KSP-APC (CAR/DAR) 20-11-2016 question paper

ಪೊಲೀಸ್ ಕಾನ್‌ಸ್ಟೆಬಲ್ (ಸಿಎಆರ್-ಡಿಎಆರ್) ಪ್ರಶ್ನೆಪತ್ರಿಕೆ

 

1. ಭೌಗೋಳಿಕವಾಗಿ ಅತೀ ಹೆಚ್ಚು ವಿಸ್ತಾರವಾಗಿರುವ ಭಾರತದ ರಾಜ್ಯ

(ಎ) ಮಹಾರಾಷ್ಟ್ರ
(ಬಿ) ಮಧ್ಯಪ್ರದೇಶ
(ಸಿ) ಉತ್ತರಪ್ರದೇಶ
(ಡಿ) ರಾಜಸ್ಥಾನ

ಸರಿ ಉತ್ತರ

(ಡಿ) ರಾಜಸ್ಥಾನ


2. ಭಾರತದಲ್ಲಿ ಹತ್ತಿ ಬೆಳೆಯಲು ಉತ್ತಮವಾದ ಮಣ್ಣು ಯಾವುದು?

(ಎ) ಕಪ್ಪು ಮಣ್ಣು
(ಬಿ) ಕೆಂಪು ಮಣ್ಣು
(ಸಿ) ಜೇಡಿ ಮಣ್ಣು
(ಡಿ) ಮರಳು ಮಿಶ್ರಿತ ಮಣ್ಣು

ಸರಿ ಉತ್ತರ

(ಎ) ಕಪ್ಪು ಮಣ್ಣು


3. ರಂಗನತಿಟ್ಟು ಪಕ್ಷಿಧಾಮ ಇರುವ ಜಿಲ್ಲೆ

(ಎ) ಮೈಸೂರು
(ಬಿ) ಮಂಡ್ಯ
(ಸಿ) ಹಾಸನ
(ಡಿ) ರಾಮನಗರ

ಸರಿ ಉತ್ತರ

(ಬಿ) ಮಂಡ್ಯ


4. ಭಾರತದಲ್ಲಿರುವ ಅತೀ ಪ್ರಾಚೀನ ಪರ್ವತ ಶ್ರೇಣಿಗಳೆಂದರೆ

(ಎ) ಅರಾವಳಿ
(ಬಿ) ವಿಂಧ್ಯಾ
(ಸಿ) ಸಾತ್ಪುರಾ
(ಡಿ) ನೀಲಗಿರಿ

ಸರಿ ಉತ್ತರ

(ಎ) ಅರಾವಳಿ


5. ಹೇಮಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಗೊರೂರು ಅಣೆಕಟ್ಟು ಇರುವ ಜಿಲ್ಲೆ

(ಎ) ಮೈಸೂರು
(ಬಿ) ಹಾಸನ
(ಸಿ) ಮಂಡ್ಯ
(ಡಿ) ಕೊಡಗು

ಸರಿ ಉತ್ತರ

(ಬಿ) ಹಾಸನ


6. ರೇಡಿಯೋ ಕಾರ್ಬನ್ ನ ಕಾಲನಿರ್ಣಯ ತಂತ್ರಜ್ಞಾನವು ಈ ಕೆಳಗಿನ ಒಂದರ ಕಾಲವನ್ನು (ವಯಸ್ಸು) ನಿರ್ಣಯಿಸಲು ಬಳಸುತ್ತಾರೆ

(ಎ) ಬಂಡೆಗಳು
(ಬಿ) ಸ್ಮಾರಕಗಳು
(ಸಿ) ಮಣ್ಣು
(ಡಿ) ಪಳೆಯುಳಿಕೆಗಳು

ಸರಿ ಉತ್ತರ

(ಡಿ) ಪಳೆಯುಳಿಕೆಗಳು


7. ಕಾಫಿ ಮತ್ತು ಟೀ ಮುಖ್ಯವಾಗಿ ಹೊಂದಿರುವುದು

(ಎ) ನಿಕೋಟಿನ್
(ಬಿ) ಕ್ಲೋರೋಫಿಲ್
(ಸಿ) ಕೆಫೀನ್
(ಡಿ) ಆಸ್ಪಿರಿನ್

ಸರಿ ಉತ್ತರ

(ಸಿ) ಕೆಫೀನ್


8. ನಕ್ಷತ್ರಗಳು ಪೂರ್ವದಿಂದ ಪಶ್ಚಿಮಕ್ಕೆ ಚಲಿಸುವಂತೆ ಕಾಣುವುದೇಕೆಂದರೆ

(ಎ) ಎಲ್ಲಾ ನಕ್ಷತ್ರಗಳು ಪೂರ್ವದಿಂದ ಪಶ್ಚಿಮಕ್ಕೆ ಚಲಿಸುವುದು
(ಬಿ) ಭೂಮಿಯು ಪಶ್ಚಿಮದಿಂದ ಪೂರ್ವಕ್ಕೆ ತಿರುಗುವುದು
(ಸಿ) ಭೂಮಿಯು ಪೂರ್ವದಿಂದ ಪಶ್ಚಿಮಕ್ಕೆ ತಿರುಗುವುದು
(ಡಿ) ನಕ್ಷತ್ರಗಳ ಹಿನ್ನೆಲೆಯು ಪಶ್ಚಿಮದಿಂದ ಪೂರ್ವಕ್ಕೆ ಚಲಿಸುವುದು

ಸರಿ ಉತ್ತರ

(ಬಿ) ಭೂಮಿಯು ಪಶ್ಚಿಮದಿಂದ ಪೂರ್ವಕ್ಕೆ ತಿರುಗುವುದು


9. ವಾಷಿಂಗ್ ಸೋಡಾ ಇದರ ಸಾಮಾನ್ಯ ಹೆಸರು

(ಎ) ಸೋಡಿಯಂ ಕಾರ್ಬೋನೇಟ್
(ಬಿ) ಸೋಡಿಯಂ ಬೈಕಾರ್ಬೋನೇಟ್
(ಸಿ) ಕ್ಯಾಲ್ಸಿಯಂ ಕಾರ್ಬೋನೇಟ್
(ಡಿ) ಕ್ಯಾಲ್ಸಿಯಂ ಬೈಕಾರ್ಬೋನೇಟ್

ಸರಿ ಉತ್ತರ

(ಎ) ಸೋಡಿಯಂ ಕಾರ್ಬೋನೇಟ್


10. ಒಂದು ಅಣುವಿನ ಕೇಂದ್ರವು ಯಾವ ಅಣುಗಳನ್ನು ಒಳಗೊಂಡಿದೆ?

(ಎ) ಎಲೆಕ್ಟ್ರಾನ್ ಮತ್ತು ನ್ಯೂಟ್ರಾನ್
(ಬಿ) ಎಲೆಕ್ಟ್ರಾನ್ ಮತ್ತು ಪ್ರೋಟಾನ್
(ಸಿ) ಪ್ರೋಟಾನ್ ಹಾಗೂ ನ್ಯೂಟ್ರಾನ್
(ಡಿ) ಮೇಲಿನ ಎಲ್ಲವೂ

ಸರಿ ಉತ್ತರ

(ಸಿ) ಪ್ರೋಟಾನ್ ಹಾಗೂ ನ್ಯೂಟ್ರಾನ್


11. ಶ್ರೀ ಕೃಷ್ಣದೇವರಾಯ ವಿಜಯನಗರದ ಯಾವ ರಾಜವಂಶಕ್ಕೆ ಸೇರಿದವರು?

(ಎ) ಸಂಗಮ
(ಬಿ) ಸಾಳ್ವ
(ಸಿ) ತುಳುವ
(ಡಿ) ಅರವೀಡು

ಸರಿ ಉತ್ತರ

(ಸಿ) ತುಳುವ


12. 1953ರ ರಾಜ್ಯ ಪುನರ್ವಿಂಗಡಣಾ ಆಯೋಗದ ಅಧ್ಯಕ್ಷರಾಗಿ ನೇಮಕವಾದವರು

(ಎ) ಫಝಲ್ ಅಲಿ
(ಬಿ) ಕೇಲ್ಜರ್
(ಸಿ) ಝಾಕೀರ್ ಹುಸೇನ್
(ಡಿ) ಮಂಡಲ್

ಸರಿ ಉತ್ತರ

(ಎ) ಫಝಲ್ ಅಲಿ


13. ಕೆಳಗಿನ ಸ್ವಾತಂತ್ರ್ಯ ಹೋರಾಟದ ಚಳುವಳಿಯನ್ನು ಕಾಲಾನುಕ್ರಮವಾಗಿ ಜೋಡಿಸಿರಿ.
1. ಅಸಹಕಾರ ಚಳುವಳಿ
2. ಕ್ವಿಟ್ ಇಂಡಿಯಾ ಚಳುವಳಿ
3. ಕಾನೂನುಭಂಗ ಚಳುವಳಿ

(ಎ) 1, 2, 3
(ಬಿ) 3, 1, 2
(ಸಿ) 1, 3, 2
(ಡಿ) 3, 2, 1

ಸರಿ ಉತ್ತರ

(ಸಿ) 1, 3, 2


14. ಕೆಳಗಿನ ವ್ಯಕ್ತಿಗಳಲ್ಲಿ ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಗೆ ಸಂಬಂಧಿಸಿದವರು
1. ಚಂದ್ರಶೇಖರ್ ಆಜಾದ್
2. ಭಗತ್ ಸಿಂಗ್
3. ಸುಖದೇವ್
4. ರಾಜ್ ಗುರು

