾ ದಿನ 2018 ನ್ನು ಪ್ರತಿವರ್ಷವೂ ಸೆಪ್ಟೆಂಬರ್ 8 ರಂದು ಆಚರಿಸಲಾಗುತ್ತಿದ್ದು ಇದರ ಆಶಯ ವೇನು?
 (1)ಡಿಜಿಟಲ್ ಸಾಕ್ಷರತೆ
 (2)ನಾವು ಇದನ್ನು ಶತಾಬ್ದಿ ಯಾಗಿ ಆಚರಿಸೋಣ
 (3)ಸಾಕ್ಷರತೆ ಮತ್ತು ಕೌಶಲ್ಯ ಅಭಿವೃದ್ಧಿ
 (4)ಭವಿಷ್ಯ ಬರೆಯುವುದು

ಸರಿ ಉತ್ತರ

(3) ಸಾಕ್ಷರತೆ ಮತ್ತು ಕೌಶಲ್ಯ ಅಭಿವೃದ್ಧಿ


82.US ಓಪನ್ ಲಾನ್ ಟೆನಿಸ್ 2018 ರ ಪುರುಷರ ಸಿಂಗಲ್ಸ್ ಗೆದ್ದವರಾರು ?
 (1)ನೊವೆಕ್ ಜೊಕೊವಿಚ್
 (2)ರೋಜರ್ ಫೆಡರರ್
 (3)ರಾಫೆಲ್ ನಡಾಲ್
 (4)ಕೀ ನಿಶಿಕೋರಿ

ಸರಿ ಉತ್ತರ

(1) ನೊವೆಕ್ ಜೊಕೊವಿಚ್


83.ಒರಿಸ್ಸಾ ಅಸೆಂಬ್ಲಿಯು ರಾಜ್ಯದಲ್ಲಿ ವಿಧಾನ ಪರಿಷತ್ತನ್ನು ಸ್ಥಾಪಿಸಲಿಕ್ಕಾಗಿ ಇತ್ತೀಚೆಗೆ ಒಂದು ಠರಾವನ್ನು ಹೊರಡಿಸಿದ್ದು ಸಂವಿಧಾನದ ಯಾವ ಕಲಮಿನಡಿ ಠರಾವನ್ನು ಹೊರಡಿಸಿತು ?
 (1)169 ನೇ ಕಲಮು
 (2)170 ನೇ ಕಲಮು
 (3)171 ನೇ ಕಲಮು
 (4)172 ನೇ ಕಲಮು

ಸರಿ ಉತ್ತರ

(1) 169 ನೇ ಕಲಮು


84.ಪಟ್ಟಿ I ರಲ್ಲಿನ (ಮರುಭೂಮಿ) ಪಟ್ಟಿ II ರಲ್ಲಿರುವ (ನೆಲೆ) ಗಳೊಂದಿಗೆ ಹೊಂದಿಸಿ :
  ಪಟ್ಟಿ I (ಮರುಭೂಮಿ) ಪಟ್ಟಿ II (ನೆಲೆ)
 A.ಚಿಹುಹ್ವಾನ್ ಮರುಭೂಮಿI.ಆಫ್ರಿಕಾ
 B.ಗಿಬ್ಸನ್ ಮರುಭೂಮಿII.ಪಶ್ಚಿಮ ಆಸ್ಟ್ರೇಲಿಯಾ
 C.ಥಾರ್ ಮರುಭೂಮಿIII.ಉತ್ತರ ಅಮೇರಿಕಾ
 D.ಕಲಹರಿ ಮರುಭೂಮಿIV.ಭಾರತ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIVIIII
 (2)IIIIIIVI
 (3)IVIIIIII
 (4)IIIIIIIV

ಸರಿ ಉತ್ತರ

(2) III II IV I


85.ವೆಂಗಿ ಚಾಳುಕ್ಯರ ಮನೆತನದ ಸ್ಥಾಪಕರು ಕೆಳಕಂಡವರಲ್ಲಿ ಯಾರು?
 (1)ಜಯಸಿಂಹ I
 (2)ಇಂದ್ರಭಟ್ಟಾರಕ
 (3)ವಿಷ್ಣುವರ್ಧನ
 (4)ಕೊಕ್ಕಿಲಾ

