KPSC : GROUP C 04-06-2017 Paper-1 General Knowledge Question Paper

KPSC : GROUP C Non Technical  General Knowledge Paper-1 Questions with answers

KPSC GROUP C ಪತ್ರಿಕೆ -1 ಸಾಮಾನ್ಯ ಅಧ್ಯಯನ: ವಿವಿಧ ತಾಂತ್ರಿಕ/ ತಾಂತ್ರಿಕೇತರ (Degree Standard) ಹುದ್ದೆಗಳ ನೇಮಕಾತಿಗಾಗಿ ದಿನಾಂಕ: 04-06-2017 ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳು

1. “ಪ್ರಾಜೆಕ್ಟ್ ಲೂನ್” ವು ಸುದ್ದಿಗಳಲ್ಲಿ ಕಂಡುಬರುತ್ತದೆ. ಅದು ಯಾವುದಕ್ಕೆ ಸಂಬಂಧಿಸಿದೆ?

    (1)    ಗ್ರಾಮೀಣ ಮತ್ತು ದೂರದ ಪ್ರದೇಶಗಳಿಗೆ ಅಂತರ್ಜಾಲ ಪ್ರವೇಶ್ಯವನ್ನು ನೀಡುವ ಉದ್ದೇಶದಿಂದ ಕೈಗೊಂಡ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆ
    (2)    ಘನ ತ್ಯಾಜ್ಯ ನಿರ್ವಹಣಾ ತಂತ್ರಜ್ಞಾನವು ಮರುಬಳಕೆ ಮಾಡದಿರುವ ತ್ಯಾಜ್ಯ ವಸ್ತುಗಳನ್ನು ಮರುಬಳಕೆ ಮಾಡುವ ಮೂಲಕ ತ್ಯಾಜ್ಯದಿಂದ ಶಕ್ತಿ ಪಡೆಯುವಲ್ಲಿ ಸಹಾಯ ಮಾಡುತ್ತದೆ ಮತ್ತು ವಸ್ತುಗಳು ವಿವಿಧ ಪ್ರಕ್ರಿಯೆಗಳ ಮೂಲಕ ಬಳಸಬಹುದಾದ ಶಾಖ, ವಿದ್ಯುತ್ ಅಥವಾ ಇಂಧನವಾಗಿ ಪರಿವರ್ತನೆಗೊಳ್ಳುತ್ತದೆ.
    (3)    ದ್ಯುತಿವಿದ್ಯುಜ್ಜನಕವನ್ನು ಬಳಸಿ ನೇರವಾಗಿ ಸೌರ ವಿದ್ಯುತ್ ಅನ್ನು ಪರಿವರ್ತಿಸುವ ಸೌರಶಕ್ತಿ ತಂತ್ರಜ್ಞಾನವನ್ನು ಸೌರ ತಂತ್ರಜ್ಞಾನವು ಸಾಮಾನ್ಯವಾಗಿ ಬಳಸಿಕೊಳ್ಳುತ್ತದೆ.
    (4)    ಇದು ನೀರಿನ ಸಂರಕ್ಷಣೆಗೆ ಮತ್ತು ವಾತಾವರಣದ ನೀರಿನ ಆವಿಯನ್ನು ಘನೀಕರಣದ ಮೂಲಕ ಕುಡಿಯುವ ನೀರನ್ನು ಒದಗಿಸುವುದಕ್ಕೆ ಸಂಬಂಧಿಸಿರುವ ಯೋಜನೆಯಾಗಿದೆ.

ಸರಿ ಉತ್ತರ

(1) ಗ್ರಾಮೀಣ ಮತ್ತು ದೂರದ ಪ್ರದೇಶಗಳಿಗೆ ಅಂತರ್ಜಾಲ ಪ್ರವೇಶವನ್ನು ನೀಡುವ ಉದ್ದೇಶದಿಂದ ಕೈಗೊಂಡ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆ


2. ಲೈಫೈ ಎಂಬ ಪದವು ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸುದ್ದಿಗಳಲ್ಲಿದೆ. ಲೈಫೈ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಯು ಸರಿಯಾಗಿರುತ್ತದೆ?
    A.    ಇದು ಹೈ ಸ್ಪೀಡ್ ಡೇಟಾ ಟ್ರಾನ್ಸಿಷನ್ ಗಾಗಿ ಬೆಳಕನ್ನು ಮಾಧ್ಯಮವಾಗಿ ಬಳಸುತ್ತದೆ.
    B.    ಇದು ವೈರ್ ಲೆಸ್ ತಂತ್ರಜ್ಞಾನ ಮತ್ತು ವೈಫೈಗಿಂತ ಅನೇಕ ಬಾರಿ ವೇಗವಾಗಿರುತ್ತದೆ.
    C.    ಪ್ರೋಫೆಸರ್ ಹರಾಲ್ಡ್ ಹಾಸ್ ಅವರು ಲೈಫೈ ಎಂಬ ಪದವನ್ನು ಸೃಷ್ಟಿಸಿದ್ದಾರೆ.
ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತಗಳನ್ನಾರಿಸಿ:

    (1)    A ಮಾತ್ರ
    (2)    A ಮತ್ತು B ಮಾತ್ರ
    (3)    B ಮತ್ತು C ಮಾತ್ರ
    (4)    A, B ಮತ್ತು C

ಸರಿ ಉತ್ತರ

(4) A, B ಮತ್ತು C


3. ಸುದ್ದಿಗಳಲ್ಲಿ ಕೆಲವೊಮ್ಮೆ ಕಾಣುವ “ಆಮದು ಕವರ್” ಎಂಬ ಪದವನ್ನು ಕೆಳಗಿನ ಯಾವುದು ಅತ್ಯುತ್ತಮವಾಗಿ ವಿವರಿಸುತ್ತದೆ?

    (1)    ಇದು ದೇಶದ ಸಮಗ್ರ ದೇಶೀಯ ಉತ್ಪನ್ನದೊಂದಿಗಿನ (ಜಿ.ಡಿ.ಪಿ.) ಆಮದು ಮೌಲ್ಯದ ಅನುಪಾತವಾಗಿದೆ.
    (2)    ಇದು ಒಂದು ವರ್ಷದಲ್ಲಿ ಒಂದು ದೇಶದ ಆಮದುಗಳ ಒಟ್ಟು ಮೌಲ್ಯವಾಗಿದೆ.
    (3)    ಇದು ಎರಡು ದೇಶಗಳ ನಡುವೆ ನಡೆಯುವ ರಫ್ತುಗಳ ಮತ್ತು ಆಮದುಗಳ ಮೌಲ್ಯಗಳ ನಡುವಿನ ಅನುಪಾತವಾಗಿದೆ.
    (4)    ದೇಶದ ಅಂತರರಾಷ್ಟ್ರೀಯ ಮೀಸಲುಗಳಿಂದ ಪಾವತಿಸಬಹುದಾದಂತಹ ಆಮದುಗಳ ತಿಂಗಳುಗಳ ಸಂಖ್ಯೆ ಇದಾಗಿದೆ.

ಸರಿ ಉತ್ತರ

(4) ದೇಶದ ಅಂತರರಾಷ್ಟ್ರೀಯ ಮೀಸಲುಗಳಿಂದ ಪಾವತಿಸಬಹುದಾದಂತಹ ಆಮದುಗಳ ತಿಂಗಳುಗಳ ಸಂಖ್ಯೆ ಇದಾಗಿದೆ.


4. “ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆ”ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    A.    ಈ ಯೋಜನೆಯಡಿಯಲ್ಲಿ ರೈತರು ವರ್ಷದಲ್ಲಿ ಯಾವುದೇ ಋತುವಿನಲ್ಲಿ ಅವರು ಬೆಳೆಯುವ ಯಾವುದೇ ಬೆಳೆಯ ಶೇ.2ರಂತೆ ಏಕ ರೀತಿಯ ಪ್ರೀಮಿಯಂನ್ನು ಪಾವತಿಸಬೇಕಾಗುತ್ತದೆ.
    B.    ಈ ಯೋಜನೆಯು ಚಂಡಮಾರುತ ಮತ್ತು ಅಕಾಲಿಕ ಮಳೆಗಳಿಂದ ಹುಟ್ಟಿಕೊಂಡ ನಂತರದ ಬೆಳೆ ಕೊಯ್ಲಿನ ನಷ್ಟಗಳನ್ನು ಕೂಡಾ ಒಳಗೊಳ್ಳುತ್ತದೆ.
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮಾತ್ರ
    (2)    B ಮಾತ್ರ
    (3)    A ಮತ್ತು B ಎರಡೂ
    (4)    A ಆಗಲೀ C ಆಗಲೀ ಅಲ್ಲ

ಸರಿ ಉತ್ತರ

(2) B ಮಾತ್ರ


5. ಅಜಂತಾ ಮತ್ತು ಮಹಾಬಲಿಪುರಂ ಎಂದು ಕರೆಯಲ್ಪಡುವ ಎರಡು ಐತಿಹಾಸಿಕ ಸ್ಥಳಗಳಿಗೆ ಸಾಮಾನ್ಯವಾಗಿರುವ ಅಂಶ ಯಾವುದು?
    A.    ಎರಡನ್ನೂ ಒಂದೇ ಅವಧಿಯಲ್ಲಿ ನಿರ್ಮಿಸಲಾಯಿತು.
    B.    ಎರಡೂ ಒಂದೇ ಧಾರ್ಮಿಕ ಪಂಥಕ್ಕೆ ಸೇರಿದವು.
    C.    ಎರಡೂ ಬಂಡೆಯಲ್ಲಿ ಕೊರೆದ ಸ್ಮಾರಕಗಳನ್ನು ಹೊಂದಿವೆ.
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮತ್ತು B ಮಾತ್ರ
    (2)    C ಮಾತ್ರ
    (3)    A ಮತ್ತು C ಮಾತ್ರ
    (4)    ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(2) C ಮಾತ್ರ


6. ಅಂತರರಾಷ್ಟ್ರೀಯ ಥರ್ಮೋನ್ಯೂಕ್ಲಿಯರ್ ಎಕ್ಸಪೆರಿಮೆಂಟಲ್ ರಿಯಾಕ್ಟರ್ ನಲ್ಲಿ ಭಾರತವು ಒಂದು ಪ್ರಮುಖ ಸದಸ್ಯ. ಈ ಪ್ರಯೋಗವು ಯಶಸ್ವಿಯಾದರೆ, ಭಾರತಕ್ಕೆ ಆಗುವ ತಕ್ಷಣದ ಲಾಭ ಏನು?

    (1)    ಇದು ವಿದ್ಯುತ್ ಉತ್ಪಾದನೆಗೆ ಯುರೇನಿಯಂನ ಬದಲಾಗಿ ಥೋರಿಯಂ ಅನ್ನು ಬಳಸಬಹುದು.
    (2)    ಇದು ಉಪಗ್ರಹ ಸಂಚಾರದಲ್ಲಿ ಜಾಗತಿಕ ಪಾತ್ರವನ್ನು ಪಡೆಯಬಹುದು.
    (3)    ವಿದ್ಯುತ್ ಉತ್ಪಾದನೆಯಲ್ಲಿ ಅದರ ವಿದಳನ ರಿಯಾಕ್ಟರ್ ಗಳ ದಕ್ಷತೆಯನ್ನು ಇದು ತೀವ್ರವಾಗಿ ಸುಧಾರಿಸುತ್ತದೆ.
    (4)    ಇದು ವಿದ್ಯುತ್ ಉತ್ಪಾದನೆಗೆ ಸಮ್ಮಿಳನ ರಿಯಾಕ್ಟರ್ ಗಳನ್ನು ನಿರ್ಮಿಸಬಹುದು.

ಸರಿ ಉತ್ತರ

(4) ಇದು ವಿದ್ಯುತ್ ಉತ್ಪಾದನೆಗೆ ಸಮ್ಮಿಳನ ರಿಯಾಕ್ಟರ್ ಗಳನ್ನು ನಿರ್ಮಿಸಬಹುದು.


7. ಕಾರ್ಬನ್ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
    A.    ಇದು ಹಲವಾರು ಅಲೋಟ್ರೋಪಿಕ್ (ಬಹುರೂಪ) ರೂಪಗಳಲ್ಲಿ ಅಸ್ತಿತ್ವದಲ್ಲಿದೆ
    B.    ಇದು ಕ್ಯಾಟನೇಷನ್ ಲಕ್ಷಣವನ್ನು ಹೊಂದಿದೆ
    C.    ಇದು ಏಕರೂಪವಾಗಿ ವಿದ್ಯುದ್ವಿಭಜನೆಯ ಬಂಧಗಳನ್ನು ರೂಪಿಸುತ್ತದೆ
    D.    ಇದರ ಸಂಯುಕ್ತಗಳು ಐಸೊಮೆರಿಕ್ ರೂಪಗಳಲ್ಲಿ ಏಕರೂಪವಾಗಿ ಇರುತ್ತವೆ.
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    B, C ಮತ್ತು D ಮಾತ್ರ
    (2)    A, C ಮತ್ತು D ಮಾತ್ರ
    (3)    A, B ಮತ್ತು D ಮಾತ್ರ
    (4)    A, B ಮತ್ತು C ಮಾತ್ರ

ಸರಿ ಉತ್ತರ

(3) A, B ಮತ್ತು D ಮಾತ್ರ


8. ಧರ್ಮದ ಸ್ವಾತಂತ್ರ್ಯದ ಹಕ್ಕು ಬಗ್ಗೆ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ?

    (1)    ಧಾರ್ಮಿಕ ಆಚರಣೆಗಳೊಂದಿಗೆ ಸಂಬಂಧ ಹೊಂದಬಹುದಾದ ಆರ್ಥಿಕ, ಹಣಕಾಸಿನ ರಾಜಕೀಯ ಅಥವಾ ಇತರ ಜಾತ್ಯತೀತ ಚಟುವಟಿಕೆಗಳನ್ನು ರಾಜ್ಯ ನಿಯಂತ್ರಿಸಬಹುದು.
    (2)    ಸಾರ್ವಜನಿಕ ಆದೇಶ ನೈತಿಕತೆ ಅಥವಾ ಆರೋಗ್ಯ ವ್ಯವಸ್ಥೆಯ ನಿರ್ವಹಣೆ ಆಧಾರದ ಮೇಲೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಮೇಲೆ ನಿರ್ಬಂಧಗಳನ್ನು ವಿಧಿಸಬಹುದು.
    (3)    ಪ್ರತಿಯೊಂದು ಧಾರ್ಮಿಕ ಪಂಥವು ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ಸಂಸ್ಥೆಯನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ಹೊಂದಿದೆ.
    (4)    ನಿರ್ದಿಷ್ಟ ಧಾರ್ಮಿಕ ಪಂಥವು ಉತ್ತೇಜಿಸಲು ಮತ್ತು ನಿರ್ವಹಿಸಲು ಹೊಂದಾಣಿಸಲ್ಪಟ್ಟಿರುವ ನಿಧಿಗಳು ತೆರಿಗಾರ್ಹವಾಗಿವೆ

ಸರಿ ಉತ್ತರ

(4) ನಿರ್ದಿಷ್ಟ ಧಾರ್ಮಿಕ ಪಂಥವು ಉತ್ತೇಜಿಸಲು ಮತ್ತು ನಿರ್ವಹಿಸಲು ಹೊಂದಾಣಿಸಲ್ಪಟ್ಟಿರುವ ನಿಧಿಗಳು ತೆರಿಗಾರ್ಹವಾಗಿವೆ


9. ಈ ಕೆಳಗಿನ ಜೋಡಿಗಳಲ್ಲಿ ಯಾವುದು ಸರಿ ಹೊಂದುವುದಿಲ್ಲ?
    A.    ಗಮನ ಸೆಳೆಯುವಿಕೆಯ ಕರೆ: ಸಾರ್ವಜನಿಕ ಪ್ರಾಮುಖ್ಯತೆಯ ತುರ್ತಿನ ವಿಷಯದ ಬಗ್ಗೆ ಸಚಿವರ ಗಮನ ಸೆಳೆಯಲು
    B.    ಅಡ್ ಜರ್ನ್ ಮೆಂಟ್ ಮೋಷನ್: ಸಮಯ ಮುಗಿಯುವ ಮೊದಲೇ ಸದನವನ್ನು ಮುಂದೂಡುವುದು
    C.    ಪ್ರಿವಿಲೇಜ್ ಮೋಷನ್: ಒಬ್ಬ ಸಚಿವರು ತಪ್ಪಾಗಿ/ಅರ್ಥಪೂರ್ಣವಾದ ಉತ್ತರ ಕೊಟ್ಟಾಗ ಅದರತ್ತ ಸಭಾಧ್ಯಕ್ಷರ ಗಮನ ಸೆಳೆಯಲು
    D.    ಕಟ್ ಮೋಷನ್: ಬಜೆಟ್ ಪ್ರಸ್ತಾವಗಳಲ್ಲಿನ ಖರ್ಚನ್ನು ಕಡಿಮೆ ಮಾಡಲು ಪ್ರಸ್ತಾವವನ್ನು ಮುಂದಿರಿಸಲು
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A, B, C ಮತ್ತು D
    (2)    A, B ಮತ್ತು D
    (3)    A ಮತ್ತು C
    (4)    B ಮತ್ತು D

ಸರಿ ಉತ್ತರ

(4) B ಮತ್ತು D


10. ‘‘ವಿಶ್ವ ಆರ್ಥಿಕ ದೃಷ್ಟಿ’’ ವರದಿಯನ್ನು ಆಗಾಗ್ಗೆ ಸುದ್ದಿಗಳಲ್ಲಿ ನೋಡಿರುವಿರಿ: ಇದರಿಂದ ಪ್ರಕಟಿಸುವ ಸಂಸ್ಥೆ ಕೆಳಗಿನವುಗಳಲ್ಲಿ ಯಾವುದು?