(ಎ) 1 ಮತ್ತು 2
(ಬಿ) 1, 2, 3
(ಸಿ) 2 ಮಾತ್ರ
(ಡಿ) 1, 2, 3 ಮತ್ತು 4

ಸರಿ ಉತ್ತರ

(ಡಿ) 1, 2, 3 ಮತ್ತು 4


15. ‘ಷೇರ್-ಎ-ಪಂಜಾಬ್’ ಎಂದು ಹೆಸರುವಾಸಿಯಾದವರು

(ಎ) ಲಾಲಾ ಲಜಪತ್ ರಾಯ್
(ಬಿ) ಭಗತ್ ಸಿಂಗ್
(ಸಿ) ಸುಖದೇವ್
(ಡಿ) ರಾಮ್ ಪ್ರಸಾದ್ ಬಿಸ್ಮಾಯಿಲ್

ಸರಿ ಉತ್ತರ

(ಎ) ಲಾಲಾ ಲಜಪತ್ ರಾಯ್


16. ಮರೀಚಿಕೆ (ಬಿಸಿಲ್ಗುದುರೆ) ಕಾಣಿಸಿಕೊಳ್ಳಲು ಕಾರಣ

(ಎ) ವಾತಾವರಣದಲ್ಲಿನ ವಿಭಿನ್ನ ಭಾಗಗಳ ಅಸಮತೋಲನದ ತಾಪಮಾನ
(ಬಿ) ವಾತಾವರಣದ ಮೇಲಾಗುವ ಅಯಸ್ಕಾಂತೀಯ ಪ್ರಕ್ಷುಬ್ಧತೆ
(ಸಿ) ವಾತಾವರಣದಲ್ಲಿರುವ ಓಜೋನ್ ಪದರದ ಸವೆತ
(ಡಿ) ವಾತಾವರಣದಲ್ಲಿನ ವಿಭಿನ್ನ ಭಾಗಗಳ ಸಮತೋಲನದ ತಾಪಮಾನ

ಸರಿ ಉತ್ತರ

(ಎ) ವಾತಾವರಣದಲ್ಲಿನ ವಿಭಿನ್ನ ಭಾಗಗಳ ಅಸಮತೋಲನದ ತಾಪಮಾನ


17. K.B. ಎಂದು ಕರೆಯಲ್ಪಡುವ ಒಂದು ಕಿಲೋಬೈಟ್ ಸಮವಾಗಿರುವುದು

(ಎ) 1000 ಬೈಟ್ಸ್ ಗಳಿಗೆ
(ಬಿ) 512 ಬೈಟ್ಸ್ ಗಳಿಗೆ
(ಸಿ) 948 ಬೈಟ್ಸ್ ಗಳಿಗೆ
(ಡಿ) 1024 ಬೈಟ್ಸ್ ಗಳಿಗೆ

ಸರಿ ಉತ್ತರ

(ಡಿ) 1024 ಬೈಟ್ಸ್ ಗಳಿಗೆ


18. ಅಂತರ್ಜಾಲ ಶೋಧನೆಯು (Internet Explorer) ಒಂದು ರೀತಿಯ

(ಎ) ಆಪರೇಟಿಂಗ್ ಸಿಸ್ಟಂ
(ಬಿ) ಬ್ರೌಸರ್
(ಸಿ) I.P. ಅಡ್ರೆಸ್
(ಡಿ) ಕಂಪೈಲರ್

ಸರಿ ಉತ್ತರ

(ಬಿ) ಬ್ರೌಸರ್


19. ಕಂಪ್ಯೂಟರ್ ಭಾಷೆಯ ಸೂಚನೆಯಲ್ಲಾಗುವ ‘ತಪ್ಪು’ (Error)ಗಿರುವ ಮತ್ತೊಂದು ಹೆಸರು

(ಎ) ಬಗ್
(ಬಿ) ಡಿಬಗ್
(ಸಿ) ಕರ್ಸರ್
(ಡಿ) ಐಕಾನ್

ಸರಿ ಉತ್ತರ

(ಎ) ಬಗ್


20. ಕಂಪ್ಯೂಟರ್ ಭಾಷೆಯಲ್ಲಿ GUIನ ವಿಸ್ತೃತ ರೂಪ

(ಎ) ಗ್ರಾಫ್ ಯೂಸ್ ಇಂಟರ್ ಫೇಸ್
(ಬಿ) ಗ್ರಾಫಿಕಲ್ ಯೂಸರ್ ಇಂಟರ್ ಫೇಸ್
(ಸಿ) ಗ್ರಾಫಿಕಲ್ ಯೂನಿಕ್ ಇಂಟರ್ ಫೇಸ್
(ಡಿ) ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(ಬಿ) ಗ್ರಾಫಿಕಲ್ ಯೂಸರ್ ಇಂಟರ್ ಫೇಸ್


21. ಆರ್.ಕೆ. ಲಕ್ಷ್ಮಣ್ ಒಬ್ಬ ಪ್ರಸಿದ್ಧ

(ಎ) ವ್ಯಂಗ್ಯ ಚಿತ್ರಕಾರ
(ಬಿ) ಪತ್ರಿಕೋದ್ಯಮಿ
(ಸಿ) ಲೇಖಕ
(ಡಿ) ಸಂಗೀತಗಾರ

ಸರಿ ಉತ್ತರ

(ಎ) ವ್ಯಂಗ್ಯ ಚಿತ್ರಕಾರ


22. ‘ಭಾರತದ ಉದ್ಯಾನ ನಗರಿ’ ಎಂದು ಕರೆಯಲ್ಪಡುವ ನಗರ

(ಎ) ತ್ರಿವೇಂಡ್ರಂ
(ಬಿ) ಶಿಮ್ಲಾ
(ಸಿ) ಚಂಡೀಗಢ
(ಡಿ) ಬೆಂಗಳೂರು

ಸರಿ ಉತ್ತರ

(ಡಿ) ಬೆಂಗಳೂರು


23. ‘ನಗಿಸುವ ಅನಿಲ’ ಎಂದರೆ

(ಎ) ನೈಟ್ರಸ್ ಆಕ್ಸೈಡ್
(ಬಿ) ಕಾರ್ಬನ್ ಮೊನಾಕ್ಸೈಡ್
(ಸಿ) ಸಲ್ಫರ್ ಡೈ ಆಕ್ಸೈಡ್
(ಡಿ) ಹೈಡ್ರೋಜನ್ ಪೆರಾಕ್ಸೈಡ್

ಸರಿ ಉತ್ತರ

(ಎ) ನೈಟ್ರಸ್ ಆಕ್ಸೈಡ್


24. ಸಿಡುಬಿಗೆ ಲಸಿಕೆ ಕಂಡುಹಿಡಿದವರು

(ಎ) ರಾಬರ್ಟ್ ಕೋಚ್
(ಬಿ) ಎಡ್ವರ್ಡ್ ಜೆನ್ನರ್
(ಸಿ) ರಾಬರ್ಟ್ ಹುಕ್
(ಡಿ) ಲೂಯಿಪಾಶ್ಚರ್

ಸರಿ ಉತ್ತರ

(ಬಿ) ಎಡ್ವರ್ಡ್ ಜೆನ್ನರ್


25. ಕರ್ನಾಟಕದಲ್ಲಿ ಈ ಕೆಳಗಿನ ಸ್ಥಳಗಳಲ್ಲಿ ಹೈಕೋರ್ಟ್ ಪೀಠಗಳನ್ನು ಸ್ಥಾಪಿಸಲಾಗಿದೆ.
1. ಬೆಂಗಳೂರು
2. ಬೆಳಗಾವಿ
3. ಕಲಬುರ್ಗಿ
4. ಧಾರವಾಡ

(ಎ) 1, 3, 4
(ಬಿ) 1 ಮತ್ತು 3
(ಸಿ) 1, 2, 3
(ಡಿ) 1, 2, 3, 4

ಸರಿ ಉತ್ತರ

(ಎ) 1, 3, 4


26. ಭಾರತದಲ್ಲಿ ಅತೀ ವಿಸ್ತಾರವಾದ ನದಿ ದ್ವೀಪವು ವಿಶ್ವ ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿದೆ

(ಎ) ಮಜಲಿ ದ್ವೀಪ
(ಬಿ) ನಯಚಾರ ದ್ವೀಪ
(ಸಿ) ಭವಾನಿ ದ್ವೀಪ
(ಡಿ) ಲೋಹಚಾರ ದ್ವೀಪ

ಸರಿ ಉತ್ತರ

(ಎ) ಮಜಲಿ ದ್ವೀಪ


27. 2016ರ ರಿಯೋ ಒಲಿಂಪಿಕ್ಸ್ನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪಿ.ವಿ. ಸಿಂಧು ಪಡೆದಿದ್ದು

(ಎ) ಚಿನ್ನದ ಪದಕ
(ಬಿ) ಬೆಳ್ಳಿ ಪದಕ
(ಸಿ) ಕಂಚಿನ ಪದಕ
(ಡಿ) ಯಾವುದೂ ಅಲ್ಲ

ಸರಿ ಉತ್ತರ

(ಬಿ) ಬೆಳ್ಳಿ ಪದಕ


28. ದಕ್ಷಿಣ ಭಾರತದ ಯಾವ ಸಿನಿಮಾ 19ನೇ ಶಾಂಘೈ ಅಂತರರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಅತೀ ಉತ್ತಮ ಸಿನಿಮಾ ಪ್ರಶಸ್ತಿ ಪಡೆಯಿತು?