ಸರಿ ಉತ್ತರ

(3) ವಿಷ್ಣುವರ್ಧನ


86.ಕೆಳಗಿನ ಜೋಡಿಗಳಲ್ಲಿ ಯಾವುದು/ವು ಸರಿಯಾಗಿಲ್ಲ ?
 A.ನೆಹರೂ ವರದಿ – 1928
 B.ಪೂರ್ಣ ಸ್ವರಾಜ್ – 1929
 C.ದಂಡಿ ಮಾರ್ಚ್ ಪ್ರಾರಂಭ – 1930
 D.ಗಾಂಧಿ ಇರ್ವಿನ್ ಒಪ್ಪಂದ – 1934
 ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)C ಮತ್ತು D
 (2)A ಮತ್ತು D
 (3)A ಮತ್ತು C
 (4)D ಮಾತ್ರ

ಸರಿ ಉತ್ತರ

(4) D ಮಾತ್ರ


87.ಕದಂಬ ರಾಜ್ಯದ ಸ್ಥಾಪಕ ಯಾರು ಮತ್ತು ಇವರ ಮುಖ್ಯ ರಾಜಧಾನಿ ನಗರ ಯಾವುದು ?
 (1)ಮಯೂರವರ್ಮ ಮತ್ತು ಬನವಾಸಿ
 (2)ಕಾಕುಸ್ಥಾವರ್ಮ ಮತ್ತು ಹಲ್ಮಿಡಿ
 (3)ಶಾಂತಿವರ್ಮ ಮತ್ತು ಹಾನಗಲ್
 (4)ಮೃಗೇಶವರ್ಮ ಮತ್ತು ಗೋವಾ

ಸರಿ ಉತ್ತರ

(1) ಮಯೂರವರ್ಮ ಮತ್ತು ಬನವಾಸಿ


88.ಒಬ್ಬ ವ್ಯಕ್ತಿಯು ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಕೂಲಿದರಕ್ಕೆ ಕೆಲಸ ಮಾಡಲು ಸಿದ್ಧನಿದ್ದು, ಆದರೆ ಆತನಿಗೆ ಕೆಲಸ ದೊರೆಯುತ್ತಿಲ್ಲ (ಕೆಲಸವನ್ನು ದೊರಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ) ಎಂದಾಗ ಆ ರೀತಿಯ ನಿರುದ್ಯೋಗವನ್ನು ಏನೆಂದು ಕರೆಯುತ್ತಾರೆ ?
 (1)ಸ್ವಯಂ ನಿರುದ್ಯೋಗ
 (2)ಸ್ವಯಮೇತರ ನಿರುದ್ಯೋಗ
 (3)ಋತುಮಾನೀಯ ನಿರುದ್ಯೋಗ
 (4)ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(2) ಸ್ವಯಮೇತರ ನಿರುದ್ಯೋಗ


89.ಕೈಗಾರಿಕಾ ಉತ್ಪನ್ನ ಸೂಚ್ಯಂಕ (IIP) ವನ್ನು ಈ ಕೆಳಗಿನ ಯಾವ ವಲಯಕ್ಕಾಗಿ ಲೆಕ್ಕ ಮಾಡಲಾಗದು ?
 (1)ಕಲ್ಲಿದ್ದಲು ವಲಯ
 (2)ಸಂಸ್ಕರಣಾ ಉತ್ಪನ್ನಗಳ
 (3)ಕೃಷಿ ವಲಯ
 (4)ಉಕ್ಕು ವಲಯ

ಸರಿ ಉತ್ತರ

(3) ಕೃಷಿ ವಲಯ


90.ಆರ್ಥಿಕತೆಯಲ್ಲಿ ಅಧಿಕ ಹಣದುಬ್ಬರ ಇದ್ದಾಗ ಆರ್ಥಿಕತೆಯಲ್ಲಿ ಹಣದ ಪೂರೈಕೆ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ?
 (1)ಹಣಪೂರೈಕೆ ಮೇಲೆ ಪರಿಣಾಮವಿಲ್ಲ
 (2)ಹಣಪೂರೈಕೆ ಕಡಿತ ಗೊಳ್ಳುತ್ತದೆ
 (3)ಹಣ ಪೂರೈಕೆ ಅಧಿಕ ಗೊಳ್ಳುತ್ತದೆ
 (4)ಈ ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(3) ಹಣ ಪೂರೈಕೆ ಅಧಿಕ ಗೊಳ್ಳುತ್ತದೆ