    (1)    ಇಂಟರ್ ನೇಷನಲ್ ಮಾನಿಟರೀ ಫಂಡ್ (ಐ.ಎಂ.ಎಫ್.)
    (2)    ವರ್ಲ್ಡ್ ಬ್ಯಾಂಕ್
    (3)    ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ (ಅರ್.ಬಿ.ಐ.)
    (4)    ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಆನ್ ಟ್ರೇಡ್ ಎಂಡ್ ಡೆವಲಪಮೆಂಟ್ (ಯು.ಎನ್.ಸಿ.ಟಿ.ಎ.ಡಿ.)

ಸರಿ ಉತ್ತರ

(1) ಇಂಟರ್ ನೇಷನಲ್ ಮಾನಿಟರೀ ಫಂಡ್ ಐ.ಎಂ.ಎಫ್.)


11. ನೀಡಿಕೆ ಬಾಕಿ (ಬಿ.ಓ.ಪಿ.) ಯು ಯಾವುದೇ ದೇಶದ ವ್ಯವಸ್ಥಿತ ದಾಖಲೆ, ಈ ಕುರಿತದ್ದು

    (1)    ದೇಶದ ರಫ್ತು ಮತ್ತು ಆಮದು ವಹಿವಾಟು, ನಿರ್ದಿಷ್ಟ ಅವಧಿಯದು ಸಾಮಾನ್ಯ 1 ವರ್ಷದ್ದು
    (2)    1 ವರ್ಷದಲ್ಲಿ ರಾಷ್ಟ್ರವು ಕೈಗೊಂಡ ರಫ್ತು ಸರಕು
    (3)    ಒಂದು ದೇಶದಿಂದ ಮತ್ತೊಂದಕ್ಕೆ ಆರ್ಥಿಕ ವಹಿವಾಟು
    (4)    ಒಂದು ದೇಶದಿಂದ ಇನ್ನೊಂದಕ್ಕೆ ಬಂಡವಾಳ ವರ್ಗಾವಣೆ

ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


12. ಈ ಹೇಳಿಕೆಗಳನ್ನು ಪರಿಗಣಿಸಿ: ಹೇಳಿಕೆ (ಎ) : ಪ್ರತಿಚಂಡ ಮಾರುತ ಹೆಚ್ಚು ಒತ್ತಡ ಮಾರುತ ವ್ಯವಸ್ಥೆಯಾಗಿದ್ದು, ಹವಾಮಾನದಲ್ಲಿ ಗಣನೀಯ ಬದಲಾವಣೆ ಮಾಡದು. ಕಾರಣ (ಆರ್) : ಬಾಹ್ಯ ಮಾರುತ ಚಲನೆ ಹೆಚ್ಚು ಒತ್ತಡ ಕೇಂದ್ರದಿಂದ ಚಲಿಸುವ ಕಾರಣ ಪ್ರಕ್ಷುಬ್ಧತೆಗೆ ಸೀಮಿತ ಅವಕಾಶವಿರುತ್ತದೆ. ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?

    (1)    ಎ ಮತ್ತು ಆರ್ ಗಳೆರಡೂ ಸರಿ, ಆರ್, ಎ ಯ ಸರಿಯಾದ ವಿವರಣೆ
    (2)    ಎ ಮತ್ತು ಆರ್ ಗಳೆರಡೂ ಸರಿ, ಆರ್, ಎ ಯ ಸರಿಯಾದ ವಿವರಣೆ ಅಲ್ಲ
    (3)    ಎ ಸರಿ, ಆರ್ ತಪ್ಪು
    (4)    ಎ ತಪ್ಪು, ಆರ್ ಸರಿ

ಸರಿ ಉತ್ತರ

(1) ಎ ಮತ್ತು ಆರ್ ಗಳೆರಡೂ ಸರಿ, ಆರ್, ಎ ಯ ಸರಿಯಾದ ವಿವರಣೆ


13. ಈ ಗ್ರೀಕ್ ದಾರ್ಶನಿಕರನ್ನು ಪರಿಗಣಿಸಿ
    A.    ಅರಿಸ್ಟಾಟಲ್
    B.    ಪ್ಲೇಟೋ
    C.    ಪೈಥಾಗೋರಸ್
    D.    ಸಾಕ್ರಟಿಸ್
ಈ ದಾರ್ಶನಿಕರನ್ನು ಕಾಲಾನುಕ್ರಮದಲ್ಲಿ ಜೋಡಿಸಿ.
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A, B, C, D
    (2)    C, D, B, A
    (3)    D, C, A, B
    (4)    B, C, A, D

ಸರಿ ಉತ್ತರ

(2) C, D, B, A


14. ಐನ್ ಸ್ಟೈನ್ ರು ಇದನ್ನು ಕುರಿತಾಗಿ ಮಾಡಿದ ಕಾರ್ಯಕ್ಕಾಗಿ ನೊಬೆಲ್ ಬಹುಮಾನವನ್ನು ಗಳಿಸಿದರು.

    (1)    ರಿಲೇಟಿವಿಟಿ ಸಿದ್ಧಾಂತ
    (2)    ಆಪ್ಟಿಕ್ಸ್
    (3)    ದ್ಯುತಿ ವಿದ್ಯುತ್ ಪರಿಣಾಮ
    (4)    ಬ್ರೌನಿಯನ್ ಚಲನೆ

ಸರಿ ಉತ್ತರ

(3) ದ್ಯುತಿ ವಿದ್ಯುತ್ ಪರಿಣಾಮ


15. ವಿದೇಶಿ ನೇರ ಹೂಡಿಕೆ (ಎಫ್.ಡಿ.ಐ) ಎನ್ನುವುದು ದೇಶದ ಉತ್ಪಾದನೆಗೆ ಸಂಬಂಧಿಸಿದಂತೆ ಇತರ ದೇಶದ ಕಂಪನಿ ನೇರವಾಗಿ ಹಣ ಮಾಡುವುದು. ಈ ಪೈಕಿ ಎಫ್.ಡಿ.ಐ ಗೆ ಸಂಬಂಧಿಸಿದಂತೆ ಯಾವುದು ಸರಿ?
    A.    ಉದ್ದಿಷ್ಟ ದೇಶದ ಕಂಪನಿ ಖರೀದಿ
    B.    ಆ ದೇಶದ ವಹಿವಾಟನ್ನು ವಿಸ್ತಾರಗೊಳಿಸುವ ಕಾರ್ಯಾಚರಣೆ
    C.    ಷೇರು ಸ್ಟಾಕುಗಳನ್ನು ಉದ್ದಿಷ್ಟ ದೇಶದ ಕಂಪನಿಯಲ್ಲಿ ಹೂಡುವುದು
ಕೆಳಗೆ ಕೊಟ್ಟಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮಾತ್ರ
    (2)    B ಮಾತ್ರ
    (3)    C ಮಾತ್ರ
    (4)    A ಮತ್ತು B

ಸರಿ ಉತ್ತರ

(4) A ಮತ್ತು B


16. ಹವಾಮಾನವು ಪರಮಾವಧಿ, ಕಡಿಮೆ ಮಳೆ ಮತ್ತು ಜನರು ಅಲೆಮಾರಿ ಜಂಗುಳಿಯಾಗಿದ್ದಾರೆ. ಮೇಲಿನ ಹೇಳಿಕೆಯು, ಕೆಳಗಿನ ಯಾವ ಪ್ರದೇಶವನ್ನು ಕುರಿತಾಗಿ ಉತ್ತಮವಾಗಿ ವಿವರಿಸುತ್ತದೆ?

    (1)    ಆಫ್ರಿಕನ್ ಸವನ್ನಾ
    (2)    ಮಧ್ಯ ಏಷಿಯಾದ ಸ್ಟೆಪ್ಪೀ
    (3)    ಉತ್ತರ ಅಮೆರಿಕಾದ ಪ್ರೈರಿ
    (4)    ಸೈಬೀರಿಯನ್ ಟಂಡ್ರಾ

ಸರಿ ಉತ್ತರ

(2) ಮಧ್ಯ ಏಷಿಯಾದ ಸ್ಟೆಪ್ಪೀ


17. ವಿಜ್ಞಾನಿಗಳು ಪಟ್ಟಿ I ಮತ್ತು ಅವರ ಕ್ಷೇತ್ರಗಳು ಪಟ್ಟಿ II ಹೊಂದಿಸಿ ಬರೆಯಿರಿ:

 

ಪಟ್ಟಿ I (ವಿಜ್ಞಾನಿ)

 

ಪಟ್ಟಿII (ಕ್ಷೇತ್ರ)

A.

ಡಾ.ರಾಜಾರಾಮಣ್ಣ

I.

ಸಸ್ಯ ರಸಾಯನಶಾಸ್ತ್ರ

B.

ಡಾ.ಎಂ.ಎಸ್.ಸ್ವಾಮಿನಾಥನ್

II.

ನ್ಯೂಕ್ಲಿಯರ್ ಭೌತಶಾಸ್ತ್ರ

C.

ಪ್ರೊ.ಯು.ಆರ್.ರಾವ್

III.

ಖಗೋಳ ವಿಜ್ಞಾನ

D.

ಪ್ರೊ.ಮೇಘನಾದ್ ಸಹಾ

IV.

ವ್ಯೂವ ನಿರೋಧನೆ

 

 

V.

ಕೃಷಿ ವಿಜ್ಞಾನ

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 

A

B

C

D

(1)

III

V

II

I

(2)

II

I

IV

III

(3)

II

V

IV

III

(4)

III

I

IV

II

ಸರಿ ಉತ್ತರ

(3) II V IV III


18. ಶ್ರೇಷ್ಠ ಕನ್ನಡ ಕವಿಯಾದ ಪೊನ್ನನು ಈ ಕೆಳಗಿನ ಯಾವ ದೊರೆಗಳ ಆಸ್ಥಾನದಲ್ಲಿದ್ದನು?

    (1)    Iನೇ ಕೃಷ್ಣ
    (2)    ದಂತಿದುರ್ಗ
    (3)    IIIನೇ ಕೃಷ್ಣ
    (4)    ಧ್ರುವ

ಸರಿ ಉತ್ತರ

(3) IIIನೇ ಕೃಷ್ಣ


19. ಕೃಷ್ಣದೇವರಾಯನಿಂದ ಸಂಯೋಜಿಸಲ್ಪಟ್ಟ ನಾಟಕ ಕೆಳಗಿನವುಗಳಲ್ಲಿ ಯಾವುದು?

    (1)    ತಾಯಿ ಕುಂದಾ
    (2)    ಜಾಂಬವತಿ ಕಲ್ಯಾಣ
    (3)    ಉನ್ಮತ್ತ ರಾಘವ್
    (4)    ಅಮುಕ್ತ ಮಾಲ್ಯದ

ಸರಿ ಉತ್ತರ

(2) ಜಾಂಬವತಿ ಕಲ್ಯಾಣ


20. ಈ ಹೇಳಿಕೆಗಳನ್ನು ಗಮನಿಸಿ:
    A.    ವಿಜಯಲಕ್ಷ್ಮಿ ಪಂಡಿತ್ ಅವರು ಯು.ಎನ್.ಸಾಮಾನ್ಯ ಸಭೆಯ ಮೊದಲ ಮಹಿಳಾ ಅಧ್ಯಕ್ಷೆ
    B.    ಆರತಿ ಸಹಾ ಇಂಗ್ಲಿಷ್ ಕಾಲುವೆಯನ್ನು ಈಜಿ ದಾಟಿದ ಮೊದಲ ಮಹಿಳೆ
    C.    ಸುಚೇತಾ ಕೃಪಲಾನಿ ಭಾರತ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ
    D.    ಸರೋಜಿನಿ ನಾಯ್ಡು ಮೊದಲ ಮಹಿಳಾ ರಾಜ್ಯಪಾಲರು
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮತ್ತು B ಮಾತ್ರ
    (2)    D ಮಾತ್ರ
    (3)    A, B ಮತ್ತು D ಮಾತ್ರ
    (4)    A, B, C ಮತ್ತು D

ಸರಿ ಉತ್ತರ

(4) A, B, C ಮತ್ತು D


21. ಗೌತಮ ಬುದ್ಧರು ಈ ಕೆಳಗಿನ ನಾಲ್ಕು ಶ್ರೇಷ್ಠ ಸತ್ಯಗಳನ್ನು ಬೋಧಿಸಿದರು. ಇವುಗಳನ್ನು ಸರಿಯಾದ ಕ್ರಮದಲ್ಲಿಡಿ
    A.    ಇಲ್ಲಿ ನರಳಾಟವಿದೆ
    B.    ನರಳಾಟಕ್ಕೆ ಅಂತ್ಯವಿದೆ
    C.    ನರಳಾಟದ ಅಂತ್ಯಕ್ಕೆ ಮಾರ್ಗ ಇದೆ
    D.    ನರಳಾಟಕ್ಕೆ ಕಾರಣ ಇದೆ
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A, D, B ಮತ್ತು C
    (2)    A, D, C ಮತ್ತು B
    (3)    A, C, B ಮತ್ತು D
    (4)    A, B, D ಮತ್ತು C

ಸರಿ ಉತ್ತರ

(1) A, D, B ಮತ್ತು C


22. 1946ರ ತೆಲಂಗಾಣ ಚಳವಳಿಯಲ್ಲಿ ಮಹಿಳೆಯರ ಪಾತ್ರವನ್ನು ಕೆಳಗಿನವುಗಳಲ್ಲಿ ಯಾವುದು ಉತ್ತಮವಾಗಿ ವಿವರಿಸುತ್ತದೆ?

    (1)    ಅವರು ಮುಖ್ಯವಾಗಿ ಬೆಂಬಲ ನೀಡುವ ಪೋಷಕ ಪಾತ್ರದಲ್ಲಿದ್ದರು
    (2)    ಅವರು ನಾಯಕತ್ವ ಪಾತ್ರವನ್ನು ವಹಿಸಿಕೊಂಡರು
    (3)    ತರಬೇತಿ ನೀಡುವುದು
    (4)    ಅವರು ಭೂಗತ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು

ಸರಿ ಉತ್ತರ

(1) ಅವರು ಮುಖ್ಯವಾಗಿ ಬೆಂಬಲ ನೀಡುವ ಪೋಷಕ ಪಾತ್ರದಲ್ಲಿದ್ದರು


23. 1932ರ ಪೂನಾ ಒಪ್ಪಂದವು ಗಾಂಧಿ ಯವರ ವಿಜಯವೆಂದು ಏಕೆ ಪರಿಗಣಿಸಲಾಗಿದೆ?

    (1)    ಇದು ಅಂಬೇಡ್ಕರ್ ಮತ್ತು ಗಾಂಧಿ ಯವರಿಬ್ಬರಿಗೂ ಸ್ವೀಕಾರಾರ್ಹವಾದ ರಾಜಿ ಸೂತ್ರವಾಗಿತ್ತು
    (2)    ಇದು ಹಿಂದೂ-ಮುಸ್ಲಿಂ ಸಂಬಂಧಗಳನ್ನು ಸೌಹಾರ್ದಮಯವಾಗಿಸಲು ಪ್ರಯತ್ನ ಮಾಡಿದ್ದು
    (3)    ಇದು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ನಾಯಕರನ್ನು ಸಮೀಪಕ್ಕೆ ತಂದಿದ್ದು
    (4)    ರಾಷ್ಟ್ರೀಯ ಚಳವಳಿಯಲ್ಲಿ ಅವರ ಸಹಕಾರವನ್ನು ಪಡೆಯಲು ಭಾರತೀಯ ಬಂಡವಾಳಗಾರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು

ಸರಿ ಉತ್ತರ

(1) ಇದು ಅಂಬೇಡ್ಕರ್ ಮತ್ತು ಗಾಂಧಿ ಯವರಿಬ್ಬರಿಗೂ ಸ್ವೀಕಾರಾರ್ಹವಾದ ರಾಜಿ ಸೂತ್ರವಾಗಿತ್ತು


24. ಕೆಳಗಿನವುಗಳನ್ನು ಹೋಲಿಸಿ.