(ಎ) ಬಾಹುಬಲಿ
(ಬಿ) ತಿಥಿ
(ಸಿ) ಪ್ರೇಮಂ
(ಡಿ) ವಿಸಾರಣೈ

ಸರಿ ಉತ್ತರ

(ಬಿ) ತಿಥಿ


29. ‘ದೇ.ಜ.ಗೌ.’ ಎಂದು ಖ್ಯಾತರಾದ ಡಿ. ಜವರೇಗೌಡರು ಕೆಳಗಿನ ಯಾವ ಪ್ರಶಸ್ತಿಯನ್ನು ಪಡೆದಿಲ್ಲ?

(ಎ) ನಾಡೋಜ ಪ್ರಶಸ್ತಿ
(ಬಿ) ಪಂಪ ಪ್ರಶಸ್ತಿ
(ಸಿ) ಪದ್ಮಶ್ರೀ ಪ್ರಶಸ್ತಿ
(ಡಿ) ಪದ್ಮಭೂಷಣ ಪ್ರಶಸ್ತಿ

ಸರಿ ಉತ್ತರ

(ಡಿ) ಪದ್ಮಭೂಷಣ ಪ್ರಶಸ್ತಿ


30. ಈ ಕೆಳಗಿನ ಯಾವ ಶೃಂಗಸಭೆಯು ನಿಗದಿಯಂತೆ ನವೆಂಬರ್ ನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ನಡೆಯಬೇಕಿದ್ದು, ಸದಸ್ಯ ದೇಶಗಳು ಭಾಗವಹಿಸಲು ನಿರಾಕರಿಸಿದ್ದರಿಂದ ರದ್ದಾಯಿತು?

(ಎ) ASEAN
(ಬಿ) BRIC
(ಸಿ) SAARC
(ಡಿ) MADRID

ಸರಿ ಉತ್ತರ

(ಸಿ) SAARC


31. ಕರ್ನಾಟಕದ ಯಾವ ನಗರದಲ್ಲಿ ಪೊಲೀಸ್ ಆಯುಕ್ತರ ಕಛೇರಿ ಇರುವುದಿಲ್ಲ?

(ಎ) ಮೈಸೂರು
(ಬಿ) ಕಲಬುರ್ಗಿ
(ಸಿ) ಬೆಳಗಾವಿ
(ಡಿ) ಮಂಗಳೂರು

ಸರಿ ಉತ್ತರ

(ಬಿ) ಕಲಬುರ್ಗಿ


32. ಕೆಳಗಿನ ಯಾವ ಸಂಕೇತವು ಸಂಚಾರ ಎಚ್ಚರಿಕೆಯ ಚಿಹ್ನೆಯಾಗಿದೆ?

(ಎ) 

(ಬಿ) 

(ಸಿ) 


(ಡಿ) 

ಸರಿ ಉತ್ತರ

(ಎ) 


33. ಪೊಲೀಸ್ ಹುತಾತ್ಮರ ದಿನವಾಗಿ ಆಚರಿಸುವ ದಿನ

(ಎ) ಅಕ್ಟೋಬರ್ 21
(ಬಿ) ಜನವರಿ 31
(ಸಿ) ಮಾರ್ಚ್ 31
(ಡಿ) ಮಾರ್ಚ್ 21

ಸರಿ ಉತ್ತರ

(ಎ) ಅಕ್ಟೋಬರ್ 21


34. ಕರ್ನಾಟಕ ಪೊಲೀಸ್ ಅಕಾಡೆಮಿ ಇರುವುದು

(ಎ) ಬೆಂಗಳೂರು
(ಬಿ) ಮೈಸೂರು
(ಸಿ) ಕಲಬುರ್ಗಿ
(ಡಿ) ಬೆಳಗಾವಿ

ಸರಿ ಉತ್ತರ

(ಬಿ) ಮೈಸೂರು


35. ಕೆಳಗಿನ ಲೇಖಕರು ಮತ್ತು ಅವರ ಬರಹಗಳನ್ನು ಜೋಡಿಸಿ ಬರೆಯಿರಿ:

1.

.ರಾ. ಬೇಂದ್ರೆ

i.

ರಾಮಾಯಣ ದರ್ಶನಂ

2.

ಕುವೆಂಪು

ii.

ಚಿಕವೀರ ರಾಜೇಂದ್ರ

3.

ಮಾಸ್ತಿ ವೆಂಕಟೇಶ ಅಯ್ಯಂಗಾರ್

iii.

ನಾಕುತಂತಿ

(ಎ) 1 - iii, 2 - i, 3 - ii
(ಬಿ) 1 - ii, 2 - i, 3 - iii
(ಸಿ) 1 - i, 2 - ii, 3 - iii
(ಡಿ) 1 - ii, 2 - iii, 3 - i

ಸರಿ ಉತ್ತರ

(ಎ) 1 - iii, 2 - i, 3 - ii


36. ಬ್ರೆಡ್ ನಲ್ಲಿ ಬಳಸುವ ಈಸ್ಟ್ ಒಂದು

(ಎ) ಸಸ್ಯ
(ಬಿ) ಬೀಜ
(ಸಿ) ಬ್ಯಾಕ್ಟೀರಿಯಾ
(ಡಿ) ಫಂಗಸ್ (ಶಿಲೀಂಧ್ರ)

ಸರಿ ಉತ್ತರ

(ಡಿ) ಫಂಗಸ್ (ಶಿಲೀಂಧ್ರ)


37. ಕಬ್ಬಿಣದ ಕೊರತೆಯಿಂದ ಆರೋಗ್ಯದಲ್ಲಿ _________ ಉಂಟಾಗುತ್ತದೆ.

(ಎ) ಹಸಿವಿಲ್ಲದಂತಾಗುವುದು
(ಬಿ) ಡಿಫ್ತೀರಿಯಾ
(ಸಿ) ರಕ್ತಹೀನತೆ
(ಡಿ) ಅಕಾಲ ವೃದ್ಧಾಪ್ಯ

ಸರಿ ಉತ್ತರ

(ಸಿ) ರಕ್ತಹೀನತೆ


38. ಕುಡಿಯುವ ನೀರಿನಲ್ಲಿ ಅಂಟುಜಾಡ್ಯ ನಿವಾರಕವಾಗಿ ಬಳಸುವ ಅನಿಲವು

(ಎ) ಜಲಜನಕ
(ಬಿ) ಆಮ್ಲಜನಕ
(ಸಿ) ಕ್ಲೋರಿನ್
(ಡಿ) ಫ್ಲೋರಿನ್

ಸರಿ ಉತ್ತರ

(ಸಿ) ಕ್ಲೋರಿನ್


39. ಮೂತ್ರಜನಕಾಂಗದ ಕಾರ್ಯನಿರ್ವಾಹಕ ಘಟಕದಲ್ಲಿರುವ ಅತೀ ಚಿಕ್ಕ ರಚನೆ

(ಎ) ನೆಫ್ರಾನ್
(ಬಿ) ನ್ಯೂರಾನ್
(ಸಿ) ಗ್ರಾನುಲೊಸೈಟ್
(ಡಿ) ರೆಟಿಕುಲೊಸೈಟ್

ಸರಿ ಉತ್ತರ

(ಎ) ನೆಫ್ರಾನ್


40. ಪಕ್ಷಿಗಳ ಕುರಿತು ಮಾಡುವ ಅಧ್ಯಯನವು

(ಎ) ಆರ್ನಿತಾಲಜಿ
(ಬಿ) ಅವಿಯೋಲಜಿ
(ಸಿ) ಹೆರ್ಪಟಾಲಜಿ
(ಡಿ) ಅಂಕಾಲಜಿ

ಸರಿ ಉತ್ತರ

(ಎ) ಆರ್ನಿತಾಲಜಿ


41. ಬಿಟ್ಟ ಸಂಖ್ಯೆಯನ್ನು ಕಂಡು ಹಿಡಿಯಿರಿ.