91.ಕೆಳಗಿನ ಯಾವ ಯೋಜನೆಗಳು ಮುಂದಿನ ಮೂರು ವರ್ಷಗಳಲ್ಲಿ 1 ಕೋಟಿ ಯುವಕರಿಗೆ ಕೌಶಲ ಕಲಿಸುವ ಉದ್ದೇಶವನ್ನು ಹೊಂದಿದೆ ?
 (1)ಸ್ಟಾರ್ಟ್ಅಪ್, ಸ್ಟಾಂಡ್ ಅಪ್
 (2)ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನಾ
 (3)MNREGA
 (4)ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನಾ

ಸರಿ ಉತ್ತರ

(2) ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನಾ


92.ರೆಪೋ ದರ ಮತ್ತು ವಿಪರ್ಯಯ ರೆಪೋ ದರಗಳು ಇದರ ಭಾಗವಾಗಿವೆ
 (1)(ಆರ್ಥಿಕ) ಹಣಕಾಸಿನ ನೀತಿ
 (2)ವಿತ್ತೀಯ ನೀತಿ
 (3)ಹೂಡಿಕೆ ನೀತಿ
 (4)ಎಫ್.ಡಿ.ಐ. ನೀತಿ

ಸರಿ ಉತ್ತರ

(2) ವಿತ್ತೀಯ ನೀತಿ


93.ಆಯುಷ್ಮಾನ್ ಭಾರತ ಕಾರ್ಯಕ್ರಮವು ಈ ಕೆಳಗಿನ ಯಾವ ವಲಯಕ್ಕೆ ಸಂಬಂಧಿಸಿದೆ ?
 (1)ಮೂಲ ಸೌಕರ್ಯ
 (2)ರೇಲ್ವೆ
 (3)ಕೃಷಿ
 (4)ಆರೋಗ್ಯ ಪಾಲನೆ

ಸರಿ ಉತ್ತರ

(4) ಆರೋಗ್ಯ ಪಾಲನೆ


94.ಆರ್ಥಿಕ ವರ್ಷದಲ್ಲಿ ಆರ್.ಬಿ.ಐ. ತನ್ನ ವಿತ್ತೀಯ ನೀತಿಯನ್ನು ಎಷ್ಟು ಬಾರಿ ಮರುಪರಿಶೀಲಿಸುವುದು
 (1)ಮಾಸಿಕವಾಗಿ
 (2)ದ್ವೆಮಾಸಿಕವಾಗಿ
 (3)ತ್ರೆಮಾಸಿಕವಾಗಿ
 (4)ಅರ್ಧವಾರ್ಷಿಕವಾಗಿ

ಸರಿ ಉತ್ತರ

(2) ದ್ವೆಮಾಸಿಕವಾಗಿ


95.‘ಬಿಟ್ ಕಾಯಿನ್’ ನಾಣ್ಯವೆಂದರೆ
 (1)ಅಂತರರಾಷ್ಟ್ರೀಯ ಲಿಕ್ವಿಡಿಟಿ ಅಧಿಕ ಗೊಳಿಸಲು ಐ.ಎಮ್.ಎಫ್. ರೂಪಿಸಿದ ಹಣ
 (2)ಯೂರೋ ವಲಯ ಮುಗ್ಗಟ್ಟು ನಿರ್ವಹಿಸಲು ಯುರೋಪಿಯನ್ ಕೇಂದ್ರ ಬ್ಯಾಂಕ್ ರೂಪಿಸಿದ ಕರೆನ್ಸಿ
 (3)ಯಾವುದಲ್ಲಿ ಬ್ಯಾಂಕು ಇಲ್ಲವೇ ಸರ್ಕಾರಕ್ಕೆ ಬದ್ಧವಲ್ಲದ ಡಿಜಿಟಲ್ ಕರೆನ್ಸಿ
 (4)ಅಭಿವೃದ್ಧಿಶೀಲ ದೇಶಗಳಿಗೆ ನೀಡಲು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕು ರೂಪಿಸಿದ್ದು

ಸರಿ ಉತ್ತರ

(3) ಯಾವುದಲ್ಲಿ ಬ್ಯಾಂಕು ಇಲ್ಲವೇ ಸರ್ಕಾರಕ್ಕೆ ಬದ್ಧವಲ್ಲದ ಡಿಜಿಟಲ್ ಕರೆನ್ಸಿ


96.ಫ್ಲಿಪ್ ಕಾರ್ಟ್ ನಲ್ಲಿಯ 77% ರಷ್ಟು ಏರಿಕೆಯನ್ನು ಯಾವ ಕಂಪನಿಯು ತೆಗೆದುಕೊಂಡಿದೆ ?
 (1)ಅಮೆಜಾನ್
 (2)ವಾಲ್ ಮಾರ್ಟ್
 (3)ಫಾರ್ಚೂನ್
 (4)ವಾಲ್ ಗ್ರಿನ್ಸ್