 

ಪಟ್ಟಿ I

 

ಪಟ್ಟಿII

A.

ಕೇರವಾಸ್

I.

ಉತ್ತರಾಖಂಡ್

B.

ಜೋಸ್

II.

ಜಮ್ಮು-ಕಾಶ್ಮೀರ

C.

ಡೂನ್ಸ್ ಮತ್ತು ಡ್ಯುಯರ್ಸ್

III.

ತಮಿಳುನಾಡು

D.

ವೃತ್ತಾಕಾರದ ಗುಡಿಸಲುಗಳು

IV.

ಪಂಜಾಬ್

ಸಂಕೇತಗಳ ಸಹಾಯದಿಂದ ಸರಿಉತ್ತರಗಳನ್ನು ಅರಿಸಿ.

 

A

B

C

D

(1)

II

III

IV

I

(2)

II

I

IV

III

(3)

II

IV

I

III

(4)

II

III

I

IV

 

ಸರಿ ಉತ್ತರ

(3) II IV I III


25. ಪ್ಯಾರೆಸಿಟಮಾಲ್
    A.    ದೇಹದ ನೋವು ನಿವಾರಿಸುತ್ತದೆ
    B.    ಒಂದು ಪ್ರತಿಜೀವಕ
    C.    ಒಂದು ಸಲ್ಫಾ ಔಷಧಿ
    D.    ಆಂಟಿಪೈರೆಟಿಕ್ ಔಷಧ
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮತ್ತು D
    (2)    B ಮತ್ತು D
    (3)    A ಮತ್ತು C
    (4)    C ಮತ್ತು D

ಸರಿ ಉತ್ತರ

(1) A ಮತ್ತು D


26. ರಾಜ್ಯ ಪಟ್ಟಿಯಲ್ಲಿನ ಯಾವುದೇ ವಿಷಯದ ಬಗ್ಗೆ ಸಂಸತ್ತು ಶಾಸನ ಮಾಡಬಹುದು. ಹೀಗಿದ್ದಾಗ

    (1)    ರಾಷ್ಟ್ರೀಯ ಹಿತಾಸಕ್ತಿಯಿಂದ ಹಾಗೆ ಮಾಡಲು ಮೂರನೇ ಎರಡು ಭಾಗ ಬಹುಮತದ ನಿರ್ಣಯವನ್ನು ರಾಜ್ಯಸಭೆಯು ಘೋಷಿಸಿದರೆ
    (2)    ಅಂತರರಾಷ್ಟ್ರೀಯ ಕರಾರುಗಳು ಅಥವಾ ಒಪ್ಪಂದಗಳ ಅನುಷ್ಠಾನಕ್ಕೆ ಇದು ಅಗತ್ಯವಾಗಿದ್ದರೆ
    (3)    ಎರಡು ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳು ಸಂಸತ್ತನ್ನು ಹಾಗೆ ಮಾಡಲು ವಿನಂತಿಸಿದರೆ
    (4)    ಮೇಲಿನ ಎಲ್ಲಾ ಪ್ರಕರಣಗಳಲ್ಲಿ

ಸರಿ ಉತ್ತರ

(4) ಮೇಲಿನ ಎಲ್ಲಾ ಪ್ರಕರಣಗಳಲ್ಲಿ


27. ಸಂವಿಧಾನವು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿದೆ

    (1)    ಭಾರತದ ಕ್ರೋಡೀಕೃತ ನಿ ಯಿಂದ ಅವರ ಸಂಬಳ ಮತ್ತು ಭತ್ಯೆಗಳನ್ನು ಹೊರಿಸುವುದು (ಚಾರ್ಜಿಂಗ್)
    (2)    ನ್ಯಾಯಾಧೀಶರನ್ನು ತೆಗೆದುಹಾಕುವುದು ನಿಜಕ್ಕೂ ಕಷ್ಟಕರವಾಗಿದೆ
    (3)    ನಿವೃತ್ತಿಯ ನಂತರವೂ ಭಾರತದ ಯಾವುದೇ ನ್ಯಾಯಾಲಯದಲ್ಲಿ ತಮ್ಮ ವೃತ್ತಿ ಅಭ್ಯಾಸವನ್ನು ಮುಂದುವರಿಸುವ ನ್ಯಾಯಾಧೀಶರನ್ನು ನಿಷೇಧಿಸುವುದು
    (4)    ಈ ಎಲ್ಲಾ ಉಪಬಂಧಗಳು

ಸರಿ ಉತ್ತರ

(4) ಈ ಎಲ್ಲಾ ಉಪಬಂಧಗಳು


28. ಐಸೋಲಿನ್ (ಪಟ್ಟಿ I) ಅನ್ನು ಅದರ ವ್ಯಾಖ್ಯಾನಗಳೊಂದಿಗೆ (ಪಟ್ಟಿ II) ಹೋಲಿಸಿ:

 

ಪಟ್ಟಿ I (ಐಸೋಲಿನ್)

 

ಪಟ್ಟಿII (ವ್ಯಾಖ್ಯಾನಗಳು)

A.

ಐಸೋಹೆಲ್

I.

ಸಮಾನ ಪ್ರಮಾಣದ ಮಳೆ ಅಥವಾ ಒತ್ತಡ

B.

ಐಸೋಹೈಟ್

II.

ಸೂರ್ಯನ ಬಿಸಿಲಿನ ಸಮಾನ ಪ್ರಮಾಣ

C.

ಐಸೋನೆಫ್

III.

ಸಮಾನ ಹಿಮಪಾತ

D.

ಐಸೋನಿಫ್

IV.

ಮೋಡಗಳ ಸಮಾನ ಮಟ್ಟ

 

 

V.

ಸಮಾನ ವಾಯುಮಂಡಲದ ಒತ್ತಡ

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 

A

B

C

D

(1)

III

V

II

I

(2)

II

I

IV

III

(3)

II

V

IV

III

(4)

III

I

IV

II


ಸರಿ ಉತ್ತರ

(2) II I IV III


29. ಎರಡನೇ ಪಾಣಿಪತ್ ಕದನದಲ್ಲಿ ಹಿಂದೂ ಸೇನಾಪತಿ ಹೇಮುವು ಮುಘಲರ ವಿರುದ್ಧ ಆಫಘಾನ್ ಪಡೆಗಳನ್ನು ಮುನ್ನಡೆಸಿದ ನಾಯಕನಾಗಿದ್ದು, ಇವನು ಈ ಕೆಳಗಿನ ಯಾವ ದೊರೆಯಲ್ಲಿ ಸೇನಾಪತಿಯಾಗಿದ್ದನು?

    (1)    ಶೇರ್ ಷಾ
    (2)    ಇಸ್ಲಾಂ ಷಾ
    (3)    ಮುಹಮ್ಮದ್ ಆದಿಲ್ ಷಾ
    (4)    ಸಿಕಂದರ್ ಷಾ

ಸರಿ ಉತ್ತರ

(3) ಮುಹಮ್ಮದ್ ಆದಿಲ್ ಷಾ


30. ಒಟ್ಟಾರೆ ಗೌಪ್ಯವಾಗಿ ಔರಂಗಜೇಬನ ಇತಿಹಾಸವನ್ನು ಬರೆದ ವ್ಯಕ್ತಿಯನ್ನು ಹೆಸರಿಸಿ. ಆತನ ಕೃತಿಯ ಹೆಸರೇನು?

    (1)    ಆಕ್ವಿಲ್ ಖಾನ್, ನಾಮಾ-ಇ-ಅಲಂಗಿರಿ
    (2)    ಕಫೀ ಖಾನ್, ಮುಂತಖಾಬ್-ಉಲ್-ಲುಬಾಬ್
    (3)    ಮಿರ್ಜಾ ಮುಹಮ್ಮದ್ ಖಾಜಿಮ್, ಅಲಂಗೀರ್ ನಾಮಾ
    (4)    ಮುಹಮ್ಮದ್ ಸಾಖಿ, ಮಸಿರ್-ಇ-ಆಲಂಗಿರಿ

ಸರಿ ಉತ್ತರ

(2) ಕಫೀ ಖಾನ್, ಮುಂತಖಾಬ್-ಉಲ್-ಲುಬಾಬ್


31. ಕೆಳಗಿನ ಯಾವ ಸಚಿವಾಲಯವು ಆದ್ಯತೆಯ ಮೇಜಿನೊಂದಿಗೆ ವ್ಯವಹರಿಸುತ್ತದೆ?

    (1)    ಸಿಬ್ಬಂದಿ ಸಚಿವಾಲಯ
    (2)    ಗೃಹ ಸಚಿವಾಲಯ
    (3)    ಪ್ರಧಾನಿಯವರ ಕಚೇರಿ
    (4)    ಮೇಲಿನ ಯಾವುದೂ ಇಲ್ಲ

ಸರಿ ಉತ್ತರ

(2) ಗೃಹ ಸಚಿವಾಲಯ


32. ಸಾರ್ವಜನಿಕ ವೆಚ್ಚಕ್ಕಾಗಿ ಹಣದ ಮತ ಚಲಾಯಿಸುವ ಅಧಿಕಾರ ವು ಭಾರತದಲ್ಲಿ ಯಾರಲ್ಲಿ ನಿಹಿತವಾಗಿದೆ?
    A.    ಲೋಕ ಸಭೆ
    B.    ರಾಜ್ಯ ಸಭೆ
    C.    ವಿಧಾನ ಸಭೆ
    D.    ವಿಧಾನ ಪರಿಷತ್ತು
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮತ್ತು B ಮಾತ್ರ
    (2)    A ಮತ್ತು C ಮಾತ್ರ
    (3)    A, B ಮತ್ತು C ಮಾತ್ರ
    (4)    A, B, C ಮತ್ತು D

ಸರಿ ಉತ್ತರ

(2) A ಮತ್ತು C ಮಾತ್ರ


33. ಈ ಭಾಗವನ್ನು ಓದಿ ಅದಕ್ಕೆ ಸಂಬಂಧಪಟ್ಟ ವ್ಯಕ್ತಿ ಹುಡುಕಿ. ಅವರ ಪ್ರಸಿದ್ಧ ಕೃತಿಗಳೆಂದರೆ ‘‘ದಿ ಗೋಲ್ಡನ್ ನೋಟ್ ಬುಕ್, ಮೆಮೋಯರ್ಸ್ ಆಫ್ ಎ ಸರ್ವೈವರ್’’ ಮತ್ತು ‘‘ದಿ ಸಮ್ಮರ್ ಬಿರ್ ದಿ ಡಾರ್ಕ್’’ ಆಕೆ ಸಾಹಿತ್ಯದಲ್ಲಿ ಅತಿ ಹಿಂದಿನ ನೊಬೆಲ್ ಪ್ರಶಸ್ತಿ ವಿಜೇತೆ.

    (1)    ಆಲಿಸ್ ಮುನ್ರೋ
    (2)    ಡೊರಿಸ್ ಲೆಸಿಂಗ್
    (3)    ಹೆರ್ತಾ ಮುಲರ್
    (4)    ಎಲ್ರೇಡಿ ಜೆಲಿನೆಕ್

ಸರಿ ಉತ್ತರ

(2) ಡೊರಿಸ್ ಲೆಸಿಂಗ್


34. ಯಾವ ಮುಘಲ್ ದೊರೆಯ ರಾಜ್ಯಭಾರದಲ್ಲಿ ಸಿಖ್ ನಾಯಕ ಬಂದಾ ಬಹದ್ದೂರ್ ಅವರನ್ನು ಸೆರೆ ಹಿಡಿದು ಕೊಲ್ಲಲಾಯಿತು?

    (1)    ಔರಂಗಜೇಬ್
    (2)    ಬಹದ್ದೂರ್ ಷಾ
    (3)    ಜಹಂದರ್ ಷಾ
    (4)    ಫರೂಕ್ಸಿಯಾರ್

ಸರಿ ಉತ್ತರ

(4) ಫರೂಕ್ಸಿಯಾರ್


35. ಸಾಮಾನ್ಯ ತಾಪಮಾನದಲ್ಲಿ ರಂಧ್ರದ ಕಾರಣ, ಕಾರಿನ ಚಕ್ರದ ಒಳಗಿನ ಸಂಕುಚಿತ ಗಾಳಿಯು ಇದ್ದಕ್ಕಿದ್ದಂತೆ ಹೊರಬರಲು ಪ್ರಾರಂಭಿಸುತ್ತದೆ. ನಂತರ ಟ್ಯೂಬ್ ನ ಒಳಗಿನ ಗಾಳಿಯು

    (1)    ಬಿಸಿಯಾಗಲು ಪ್ರಾರಂಭಿಸುತ್ತದೆ
    (2)    ತಂಪಾಗಲು ಪ್ರಾರಂಭವಾಗುತ್ತದೆ
    (3)    ಅದೇ ತಾಪಮಾನದಲ್ಲಿ ಉಳಿಯುತ್ತದೆ
    (4)    ಗಾಳಿಯಲ್ಲಿ ನೀರಿನ ಆವಿಯ ಪ್ರಸ್ತುತ ಪ್ರಮಾಣವನ್ನು ಅವಲಂಬಿಸಿ ಬಿಸಿಯಾಗುವುದು ಮತ್ತು ತಂಪಾಗಬಹುದು

ಸರಿ ಉತ್ತರ

(2) ತಂಪಾಗಲು ಪ್ರಾರಂಭವಾಗುತ್ತದೆ


36. ಆಮ್ಲ (ಪಟ್ಟಿ I) ಮತ್ತು ಆಕರ (ಪಟ್ಟಿ II) ಹೊಂದಿಸಿರಿ:

 

ಪಟ್ಟಿ I (ಆಮ್ಲ)

 

ಪಟ್ಟಿ II (ಆಕರ)

A.

ಟಾರ್ಟಾರಿಕ್ ಆಮ್ಲ

I.

ಕೆಂಪಿರುವೆ

B.

ಫಾರ್ಮಿಕ್ ಆಮ್ಲ

II.

ದ್ರಾಕ್ಷಿ

C.

ಯೂರಿಕ್ ಆಮ್ಲ

III.

ಸೇಬು

D.

ಮ್ಯಾಲಿಯಿಕ್ ಆಮ್ಲ

IV.

ಸಸ್ತನಿಗಳ ಮೂತ್ರ

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 

A

B

C

D

(1)

I

II

III

IV

(2)

II

I

IV

III

(3)

II

I

III

IV

(4)

I

II

IV

III


ಸರಿ ಉತ್ತರ

(2) II I IV III


37. ಈ ಕೆಳಗಿನ ಯಾವ ಶಾಸನವು ಒಂದನೆಯ ಪುಲಕೇಶಿನ್-I ಯನ್ನು ದಕ್ಷಿಣಾ ಪಥದ ನಿರ್ವಿವಾದ ಪ್ರಭು ಎಂದು ಹೇಳಿದೆ?

    (1)    ಬಾದಾಮಿ ಬಂಡೆಗಲ್ಲು ಶಾಸನ
    (2)    ಅಮ್ಮಿನಭಾವಿ ಶಾಸನ
    (3)    ಯಕ್ಕೇರಿ ಬಂಡೆಗಲ್ಲು ಶಾಸನ
    (4)    ಮಹಾಕೂಟ ಶಾಸನ

ಸರಿ ಉತ್ತರ

(3) ಯಕ್ಕೇರಿ ಬಂಡೆಗಲ್ಲು ಶಾಸನ


38. ‘‘ಮರಾಠಾ ಸಾಮ್ರಾಜ್ಯದ ಆರಂಭ ಕೈಗೊಂಡ ಎರಡನೆಯ ಚಕ್ರವರ್ತಿ’’ ಎಂದು ವಿವರಣೆಗೊಳಗಾದ ಮರಾಠ ನಾಯಕರು ಯಾರು?