(ಎ) 15
(ಬಿ) 25
(ಸಿ) 20
(ಡಿ) 45

ಸರಿ ಉತ್ತರ

(ಬಿ) 25


42. ಗಡಿಯಾರದಲ್ಲಿ ಸಮಯ ಬೆಳಿಗ್ಗೆ 9 ಆಗಿದ್ದರೆ ಗಂಟೆಯ ಮುಳ್ಳು ಹಾಗೂ ನಿಮಿಷದ ಮುಳ್ಳಿನ ನಡುವಿನ ಕೋನವು

(ಎ) 0°
(ಬಿ) 90°
(ಸಿ) 180°
(ಡಿ) 360°

ಸರಿ ಉತ್ತರ

(ಬಿ) 90°


43. ‘B’ ಯ ತಂದೆಯು ‘A’ ನ ತಾಯಿಯ ಒಬ್ಬನೇ ಮಗ. ಹಾಗಾದರೆ ‘B’ಯ ಸಂಬಂಧ ‘A’ಯೊಂದಿಗೆ

(ಎ) ‘A’ ನ ಅಳಿಯ
(ಬಿ) ‘A’ ನ ಸಹೋದರ
(ಸಿ) ‘A’ ನ ತಂದೆ
(ಡಿ) ‘A’ ನ ಮಗ

ಸರಿ ಉತ್ತರ

(ಡಿ) ‘A’ ನ ಮಗ


44. ಒಬ್ಬ ಬ್ಯಾಟ್ಸ್ಮನ್ 9 ಇನ್ನಿಂಗ್ಸ್ ಗಳ ನಂತರ ನಿರ್ದಿಷ್ಟ ಸರಾಸರಿಯನ್ನು ಹೊಂದಿರುತ್ತಾನೆ. ತನ್ನ 10ನೇ ಇನ್ನಿಂಗ್ಸ್ ಗಳಲ್ಲಿ 100 ರನ್ ಗಳಿಸಿ ತನ್ನ ಸರಾಸರಿಯನ್ನು ಎಂಟು ರನ್ಗಳಿಂದ ಹೆಚ್ಚಿಸಿಕೊಳ್ಳುತ್ತಾನೆ. ಹಾಗಾದರೆ ಆತನ ಹೊಸ ಸರಾಸರಿಯು

(ಎ) 20
(ಬಿ) 21
(ಸಿ) 28
(ಡಿ) 32

ಸರಿ ಉತ್ತರ

(ಸಿ) 28


45. ಈ ಕೆಳಗಿನವುಗಳಲ್ಲಿ ಯಾವುದು ಗಣಕಯಂತ್ರದ ‘ಆಪರೇಟಿಂಗ್ ಸಿಸ್ಟಂ’ ಆಗಿದೆ?

(ಎ) ಮೈಕ್ರೋಸಾಫ್ಟ್ ವರ್ಡ್
(ಬಿ) ಮೈಕ್ರೋ ಸಾಫ್ಟ್ ವಿಂಡೋಸ್
(ಸಿ) ಮೈಕ್ರೋ ಸಾಫ್ಟ್ ಎಕ್ಸೆಲ್
(ಡಿ) ಮೈಕ್ರೋ ಸಾಫ್ಟ್ ಆಕ್ಸೆಸ್

ಸರಿ ಉತ್ತರ

(ಬಿ) ಮೈಕ್ರೋ ಸಾಫ್ಟ್ ವಿಂಡೋಸ್


46. ರಾಜ್ಯಸಭೆಯ ಪದನಿಮಿತ್ತ ಮುಖ್ಯಸ್ಥರು

(ಎ) ವಿರೋಧ ಪಕ್ಷದ ನಾಯಕರು
(ಬಿ) ಉಪರಾಷ್ಟ್ರಪತಿಗಳು
(ಸಿ) ರಾಷ್ಟ್ರಪತಿಗಳು
(ಡಿ) ಸಂಸದೀಯ ವ್ಯವಹಾರಗಳ ಮಂತ್ರಿಗಳು

ಸರಿ ಉತ್ತರ

(ಬಿ) ಉಪರಾಷ್ಟ್ರಪತಿಗಳು


47. ಕರ್ನಾಟಕ ರಾಜ್ಯದಲ್ಲಿರುವ ವಿಧಾನಪರಿಷತ್ತಿನ ಸದಸ್ಯರ ಸಂಖ್ಯೆ

(ಎ) 75
(ಬಿ) 28
(ಸಿ) 224
(ಡಿ) 112

ಸರಿ ಉತ್ತರ

(ಎ) 75


48. ಕೇಂದ್ರ ಚುನಾವಣಾ ಆಯೋಗದ ಸದಸ್ಯರ ಕಾರ್ಯನಿರ್ವಹಣಾ ಅವಧಿಯು

(ಎ) ಆರು ವರ್ಷಗಳು ಅಥವಾ ಅರವತ್ತೈದು ವರ್ಷಗಳಾಗುವವರೆಗೂ
(ಬಿ) ಐದು ವರ್ಷಗಳು ಅಥವಾ ಅರವತ್ತೈದು ವರ್ಷಗಳಾಗುವವರೆಗೂ
(ಸಿ) ಆರು ವರ್ಷಗಳು ಅಥವಾ ಅರವತ್ತೆರಡು ವರ್ಷಗಳಾಗುವವರೆಗೂ
(ಡಿ) ಐದು ವರ್ಷಗಳು ಅಥವಾ ಅರವತ್ತೆರಡು ವರ್ಷಗಳಾಗುವವರೆಗೂ

ಸರಿ ಉತ್ತರ

(ಎ) ಆರು ವರ್ಷಗಳು ಅಥವಾ ಅರವತ್ತೈದು ವರ್ಷಗಳಾಗುವವರೆಗೂ


49. ಭಾರತ ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದವರು

(ಎ) ಡಾ॥ ಕೆ.ಎಂ. ಮುನ್ಷಿ
(ಬಿ) ಡಾ॥ ಬಿ.ಆರ್. ಅಂಬೇಡ್ಕರ್
(ಸಿ) ಜವಾಹರಲಾಲ್ ನೆಹರೂ
(ಡಿ) ಟಿ.ಟಿ. ಕೃಷ್ಣಮಾಚಾರಿ

ಸರಿ ಉತ್ತರ

(ಬಿ) ಡಾ॥ ಬಿ.ಆರ್. ಅಂಬೇಡ್ಕರ್


50. ರಾಷ್ಟ್ರಪತಿಯವರು ಯಾವ ಸಂದರ್ಭದಲ್ಲಿ ಸುಗ್ರೀವಾಜ್ಞೆಯನ್ನು ಹೊರಡಿಸಬಹುದು?

(ಎ) ಎರಡೂ ಸದನಗಳು ಅಧಿವೇಶನದಲ್ಲಿ ಭಾಗವಹಿಸಿದ್ದಾಗ
(ಬಿ) ಯಾವುದೇ ಸದನವು ಅಧಿವೇಶನದಲ್ಲಿ ಭಾಗವಹಿಸದಿದ್ದಾಗ
(ಸಿ) ಎರಡೂ ಸದನಗಳು ಅಧಿವೇಶನದಲ್ಲಿ ಇಲ್ಲದಿರುವಾಗ
(ಡಿ) (ಬಿ) ಮತ್ತು (ಸಿ) ಎರಡು ಸಂದರ್ಭಗಳಲ್ಲಿ ಮಾಡಬಹುದು

ಸರಿ ಉತ್ತರ

(ಡಿ) (ಬಿ) ಮತ್ತು (ಸಿ) ಎರಡು ಸಂದರ್ಭಗಳಲ್ಲಿ ಮಾಡಬಹುದು


51. ಕೆಳಗಿನ ಯಾವ ಮಣ್ಣು ಭಾರತದ ನದಿ ತಟ ಹಾಗೂ ಕರಾವಳಿ ಬಯಲಿನಲ್ಲಿರುತ್ತದೆ?

(ಎ) ಮೆಕ್ಕಲು ಮಣ್ಣು
(ಬಿ) ಕಪ್ಪು ಮಣ್ಣು
(ಸಿ) ಜೇಡಿ ಮಣ್ಣು
(ಡಿ) ಕೆಂಪು ಮಣ್ಣು

ಸರಿ ಉತ್ತರ

(ಎ) ಮೆಕ್ಕಲು ಮಣ್ಣು


52. ಭಾರತದ ಪ್ರಾಚೀನ ತೈಲ ಶುದ್ಧೀಕರಣ ಘಟಕ ಯಾವುದೆಂದರೆ

(ಎ) ಅಂಕಲೇಶ್ವರ, ಗುಜರಾತ್
(ಬಿ) ಬಾಂಬೆ ಹೈ, ಮಹಾರಾಷ್ಟ್ರ
(ಸಿ) ನವಗಾಂವ, ಗುಜರಾತ್
(ಡಿ) ದಿಗ್ಬಾಯ್, ಅಸ್ಸಾಂ

ಸರಿ ಉತ್ತರ

(ಡಿ) ದಿಗ್ಬಾಯ್, ಅಸ್ಸಾಂ


53. ಕೆಳಗಿನ ಯಾವ ನದಿ ಪಶ್ಚಿಮಕ್ಕೆ ಹರಿಯುತ್ತದೆ?