ಸರಿ ಉತ್ತರ

(2) ವಾಲ್ ಮಾರ್ಟ್


97.ಗಗನ ಮಹಲ್ ಎಂಬುದು ಈ ಕೆಳಗಿನ ಯಾವ ಆಳ್ವಿಕೆಗಾರರಿಗೆ ಸಂಬಂಧಿಸಿದ ವಾಸ್ತುಶಿಲ್ಪ ವೈಭವವಾಗಿದೆ ?
 (1)ಆದಿಲ್ ಷಾಹಿಗಳು
 (2)ಕುತುಬ್ ಷಾಹಿಗಳು
 (3)ನಿಜಾಮ್ ಷಾಹಿಗಳು
 (4)ಬರೀದ್ ಷಾಹಿಗಳು

ಸರಿ ಉತ್ತರ

(1) ಆದಿಲ್ ಷಾಹಿಗಳು


98.ಚಿಸ್ತಿ ಅವಧಿಯ ಯಾವ ಪ್ರಸಿದ್ಧ (ದಂತಕತೆಯ) ಸಂತರು ‘ಚಿರಾಗ್-ಇ-ಢೆಲ್ವಿ’ (ಚಿರಾಗ್ ಆಫ್ ಢೆಲ್ಲಿ) ಎಂದು ಖ್ಯಾತರಾಗಿದ್ದಾರೆ ?
 (1)ನಿಜಾಮುದ್ದೀನ್ ಔಲಿಯಾ
 (2)ಶೇಖ್ ನಾಸಿರುದ್ದೀನ್ ಮೊಹಮದ್
 (3)ಕುತುಬುದೀನ್ ಭಕ್ತಿಯಾರ್ ಕಾಕಿ
 (4)ಮೇಲಿನ ಯಾರೂ ಅಲ್ಲ

ಸರಿ ಉತ್ತರ

(2) ಶೇಖ್ ನಾಸಿರುದ್ದೀನ್ ಮೊಹಮದ್


99.ಈ ಕೆಳಗಿನ ಯಾವ ಗುಣಗಳಿಂದ ಫ್ಲೈಯಿಂಗ್ ವ್ಹೀಲ್ ಎಂಬುದು ಸ್ಟೀಂ (ಹಬೆ) ಎಂಜಿನ್ ನ ಮುಖ್ಯ ಭಾಗವಾಗಿರುವುದು ?
 (1)ಇದು ಎಂಜಿನ್ ಗೆ ಸಾಮರ್ಥ್ಯವನ್ನು ನೀಡುತ್ತದೆ.
 (2)ಇದು ಎಂಜಿನ್ ನ ವೇಗವನ್ನು ವರ್ಧಿಸುತ್ತದೆ.
 (3)ಇದು ಎಂಜಿನ್, ಒಂದೇ ಸಮನಾದ ವೇಗವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.
 (4)ಜಡತಾ ಮಹತ್ತ್ವವನ್ನು ಕುಂಠಿತ ಗೊಳಿಸುತ್ತದೆ.

ಸರಿ ಉತ್ತರ

(3) ಇದು ಎಂಜಿನ್, ಒಂದೇ ಸಮನಾದ ವೇಗವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.


100.ಕೆಳಗಿನವರಲ್ಲಿ ಯಾವ ಬೌದ್ಧ ತತ್ವಶಾಸಜ್ಞರು ಬೌದ್ಧ ಧರ್ಮವನ್ನು ಒಪ್ಪಿಕೊಳ್ಳುವಂತೆ ಇಂಡೋ-ಗ್ರೀಕ್ ರಾಜ ಮೆನೈಂಡರ್ ನನ್ನು ಮನವೊಲಿಸಿದರು ?
 (1)ಆಸಂಗ
 (2)ನಾಗಸೇನಾ
 (3)ಧರ್ಮಕೀರ್ತಿ
 (4)ಶ್ರುತಕೀರ್ತಿ

ಸರಿ ಉತ್ತರ

(2) ನಾಗಸೇನಾ


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

Post a Comment

0 Comments

BOTTOM ADS