    (1)    ರಾಜಾರಾಮ
    (2)    ತಾರಾ ರಾಮ
    (3)    ಬಾಲಾಜಿ ವಿಶ್ವನಾಥ್
    (4)    ಬಾಲಾಜಿ ಬಾಜಿ ರಾವು

ಸರಿ ಉತ್ತರ

(3) ಬಾಲಾಜಿ ವಿಶ್ವನಾಥ್


39. ಕೊಟ್ಟಿರುವ (ಪಟ್ಟಿ I) ಮತ್ತು ತತ್ಸಂಬಂ ಆಟಗಳು (ಪಟ್ಟಿ II) ಹೊಂದಿಸಿ:

 

ಪಟ್ಟಿ I (ಶಬ್ದಗಳು)

 

 ಪಟ್ಟಿII (ಆಟಗಳು)

A.

ಬುಲ್ಸ್

I.

ಗಾಲ್

B.

ಕ್ಯಾಡಿ

II.

ಶೂಟಿಂಗ್

C.

ಡ್ಯೂಸ್

III.

ಕ್ರಿಕೆಟ್

D.

ಗೂಗ್ಲಿ

IV.

ಲಾನ್ ಟೆನಿಸ್

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 

A

B

C

D

(1)

I

II

III

IV

(2)

II

I

III

IV

(3)

II

I

IV

III

(4)

I

II

IV

III

ಸರಿ ಉತ್ತರ

(3) II I IV III


40. ಡಾ.ದ್ವಾರಕಾನಾಥ್ ಕೋಟ್ನಿಸ್ ರ ಪ್ರಸಿದ್ಧಿಗೆ ವಿಶೇಷ ಅಂಶ ಏನು?

    (1)    ಅವರು ಬಡವರಿಗೆ ಪರಿಹಾರ ನೀಡಿದ್ದು
    (2)    ಭಾರತದ ದುರ್ಗಮ ಪ್ರದೇಶಗಳಲ್ಲಿ ಆಸ್ಪತ್ರೆ ಸ್ಥಾಪಿಸಿದ್ದು
    (3)    ಅವರು ಭಾರತದ ರಾಷ್ಟ್ರೀಯವಾದಿಗಳ ಮುಂಚೂಣಿಯಲ್ಲಿದ್ದದ್ದು
    (4)    ಅವರು ಇಂಗ್ಲಿಷರ ಸೈನ್ಯಕ್ಕೆ ಚಿಕಿತ್ಸೆ ನೀಡುತ್ತ ತನ್ನ ಪ್ರಾಣವನ್ನು ಕೊಟ್ಟರು

ಸರಿ ಉತ್ತರ

(4) ಅವರು ಇಂಗ್ಲಿಷರ ಸೈನ್ಯಕ್ಕೆ ಚಿಕಿತ್ಸೆ ನೀಡುತ್ತ ತನ್ನ ಪ್ರಾಣವನ್ನು ಕೊಟ್ಟರು


41. ಈ ಪೈಕಿ ಯಾವ ಹೇಳಿಕೆಗಳು ರಾಷ್ಟ್ರೀಯ ಪೊಲೀಸ್ ಅಕಾಡೆಮಿಗೆ ಸಂಬಂಧಿಸಿದಂತೆ ಸರಿ?
    A.    ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮರಣೆಗೆ ಹೆಸರಿಸಿದೆ
    B.    ಇದು ಹೈದರಾಬಾದ್ನಲ್ಲಿದೆ
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮಾತ್ರ
    (2)    B ಮಾತ್ರ
    (3)    A ಮತ್ತು B ಎರಡೂ
    (4)    A ಆಗಲೀ ಅಥವಾ B ಆಗಲೀ ಅಲ್ಲ

ಸರಿ ಉತ್ತರ

(2) B ಮಾತ್ರ


42. ಬ್ಲೂ ಮೂನ್ ವಿದ್ಯಮಾನ ಉಂಟಾಗುವುದು

    (1)    ಎರಡು ಹುಣ್ಣಿಮೆ ಒಂದೇ ತಿಂಗಳಿನಲ್ಲಿ ಬಂದಾಗ
    (2)    ನಾಲ್ಕು ಹುಣ್ಣಿಮೆಗಳು ಎರಡು ಅನುಕ್ರಮ ತಿಂಗಳಲ್ಲಿ ಅದೇ ಕ್ಯಾಲೆಂಡರ್ ವರ್ಷದಲ್ಲಿ ಬಂದಾಗ
    (3)    ಎರಡು ಹುಣ್ಣಿಮೆಗಳು ಒಂದೇ ತಿಂಗಳಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಮೂರು ಬಾರಿ ಬಂದಾಗ
    (4)    ಈ ಮೇಲಿನ ಯಾವುವೂ ಅಲ್ಲ

ಸರಿ ಉತ್ತರ

(1) ಎರಡು ಹುಣ್ಣಿಮೆ ಒಂದೇ ತಿಂಗಳಿನಲ್ಲಿ ಬಂದಾಗ


43. ಇಂಡೋನೇಷಿಯಾದ ಮಲೇಷಿಯಾ ಮತ್ತು ಸುಮಾತ್ರಾಗಳ ನಡುವಿನ ಜಲಸಂಧಿ ಇದು ಎನ್ನಲಾಗಿದೆ

    (1)    ಮಲಕ್ಕಾ
    (2)    ಜಿಬ್ರಾಲ್ಟರ್
    (3)    ಮೆಗೆಲ್ಲಾನ್
    (4)    ಬಾಸ್

ಸರಿ ಉತ್ತರ

(1) ಮಲಕ್ಕಾ


44. ನಿಂತ ವ್ಯಕ್ತಿಯೊಬ್ಬ ಮರುಭೂಮಿಯ ಕತ್ತಲಲ್ಲಿ ತನ್ನ ಹಳ್ಳಿಗೆ ಸಾಗಿದ್ದಾನೆ. ಹಳ್ಳಿಯು ಅವನ ಪೂರ್ವಕ್ಕೆ 5 km ದೂರದಲ್ಲಿದೆ. ಅವನ ಬಳಿ ದಿಕ್ಕು ತೋರಿಸುವ ಯಾವುದೇ ಉಪಕರಣಗಳಿಲ್ಲ. ಆದರೆ ಅವನು ಧ್ರುವ ನಕ್ಷತ್ರ ಬಲ್ಲ. ಅವನು ಹಳ್ಳಿಗೆ ಸಾಗಲು ಸುಲಭ ವಿಧಾನ

    (1)    ಧ್ರುವ ನಕ್ಷತ್ರದ ದಿಕ್ಕಿನಲ್ಲಿ ಸಾಗುವುದು
    (2)    ಧ್ರುವ ನಕ್ಷತ್ರದ ವಿರುದ್ಧ ದಿಕ್ಕಿನಲ್ಲಿ ಸಾಗುವುದು
    (3)    ಧ್ರುವ ನಕ್ಷತ್ರವನ್ನು ತನ್ನ ಎಡ ಬದಿಗಿಟ್ಟು ಸಾಗುವುದು
    (4)    ಧ್ರುವ ನಕ್ಷತ್ರವನ್ನು ತನ್ನ ಬಲ ಬದಿಗಿಟ್ಟು ಸಾಗುವುದು

ಸರಿ ಉತ್ತರ

(3) ಧ್ರುವ ನಕ್ಷತ್ರವನ್ನು ತನ್ನ ಎಡ ಬದಿಗಿಟ್ಟು ಸಾಗುವುದು


45. ಐನ್-ಉಲ್-ಮುಲ್ಕ್ ಗೀಲಾನಿ ಅವರು ವಿಜಯನಗರದ ಈ ದೊರೆಯ ಆಳ್ವಿಕೆಯಲ್ಲಿ ಮುಖ್ಯ ಅಧಿಕಾರಿಯಾಗಿದ್ದರು

    (1)    ದೇವರಾಯ-II
    (2)    ಅಳಿಯ ರಾಮರಾಯ
    (3)    ಕೃಷ್ಣ ದೇವರಾಯ
    (4)    ಅಚ್ಯುತರಾಯ

ಸರಿ ಉತ್ತರ

(2) ಅಳಿಯ ರಾಮರಾಯ


46. ವಿವರಣೆಯನ್ನು (ಪಟ್ಟಿ I) ಅವುಗಳು ಹೊಂದಿರುವ ಪದಗಳೊಂದಿಗೆ (ಪಟ್ಟಿ II) ಹೊಂದಿಸಿ:

 

ಪಟ್ಟಿ I (ವಿವರಣೆ)

 

ಪಟ್ಟಿ II (ಪದಗಳು)

A.

ಕರಗಿದ ಶಿಲಾಪಾಕದ ಘನೀಕರಣದಿಂದ ರೂಪುಗೊಂಡ ಶಿಲೆಗಳು

I.

ಹಾಸು ಸಮತಟ್ಟು

B.

ಹಿಂದೆ ಅಸ್ತಿತ್ವದಲ್ಲಿದ್ದು, ಬಂಡೆಗಳ ಅವಶೇಷಗಳ ಬಹುತೇಕ ಭಾಗವನ್ನು ಒಳಗೊಂಡಿರುವ ಶಿಲೆಗಳು

II.

ಸ್ಟ್ರೈಕ್ಸ್ (ತಾಡಿತ)

C.

ಸೊ ಟಗಳ ಸಮಯದಲ್ಲಿ ಜ್ವಾಲಾಮುಖಿಗಳಿಂದ ಚಿಮ್ಮಲ್ಪಟ್ಟ ಘನ ವಸ್ತುಗಳು

III.

ಅಗ್ನಿಜ ಶಿಲೆಗಳು

D.

ಪ್ರತಿ ಪದರಗಳ ನಡುವಿನ ಸಮತಟ್ಟಿನ ವಿಭಾಗ

IV.

ಜಲಜ ಶಿಲೆಗಳು

E.

ನಿಜವಾದ ಡಿಪ್ಗೆ ಇರುವ ಲಂಬ ಕೋನಗಳಲ್ಲಿನ ಒಂದು ಸಾಲು

V.

ಟೆಫ್ರಾ

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ.

 

A

B

C

D

E

(1)

I

V

II

IV

III

(2)

II

I

V

IV

III

(3)

III

IV

V

I

II

(4)

V

IV

III

II

I

 

ಸರಿ ಉತ್ತರ

(3) III IV V I II


47. ಆತ ಫ್ರಾನ್ಸ್ ನವನು ಮತ್ತು ವೃತ್ತಿಯಿಂದ ವೈದ್ಯ. ಅವನು ಷಹಜಹಾನ್ ಆಸ್ಥಾನದಲ್ಲಿ ಸೇರಿದ್ದು, ದಾರಾ ಶಿಕೋನ್ ಮತ್ತು ಔರಂಗಜೇಬರ ನಡುವೆ ಉತ್ತರಾಧಿಕಾರತ್ವಕ್ಕಾಗಿ ನಡೆಸಿದ ಯುದ್ಧಕ್ಕೆ ಸಾಕ್ಷಿ ಆಗಿದ್ದ. ಈ ಉಲ್ಲೇಖವು ಈತನನ್ನು ಕುರಿತದ್ದಾಗಿದೆ.

    (1)    ನಿಕೊಲಾವ್ ಮುನುಕ್ಕಿ
    (2)    ಫೆರ್ನಾವೋ ನ್ಯೂನಿಜ್
    (3)    ಫ್ರಾಂಕೋಯಿಸ್ ಬೆರ್ನಿಯರ್
    (4)    ಜೀನ್ ಬ್ಯಾಪ್ಟಿಸ್ಟ್ ಟೆವರ್ನಿಯರ್

ಸರಿ ಉತ್ತರ

(3) ಫ್ರಾಂಕೋಯಿಸ್ ಬೆರ್ನಿಯರ್


48. ಮತ್ಸ್ಯ ಪುರಾಣವು ಹತ್ತು ಅವತಾರಗಳ (ಅವತಾರಗಳು) ಪಟ್ಟಿಯನ್ನು ನೀಡುತ್ತದೆ. ಅವುಗಳಲ್ಲಿ ಮೂರು ದೈವಿಕ ಅವತಾರಗಳಾಗಿವೆ. ಈ ಕೆಳಗಿನವುಗಳಲ್ಲಿ ಸೇರದ ಪದವನ್ನು ಗುರುತಿಸಿ.

    (1)    ನಾರಾಯಣ
    (2)    ನರಸಿಂಹ
    (3)    ಕೂರ್ಮ
    (4)    ವಾಮನ

ಸರಿ ಉತ್ತರ

(1) ನಾರಾಯಣ


49. ಪ್ರಾಚೀನ ಭಾರತದ ಈ ಕೆಳಗಿನ ಲಿಪಿಗಳಲ್ಲಿ ಯಾವುದು ಬಲದಿಂದ ಎಡಕ್ಕೆ ಬರೆಯಲ್ಪಟ್ಟಿತು, 300BC ಯಿಂದ 300 AD ಯವರೆಗೆ ಬಳಕೆಯಲ್ಲಿತ್ತು ಮತ್ತು ಅಶೋಕನ ಶಾಸನಗಳ ಪಶ್ಚಿಮ ಭಾಗದಲ್ಲಿ ಅದನ್ನು ಕಾರ್ಯಗತಗೊಳಿಸಲಾಗಿತ್ತು?

    (1)    ಬ್ರಾಹ್ಮಿ
    (2)    ಖರೋಷ್ಠಿ
    (3)    ಶಾರದಾ
    (4)    ನಂದನಗರಿ

ಸರಿ ಉತ್ತರ

(2) ಖರೋಷ್ಠಿ


50. ಜಲಪಾತಗಳು (ಪಟ್ಟಿ I) ಮತ್ತು ಅವುಗಳು ಇರುವ ರಾಷ್ಟ್ರಗಳೊಂದಿಗೆ (ಪಟ್ಟಿ II) ಹೊಂದಿಸಿ:

 

ಪಟ್ಟಿI (ಜಲಪಾತ)

 

ಪಟ್ಟಿII (ದೇಶ)

A.

ಇಗಾಜು ಜಲಪಾತ

I.

ಕೆನಡಾ

B.

ನಯಾಗರ ಜಲಪಾತ

II.

ಅರ್ಜೆಂಟೀನಾ

C.

ಸದರ್ಲ್ಯಾಂಡ್ ಜಲಪಾತ

III.

ಜಾಂಬಿಯಾ

D.

ವಿಕ್ಟೋರಿಯಾ ಜಲಪಾತ

IV.

ನ್ಯೂಜಿಲ್ಯಾಂಡ್

 

 

V.

ವೆನಿಜುವೆಲಾ

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 

A

B

C

D

(1)

I

II

V

IV

(2)

II

I

IV

III

(3)

II

I

V

IV

(4)

I

II

IV

V

 

ಸರಿ ಉತ್ತರ

(2) II I IV III


51. ಕ್ರಾಂತಿಕಾರಿಗಳ ಮೇಲೆ ಸೈದ್ಧಾಂತಿಕ ಪ್ರಭಾವಗಳ ಬಗ್ಗೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ?