(ಎ) ಕೃಷ್ಣಾ
(ಬಿ) ಗೋದಾವರಿ
(ಸಿ) ಕಾವೇರಿ
(ಡಿ) ಶರಾವತಿ

ಸರಿ ಉತ್ತರ

(ಡಿ) ಶರಾವತಿ


54. ಕೇಸರಿಯನ್ನು ಉತ್ಪಾದಿಸುವ ಭಾರತದ ಏಕೈಕ ರಾಜ್ಯ

(ಎ) ಅಸ್ಸಾಂ
(ಬಿ) ಹಿಮಾಚಲ ಪ್ರದೇಶ
(ಸಿ) ಜಮ್ಮು ಮತ್ತು ಕಾಶ್ಮೀರ
(ಡಿ) ಮೇಘಾಲಯ

ಸರಿ ಉತ್ತರ

(ಬಿ) ಹಿಮಾಚಲ ಪ್ರದೇಶ or (ಸಿ) ಜಮ್ಮು ಮತ್ತು ಕಾಶ್ಮೀರ


55. ಭಾರತದಲ್ಲಿ ಅತೀ ಹೆಚ್ಚು ಕಾಫಿ ಬೆಳೆಯುವ ರಾಜ್ಯ

(ಎ) ಕೇರಳ
(ಬಿ) ಕರ್ನಾಟಕ
(ಸಿ) ಪಶ್ಚಿಮ ಬಂಗಾಳ
(ಡಿ) ಅಸ್ಸಾಂ

ಸರಿ ಉತ್ತರ

(ಬಿ) ಕರ್ನಾಟಕ


56. ಅತಿ ನೇರಳೆಯ(ನೇರಳಾತೀತ) ಬೆಳಕನ್ನು ಶೋಧಿಸುವ ಹಾಗೂ ವಿಕಿರಣಗಳಿಂದ ರಕ್ಷಿಸುವ ವಾಯುಮಂಡಲದಲ್ಲಿರುವ ಅನಿಲ

(ಎ) ಹೀಲಿಯಂ
(ಬಿ) ಓಜೋನ್
(ಸಿ) ಆಕ್ಸಿಜನ್
(ಡಿ) ಮಿಥೇನ್

ಸರಿ ಉತ್ತರ

(ಬಿ) ಓಜೋನ್


57. ಇಂಗಾಲದ ಅತೀ ಕಠಿಣ ಘನ ರೂಪ

(ಎ) ಕಲ್ಲಿದ್ದಲು
(ಬಿ) ಗ್ರಾಫೈಟ್
(ಸಿ) ಇದ್ದಿಲು
(ಡಿ) ವಜ್ರ

ಸರಿ ಉತ್ತರ

(ಡಿ) ವಜ್ರ


58. ಮರಳಿನ ಮೇಲೆ ನಡೆಯುವುದು ಸಿಮೆಂಟ್ ರಸ್ತೆಯ ಮೇಲೆ ನಡೆಯುವುದಕ್ಕಿಂತ ಹೆಚ್ಚು ಕಷ್ಟ, ಏಕೆಂದರೆ

(ಎ) ಮರಳು ಸಿಮೆಂಟ್ ರಸ್ತೆಗಿಂತಲೂ ಮೆದುವಾಗಿರುವುದು
(ಬಿ) ಮರಳು ಕಣಕಣವಾಗಿರುವುದು ಆದರೆ ಕಾಂಕ್ರೀಟ್ ಮೃದುವಾಗಿರುವುದು
(ಸಿ) ಮರಳು ಮತ್ತು ಪಾದಗಳ ನಡುವಿನ ಘರ್ಷಣೆಯು ಕಾಂಕ್ರೀಟ್ ಮತ್ತು ಪಾದಗಳ ನಡುವಿನ ಘರ್ಷಣೆಗಿಂತ ಕಡಿಮೆ ಇರುವುದು
(ಡಿ) ಸಿಮೆಂಟ್ ಮತ್ತು ಪಾದಗಳ ನಡುವಿನ ಘರ್ಷಣೆಯು ಮರಳು ಮತ್ತು ಪಾದಗಳ ನಡುವಿನ ಘರ್ಷಣೆಗಿಂತ ಕಡಿಮೆ ಇರುವುದು

ಸರಿ ಉತ್ತರ

(ಸಿ) ಮರಳು ಮತ್ತು ಪಾದಗಳ ನಡುವಿನ ಘರ್ಷಣೆಯು ಕಾಂಕ್ರೀಟ್ ಮತ್ತು ಪಾದಗಳ ನಡುವಿನ ಘರ್ಷಣೆಗಿಂತ ಕಡಿಮೆ ಇರುವುದು


59. ಈ ಕೆಳಗಿನ ಯಾವ ಘಟನೆಯು ಜಾಗತಿಕ ತಾಪಮಾನಕ್ಕೆ ಕಾರಣವಾಗಿದೆ?

(ಎ) ಹಸಿರುಮನೆ ಪರಿಣಾಮ
(ಬಿ) ಮುಂಗಾರು
(ಸಿ) ಕಲ್ಲಿದ್ದಲು ಗಣಿಗಳಲ್ಲಿನ ಬೆಂಕಿ
(ಡಿ) ವಾಣಿಜ್ಯ ಮಾರುತಗಳು

ಸರಿ ಉತ್ತರ

(ಎ) ಹಸಿರುಮನೆ ಪರಿಣಾಮ


60. ಗಾಳಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿರುವ ಘಟಕ

(ಎ) ಇಂಗಾಲದ ಡೈ ಆಕ್ಸೈಡ್
(ಬಿ) ಸಾರಜನಕ
(ಸಿ) ಆಮ್ಲಜನಕ
(ಡಿ) ಜಲಜನಕ

ಸರಿ ಉತ್ತರ

(ಬಿ) ಸಾರಜನಕ


61. ಜ್ಯೋತಿರ್ವರ್ಷ ಈ ಕೆಳಗಿನವುಗಳ ಒಂದು ಘಟಕ

(ಎ) ಕಾಲ
(ಬಿ) ದೂರ
(ಸಿ) ಬೆಳಕು
(ಡಿ) ಬೆಳಕಿನ ತೀವ್ರತೆ

ಸರಿ ಉತ್ತರ

(ಬಿ) ದೂರ


62. ದಂಡಕಾಂತದ ಕೇಂದ್ರದಲ್ಲಿನ ಕಾಂತತ್ವವು

(ಎ) ಅತ್ಯಧಿಕವಾಗಿರುತ್ತದೆ
(ಬಿ) ಕನಿಷ್ಠವಾದುದು
(ಸಿ) ಶೂನ್ಯವಾಗಿರುತ್ತದೆ
(ಡಿ) ಅತ್ಯಧಿಕ ಅಥವಾ ಕನಿಷ್ಠವಾದುದು

ಸರಿ ಉತ್ತರ

(ಸಿ) ಶೂನ್ಯವಾಗಿರುತ್ತದೆ


63. ಗಾಳಿಯು ಒಂದು ಗೊತ್ತಾದ _________ ಯಿಂದ _______ ವರೆಗೂ ಚಲಿಸುವುದು.

(ಎ) ಅಧಿಕ ಒತ್ತಡದ ದಿಕ್ಕಿನಿಂದ ಕಡಿಮೆ ಒತ್ತಡದ ದಿಕ್ಕಿನೆಡೆಗೆ
(ಬಿ) ಕಡಿಮೆ ಒತ್ತಡದ ದಿಕ್ಕಿನಿಂದ ಅಧಿಕ ಒತ್ತಡದ ದಿಕ್ಕಿನೆಡೆಗೆ
(ಸಿ) ತಟಸ್ಥವಾಗಿರುತ್ತದೆ
(ಡಿ) ಯಾವುದೂ ಇಲ್ಲ

ಸರಿ ಉತ್ತರ

(ಎ) ಅಧಿಕ ಒತ್ತಡದ ದಿಕ್ಕಿನಿಂದ ಕಡಿಮೆ ಒತ್ತಡದ ದಿಕ್ಕಿನೆಡೆಗೆ


64. ಶಬ್ದದ ವೇಗವು ವಿವಿಧ ಮಾಧ್ಯಮದಲ್ಲಿ ವಿಭಿನ್ನವಾಗಿರುತ್ತದೆ. ಶಬ್ದದ ವೇಗವು ಕ್ರಮವಾಗಿ ಈ ಕೆಳಗಿನ _________ ಮಾಧ್ಯಮಗಳಲ್ಲಿ ಹೆಚ್ಚಾಗುವುದು.

(ಎ) ನೀರು, ಕಬ್ಬಿಣ, ಗಾಳಿ
(ಬಿ) ಕಬ್ಬಿಣ, ಗಾಳಿ, ನೀರು
(ಸಿ) ಗಾಳಿ, ನೀರು, ಕಬ್ಬಿಣ
(ಡಿ) ನೀರು, ಗಾಳಿ, ಕಬ್ಬಿಣ

ಸರಿ ಉತ್ತರ

(ಸಿ) ಗಾಳಿ, ನೀರು, ಕಬ್ಬಿಣ


65. ಸೂರ್ಯಗ್ರಹಣ ಸಂಭವಿಸುವುದು

(ಎ) ಸೂರ್ಯನು ಚಂದ್ರ ಮತ್ತು ಭೂಮಿಯ ನಡುವಿದ್ದಾಗ
(ಬಿ) ಭೂಮಿಯು ಚಂದ್ರ ಮತ್ತು ಸೂರ್ಯನ ನಡುವಿದ್ದಾಗ
(ಸಿ) ಚಂದ್ರನು ಸೂರ್ಯ ಮತ್ತು ಭೂಮಿಯ ನಡುವಿದ್ದಾಗ
(ಡಿ) ಸೂರ್ಯ, ಚಂದ್ರ ಹಾಗೂ ಭೂಮಿಯು ನೇರ ಕಕ್ಷೆಯಲ್ಲಿ ಇಲ್ಲದಿದ್ದಾಗ

ಸರಿ ಉತ್ತರ

(ಸಿ) ಚಂದ್ರನು ಸೂರ್ಯ ಮತ್ತು ಭೂಮಿಯ ನಡುವಿದ್ದಾಗ


66. ಆರ್ಯ ಸಮಾಜದ ಸಂಸ್ಥಾಪಕರು

(ಎ) ಸ್ವಾಮಿ ದಯಾನಂದ ಸರಸ್ವತಿ
(ಬಿ) ರಾಜಾರಾಂ ಮೋಹನ್ ರಾಯ್
(ಸಿ) ಸ್ವಾಮಿ ವಿವೇಕಾನಂದ
(ಡಿ) ಗೋಪಾಲಕೃಷ್ಣ ಗೋಖಲೆ