    (1)    ಕೆಲವು ಕ್ರಾಂತಿಕಾರಿ ಮುಖಂಡರು ವಿದೇಶದ ತಮ್ಮ ಪ್ರಯಾಣದಲ್ಲಿ ಪಾಶ್ಚಿಮಾತ್ಯ ಕ್ರಾಂತಿಕಾರಿಗಳೊಂದಿಗೆ ಸಂಪರ್ಕ ಹೊಂದಿದ್ದರು
    (2)    ಭಾರತದ ಕ್ರಾಂತಿಕಾರಿಗಳು ವಿಶ್ವದ ಸಮಕಾಲೀನ ಹೋರಾಟಗಳಿಂದ ಸ್ಫೂರ್ತಿಗೊಂಡಿದ್ದರು. ಅದರಲ್ಲೂ ವಿಶೇಷವಾಗಿ ಐರಿಶ್ ಯುದ್ಧದ ಸ್ವಾತಂತ್ರ್ಯ ಹೋರಾಟ ಮತ್ತು ರಷ್ಯಾದ ಕ್ರಾಂತಿಗಳಿಂದ ಪ್ರಭಾವಿತರಾಗಿದ್ದರು
    (3)    ಎಲ್ಲಾ ಕ್ರಾಂತಿಕಾರಕ ಚಳವಳಿಗಳು ಹಿಂದೂ ಪುನರುಜ್ಜೀವಿತತೆಯಿಂದ ಸ್ಫೂರ್ತಿಗೊಳಿಸಲ್ಪಟ್ಟಿದ್ದವು
    (4)    ಬಂಗಾಳದಲ್ಲಿನ ರಹಸ್ಯ ಸಂಸ್ಥೆಗಳಲ್ಲಿನ ಕ್ರಾಂತಿಕಾರರು ಯೂರೋಪಿನಲ್ಲಿ ಕ್ರಾಂತಿಕಾರಕ ಚಟುವಟಿಕೆಯ ಕುರಿತಾದ ತೀವ್ರಗಾಮಿ ಪ್ರದೇಶವನ್ನು ಹೊಂದಿದ್ದರು, ಇವು ಅವರಿಗೆ ಸ್ಫೂರ್ತಿ ನೀಡಿದವು

ಸರಿ ಉತ್ತರ

(3) ಎಲ್ಲಾ ಕ್ರಾಂತಿಕಾರಕ ಚಳವಳಿಗಳು ಹಿಂದೂ ಪುನರುಜ್ಜೀವಿತತೆಯಿಂದ ಸ್ಫೂರ್ತಿಗೊಳಿಸಲ್ಪಟ್ಟಿದ್ದವು


52. ಮಂದಗಾಮಿಗಳ ಬಗ್ಗೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸುಳ್ಳು?
    A.    ಅವರುಗಳಲ್ಲಿ ಅತ್ಯಂತ ಹೆಚ್ಚಿನವರು ಬ್ರಿಟನ್ನಲ್ಲಿ ಅಧ್ಯಯನ ಮಾಡಿದ ಉತ್ತಮ ವಕೀಲರು
    B.    ಅವರು, ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು ಬಯಸಿದ್ದರು.
    C.    ಅವರು ಬ್ರಿಟಿಷ್ ರಾಜಕೀಯ ಸಂಸ್ಥೆಗಳ ಉತ್ತಮ ಪ್ರಶಂಸಕರಾಗಿದ್ದರು.
    D.    ಅವರು ಸಿವಿಲ್ ಸರ್ವೀಸಸ್ ಪರೀಕ್ಷೆಗಳಿಗೆ ವಯಸ್ಸಿನ ಮಿತಿಯನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು.
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮಾತ್ರ
    (2)    A ಮತ್ತು C ಮಾತ್ರ
    (3)    A, B ಮತ್ತು C ಮಾತ್ರ
    (4)    B ಮತ್ತು D ಮಾತ್ರ

ಸರಿ ಉತ್ತರ

(4) B ಮತ್ತು D ಮಾತ್ರ


53. ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಜಿಯವರು ಸ್ಥಾಪಿಸಿದ ಆಶ್ರಮದ ಹೆಸರೇನು?

    (1)    ಫೀನಿಕ್ಸ್ ಫಾರ್ಮ್
    (2)    ಸಬರಮತಿ ಆಶ್ರಮ
    (3)    ನಟಾಲ್ ಫಾರ್ಮಗಳು
    (4)    ಡರ್ಬನ್ ಫಾರ್ಮಗಳು

ಸರಿ ಉತ್ತರ

(1) ಫೀನಿಕ್ಸ್ ಫಾರ್ಮ್


54. ರಾಜ್ಯಾದ್ಯಂತ ಎಲ್ಲಾ ಗ್ರಾಮಗಳು ಮತ್ತು ಜಿಲ್ಲೆಗಳಲ್ಲಿ ಬಯಲು ಮಲ ವಿಸರ್ಜನೆ ನಿಗ್ರಹಿಸಲು ಸ್ಥಳೀಯ ಸಂಸ್ಥೆಗಳು, ಸ್ವ ಸಹಾಯ ಗುಂಪುಗಳು ಮತ್ತು NGOಗಳನ್ನು ಒಳಗೊಂಡಿರುವ ‘‘ಗುಡ್ ಮಾರ್ನಿಂಗ್’’ ಸ್ಕ್ವಾಡ್ ಅನ್ನು ಇತ್ತೀಚೆಗೆ ರಚಿಸಲು ನಿರ್ಧರಿಸಿದ ರಾಜ್ಯ ಸರ್ಕಾರ ಯಾವುದು?

    (1)    ಕೇರಳ
    (2)    ಕರ್ನಾಟಕ
    (3)    ಮಧ್ಯ ಪ್ರದೇಶ
    (4)    ಮಹಾರಾಷ್ಟ್ರ

ಸರಿ ಉತ್ತರ

(4) ಮಹಾರಾಷ್ಟ್ರ


55. ಕೋರ್ ಬ್ಯಾಂಕಿಂಗ್ ಪರಿಹಾರವು ಕೆಲವೊಮ್ಮೆ ಸುದ್ದಿಗಳಲ್ಲಿ ಕಂಡುಬರುತ್ತದೆ. ಈ ಪದದ ವಿವರಣೆ/ಗಳನ್ನು ಈ ಕೆಳಗಿನ ಯಾವ ಹೇಳಿಕೆ/ಗಳು ಉತ್ತಮವಾಗಿ ವಿವರಿಸಬಹುದು?
    A.    ಇದು ಬ್ಯಾಂಕ್ ಶಾಖೆಗಳ ಜಾಲವಾಗಿದ್ದು, ಗ್ರಾಹಕರು ತಮ್ಮ ಖಾತೆಗಳನ್ನು ಬ್ಯಾಂಕುಗಳ ಯಾವುದೇ ಶಾಖೆಯಿಂದ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
    B.    ಕಂಪ್ಯೂಟರೀಕರಣದ ಮೂಲಕ ವಾಣಿಜ್ಯ ಬ್ಯಾಂಕುಗಳ ಮೇಲೆ ಆರ್ ಬಿ ಐ ನ ನಿಯಂತ್ರಣವನ್ನು ಹೆಚ್ಚಿಸುವ ಪ್ರಯತ್ನವಾಗಿದೆ.
    C.    ಇದು ಬೃಹತ್ತಾದ ನಿರ್ವಹಿಸಲಾಗದ ಸ್ವತ್ತುಗಳನ್ನು ಹೊಂದಿದ ಬ್ಯಾಂಕ್ ನ್ನು ಮತ್ತೊಂದು ಬ್ಯಾಂಕ್ ನಿಂದ ತೆಗೆದುಕೊಳ್ಳಲ್ಪಟ್ಟ ಒಂದು ವಿಸ್ತೃತ ಕಾರ್ಯ ವಿಧಾನವಾಗಿದೆ.
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮಾತ್ರ
    (2)    B ಮತ್ತು C ಮಾತ್ರ
    (3)    A ಮತ್ತು C ಮಾತ್ರ
    (4)    A, B ಮತ್ತು C

ಸರಿ ಉತ್ತರ

(1) A ಮಾತ್ರ


56. ಏಕದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ಅಸಮರ್ಪಕ ನಿರ್ವಹಣೆ ಮತ್ತು ಶೇಖರಣೆಯು ಅಫ್ಲಾಟಾಕ್ಸಿನ್ ಗಳೆಂದು ಕರೆಯಲ್ಪಡುವ ವಿಷಾಣುಗಳ ಉತ್ಪಾದನೆಯಲ್ಲಿ ಕಾರಣವಾಗುತ್ತದೆ. ಇದು ಸಾಮಾನ್ಯವಾಗಿ ಸಾಮಾನ್ಯವಾಗಿ ಅಡುಗೆ ಪ್ರಕ್ರಿಯೆಯಲ್ಲಿ ನಾಶವಾಗುವುದಿಲ್ಲ. ಕೆಳಗಿನವುಗಳಲ್ಲಿ ಯಾವುವು ಅಫ್ಲಾಟಾಕ್ಸಿನ್ ಗಳನ್ನು ಉತ್ಪಾದಿಸುತ್ತವೆ?

    (1)    ಬ್ಯಾಕ್ಟೀರಿಯಾ
    (2)    ಪ್ರೋಟೋಜೋವಾ
    (3)    ನಮೂನೆಗಳು
    (4)    ವೈರಸ್ ಗಳು

ಸರಿ ಉತ್ತರ

(3) ನಮೂನೆಗಳು


57. ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಸರ್ಕಾರದ ಬಂಡವಾಳ ಆಯವ್ಯಯದಲ್ಲಿ ಸೇರಿದೆ?
    A.    ರಸ್ತೆಗಳು, ಕಟ್ಟಡಗಳು ಮತ್ತು ಯಂತ್ರೋಪಕರಣಗಳಂತಹ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಮಾಡುವ ವೆಚ್ಚ.
    B.    ವಿದೇಶಿ ಸರ್ಕಾರಗಳಿಂದ ಸ್ವೀಕರಿಸಲ್ಪಟ್ಟ ಸಾಲಗಳು.
    C.    ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾದ ಸಾಲಗಳು ಮತ್ತು ಮುಂಗಡಗಳು.
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮಾತ್ರ
    (2)    B ಮತ್ತು C ಮಾತ್ರ
    (3)    A ಮತ್ತು C ಮಾತ್ರ
    (4)    A, B ಮತ್ತು C

ಸರಿ ಉತ್ತರ

(4) A, B ಮತ್ತು C


58. ಕೃಷಿಯಲ್ಲಿ ನೀಮ್ ಕೋಟೆಡ್ ಯೂರಿಯಾ ಬಳಕೆಯನ್ನು ಭಾರತ ಸರ್ಕಾರವು ಏಕೆ ವೃದ್ಧಿಮಾಡಲೆತ್ನಿಸುತ್ತಿದೆ?

    (1)    ಮಣ್ಣಿನ ಸೂಕ್ಷ್ಮಾಣುಜೀವಿಗಳಿಂದ ಸಾರಜನಕ ಸ್ಥಿರೀಕರಣವನ್ನು ಹೆಚ್ಚಿಸಲು ಮಣ್ಣಿಗೆ ಬೇವಿನ ತೈಲವನ್ನು ಬಿಡುಗಡೆ ಮಾಡುವುದು.
    (2)    ಬೇವು ಲೇಪನವು ಮಣ್ಣಿನಲ್ಲಿನ ಯೂರಿಯಾ ಕರಗುವಿಕೆಯ ದರವನ್ನು ನಿಧಾನಗೊಳಿಸುತ್ತದೆ.
    (3)    ಹಸಿರುಮನೆ ಅನಿಲವಾಗಿರುವ ನೈಟ್ರಸ್ ಆಕ್ಸೈಡ್, ಬೆಳೆ ಕ್ಷೇತ್ರಗಳಿಂದ ವಾತಾವರಣಕ್ಕೆ ಬಿಡುಗಡೆಯಾಗುವುದೇ ಇಲ್ಲ.
    (4)    ಇದು ಕಳೆನಾಶಕ ಮತ್ತು ನಿರ್ದಿಷ್ಟ ಬೆಳೆಗಳ ಗೊಬ್ಬರದ ಮಿಶ್ರಣವಾಗಿದೆ.

ಸರಿ ಉತ್ತರ

(2) ಬೇವು ಲೇಪನವು ಮಣ್ಣಿನಲ್ಲಿನ ಯೂರಿಯಾ ಕರಗುವಿಕೆಯ ದರವನ್ನು ನಿಧಾನಗೊಳಿಸುತ್ತದೆ.


59. ಈ ಕೆಳಗಿನ ಮಸೂದೆಗಳಲ್ಲಿ ಭಾರತದ ಅಧ್ಯಕ್ಷರು ಒಮ್ಮೆ ಮಾತ್ರ ತಮ್ಮ ವಿಟೋ ಅಧಿಕಾರ ವನ್ನು ಬಳಸಿದ್ದಾರೆ?

    (1)    ಹಿಂದೂ ಸಂಹಿತೆ ಮಸೂದೆ
    (2)    PEPSU ಹೊಂದಾಣಿಕೆ ಮಸೂದೆ
    (3)    ಭಾರತೀಯ ಪೋಸ್ಟ್ ಆಫೀಸ್ (ತಿದ್ದುಪಡಿ) ಮಸೂದೆ
    (4)    ವರದಕ್ಷಿಣೆ ನಿಷೇಧ ಮಸೂದೆ

ಸರಿ ಉತ್ತರ

(3) ಭಾರತೀಯ ಪೋಸ್ಟ್ ಆಫೀಸ್ (ತಿದ್ದುಪಡಿ) ಮಸೂದೆ


60. ಸರೋವರಗಳನ್ನು (ಪಟ್ಟಿ I) ಮತ್ತು ಅವುಗಳಿರುವ ದೇಶಗಳೊಂದಿಗೆ (ಪಟ್ಟಿ II) ಹೊಂದಿಸಿ:

 

ಪಟ್ಟಿ I (ಸರೋವರಗಳು)

 

ಪಟ್ಟಿII (ದೇಶಗಳು)

A.

ಬೃಹತ್ ಕರಡಿ

I.

ರಷ್ಯಾ

B.

ಒನೆಗಾ

II.

ಕೆನಡಾ

C.

ವುಲರ್

III.

ಆಸ್ಟ್ರೇಲಿಯಾ

D.

ಮ್ಯಾಕೆ

IV.

ಭಾರತ

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 

A

B

C

D

(1)

I

II

III

IV

(2)

II

I

IV

III

(3)

II

I

III

IV

(4)

I

II

IV

III

ಸರಿ ಉತ್ತರ

(2) II I IV III


61. ಬ್ರಿಟಿಷ್ ಸರ್ಕಾರವು ಮಹಾತ್ಮ ಗಾಂಧಿಜಿಯವರನ್ನು ‘ಪಿತೂರಿಕಾರಿ ಫಕೀರ’ ನೆಂಬ ಪದಕ್ಕೆ ಸಮಾನವಾದ ಪದಗಳನ್ನು ಬಳಸಿದುದಕ್ಕೆ ಆಕ್ಷೇಪಿಸಿ 1931ರ ಬ್ರವರಿ-ಮಾರ್ಚ್ ನಲ್ಲಿ ಬ್ರಿಟಿಷ್ರೊಡನೆ ಸಂಧಾನವನ್ನು ಬಹಿಷ್ಕರಿಸಿದವರು ಯಾರು?

    (1)    ರಾಮ್ಸೇ ಮೆಕ್ ಡೂನಾಲ್ಡ್
    (2)    ಲಾರ್ಡ್ ಲಿನ್ ಲಿಥ್ ಗೌ
    (3)    ವಿನ್ ಸ್ಟನ್ ಚರ್ಚಿಲ್
    (4)    ಲಾರ್ಡ್ ವೇವೆಲ್

ಸರಿ ಉತ್ತರ

(3) ವಿನ್ ಸ್ಟನ್ ಚರ್ಚಿಲ್


62. ಈ ಪೈಕಿ ಯಾವ ಹೇಳಿಕೆ ಸರಿಯಲ್ಲ?

    (1)    ಲೋಕಸಭೆ ವಿಸರ್ಜನೆಗೊಂಡರೆ ಯಾವುದೇ ಬಾಕಿ ಉಳಿದ ಮಸೂದೆಗಳು ನಿಷ್ಫಲಕಾರಿಯಾಗುತ್ತವೆ
    (2)    ಲೋಕಸಭೆ ವಿಸರ್ಜನೆಗೊಂಡರೆ ಲೋಕಸಭೆಯಲ್ಲಿ ಅನುಮೋದನೆಗೊಂಡು ರಾಜ್ಯ ಸಭೆಯಲ್ಲಿ ಬಾಕಿ ಉಳಿದಿದ್ದು ನಿಷ್ಫಲಕಾರಿಯಾಗುತ್ತವೆ
    (3)    ಲೋಕಸಭೆ ವಿಸರ್ಜನೆಗೊಂಡರೆ ಯಾವುದೇ ಮಸೂದೆ ರಾಜ್ಯಸಭೆಯಲ್ಲಿ ಬಾಕಿ ಉಳಿದು ಲೋಕಸಭೆಯಲ್ಲಿ ಅನುಮೋದನೆಗೊಂಡಿದ್ದರೆ ನಿಷ್ಫಲವಾಗುವುದಿಲ್ಲ
    (4)    ಲೋಕಸಭೆ ವಿಸರ್ಜನೆಯಾದಾಗ ರಾಜ್ಯಸಭೆಯಲ್ಲಿ ಮಸೂದೆ ಬಾಕಿ ಇದ್ದು ಮತ್ತು ಲೋಕಸಭೆಯಲ್ಲಿ ಅನುಮೋದನೆ ಆಗದಿರುವುದು ನಿಷ್ಫಲ

ಸರಿ ಉತ್ತರ

(3) ಲೋಕಸಭೆ ವಿಸರ್ಜನೆಗೊಂಡರೆ ಯಾವುದೇ ಮಸೂದೆ ರಾಜ್ಯಸಭೆಯಲ್ಲಿ ಬಾಕಿ ಉಳಿದು ಲೋಕಸಭೆಯಲ್ಲಿ ಅನುಮೋದನೆಗೊಂಡಿದ್ದರೆ ನಿಷ್ಫಲವಾಗುವುದಿಲ್ಲ


63. ಲೋಕಸಭೆಯಲ್ಲಿನ ಶೂನ್ಯ ವೇಳೆಯ ಗರಿಷ್ಠ ಅವಧಿ

    (1)    30 ನಿಮಿಷ
    (2)    ಒಂದು ಗಂಟೆ
    (3)    ಎರಡು ಗಂಟೆ
    (4)    ಅನಿರ್ದಿಷ್ಟ

ಸರಿ ಉತ್ತರ

(4) ಅನಿರ್ದಿಷ್ಟ


64. ಪ್ರಮುಖ ಮಾಸ ಪತ್ರಿಕೆಗಳು ಮತ್ತು ಅವುಗಳನ್ನು ಸಂಪಾದಿಸಿದ ಬಹಿಷ್ಕೃತರ ಪಟ್ಟಿ ನೀಡಲಾಗಿದೆ:
    A.    ದ ಇಂಡಿಯನ್ ಸೋಷಲಿಸ್ಟ್- ಶ್ಯಾಮ್ ಜಿ ಕೃಷ್ಣವರ್ಮ
    B.    ತಲ್ವಾರ್- ವಿ ಚಟ್ಟೋಪಾಧ್ಯಾಯ
    C.    ಫ್ರೀ ಹಿಂದೂಸ್ಥಾನಿ- ತಾರಕ್ ನಾಥ್ ದಾಸ್
    D.    ವಂದೇ ಮಾತರಂ- ಮೇಡಮ್ ಭಿಕಾಜಿ ರುಸ್ತಮ ಕಾಮಾ
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮತ್ತು B ಮಾತ್ರ
    (2)    C ಮಾತ್ರ
    (3)    C ಮತ್ತು D ಮಾತ್ರ
    (4)    A, B, C ಮತ್ತು D

ಸರಿ ಉತ್ತರ

(4) A, B, C ಮತ್ತು D


65. ರಾಜ್ಯನೀತಿಯ ನಿರ್ದೇಶನಾ ತತ್ತ್ವಗಳು “ಬ್ಯಾಂಕ್ ಗೆ ಯಾವಾಗ ಬೇಕಾದರೂ ಹಣ ನೀಡಬಹುದೆಂದು ಹೇಳಿದ ಚೆಕ್ ಗಳು” ಎಂದು ಹೇಳಿದವರು?

    (1)    ಜವಾಹರ್ಲಾಲ್ ನೆಹರೂ
    (2)    ಕೆ.ಟಿ.ಷಾ
    (3)    ಬಿ.ಆರ್.ಅಂಬೇಡ್ಕರ್
    (4)    ಕೆ.ಎಂ.ಮುನ್ಷಿ

ಸರಿ ಉತ್ತರ

(2) ಕೆ.ಟಿ.ಷಾ


66. ಸರಿಯಾಗಿ ಹೊಂದಿಕೆ ಆಗುವ ಜೋಡಣೆ ಯಾವುದು?
    A.    ಡಿಫ್ತೀರಿಯಾ, ನ್ಯುಮೋನಿಯಾ ಮತ್ತು ಕುಷ್ಠ- ಆನುವಂಶಿಕ
    B.    ಬಣ್ಣ ಗುರುಡು, ಹಿಮೋಫಿಲಿಯಾ ಮತ್ತು ಸಿಕಲ್ ಸೆಲ್ ಅನೀಮಿಯಾ- ಲೈಂಗಿಕ ಸಂಬಂಧಿ
    C.    ಪೋಲಿಯೋ, ಜಪಾನೀಸ್-B ಎನ್ಸೆಫಿಲೈಟಿಸ್ ಮತ್ತು ಪ್ಲೇಗ್- ವೈರಲ್
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮತ್ತು B ಮಾತ್ರ
    (2)    B ಮತ್ತು C ಮಾತ್ರ
    (3)    A ಮತ್ತು C ಮಾತ್ರ
    (4)    A, B ಮತ್ತು C

ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


67. ಭಾರತ ರತ್ನ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ಸಂವಿಧಾನದ ಈ ಅನುಚ್ಛೇದದಡಿಯಲ್ಲಿ ನೀಡಲಾಗುವುದು

    (1)    ಸಂವಿಧಾನದ 14ನೇ ಅನುಚ್ಛೇದ
    (2)    ಸಂವಿಧಾನದ 18ನೇ ಅನುಚ್ಛೇದ
    (3)    ಸಂವಿಧಾನದ 25ನೇ ಅನುಚ್ಛೇದ
    (4)    ಈ ಯಾವುದೂ ಅಲ್ಲ

ಸರಿ ಉತ್ತರ

(2) ಸಂವಿಧಾನದ 18ನೇ ಅನುಚ್ಛೇದ


68. ಈ ಪೈಕಿ ಯಾವುದು ವಂಶವಾಹಿಯ ಅಸ್ವಸ್ಥತೆಯಲ್ಲ?

    (1)    ಬಣ್ಣ ಕುರುಡು
    (2)    ಡೌನ್ ಸಿಂಡ್ರೋಮ್
    (3)    ಹಿಮೋಫೀಲಿಯಾ
    (4)    ಝಿರೋಪ್ಥಾಲ್ಮಿಯಾ

ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


69. ಅನಿ ಬೆಸೆಂಟ್ ಅವರು
    A.    ಹೋಂ ರೂಲ್ ಚಳವಳಿಯನ್ನು ಪ್ರಾರಂಭಿಸಲು ಹೊಣೆಗಾರರಾಗಿದ್ದಾರೆ
    B.    ಥಿಯೋಸಾಫಿಕಲ್ ಸೊಸೈಟಿ ಸಂಸ್ಥಾಪಕರು
    C.    ಒಮ್ಮೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದರು
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮಾತ್ರ
    (2)    A ಮತ್ತು B ಮಾತ್ರ
    (3)    B ಮತ್ತು C ಮಾತ್ರ
    (4)    A, B ಮತ್ತು C

ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


70. ಭಾರತದ ಅಟಾರ್ನಿ ಜನರಲ್ ರು
    A.    ಲೋಕಸಭೆಯ ನಡವಳಿಗಳಲ್ಲಿ ಭಾಗವಹಿಸಬಹುದು
    B.    ಲೋಕಸಭೆಯ ಸಮಿತಿಯ ಸದಸ್ಯರಾಗಬಹುದು
    C.    ಲೋಕಸಭೆಯಲ್ಲಿ ಮಾತನಾಡಬಹುದು
    D.    ಲೋಕಸಭೆಯಲ್ಲಿ ಮತ ಚಲಾಯಿಸಬಹುದು
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮಾತ್ರ
    (2)    B ಮತ್ತು D ಮಾತ್ರ
    (3)    A, B ಮತ್ತು C ಮಾತ್ರ
    (4)    A ಮತ್ತು C ಮಾತ್ರ

ಸರಿ ಉತ್ತರ

(3) A, B ಮತ್ತು C ಮಾತ್ರ


71. ಈ ಕೆಳಗಿನ ಖನಿಜಗಳನ್ನು ಪರಿಗಣಿಸಿ:
    A.    ಕ್ಯಾಲ್ಸಿಯಂ
    B.    ಕಬ್ಬಿಣ
    C.    ಸೋಡಿಯಂ
ಮನುಷ್ಯನ ದೇಹದಲ್ಲಿನ ಸ್ನಾಯುಗಳ ಸಂಕೋಚನೆಗೆ, ಮೇಲೆ ನೀಡಿರುವ ಖನಿಜಗಳಲ್ಲಿ ಯಾವುದು/ವು ಅವಶ್ಯಕವಾಗಿದೆ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮಾತ್ರ
    (2)    B ಮತ್ತು C ಮಾತ್ರ
    (3)    A ಮತ್ತು C ಮಾತ್ರ
    (4)    A, B ಮತ್ತು C ಮಾತ್ರ

ಸರಿ ಉತ್ತರ

(4) A, B ಮತ್ತು C ಮಾತ್ರ


72. ಈ ರಾಜ್ಯದಲ್ಲಿ ಕಳೆದ ವರ್ಷದಿಂದಲೂ ಕೊಲೆಪಾತಕರ ಸಂಖ್ಯೆ ಶೇ.45ರಷ್ಟಕ್ಕಿಂತಲೂ ಹೆಚ್ಚಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆಯಾದ್ಯಂತ ದೋಷ ತುಂಬಿದೆ. ಇತ್ತೀಚೆಗೆ ನಮ್ಮ ನ್ಯಾಯಾಧೀಶರ ವಾಕ್ಯಗಳು ಬಹಳ ಸಹಿಷ್ಣುತೆಯಿಂದಿದ್ದು, ಅಪರಾ ಗಳು ದೀರ್ಘಾವಧಿಯ ಸಜೆಯ ಭಯವಿಲ್ಲದೆ ಏನನ್ನೂ ಮಾಡಲು ಹಿಂಜರಿಯುವುದಿಲ್ಲ. ಮೇಲಿನ ವಾದವು ದುರ್ಬಲವಾಗುವುದು ಇದು ಸತ್ಯವೆಂದಾದಲ್ಲಿ ಇದು:

    (1)    ರಾಜ್ಯದಲ್ಲಿನ ಶೇ.75ರಷ್ಟು ಇತರ ರಾಜ್ಯಗಳು ಈ ರಾಜ್ಯಕ್ಕಿಂತಲೂ ಕಡಿಮೆ ಅಪರಾಧಿ ದರಗಳನ್ನು ಹೊಂದಿವೆ
    (2)    ಈ ರಾಜ್ಯದಲ್ಲಿ ಬಿಳಿಯ ಕಾಲರ್ ಜನರು ಮಾಡುವ ಅಪರಾಧವೂ ಸಹ ಕಳೆದ ವರ್ಷಕ್ಕಿಂತ ಶೇ.35ಕ್ಕಿಂತಲೂ ಹೆಚ್ಚಿದೆ
    (3)    ರಾಜ್ಯದಲ್ಲಿ ಕಳೆದ ವರ್ಷ ಶೇ.35ಕ್ಕಿಂತ ಹೆಚ್ಚು ಆರಕ್ಷಕರನ್ನು ಆಯವ್ಯಯದ ಕಡಿತದಿಂದಾಗಿ ಕೆಲಸದಿಂದ ತೆಗೆದುಹಾಕಲಾಗಿದೆ
    (4)    ರಾಜ್ಯವು 15 ಹೊಸ ನ್ಯಾಯಾಧೀಶರನ್ನು ಎರವಲು ಪಡೆದದ್ದು ಕಳೆದ ವರ್ಷದ ಮರಣಗಳು ಮತ್ತು ನಿವೃತ್ತಿಗಳ ಪ್ರತಿಲವಾಗಿ

ಸರಿ ಉತ್ತರ

(3) ರಾಜ್ಯದಲ್ಲಿ ಕಳೆದ ವರ್ಷ ಶೇ.35ಕ್ಕಿಂತ ಹೆಚ್ಚು ಆರಕ್ಷಕರನ್ನು ಆಯವ್ಯಯದ ಕಡಿತದಿಂದಾಗಿ ಕೆಲಸದಿಂದ ತೆಗೆದುಹಾಕಲಾಗಿದೆ


73. ಫ್ಲೆಡ್, ಡೊನಾಲ್ಡೊ ಮತ್ತು ಆಸ್ಕರ್ ಬ್ರೆಜಿಲಿಯನ್ ಫುಟ್ಬಾಲ್ ನ ಬಗ್ಗೆ ಚರ್ಚಿಸುತ್ತಿದ್ದಾರೆ:
ಫ್ಲೆಡ್: ಬ್ರೆಜಿಲ್ ಒಂದು ಫುಟ್ಬಾಲ್ ಶಕ್ತಿಗೃಹವಾಗಿತ್ತು
ರೊನಾಲ್ಡೊ: ಬ್ರೆಜಿಲ್ ಒಂದು ಫುಟ್ಬಾಲ್ ಶಕ್ತಿಗೃಹವಾಗಿದೆ
ಆಸ್ಕರ್: ಬ್ರೆಜಿಲ್ ಒಂದು ಫುಟ್ಬಾಲ್ ಶಕ್ತಿಗೃಹವಾಗುವುದು
ಮೇಲಿನ ಸಂಭಾಷಣೆಯಲ್ಲಿ ಕೆಳಗಿನ ಯಾವುದನ್ನು ತೀರ್ಮಾನಿಸಲಾಗುವುದಿಲ್ಲ?

    (1)    ಆಸ್ಕರ್ ಭವಿಷ್ಯದ ಬಗ್ಗೆ ಆಶಾವಾದಿಯಾಗಿದ್ದಾನೆ.
    (2)    ಫ್ಲೆಡ್, ರೊನಾಲ್ಡೋ ಮತ್ತು ಆಸ್ಕರ್ ನಲ್ಲಿ ಕೆಲವು ವಿಷಯಗಳ ಮೇಲೆ ಒಮ್ಮತವಿಲ್ಲ.
    (3)    ರೊನಾಲ್ಡೊನ ಪ್ರಸ್ತುತ ದೃಷ್ಟಿಯು ಧನಾತ್ಮಕವಾಗಿದೆ.
    (4)    ಫ್ಲೆಡ್ ಸಂಪೂರ್ಣವಾಗಿ ರೋನಾಲ್ಡೋನೊಂದಿಗೆ ಒಮ್ಮತ ಹೊಂದಿಲ್ಲ.

ಸರಿ ಉತ್ತರ

(4) ಫ್ಲೆಡ್ ಸಂಪೂರ್ಣವಾಗಿ ರೋನಾಲ್ಡೋನೊಂದಿಗೆ ಒಮ್ಮತ ಹೊಂದಿಲ್ಲ.


74. ಒಬ್ಬ ವ್ಯಕ್ತಿಯು ಒಂದು ನಿರ್ದಿಷ್ಟ ಮೊತ್ತವನ್ನು ಬ್ಯಾಂಕಿನಲ್ಲಿ ಠೇವಣಿಯಾಗಿಟ್ಟಿದ್ದು, ಒಂದು ವರ್ಷದ ನಂತರ ಮೊತ್ತದ ದುಪ್ಪಟ್ಟು ಹಣವನ್ನು ಮರಳಿಸುವುದು. ಎರಡನೇ ವರ್ಷದ ಆರಂಭದಲ್ಲಿ ₹ 8,000 ಗಳನ್ನು ಹೊರತೆಗೆದಿದ್ದಾನೆ ಮತ್ತು ಉಳಿದ ಹಣವನ್ನು ಅದೇ ಬ್ಯಾಂಕ್ ನಲ್ಲಿ ಠೇವಣಿಯಾಗಿಡುತ್ತಾನೆ. ಪುನಃ 3ನೇ ವರ್ಷದ ಪ್ರಾರಂಭದಲ್ಲಿ ಅವನು ₹ 8000 ಗಳನ್ನು ತೆಗೆದು ಉಳಿದ ಹಣವನ್ನು ಅದೇ ಬ್ಯಾಂಕ್ ನಲ್ಲಿ ಠೇವಣಿಯಾಗಿಡುತ್ತಾನೆ. ನಾಲ್ಕನೇ ವರ್ಷದ ಆರಂಭದಲ್ಲಿ ಮೊದಲಿನಂತೆ ₹ 8000 ಗಳನ್ನು ಹಿಂತೆಗೆಯಲಾಗಿ ಬ್ಯಾಂಕ್ ನಲ್ಲಿ ಯಾವುದೇ ಹಣ ಬಾಕಿಯಾಗಿ ಉಳಿದಿಲ್ಲ. ಅವನ ಪ್ರಾರಂಭಿಕ ಠೇವಣಿ ಎಷ್ಟು?

    (1)    ₹ 6000
    (2)    ₹ 9000
    (3)    ₹ 8000
    (4)    ₹ 7000

ಸರಿ ಉತ್ತರ

(4) ₹ 7000


75. ಒಬ್ಬ ಪಕ್ಷಿ ಶೂಟರ್ ನನ್ನು ಆತನ ಚೀಲದಲ್ಲಿ ಎಷ್ಟು ಪಕ್ಷಿಗಳಿವೆ ಎಂದು ಕೇಳಲಾಗಿದೆ? ಆತನು 6 ನ್ನು ಬಿಟ್ಟು ಉಳಿದ ಎಲ್ಲವೂ ಗುಬ್ಬಿಗಳೆಂದೂ, 6 ನ್ನು ಬಿಟ್ಟು ಉಳಿದ ಎಲ್ಲವೂ ಪಾರಿವಾಳಗಳೆಂದೂ ಮತ್ತು 6 ನ್ನು ಬಿಟ್ಟು ಉಳಿದವೆಲ್ಲ ಬಾತುಗಳೆಂದು ಹೇಳುತ್ತಾನೆ. ಹಾಗಾದರೆ ಒಟ್ಟಾರೆ ಅವನ ಚೀಲದಲ್ಲಿರುವ ಪಕ್ಷಿಗಳೆಷ್ಟು?