ಸರಿ ಉತ್ತರ

(ಎ) ಸ್ವಾಮಿ ದಯಾನಂದ ಸರಸ್ವತಿ


67. ಮಂಡ್ಯ ಜಿಲ್ಲೆಯಲ್ಲಿರುವ ಮೇಲುಕೋಟೆಯಲ್ಲಿನ ವೈಷ್ಣವ ಮಠವನ್ನು ನಿರ್ಮಿಸಿ ಅಭಿವೃದ್ಧಿಪಡಿಸಿದವರು

(ಎ) ಆದಿ ಶಂಕರಾಚಾರ್ಯರು
(ಬಿ) ರಾಮಾನುಜಾಚಾರ್ಯರು
(ಸಿ) ಮಧ್ವಾಚಾರ್ಯರು
(ಡಿ) ಬಸವೇಶ್ವರರು

ಸರಿ ಉತ್ತರ

(ಬಿ) ರಾಮಾನುಜಾಚಾರ್ಯರು


68. ಆಸೆಗಳನ್ನು ನಿಯಂತ್ರಿಸಲು ಮತ್ತು ದುಃಖವನ್ನು ಗೆಲ್ಲಲು ಅಷ್ಟಾಂಗ ಮಾರ್ಗವನ್ನು ಬೋಧಿಸಿದವರು

(ಎ) ಮಹಾವೀರ
(ಬಿ) ಗೊಮ್ಮಟೇಶ್ವರ
(ಸಿ) ಗೌತಮ ಬುದ್ಧ
(ಡಿ) ಅಶೋಕ

ಸರಿ ಉತ್ತರ

(ಸಿ) ಗೌತಮ ಬುದ್ಧ


69. 1857ರ ದಂಗೆಯ ನಂತರ ರಂಗೂನಿಗೆ ಗಡಿಪಾರಾದ ಕೊನೆಯ ಮೊಘಲ್ ಸಾಮ್ರಾಟ ಯಾರೆಂದರೆ

(ಎ) ಬಹದ್ದೂರ್ ಷಾ - II
(ಬಿ) ಅಹ್ಮದ್ ಷಾ
(ಸಿ) ಅಕ್ಬರ್ - II
(ಡಿ) ಫಾರೂಕ್ ಸಯ್ಯದ್

ಸರಿ ಉತ್ತರ

(ಎ) ಬಹದ್ದೂರ್ ಷಾ - II


70. ಈ ಕೆಳಗಿನ ಯಾವ ಯುದ್ಧದ ಅವಧಿಯಲ್ಲಿ ಟಿಪ್ಪು ಸುಲ್ತಾನ್ ಮರಣ ಹೊಂದಿದನು?

(ಎ) ಮೂರನೇ ಆಂಗ್ಲೋ - ಮೈಸೂರು ಯುದ್ಧ
(ಬಿ) ನಾಲ್ಕನೇ ಆಂಗ್ಲೋ - ಮೈಸೂರು ಯುದ್ಧ
(ಸಿ) ಐದನೇ ಆಂಗ್ಲೋ - ಮೈಸೂರು ಯುದ್ಧ
(ಡಿ) ಎರಡನೇ ಆಂಗ್ಲೋ - ಮೈಸೂರು ಯುದ್ಧ

ಸರಿ ಉತ್ತರ

(ಬಿ) ನಾಲ್ಕನೇ ಆಂಗ್ಲೋ - ಮೈಸೂರು ಯುದ್ಧ


71. ಇವುಗಳಲ್ಲಿ ಯಾವುದು ಶಾಂತಿ ಸಮಯದ ಸರ್ವೋತ್ತಮ ಶೌರ್ಯ ಪ್ರಶಸ್ತಿಯಾಗಿದೆ?

(ಎ) ಪರಮವೀರ ಚಕ್ರ
(ಬಿ) ಅಶೋಕ ಚಕ್ರ
(ಸಿ) ಕೀರ್ತಿ ಚಕ್ರ
(ಡಿ) ವೀರ ಚಕ್ರ

ಸರಿ ಉತ್ತರ

(ಬಿ) ಅಶೋಕ ಚಕ್ರ


72. ಆಮ್ನೆಸ್ಟಿ ಇಂಟರ್ನ್ಯಾಷನಲ್ ಎಂಬ ಸಂಘಟನೆಯು ಸಂಬಂಧಿಸಿರುವುದು

(ಎ) ಪ್ರಾಣಿ ಹಿಂಸೆ ತಡೆಯುವುದಕ್ಕಾಗಿ
(ಬಿ) ಪರಿಸರ ರಕ್ಷಣೆಗಾಗಿ
(ಸಿ) ಮಾನವ ಹಕ್ಕುಗಳ ರಕ್ಷಣೆಗಾಗಿ
(ಡಿ) ಐತಿಹಾಸಿಕ ಸ್ಮಾರಕಗಳ ರಕ್ಷಣೆಗಾಗಿ

ಸರಿ ಉತ್ತರ

(ಸಿ) ಮಾನವ ಹಕ್ಕುಗಳ ರಕ್ಷಣೆಗಾಗಿ


73. ಜೂನ್ ತಿಂಗಳ 21ನೇ ದಿನಾಂಕವನ್ನು ಆಚರಿಸುವುದು ಈ ಕೆಳಗಿನಂತೆ

(ಎ) ವಿಶ್ವ ಜನಸಂಖ್ಯಾ ದಿನಾಚರಣೆ
(ಬಿ) ವಿಶ್ವ ಪ್ರಾಣಿಗಳ ದಿನಾಚರಣೆ
(ಸಿ) ವಿಶ್ವ ಯೋಗ ದಿನಾಚರಣೆ
(ಡಿ) ವಿಶ್ವ ನೀರು ದಿನಾಚರಣೆ

ಸರಿ ಉತ್ತರ

(ಸಿ) ವಿಶ್ವ ಯೋಗ ದಿನಾಚರಣೆ


74. ‘‘ಭಾರತದ ಕಬ್ಬಿಣದ ಮನುಷ್ಯ’’ ಎಂದು ಕರೆಯಲ್ಪಡುವವರು

(ಎ) ಗೋವಿಂದ ವಲ್ಲಭ ಪಂತ
(ಬಿ) ಜವಾಹರ ಲಾಲ್ ನೆಹರೂ
(ಸಿ) ಸುಭಾಷ್ ಚಂದ್ರ ಬೋಸ್
(ಡಿ) ಸರ್ದಾರ್ ವಲ್ಲಭಬಾಯಿ ಪಟೇಲ್

ಸರಿ ಉತ್ತರ

(ಡಿ) ಸರ್ದಾರ್ ವಲ್ಲಭಬಾಯಿ ಪಟೇಲ್


75. ರೇಖಾಗಣಿತದ ಪಿತಾಮಹ

(ಎ) ಅರಿಸ್ಟಾಟಲ್
(ಬಿ) ಪೈಥಾಗೋರಸ್
(ಸಿ) ಕೆಪ್ಲರ್
(ಡಿ) ಯೂಕ್ಲಿಡ್

ಸರಿ ಉತ್ತರ

(ಡಿ) ಯೂಕ್ಲಿಡ್


76. ನಿತ್ಯ ಹಸಿರು ಕ್ರಾಂತಿಗೆ ಕರೆಕೊಟ್ಟವರೆಂದರೆ

(ಎ) ಎಂ.ಎಸ್. ಸ್ವಾಮಿನಾಥನ್
(ಬಿ) ತ್ರಿಭುವನ್ದಾಸ್ ಪಾಟೀಲ್
(ಸಿ) ವರ್ಗೀಸ್ ಕುರಿಯನ್
(ಡಿ) ಹೆಚ್.ಎಂ. ಬಾಲಯ್ಯ

ಸರಿ ಉತ್ತರ

(ಎ) ಎಂ.ಎಸ್. ಸ್ವಾಮಿನಾಥನ್


77. ಅಬಕಾರಿ ಸುಂಕವನ್ನು ತೆರಿಗೆಯಾಗಿ ವಿಧಿಸುವುದು

(ಎ) ಆಮದು ಸರಕುಗಳ ಮೇಲೆ
(ಬಿ) ರಫ್ತಾಗುವ ಸರಕುಗಳ ಮೇಲೆ
(ಸಿ) ಸರಕುಗಳ ಉತ್ಪಾದನೆಯ ಮೇಲೆ
(ಡಿ) ಸರಕುಗಳ ಮಾರಾಟದ ಮೇಲೆ

ಸರಿ ಉತ್ತರ

(ಸಿ) ಸರಕುಗಳ ಉತ್ಪಾದನೆಯ ಮೇಲೆ


78. ಕೇಂದ್ರ ಬ್ಯಾಂಕಿಂಗ್ ಕಾರ್ಯಚಟುವಟಿಕೆಗಳನ್ನು ಭಾರತದಲ್ಲಿ ನಿರ್ವಹಿಸುವುದು

(ಎ) ಭಾರತೀಯ ಸ್ಟೇಟ್ ಬ್ಯಾಂಕ್
(ಬಿ) ನ್ಯಾಷನಲ್ ಬ್ಯಾಂಕ್ ಆಫ್ ಇಂಡಿಯಾ
(ಸಿ) ಭಾರತೀಯ ರಿಸರ್ವ್ ಬ್ಯಾಂಕ್
(ಡಿ) ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

ಸರಿ ಉತ್ತರ

(ಸಿ) ಭಾರತೀಯ ರಿಸರ್ವ್ ಬ್ಯಾಂಕ್


79. ಬ್ಯಾಂಕುಗಳು ತಮ್ಮಲ್ಲಿರುವ ಹಣ ಹಾಗೂ ಒಟ್ಟಾರೆ ಆಸ್ತಿಗಳ ನಡುವೆ ನಿರ್ದಿಷ್ಟ ಪ್ರಮಾಣದ ಅನುಪಾತವನ್ನು ಹೊಂದಿರಬೇಕು. ಇದನ್ನು _________ ಎನ್ನುವರು.