    (1)    9
    (2)    18
    (3)    27
    (4)    19

ಸರಿ ಉತ್ತರ

(1) 9


76. 600 ಚ.ಮೀ.ಗಳ ಕ್ಷೇತ್ರದ ಅರ್ಧದಲ್ಲಿ ಒಬ್ಬ ರೈತನು ರಾಗಿಯನ್ನು ಬಿತ್ತಿದ್ದಾನೆ. ಉಳಿದ ಭಾಗದಲ್ಲಿ ⅓ ಭಾಗದಲ್ಲಿ ತೆಂಗನ್ನು ಬಿತ್ತಿದ್ದಾನೆ ಮತ್ತು ಉಳಿದ ¼ ಭಾಗದಲ್ಲಿ ಕಡಲೇಕಾಯಿಯನ್ನು ಬಿತ್ತಿದ್ದಾನೆ. ಇನ್ನುಳಿದ ಅರ್ಧ ಭಾಗದಲ್ಲಿ ಏನನ್ನೂ ಬೆಳೆಯಲಿಲ್ಲ. ಇನ್ನು ಭೂಮಿಯಲ್ಲಿ ⅓ ಭಾಗ ಉಳಿದಿದ್ದು, ಆತನು ಒಂದು ಬಾವಿಯನ್ನು ತೆಗೆದಿದ್ದು, ಉಳಿದಿದ್ದನ್ನು ಹಣ್ಣಿನ ತೋಟಕ್ಕಾಗಿ ಉಪಯೋಗಿಸಿದ್ದಾನೆ. ಒಟ್ಟು ಭೂಮಿಯಲ್ಲಿನ ಎಷ್ಟು ಭಿನ್ನಾಂಶವನ್ನು ತೋಟದ ಕೃಷಿಗಾಗಿ ಅವನು ಉಪಯೋಗಿಸಿದ್ದಾನೆ?

    (1)    `1/36`
    (2)    `1/28`
    (3)    `1/16`
    (4)    `1/12`

ಸರಿ ಉತ್ತರ

(4) `1/12`


77. ಒಂದು ನಿರ್ದಿಷ್ಟ ಸಂಖ್ಯೆಯ ಒಂಟೆಗಳು ಮತ್ತು ಅಷ್ಟೇ ಸಂಖ್ಯೆಯ ಮನುಷ್ಯರು ಎಲ್ಲಿಗೋ ಹೋಗುತ್ತಿದ್ದಾರೆ. ಅರ್ಧದಷ್ಟು ಮಾಲೀಕರು ಅವರ ಒಂಟೆಗಳ ಮೇಲಿದ್ದಾರೆ. ಉಳಿದವರು ಒಂಟೆಗಳೊಡನೆ ಮುನ್ನಡೆಸುತ್ತಾ ಸಾಗಿದ್ದಾರೆ. ನೆಲದ ಮೇಲೆ ನಡೆಯುತ್ತಿರುವ ಕಾಲುಗಳ ಸಂಖ್ಯೆಯು 70 ಆದಲ್ಲಿ ಇರುವ ಒಂಟೆಗಳ ಸಂಖ್ಯೆ ಎಷ್ಟು?

    (1)    12
    (2)    14
    (3)    16
    (4)    10

ಸರಿ ಉತ್ತರ

(2) 14


78. ಕೆಳಗೆ ನೀಡಲಾಗಿರುವ ಪೈ ನಕ್ಷೆಯು ಒಂದು ಹಳ್ಳಿಯಲ್ಲಿನ ವಿವಿಧ ಆಹಾರ ಬೆಳೆಗಳ ಹಂಚಿಕೆಯನ್ನು ನೀಡುತ್ತದೆ. ಪೈ ನಕ್ಷೆಯನ್ನು ಎಚ್ಚರಿಕೆಯಿಂದ ಗಮನಿಸಿ ಮತ್ತು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ: ಈ ಕೆಳಗಿನ ಯಾವ ಬೆಳೆಗಳ ಸಂಯೋಜನೆಯು ಒಟ್ಟು ಭೂಮಿಯಲ್ಲಿ 50%ಅನ್ನು ಆಕ್ರಮಿಸುತ್ತವೆ?

    (1)    ಗೋಧಿ , ಬಾರ್ಲಿ, ಜೋಳ
    (2)    ರಾಗಿ, ಅಕ್ಕಿ, ಇತರ
    (3)    ಅಕ್ಕಿ, ಗೋಧಿ, ಮುಸುಕಿನ ಜೋಳ
    (4)    ಬಾರ್ಲಿ, ಜೋಳ, ಬಾಜ್ರಾ, ಮುಸುಕಿನ ಜೋಳ

ಸರಿ ಉತ್ತರ

(3) ಅಕ್ಕಿ, ಗೋಧಿ, ಮುಸುಕಿನ ಜೋಳ


79. ಮೂರು ಅನುಕ್ರಮವಾದ ಧನಾತ್ಮಕ ಪೂರ್ಣಾಂಕಗಳು ಅವುಗಳ ಮೊತ್ತದ ವರ್ಗಗಳು ಅವುಗಳ ವರ್ಗಗಳ ಮೊತ್ತವನ್ನು 214 ರಿಂದ ಮೀರುತ್ತವೆ. ಆ 3 ಪೂರ್ಣಾಂಕಗಳು ಯಾವುವು?

    (1)    6, 7, 8
    (2)    4, 5, 6
    (3)    7, 8, 9
    (4)    5, 6, 7

ಸರಿ ಉತ್ತರ

(4) 5, 6, 7


80. ಒಂದು ರೈಲು ಗಾಡಿಯು ಪ್ರಯಾಣಿಕರಿಂದ ತುಂಬಿದ್ದು ಹೊರಟಿದೆ. ಮೊದಲನೇ ನಿಲ್ದಾಣದಲ್ಲಿ ಅದು ಪ್ರಯಾಣಿಕರಲ್ಲಿ ⅓ ಭಾಗ ಜನ ಇಳಿಸುತ್ತದೆ. ಮತ್ತು ಹೆಚ್ಚಿಗೆ 280 ಜನರನ್ನು ಹತ್ತಿಸಿಕೊಳ್ಳುತ್ತದೆ. 2ನೇ ನಿಲ್ದಾಣದಲ್ಲಿ ಹೊಸ ಮೊತ್ತದಲ್ಲಿನ ½ ದಷ್ಟು ಜನರನ್ನು ಇಳಿಸುತ್ತದೆ ಮತ್ತು 12 ಜನರನ್ನು ಹೆಚ್ಚಿಗೆ ತೆಗೆದುಕೊಳ್ಳುತ್ತದೆ. ಮೂರನೇ ನಿಲ್ದಾಣವನ್ನು ತಲುಪುತ್ತಿದ್ದಂತೆ ಅದರಲ್ಲಿ 248 ಜನ ಪ್ರಯಾಣಿಕರಿದ್ದಾರೆ. ಹಾಗಿದ್ದಲ್ಲಿ ಪ್ರಾರಂಭದಲ್ಲಿದ್ದ ಪ್ರಯಾಣಿಕರ ಸಂಖ್ಯೆಯನ್ನು ಕಂಡುಹಿಡಿಯಿರಿ.

    (1)    300
    (2)    398
    (3)    288
    (4)    279

ಸರಿ ಉತ್ತರ

(3) 288


81. ಕೆಳಗಿನ ಹೇಳಿಕೆಯನ್ನು ಓದಿ ಮತ್ತು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಿ.
‘‘ಶಾಮನಿಗೆ ಸಮಯ ದೊರೆತಲ್ಲಿ, ಆತನು ಮನೆಕೆಲಸವನ್ನು ಮಾಡಲು ಪ್ರಾರಂಭಿಸುತ್ತಾನೆ’’.

    (1)    ಶಾಮನು ಮನೆಕೆಲಸವನ್ನು ಮಾಡಲಿಲ್ಲವೆಂಬುದರ ಅರ್ಥ ಆತನಿಗೆ ಸಮಯ ಸಿಗಲಿಲ್ಲ.
    (2)    ಶಾಮನಿಗೆ ಸಮಯವಿದೆ ಆದರೆ ಅವನು ಮನೆ ಕೆಲಸವನ್ನು ಮಾಡುವುದಿಲ್ಲ.
    (3)    ಶಾಮನು ಮನೆ ಕೆಲಸವನ್ನು ಮಾಡಲು ಪ್ರಾರಂಭಿಸಿದ್ದಾನೆಂಬುದರ ಅರ್ಥ ಅವನಿಗೆ ಸಮಯವಿದೆ .
    (4)    ಶ್ಯಾಮನಿಗೆ ಸಮಯ ಸಿಗಲಿಲ್ಲ ಆದರೂ ಮನೆಕೆಲಸವನ್ನು ಮಾಡಲು ಪ್ರಾರಂಭಿಸಿದ್ದಾನೆ.

ಸರಿ ಉತ್ತರ

(1) ಶಾಮನು ಮನೆಕೆಲಸವನ್ನು ಮಾಡಲಿಲ್ಲವೆಂಬುದರ ಅರ್ಥ ಆತನಿಗೆ ಸಮಯ ಸಿಗಲಿಲ್ಲ.


82. A, B, C, D ಮತ್ತು E ಎಂಬ 5 ಜನರಿರುವ ಒಂದು ಗುಂಪಿದೆ.
    A.    ಅವುಗಳಲ್ಲಿ ಒಬ್ಬರು ತೋಟಗಾರಿಕೆಯವರು, ಒಬ್ಬರು ವೈದ್ಯರು, ಒಬ್ಬರು ಪತ್ರಿಕೋದ್ಯಮಿ, ಒಬ್ಬರು ಕೈಗಾರಿಕೋದ್ಯಮಿ ಮತ್ತು ಒಬ್ಬರು ವಕೀಲರು.
    B.    ಅವರಲ್ಲಿ ಮೂವರು A, C ಮತ್ತು ವಕೀಲರು ಕಾಫಿಗಿಂತಲೂ, ಚಹಾವನ್ನು ಇಚ್ಛಿಸುತ್ತಾರೆ.
    C.    ಅವರಲ್ಲಿ ಇಬ್ಬರು B ಮತ್ತು ಪತ್ರಿಕೋದ್ಯಮಿಯು ಚಹಾಗಿಂತಲೂ ಕಾಫಿಯನ್ನು ಇಚ್ಛಿಸುತ್ತಾರೆ.
    D.    ಕೈಗಾರಿಕೋದ್ಯಮಿ ಮತ್ತು D ಮತ್ತು Aರು ಒಬ್ಬರಿಗೊಬ್ಬರು ಸ್ನೇಹಿತರು. ಆದರೆ ಅವರಲ್ಲಿ ಇಬ್ಬರು ಚಹಾಗಿಂತಲೂ ಕಾಫಿಯನ್ನು ಇಚ್ಛಿಸುತ್ತಾರೆ.
    E.    ವೈದ್ಯರು, ತೋಟಗಾರಿಕೆಯವರ ಸೋದರಿ ಹಾಗೂ ಕೈಗಾರಿಕೋದ್ಯಮಿಯ ಸ್ನೇಹಿತರು.
ಈ ಕೆಳಗಿನವರಲ್ಲಿ ಅವನ/ಅವಳ ವೃತ್ತಿ ಮತ್ತು ಆದ್ಯತೆಗಳನ್ನುಳ್ಳ ವ್ಯಕ್ತಿಗಳ ಪರಿಪೂರ್ಣ ಗುಂಪು ಯಾವುದು?

    (1)    (A, ತೋಟಗಾರಿಕೆಯವರು, ಚಹಾ)
    (2)    (A, ವೈದ್ಯರು, ಚಹಾ)
    (3)    (B, ವಕೀಲರು, ಕಾಫಿ)
    (4)    (E, ಕೈಗಾರಿಕೋದ್ಯಮಿ, ಚಹಾ)

ಸರಿ ಉತ್ತರ

(1) A ತೋಟಗಾರಿಕೆಯವರು, ಚಹಾ) Or (2) (A, ವೈದ್ಯರು, ಚಹಾ)


83. ಕುಮಾರಿ ಕೋಮಲ್ ಪೂರ್ವಕ್ಕೆ 4ಕಿ.ಮೀ. ನಡೆಯುತ್ತಾರೆ. ಅಲ್ಲಿಂದ ದಕ್ಷಿಣಕ್ಕೆ 7ಕಿ.ಮೀ. ನಡೆಯುತ್ತಾರೆ. ನಂತರ ಪೂರ್ವಕ್ಕೆ 8ಕಿ.ಮೀ. ನಡೆಯುತ್ತಾರೆ ಮತ್ತು ಪುನಃ ಉತ್ತರಕ್ಕೆ ತಿರುಗಿ 12ಕಿ.ಮೀ.ಗಳ ದೂರವನ್ನು ನಡೆಯುತ್ತಾರೆ. ಈಗ ಅವರು ಪ್ರಾರಂಭಿಸಿದ ಬಿಂದುವಿನಿಂದ ಎಷ್ಟು ದೂರದಲ್ಲಿದ್ದಾರೆ?

    (1)    13ಕಿ.ಮೀ.
    (2)    17ಕಿ.ಮೀ.
    (3)    9ಕಿ.ಮೀ.
    (4)    10 ಕಿ.ಮೀ.

ಸರಿ ಉತ್ತರ

(1) 13ಕಿ.ಮೀ.


84. ವಿಭಿನ್ನ ತೂಕಗಳನ್ನು ಹೊಂದಿದ A, B, C, D ಮತ್ತು E ಎಂಬ 5 ಚಿನ್ನದ ಉಂಗುರಗಳಿವೆ.

    A.    A ಉಂಗುರದ ತೂಕವು B ಉಂಗುರದ ತೂಕಕ್ಕಿಂತಲೂ ಎರಡರಷ್ಟಿದೆ.
    B.    B ಉಂಗುರದ ತೂಕವು C ಉಂಗುರದ ತೂಕಕ್ಕಿಂತಲೂ ನಾಲ್ಕರಷ್ಟಿದೆ.
    C.    C ಉಂಗುರದ ತೂಕವು D ಉಂಗುರದ ತೂಕದ ಅರ್ಧದಷ್ಟಿದೆ.
    D.    D ಉಂಗುರದ ತೂಕವು E ಉಂಗುರದ ತೂಕದ ⅓ ರಷ್ಟಿದೆ.
ಹಾಗಾದರೆ ಉಂಗುರದ ತೂಕಕ್ಕನುಗುಣವಾದ ಇಳಿಕೆಯ. ಕ್ರಮವನ್ನು ಕೆಳಗಿನ ಯಾವುದು ಪ್ರತಿನಿ ಸುತ್ತದೆ?

    (1)    A, E, D, B, C
    (2)    A, E, B, D, C
    (3)    A, B, E,D, C
    (4)    A, E, D, C, B

ಸರಿ ಉತ್ತರ

(2) A, E, B, D, C


85. ಇತ್ತೀಚೆಗೆ ಮೆಟ್ರೋ ಲಿಂಕ್ ಸ್ಥಾಪಿಸಲು ಭಾರತದ ಮೊದಲ ನೀರಿನಡಿಯ ರೈಲು ಸುರಂಗ ಮಾರ್ಗದ ಕೊರೆಯುವಿಕೆಯ ಮುಕ್ತಾಯವನ್ನು ಯಾವ ನದಿಯ ಅಡಿಯಲ್ಲಿ ಕೈಗೊಳ್ಳಲಾಯಿತು?