(ಎ) ಸ್ಟ್ಯಾಚುಟರಿ ಲಿಕ್ವಿಡಿಟಿ ರೇಷಿಯೋ (ಶಾಸನಬದ್ಧ ದ್ರವ್ಯತೆ ಅನುಪಾತ)
(ಬಿ) ಸೆಂಟ್ರಲ್ ಬ್ಯಾಂಕ್ ರಿಸರ್ವ್
(ಸಿ) ರೆಪೋ ರೇಟ್
(ಡಿ) ರಿವರ್ಸ್ ರೆಪೋ ರೇಟ್

ಸರಿ ಉತ್ತರ

(ಎ) ಸ್ಟ್ಯಾಚುಟರಿ ಲಿಕ್ವಿಡಿಟಿ ರೇಷಿಯೋ (ಶಾಸನಬದ್ಧ ದ್ರವ್ಯತೆ ಅನುಪಾತ)


80. ಭಾರತದಲ್ಲಿ ಹಣದುಬ್ಬರವನ್ನು ನಿರ್ಧರಿಸುವುದು

(ಎ) ಸಗಟು ಮಾರಾಟ ಬೆಲೆ ಸೂಚ್ಯಂಕ
(ಬಿ) ನಗರ ಕೌಶಲ್ಯರಹಿತ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ
(ಸಿ) ಕೃಷಿ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ
(ಡಿ) ರಾಷ್ಟ್ರೀಯ ಆದಾಯ

ಸರಿ ಉತ್ತರ

(ಎ) ಸಗಟು ಮಾರಾಟ ಬೆಲೆ ಸೂಚ್ಯಂಕ


81. 2016ರ ವಿಂಬಲ್ಡನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಜೇತರಾದವರು

(ಎ) ನಿಕೋಲಸ್ ಮಹಟ್
(ಬಿ) ನೋವಾಕ್ ಜೋಕೋವಿಕ್
(ಸಿ) ಮೈಲಾಸ್ ರೋನೀ
(ಡಿ) ಆ್ಯಂಡಿ ಮರ್ರೆ

ಸರಿ ಉತ್ತರ

(ಡಿ) ಆ್ಯಂಡಿ ಮರ್ರೆ


82. 2016ರ ಸೆಪ್ಟೆಂಬರ್ನಲ್ಲಿ ನಡೆದ ಮೊದಲ BRICS ಆರೋಗ್ಯ ಕಲ್ಯಾಣ ಕಾರ್ಯಾಗಾರವು ನಡೆದ ಸ್ಥಳ

(ಎ) ದೆಹಲಿ
(ಬಿ) ರಿಯೋ-ಡಿ-ಜನೈರೋ
(ಸಿ) ಬೀಜಿಂಗ್
(ಡಿ) ಬೆಂಗಳೂರು

ಸರಿ ಉತ್ತರ

(ಡಿ) ಬೆಂಗಳೂರು


83. ಅದಾನಿ ಸಮೂಹ ಇತ್ತೀಚೆಗೆ ಕಾಮುತಿಯಲ್ಲಿ ಆರಂಭಿಸಿದ 648 ಮೆಗಾವ್ಯಾಟ್ ಸಾಮರ್ಥ್ಯದ ಕಾಮುತಿ ಸೋಲಾರ್ ಪವರ್ ಪ್ಲಾಂಟ್ ಇರುವ ರಾಜ್ಯ

(ಎ) ಆಂಧ್ರಪ್ರದೇಶ
(ಬಿ) ತಮಿಳುನಾಡು
(ಸಿ) ಕೇರಳ
(ಡಿ) ಅಸ್ಸಾಂ

ಸರಿ ಉತ್ತರ

(ಬಿ) ತಮಿಳುನಾಡು


84. ಇತ್ತೀಚೆಗೆ ಆರಂಭವಾದ ‘‘ಮುಖ್ಯಮಂತ್ರಿ ಸಾಂತ್ವನ ಹರೀಶ’’ ಯೋಜನೆಯು ಮುಖ್ಯವಾಗಿ ಸಂಬಂಧಿಸಿರುವುದು

(ಎ) ಬಿ.ಪಿ.ಎಲ್. ಕುಟುಂಬಗಳಿಗೆ ಉಚಿತ ಹಣಕಾಸು ಸಹಾಯ ನೀಡಲು
(ಬಿ) ಉನ್ನತ ಶಿಕ್ಷಣಕ್ಕಾಗಿ ಉಚಿತ ಹಣಕಾಸು ಸಹಾಯ ನೀಡಲು
(ಸಿ) ದೌರ್ಜನ್ಯಕ್ಕೊಳಗಾದವರಿಗೆ ಉಚಿತ ವೈದ್ಯಕೀಯ ಸೇವೆ ನೀಡಲು
(ಡಿ) ರಸ್ತೆ ಅಪಘಾತಕ್ಕೊಳಗಾದವರಿಗೆ ಉಚಿತ ವೈದ್ಯಕೀಯ ಸಹಾಯ ನೀಡಲು

ಸರಿ ಉತ್ತರ

(ಡಿ) ರಸ್ತೆ ಅಪಘಾತಕ್ಕೊಳಗಾದವರಿಗೆ ಉಚಿತ ವೈದ್ಯಕೀಯ ಸಹಾಯ ನೀಡಲು


85. ಭಾರತೀಯ ವಿಜ್ಞಾನ ಸಂಸ್ಥೆ (IISC) ಇರುವುದು

(ಎ) ಕೊಚ್ಚಿನ್
(ಬಿ) ಬೆಂಗಳೂರು
(ಸಿ) ಚೆನ್ನೈ
(ಡಿ) ನವದೆಹಲಿ

ಸರಿ ಉತ್ತರ

(ಬಿ) ಬೆಂಗಳೂರು


86. ಆಲ್ಝೈಮರ್ (ಅರಳು-ಮರಳು) ಕಾಯಿಲೆಯು ಈ ಕೆಳಗಿನ ಒಂದಕ್ಕೆ ಸಂಬಂಧಿಸಿದೆ

(ಎ) ಮೂತ್ರಜನಕಾಂಗ
(ಬಿ) ಮೆದುಳು
(ಸಿ) ಹೃದಯ
(ಡಿ) ಪಿತ್ತಜನಕಾಂಗ

ಸರಿ ಉತ್ತರ

(ಬಿ) ಮೆದುಳು


87. ರಕ್ತದಲ್ಲಿ ಹಿಮೊಗ್ಲೋಬಿನ್ ಕಾರ್ಯವು

(ಎ) ಆಮ್ಲಜನಕ ರವಾನಿಸುವುದು
(ಬಿ) ನೈಟ್ರೋಜನ್ (ಸಾರಜನಕ) ರವಾನಿಸುವುದು
(ಸಿ) ರೋಗಗಳ ವಿರುದ್ಧ ರಕ್ಷಿಸುವುದು
(ಡಿ) ಮೇದಸ್ಸಿನ ರವಾನೆ

ಸರಿ ಉತ್ತರ

(ಎ) ಆಮ್ಲಜನಕ ರವಾನಿಸುವುದು


88. ಡಿ.ಎನ್.ಎ.ಯ ರಚನೆಯನ್ನು ಮೊದಲು ವಿವರಿಸಿದವರು

(ಎ) ಚಾರ್ಲ್ಸ್ ಡಾರ್ವಿನ್
(ಬಿ) ಗ್ರೆಗರ್ ಮೆಂಡಲ್
(ಸಿ) ಎಂ.ಎಸ್. ಸ್ವಾಮಿನಾಥನ್
(ಡಿ) ವಾಟ್ಸನ್ ಮತ್ತು ಕ್ರಿಕ್

ಸರಿ ಉತ್ತರ

(ಡಿ) ವಾಟ್ಸನ್ ಮತ್ತು ಕ್ರಿಕ್


89. ಈ ಕೆಳಗಿನ ಒಂದು ನೀರಿನಲ್ಲಿ ಕರಗುವ ವಿಟಮಿನ್

(ಎ) ವಿಟಮಿನ್ ‘A’
(ಬಿ) ವಿಟಮಿನ್ ‘C’
(ಸಿ) ವಿಟಮಿನ್ ‘D’
(ಡಿ) ವಿಟಮಿನ್ ‘K’

ಸರಿ ಉತ್ತರ

(ಬಿ) ವಿಟಮಿನ್ ‘C’