    (1)    ಕಾವೇರಿ ನದಿ
    (2)    ಗೋದಾವರಿ ನದಿ
    (3)    ಹೂಗ್ಲಿ ನದಿ
    (4)    ಕೃಷ್ಣಾ ನದಿ

ಸರಿ ಉತ್ತರ

(3) ಹೂಗ್ಲಿ ನದಿ


86. ಒಬ್ಬ ಹುಡುಗನು 17ಮೀ.ಗಳ ಎತ್ತರದ ಕಂಬವೊಂದನ್ನು ಹತ್ತುತ್ತಾನೆ. ಅವನು ಹತ್ತಲು ಆರಂಭಿಸಿದಾಗ, ಅವನು ಪ್ರತಿ ನಿಮಿಷಕ್ಕೆ 5ಮೀ.ನಂತೆ ಹತ್ತುತ್ತಾನೆ ಮತ್ತು ಅವನು ಪುನಃ ಹತ್ತಲು ಪ್ರಾರಂಭಿಸುವ ಮುಂಚೆ, ಮುಂದಿನ ನಿಮಿಷದಲ್ಲಿ 2 ಮೀ.ನಷ್ಟು ಹಿಂದಕ್ಕೆ ಜಾರುತ್ತಾನೆ. ತುದಿಯನ್ನು ಒಮ್ಮೆ ತಲುಪಿದನೆಂದರೆ ಅವನು ಹಿಂದಕ್ಕೆ ಜಾರುವುದಿಲ್ಲ. ಆತನು 8.15amಗೆ ಹತ್ತಲಾರಂಭಿಸಿದ್ದು, ಅವನು ತುದಿಯನ್ನು ಎಷ್ಟು ಹೊತ್ತಿಗೆ ತಲುಪಿದ್ದಾನೆ?

    (1)    8:25 am
    (2)    8:35 am
    (3)    8:24 am
    (4)    8:23 am

ಸರಿ ಉತ್ತರ

(3) 8:24 am


87. ರಾಜು ಪ್ರತಿನಿತ್ಯವೂ ಬೆಳಿಗ್ಗೆ 7 ರಿಂದ 8 ಘಂಟೆಯ ನಡುವೆ ಮನೆಗೆ ಹಾಲನ್ನು ತರುತ್ತಾನೆ. ಅವನು ಮನೆಯನ್ನು ಬಿಟ್ಟು ಮತ್ತು ಹಿಂತಿರುಗುವುದು. ಗಡಿಯಾರದ ಗಂಟೆಯ ಮುಳ್ಳು ಮತ್ತು ನಿಮಿಷದ ಮುಳ್ಳಿನ ನಡುವಿನ ಕೋನವು 900 ಇದ್ದಾಗ, ಹಾಗಾದರೆ ಆತನು ಹೊರಡುವ ಮತ್ತು ಹಿಂತಿರುಗುವ ಸಮಯವು ಕ್ರಮವಾಗಿ

    (1)    7 ಘಂ.20`1/2` ನಿ; 7hr 50`1/2` ನಿ
    (2)    7 ಘಂ.21`9/11` ನಿ; 7hr 54`6/11` ನಿ
    (3)    7 ಘಂ.20 ನಿ; 7hr 50 ನಿ
    (4)    7 ಘಂ.21`1/2` ನಿ; 7hr 54`1/3` ನಿ

ಸರಿ ಉತ್ತರ

(2) 7 ಘಂ.21`9/11` ನಿ; 7hr 54`6/11` ನಿ


88. ಒಂದು ದೋಣಿಯು 24ಕಿ.ಮೀ.ಗಳ ಮೇಲು ಪ್ರವಾಹ ಮತ್ತು 36 ಕಿ.ಮೀ.ಗಳ ಕೆಳ ಪ್ರವಾಹವನ್ನು 6 ಘಂಟೆಗಳಲ್ಲಿ ಮುಗಿಸುತ್ತದೆ. 36ಕಿ.ಮೀ.ಗಳ ಮೇಲು ಪ್ರವಾಹವನ್ನು ಮತ್ತು 24ಕಿ.ಮೀ.ಗಳ ಕೆಳ ಪ್ರವಾಹವನ್ನು 6`1/2` ಘಂ.ಗಳಲ್ಲಿ ಮುಗಿಸಬೇಕಾಗಿದೆ. ನದಿಯ ಪ್ರಸ್ತುತ ವೇಗವನ್ನು ಕಂಡುಹಿಡಿಯಿರಿ.

    (1)    2 kmph
    (2)    2.5 kmph
    (3)    3 kmph
    (4)    3.5 kmph

ಸರಿ ಉತ್ತರ

(1) 2 kmph


89. ಕೆಳಗಿನ ನಕ್ಷೆಯಲ್ಲಿ, ತ್ರಿಭುಜವು ವಾಲಿಬಾಲ್ ಆಟಗಾರರನ್ನು ಪ್ರತಿನಿಧಿಸುವುದು. ಚೌಕವು ಉದ್ದನೆಯ ವ್ಯಕ್ತಿಗಳನ್ನು ಪ್ರತಿನಿಧಿಸುವುದು ಮತ್ತು ವೃತ್ತವು ಬಲಶಾಲಿ ವ್ಯಕ್ತಿಗಳನ್ನು ಪ್ರತಿನಿಧಿಸುವುದು. ಯಾವ ಪ್ರದೇಶವು ಉದ್ದದ ವಾಲಿಬಾಲ್ ಆಟಗಾರರನ್ನು ಪ್ರತಿನಿಧಿಸುತ್ತದೆ?

    (1)    5
    (2)    2
    (3)    4
    (4)    1

ಸರಿ ಉತ್ತರ

(2) 2


90. ವಿದೇಶದಲ್ಲಿ ಅಧ್ಯಯನ ಮಾಡಲು ಯೋಚಿಸುತ್ತಿರುವ ವಿದ್ಯಾರ್ಥಿಗಳಿಗೆ ಡಾಕ್ಯುಮೆಂಟ್ ಪರಿಶೀಲನೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆನ್ ಲೈನ್ ಡಾಕ್ಯುಮೆಂಟ್ ಪರಿಶೀಲನಾ ಪೋರ್ಟಲ್ ಅನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಾರಂಭಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಆ ಪೋರ್ಟಲ್ ನ ಹೆಸರೇನು?

    (1)    ಇ-ಸುವಿಧಾ
    (2)    ಇ-ಸಿಂಧು
    (3)    ಇ-ಸನಾದ್
    (4)    ಇ-ಪ್ರಮಾಣ್

ಸರಿ ಉತ್ತರ

(3) ಇ-ಸನಾದ್


91. ವಿಶ್ವದ ಮೊದಲ ಕಾರ್ಯಾಚರಣೆಯ ರೋಬೋ ಪೊಲೀಸ್ ಅಧಿಕಾರಿ ‘‘ರೋಬೋಕಾಪ್’’ ಇತ್ತೀಚೆಗೆ ಯಾವ ದೇಶದ ಪೊಲೀಸ್ ಪಡೆಯಲ್ಲಿ ಸೇರ್ಪಡೆಗೊಂಡರು?

    (1)    ಜಪಾನ್
    (2)    ಅಮೇರಿಕಾ
    (3)    ಯು.ಎ.ಇ.
    (4)    ಇಸ್ರೇಲ್

ಸರಿ ಉತ್ತರ

(3) ಯು.ಎ.ಇ.


92. ತಮ್ಮ ಪ್ರತಿಸ್ಪರ್ಧಿಯನ್ನು ಭಾರೀ ಮತಗಳ ಅಂತರದಿಂದ ಸೋಲಿಸುವುದರ ಮೂಲಕ ಇತ್ತೀಚೆಗೆ ಇರಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದವರು ಯಾರು?

    (1)    ಇಶಾಕ್ ಜಹಾಂಗಿರಿ
    (2)    ಇಬ್ರಾಹಿಂ ರಾಯ್ಸಿ
    (3)    ಮೊಸ್ತಾಫಾ ಹಶಮಿ
    (4)    ಹಸನ್ ರೌಹಾನಿ

ಸರಿ ಉತ್ತರ

(4) ಹಸನ್ ರೌಹಾನಿ


93. ಪಟ್ಟಿ Iರಲ್ಲಿನ ನಗರಗಳನ್ನು ಪಟ್ಟಿ IIರಲ್ಲಿನ ಅವು ಉಂಟಾಗುವ ಭೂಕಂಪ ವಲಯಗಳೊಂದಿಗೆ ಹೊಂದಿಸಿ:

 

ಪಟ್ಟಿ I (ನಗರಗಳು)

 

ಪಟ್ಟಿII (ಭೂಕಂಪ ವಲಯಗಳು)

A.

ಕೋಲ್ಕತಾ

I.

ವಲಯ V

B.

ಗುವಾಹಟಿ

II.

ವಲಯ IV

C.

ದೆಹಲಿ

III.

ವಲಯ III

D.

ಚೆನ್ನೈ

IV.

ವಲಯ II

 

 

V.

ವಲಯ I

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 

A

B

C

D

(1)

I

II

V

IV

(2)

III

I

II

IV

(3)

II

I

V

IV

(4)

I

III

IV

V

ಸರಿ ಉತ್ತರ

(2) iii i ii iv


94. 2017ರ ಮೇ 21ರಂದು ಹಾಲಿ ಚಾಂಪಿಯನ್ ಗಳನ್ನು ಸೋಲಿಸುವ ಮೂಲಕ ಭಾರತದ ಫೆಡರೇಷನ್ ಕಪ್ ಫುಟ್ಬಾಲ್ ಪಂದ್ಯಾವಳಿಯ 36ನೇ ಆವೃತ್ತಿಯನ್ನು ಯಾವ ಫುಟ್ಬಾಲ್ ತಂಡವು ಗೆದ್ದಿದೆ?

    (1)    ಮೋಹನ್ ಬಗಾನ್
    (2)    ಬೆಂಗಳೂರು F.C.
    (3)    ಚರ್ಚಿಲ್ ಸೋದರರು
    (4)    ಶಿಲ್ಲಾಂಗ್ ಲಾಜಾಂಗ್ F.C.

ಸರಿ ಉತ್ತರ

(2) ಬೆಂಗಳೂರು F.C.


95. ಶಾಂತಿ, ನಿಶ್ಯಸ್ತ್ರೀಕರಣ ಮತ್ತು ಅಭಿವೃದ್ಧಿಗಾಗಿ ಇತ್ತೀಚೆಗೆ 2015ರ ಇಂದಿರಾಗಾಂಧಿ ಪ್ರಶಸ್ತಿಯನ್ನು ಗೆದ್ದ ಸಂಸ್ಥೆ ಯಾವುದು?

    (1)    ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನ್ (UNHCR)
    (2)    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)
    (3)    ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ (ICJ)
    (4)    ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO)

ಸರಿ ಉತ್ತರ

(1) ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನ್ (UNHCR)


96. 1990ರಲ್ಲಿ ಸದ್ದಾಂ ಹುಸೇನ್ ಅವರ ಇರಾಕ್ ಪಡೆಗಳು ಕುವೈತ್ ಮೇಲೆ ಆಕ್ರಮಣ ಮಾಡಿದ ನಂತರ ಎಮಿರೇಟ್ ನ 1.7 ಲಕ್ಷ ಭಾರತೀಯ ಜನಾಂಗದವರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಲ್ಲಿ ಭಾರತೀಯ ಸಂಜಾತ ಮತ್ತು ಕುವೈತ್ ನ ನಿವಾಸಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಇತ್ತೀಚೆಗೆ 20ನೇ ಮೇ 2017ರಂದು ನಿಧನರಾದರು. ಅವರ ಹೆಸರೇನು?

    (1)    ಮಥೂನ್ನಿ ಮಥ್ಯುಜ್
    (2)    ರೆಸೆಲ್ ಡೆಮಾಲ್ಲೊ
    (3)    ರಂಜಿತ್ ಕಟ್ಯಾಲ್
    (4)    ಆಂಟಿನಿ ಗೊನ್ಸಲ್ವಸ್

ಸರಿ ಉತ್ತರ

(1) ಮಥೂನ್ನಿ ಮಥ್ಯುಜ್


97. ಜನಾಂಗೀಯ ಸಮುದಾಯವನ್ನು (ಪಟ್ಟಿ I) ಅವರಿರುವ ಭೂಖಂಡದೊಂದಿಗೆ (ಪಟ್ಟಿ II) ಹೊಂದಿಸಿ:

 

ಪಟ್ಟಿ I (ಜನಾಂಗೀಯ ಸಮುದಾಯ)

 

ಪಟ್ಟಿII (ಭೂಖಂಡ)

A.

ಮಸಾಯ್

I.

ಉತ್ತರ ಅಮೆರಿಕ

B.

ಬರ್ಬರ್ಸ್

II.

ಪೂರ್ವ ಆಫ್ರಿಕಾ

C.

ರೆಡ್ ಇಂಡಿಯನ್ಸ್

III.

ಏಷ್ಯಾ

D.

ಕಿರ್ ಗಿಜ್

IV.

ನಾರ್ತ್-ವೆಸ್ಟ್ ಆಫ್ರಿಕಾ

 

 

V.

ಯೂರೋಪ್

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 

A

B

C

D

(1)

I

II

V

IV

(2)

II

I

IV

III

(3)

II

IV

I

III

(4)

I

II

IV

V

ಸರಿ ಉತ್ತರ

(3) II IV I III


98. ಭಾರತೀಯ ಪರ್ವತಾರೋಹಿ ಆನ್ಷು ಜಮೆನ್ಪಾ ಇವರು 5 ದಿನಗಳಲ್ಲಿ ಎರಡು ಬಾರಿ ವೌಂಟ್ ಎವರೆಸ್ಟ್ಅನ್ನು ಹತ್ತಿ ವಿಶ್ವದಾಖಲೆ ನಿರ್ಮಿಸಿದ ವಿಶ್ವದ ಮೊದಲ ಮಹಿಳೆಯಾಗಿದ್ದಾರೆ. ಅವರು ಭಾರತದ ಯಾವ ರಾಜ್ಯದಿಂದ ಬಂದವರು?

    (1)    ಮಿಜೋರಾಂ
    (2)    ಅಸ್ಸಾಂ
    (3)    ಮಣಿಪುರ
    (4)    ಅರುಣಾಚಲ ಪ್ರದೇಶ

ಸರಿ ಉತ್ತರ

(4) ಅರುಣಾಚಲ ಪ್ರದೇಶ


99. ಪರ್ವತ ಶಿಖರಗಳನ್ನು (ಪಟ್ಟಿ I) ಬೆಟ್ಟ ವ್ಯಾಪ್ತಿಯೊಂದಿಗೆ (ಪಟ್ಟಿ II) ಹೊಂದಿಸಿ:

 

ಪಟ್ಟಿ I (ಪರ್ವತ ಶಿಖರಗಳು)

 

ಪಟ್ಟಿII (ಹಿಲ್/ರೇಂಜ್/ಬೆಟ್ಟ ವ್ಯಾಪ್ತಿ)

A.

ದೊಡ್ಡ ಬೆಟ್ಟ

I.

ಹಿಮಾಲಯ ಪರ್ವತಗಳು

B.

ನಂದಾ ದೇವಿ

II.

ನೀಲಗಿರಿ ಬೆಟ್ಟಗಳು

C.

ಅಮರ ಕಂಟಕ್

III.

ಅರಾವಳಿ ಶ್ರೇಣಿ

D.

ಗುರು ಶಿಖರ್

IV.

ಮೈಕಲ್ ಶ್ರೇಣಿ

 

 

V.

ವಿಂಧ್ಯಾಚಲ್

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 

A

B

C

D

(1)

I

II

V

IV

(2)

II

I

IV

V

(3)

II

I

V

III

(4)

I

II

IV

V

ಸರಿ ಉತ್ತರ

(3) II I V III


100. ನೈಸರ್ಗಿಕ ಅನಿಲದ ಕುರಿತು ಈ ಕೆಳಗಿನ ಯಾವ ಹೇಳಿಕೆಯು ನಿಜವಾಗಿದೆ?
    A.    ನೈಸರ್ಗಿಕ ಅನಿಲವು ಸ್ವಚ್ಛವಾದ ಪಳೆಯುಳಿಕೆ ಇಂಧನವಾಗಿದೆ.
    B.    ಸೌದಿ ಅರೇಬಿಯಾ ಅತಿ ಹೆಚ್ಚು ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಹೊಂದಿದೆ.
    C.    ನೈಸರ್ಗಿಕ ಅನಿಲದಲ್ಲಿ ಮಿಥೇನ್ ಪ್ರಮುಖ ಅಂಶವಾಗಿದೆ.
ನೈಸರ್ಗಿಕ ಅನಿಲವು ಪುರಾತನ ಯುಗದ ಸಣ್ಣ ಸಸ್ಯಗಳು ಮತ್ತು ಪ್ರಾಣಿಗಳ ಉತ್ಪನ್ನವಾಗಿದೆ.
ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತಗಳನ್ನಾರಿಸಿ:

    (1)    A ಮತ್ತು D
    (2)    B ಮತ್ತು C
    (3)    A, B ಮತ್ತು C
    (4)    A, C ಮತ್ತು D

ಸರಿ ಉತ್ತರ

(4) A, C ಮತ್ತು D


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

Post a Comment

0 Comments

BOTTOM ADS