90. ಮಾನವನ ದೇಹದಲ್ಲಿನ ಅತೀ ವಿಸ್ತಾರವಾದ ಅಂಗ

(ಎ) ಪಿತ್ತಜನಕಾಂಗ
(ಬಿ) ಚರ್ಮ
(ಸಿ) ಮೆದುಳು
(ಡಿ) ಹೃದಯ

ಸರಿ ಉತ್ತರ

(ಬಿ) ಚರ್ಮ


91. BTO, DSQ, FRS, HQU ನಂತರದ ಶ್ರೇಣಿಯು

(ಎ) IPX
(ಬಿ) JPW
(ಸಿ) GPW
(ಡಿ) JRW

ಸರಿ ಉತ್ತರ

(ಬಿ) JPW


92. ಮುಂಬೈಗೆ ಪ್ರತೀ 5 ಗಂಟೆಗಳಿಗೊಮ್ಮೆ ವಿಮಾನ ಸೌಲಭ್ಯವಿದೆ. ಕೊನೆಯ ವಿಮಾನವು ಮುಂಬೈಗೆ 25 ನಿಮಿಷ ಮುಂಚೆ ಹೊರಟಿದೆ ಎಂದಾದರೆ, ಪ್ರಸ್ತುತ ಸಮಯವು ಬೆಳಗ್ಗೆ 10:45 ಆಗಿರುತ್ತದೆ. ಹಾಗಾದರೆ ಮುಂಬೈಗಿರುವ ಮುಂದಿನ ವಿಮಾನದ ವೇಳೆ

(ಎ) 2 : 20 PM
(ಬಿ) 3 : 30 AM
(ಸಿ) 3 : 55 PM
(ಡಿ) 3 : 20 PM

ಸರಿ ಉತ್ತರ

(ಡಿ) 3 : 20 PM


93. A, B ಮತ್ತು C ಒಂದು ವ್ಯವಹಾರವನ್ನು ಆರಂಭಿಸುತ್ತಾರೆ. Bಯ ಬಂಡವಾಳವು Aನ ಬಂಡವಾಳಕ್ಕಿಂತ ಮೂರು ಪಟ್ಟು ಹಾಗೂ Cನ ಬಂಡವಾಳದ ಅರ್ಧದಷ್ಟಿರುತ್ತದೆ. ವರ್ಷದ ಅಂತ್ಯದಲ್ಲಿನ ಲಾಭವು 25,000 ರೂ.ಗಳಾದರೆ, Cಯ ಲಾಭದ ಪಾಲು ಎಷ್ಟಿದೆ?

(ಎ) 7,500
(ಬಿ) 2,500
(ಸಿ) 15,000
(ಡಿ) 10,000

ಸರಿ ಉತ್ತರ

(ಸಿ) 15,000


94. ಮೂವತ್ತೊಂಬತ್ತು ಜನರು 12 ದಿನಗಳಲ್ಲಿ ದಿನಕ್ಕೆ 5 ಗಂಟೆಯಂತೆ ಕೆಲಸ ಮಾಡಿ ಒಂದು ರಸ್ತೆಯನ್ನು ರಿಪೇರಿ ಮಾಡುತ್ತಾರೆ. ಆದರೆ ಮೂವತ್ತು ಜನರು ಅದೇ ರಸ್ತೆಯ ಕೆಲಸವನ್ನು ದಿನಕ್ಕೆ 6 ಗಂಟೆಯಂತೆ ಮಾಡಿದರೆ ಬೇಕಾಗುವ ದಿನಗಳು

(ಎ) ಹತ್ತು ದಿನಗಳು
(ಬಿ) ಹದಿಮೂರು ದಿನಗಳು
(ಸಿ) ಹದಿನಾಲ್ಕು ದಿನಗಳು
(ಡಿ) ಹದಿನೈದು ದಿನಗಳು

ಸರಿ ಉತ್ತರ

(ಬಿ) ಹದಿಮೂರು ದಿನಗಳು


95. ಕೊಟ್ಟಿರುವ ಹೇಳಿಕೆಗಳಿಗೆ ಈ ಕೆಳಗಿನ ಯಾವ ಉಪಸಂಹಾರ ಸರಿಯಾದುದು?
ಹೇಳಿಕೆಗಳು : ಎಲ್ಲಾ ಹಾರ್ಮೋನಿಯಮ್ಗಳು ಉಪಕರಣಗಳು ಎಲ್ಲಾ ಉಪಕರಣಗಳು ಕೊಳಲುಗಳು
ಉಪಸಂಹಾರ :
1. ಎಲ್ಲಾ ಕೊಳಲುಗಳು ಉಪಕರಣಗಳು.
2. ಎಲ್ಲಾ ಹಾರ್ಮೋನಿಯಮ್ಗಳು ಕೊಳಲುಗಳು.

(ಎ) 1 ಮಾತ್ರ ಸರಿಯಾದುದು
(ಬಿ) 2 ಮಾತ್ರ ಸರಿಯಾದುದು
(ಸಿ) 1 ಮತ್ತು 2 ಸರಿಯಾದವು
(ಡಿ) ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(ಬಿ) 2 ಮಾತ್ರ ಸರಿಯಾದುದು


96. ಕೆಳಗಿನ ಸಂವಿಧಾನದ ಕಲಮುಗಳಲ್ಲಿ ಸಂವಿಧಾನದ ಯಾವ ಕಲಮು ಅಂತರ್ರಾಜ್ಯ ಜಲ ವಿವಾದದ ನ್ಯಾಯನಿರ್ಣಯಕ್ಕೆ ಸಹಕರಿಸುತ್ತದೆ?

(ಎ) 262
(ಬಿ) 312
(ಸಿ) 51(A)
(ಡಿ) 226

ಸರಿ ಉತ್ತರ

(ಎ) 262


97. ಕೆಳಗಿನ ಯಾವುದು ಭಾರತದ ಪ್ರಜೆಗಳ ಮೂಲಭೂತ ಹಕ್ಕಲ್ಲ?

(ಎ) ಸಮಾನತೆಯ ಹಕ್ಕು
(ಬಿ) ಧಾರ್ಮಿಕ ಸ್ವಾತಂತ್ರ್ಯ ಹಕ್ಕು
(ಸಿ) ಶೋಷಣೆಯ ವಿರುದ್ಧದ ಹಕ್ಕು
(ಡಿ) ಉಚಿತ ಕಾನೂನು ನೆರವಿನ ಹಕ್ಕು

ಸರಿ ಉತ್ತರ

(ಡಿ) ಉಚಿತ ಕಾನೂನು ನೆರವಿನ ಹಕ್ಕು


98. ರಾಜ್ಯ ವಿಧಾನಸಭೆಯ ಶಾಸಕನು ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಇಚ್ಛೆಯಿದ್ದರೆ, ತನ್ನ ರಾಜೀನಾಮೆಯನ್ನು ಈ ಕೆಳಗಿನವರಿಗೆ ಸಲ್ಲಿಸಬೇಕು?

(ಎ) ವಿಧಾನಸಭೆಯ ಸ್ಪೀಕರ್ (ಸಭಾಪತಿ)
(ಬಿ) ಜಿಲ್ಲಾಧಿಕಾರಿಯವರು
(ಸಿ) ಮುಖ್ಯಮಂತ್ರಿಗಳು
(ಡಿ) ವಿಧಾನಪರಿಷತ್ತಿನ ಸಭಾಪತಿಗಳು

ಸರಿ ಉತ್ತರ

(ಎ) ವಿಧಾನಸಭೆಯ ಸ್ಪೀಕರ್ (ಸಭಾಪತಿ)


99. ಸಂವಿಧಾನದ 359ನೇ ವಿಧಿಯು ರಾಷ್ಟ್ರಪತಿಯವರಿಗೆ ಕೆಳಗಿನ ಯಾವ ಸಂದರ್ಭದಲ್ಲಿ ಯಾವುದೇ ನ್ಯಾಯಾಲಯದಲ್ಲಿ ಮೂಲಭೂತ ಹಕ್ಕು ಚ್ಯುತಿ ಮಂಡಿಸದಂತೆ ತಡೆಯಲು ಸವಲತ್ತು ನೀಡಿದೆ?

(ಎ) ರಾಷ್ಟ್ರೀಯ ತುರ್ತುಪರಿಸ್ಥಿತಿ
(ಬಿ) ಆರ್ಥಿಕ ತುರ್ತುಪರಿಸ್ಥಿತಿ
(ಸಿ) ರಾಜ್ಯಗಳಲ್ಲಿ ಸಂವಿಧಾನಾತ್ಮಕ ಅಂಗಗಳ ವೈಲ್ಯ
(ಡಿ) ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(ಎ) ರಾಷ್ಟ್ರೀಯ ತುರ್ತುಪರಿಸ್ಥಿತಿ


100. ಭಾರತದ ಯಾವ ಒಂದು ರಾಜ್ಯ ತನ್ನದೇ ಆದ ಸಂವಿಧಾನವನ್ನು ಹೊಂದಿರುತ್ತದೆ?

(ಎ) ನಾಗಾಲ್ಯಾಂಡ್
(ಬಿ) ಗೋವಾ
(ಸಿ) ಜಮ್ಮು ಮತ್ತು ಕಾಶ್ಮೀರ
(ಡಿ) ಸಿಕ್ಕಿಂ

ಸರಿ ಉತ್ತರ

(ಸಿ) ಜಮ್ಮು ಮತ್ತು ಕಾಶ್ಮೀರ


ಇಲ್ಲಿ ನೀಡಲಾಗಿರುವ ಉತ್ತರಗಳು KSP ಯು ಪ್ರಕಟಿಸಿದ್ದಾಗಿರುತ್ತದೆ

Post a Comment

1 Comments

BOTTOM ADS